ವಿ.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆ: ಮಹಿಳೆಯ ಉದರದಲ್ಲಿ ಭಾರೀ ಗಾತ್ರದ ಕ್ಯಾನ್ಸರ್ ಗಡ್ಡೆ ತೆಗೆದ ವೈದ್ಯರು
ಕೊಡಗು

ವಿ.ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆ: ಮಹಿಳೆಯ ಉದರದಲ್ಲಿ ಭಾರೀ ಗಾತ್ರದ ಕ್ಯಾನ್ಸರ್ ಗಡ್ಡೆ ತೆಗೆದ ವೈದ್ಯರು

January 24, 2020

ವೀರಾಜಪೇಟೆ, ಜ.23- ಕಳೆದ ಎರಡು ವರ್ಷಗಳಿಂದಲೂ ಹೊಟ್ಟೆನೋವಿನಿಂದ ನರಳುತ್ತಿದ್ದ ಮಹಿಳೆಯ ಉದರದಲ್ಲಿ ಸುಮಾರು 250 ಗ್ರಾಂ ತೂಕದ ಕ್ಯಾನ್ಸರ್ ಗಡ್ಡೆಯನ್ನು ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ವಿಶ್ವನಾಥ್ ಸಿಂಪಿ ಅವರು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದಿದ್ದಾರೆ.

ಸಮೀಪದ ನೆಲ್ಲಿಹುದಿಕೇರಿ ಗ್ರಾಮದ ಮುಸ್ತಾಫ ಎಂಬುವರ ಪತ್ನಿ ಆಶಿಯಾ(48) ಎಂಬುವರು ಹೊಟ್ಟೆನೋವಿನಿಂದ ನರಳುತ್ತಿದ್ದು, ಮೂತ್ರವು ಸರಾಗವಾಗಿ ಹೋಗದೆ ಅಡಚಣೆ ಉಂಟಾಗಿತ್ತು ಎನ್ನಲಾಗಿದೆ. ಈ ಸಂಬಂದ ಆಶಿಯಾ ಅವರು ಮೈಸೂರು ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ಕ್ಯಾನ್ಸರ್ ಗೆಡ್ಡೆ ಇದೆ. ಇದನ್ನು ಶಸ್ತ್ರ ಚಿಕಿತ್ಸೆಯಿಂದ ಹೊರ ತೆಗೆಯುವುದು ಕಷ್ಟ. ಪ್ರಾಣಾಪಾಯ ಸಂಭವವು ಇರುವುದಾಗಿಯು ಈ ಶಸ್ತ್ರ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಯಲ್ಲಿ ಸಮ್ಮತಿ ಸೂಚಿಸದಿದ್ದಾಗ ಕಳೆದ ಮೂರು ದಿನಗಳ ಹಿಂದೆ ಆಶಿಯಾ ವೀರಾಜ ಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದರು.

ಆಶಿಯಾಳ ಮೈಸೂರಿನ ಆಸ್ಪತ್ರೆಯ ವೈದ್ಯ ಕೀಯ ತಪಾಸಣೆಯ ದಾಖಲೆಗಳನ್ನು ಪರಿಶೀಲಿ ಸಿದ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಕ್ಯಾನ್ಸರ್ ಗೆಡ್ಡೆ ಹೊರ ತೆಗೆದಿದ್ದಾರೆ. ಕ್ಯಾನ್ಸ್‍ರ್ ಗೆಡ್ಡೆ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪವಾಗಿ ಕಂಡಬರುತ್ತಿದ್ದು ಮಹಿಳೆಯ ಶಸ್ತ್ರ ಚಿಕಿತ್ಸೆಯ ಆರಂಭದಲ್ಲಿ ವೈದ್ಯರಿಗೆ ಆತಂಕ ಉಂಟಾದರೂ ಶಸ್ತ್ರ ಚಿಕಿತ್ಸೆ ಯಶಸ್ವಿಯಾಯಿತು ಎಂದು ಡಾ.ವಿಶ್ವನಾಥ್ ಸಿಂಪಿ ತಿಳಿಸಿದರಲ್ಲದೆ ಈ ಕ್ಯಾನ್ಸರ್ ಗಡ್ಡೆಯ ಭಾಗ ಮೂತ್ರನಾಳ ಹೊಟ್ಟೆಯ ಸಣ್ಣ ಕರುಳಿಗೆ ಅಂಟಿಕೊಂಡಿದ್ದು ಇದನ್ನು ಹೊರ ತೆಗೆಯುವುದೇ ವೈದ್ಯರಿಗೆ ಪ್ರಯಾಸವಾಗಿತ್ತು. ವೈದ್ಯರು ಈ ಗಡ್ಡೆಯನ್ನು ರೆಟ್ರೋಪೆರಿಟೊನಿಕಲ್ ಸರ್‍ಕೋಮ [ಕ್ಯಾನ್ಸರ್] ಎಂದು ಕಂಡು ಹಿಡಿದಿದ್ದು, ಈ ಗೆಡ್ಡೆಯ ಹೆಚ್ಚಿನ ವೈದ್ಯಕೀಯ ಅಧ್ಯಯನಕ್ಕಾಗಿ ಮೈಸೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದರು. ಶಸ್ತ್ರ ಚಿಕಿತ್ಸೆಗೊಳಗಾದ ರೋಗಿಯು ಚೇತರಿಸಿ ಕೊಂಡಿರುವುದಾಗಿ ತಿಳಿದುಬಂದಿದೆ.

Translate »