ಅರಮೇರಿ: ವಿಜೃಂಭಿಸಿದ ‘ಕರುನಾಡ ಕಲಾವೈಭವ’
ಕೊಡಗು

ಅರಮೇರಿ: ವಿಜೃಂಭಿಸಿದ ‘ಕರುನಾಡ ಕಲಾವೈಭವ’

January 13, 2020

ವಿರಾಜಪೇಟೆ, ಜ.12- ಸುಸಂಸ್ಕøತ ಶಿಕ್ಷಣವನ್ನು ನೀಡುವಲ್ಲಿ ಮಠಮಾನ್ಯಗಳು ಮುಂದಿದ್ದು, ವಿದ್ಯಾ ಕ್ಷೇತ್ರಗಳಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ಬಳಿಯ ಅರಮೇರಿ ಕಳಂ ಚೇರಿ ವಿದ್ಯಾಪೀಠದಲ್ಲಿ ಆಯೋಜಿಸಲಾ ಗಿದ್ದ ‘ಕರುನಾಡ ಕಲಾವೈಭವ’ ಜನಪದ ಕಲೆಯನ್ನು ಬಿಂಬಿಸಲು ರಾಗಿ ಬೀಸುವು ದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ವಿದ್ಯಾ ಸಂಸ್ಥೆಗಳಲ್ಲಿನ ವಿದ್ಯಾ ಭ್ಯಾಸಗಳು ಭವಿಷ್ಯದ ದೃಷ್ಟಿಯಲ್ಲಿ ಸಹಕಾರಿ ಯಾಗುತ್ತಿದೆ. ಮಠಗಳು ಸಮಾಜದಲ್ಲಿ ಜಾತಿ, ಮತ, ಭೇದ ಇಲ್ಲದೆ ಸರ್ವರಿಗೂ ಸಮ ಪಾಲು-ಸರ್ವರಿಗೂ ಸಮಬಾಳು ಎಂಬ ರೀತಿಯಲ್ಲಿ ವಿದ್ಯಾಭ್ಯಾಸ ನೀಡುತ್ತಿದೆ. ಸಮಾ ಜದ ಎಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ವಾಣಿಜ್ಯೀಕರಣಗೊಂಡಿರುವುದರಿಂದ ಶಿಕ್ಷಣ ಕ್ಷೇತ್ರ ಸವಾಲುಗಳನ್ನು ಎದುರಿಸು ತ್ತಿದೆ. ಸಮಾಜದ ಉನ್ನತ ವರ್ಗದವರಂತೆ ಸಾಮಾನ್ಯ ಜನರು ಗುಣಮಟ್ಟದ ಶಿಕ್ಷಣ ವನ್ನು ಹೊಂದಲು ಗ್ರಾಮೀಣ ಭಾಗದ ವಿದ್ಯಾ ಸಂಸ್ಥೆಗಳು ನೆರವಾಗಿವೆ ಎಂದರು.

ಹುಣಸೂರು ತಾಲೂಕು ಗಾವಡಗೆರೆಯ ಗುರುಲಿಂಗ ಜಂಗಮ ದೇವರ ಮಠದ ನಟರಾಜ ಸ್ವಾಮಿಗಳು ತಮ್ಮ ಆಶೀರ್ವಚನ ದಲ್ಲಿ ಬುದ್ಧಿವಂತಿಕೆ- ಹೃದಯವಂತಿಕೆಯ ವಿದ್ಯಾಸಂಸ್ಥೆಗಳಲ್ಲಿ ಸುಸಂಸ್ಕøತ ಶಿಕ್ಷಣ ಲಭಿಸುತ್ತದೆ. ಕಲೆ, ಸಾಹಿತ್ಯ, ಸಂಸ್ಕøತಿ ಪರಂ ಪರೆಯನ್ನು ಮನಮುಟ್ಟಿಸುವ ಕೆಲಸಗಳನ್ನು ಮಠಮಾನ್ಯಗಳೂ ಮಾಡಬೇಕು. ವ್ಯಕ್ತಿ ಎಷ್ಟು ದಿನ ಇದ್ದ ಎಂಬುದು ಮುಖ್ಯವಲ್ಲ. ಬದುಕಿ ನಲ್ಲಿ ಏನೆಲ್ಲಾ ಸಾಧನೆ ಮಾಡಿದ್ದಾನೆ ಎಂಬುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಅರಮೇರಿ ಕಳಂಚೇರಿ ವಿದ್ಯಾಪೀಠದ ಮುಖ್ಯಸ್ಥರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಸಾನಿಧ್ಯ ವಹಿಸಿ ಮಾತನಾಡಿ ದರು. ಎಸ್‍ಎಂಎಸ್ ವಿದ್ಯಾಪೀಠದ ನಿವೃತ್ತ ಕಾರ್ಯದರ್ಶಿ ಕೆಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ, ಜಿಪಂ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಸಭೆಯನ್ನುದ್ದೇಶಿಸಿ ಮಾತ ನಾಡಿದರು. ಪ್ರಾಂಶುಪಾಲರಾದ ಕೆ.ಪಿ. ಕುಸುಮ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ವಿದ್ಯಾರ್ಥಿ ಮಾಸ್ಟರ್ ಮೊಣ್ಣಪ್ಪ ಸ್ವಾಗ ತಿಸಿದರು. ದಿವ್ಯ ನೀಲಮ್ಮ ನಿರೂಪಿಸಿದರು.

ಸಮಾರಂಭದಲ್ಲಿ ಕರುನಾಡ ಕಲಾ ವೈಭವ ದಲ್ಲಿ ನಾಟಕ ಜಾನಪದ ಕಲೆಗಳ ಕೋಲಾಟ ವೀರಗಾಸೆ, ಕಂಸಾಳೆ, ಯಕ್ಷ ಗಾನ, ಕರಗ, ಎರವಾಟ್, ಹುಲಿವೇಶ, ಸುಗ್ಗಿ ಕುಣಿತ, ಪೂಜಾ ಕುಣಿತ, ಜಾನಪದ ನೃತ್ಯ ಕಲೆ ಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿ ಗಳಿಂದ ಮೂಡಿಬಂದ ರಾಜ್ಯದ ಜಾನಪದ ಹಿನ್ನೆಲೆಯ ಸಾಂಸ್ಕøತಿಕ ಕಾರ್ಯಕ್ರಮ ಮನಸೂರೆಗೊಂಡಿತು.