ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 3 ಲಕ್ಷ ಅನುದಾನ
ಕೊಡಗು

ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ 3 ಲಕ್ಷ ಅನುದಾನ

January 24, 2020

ವಿರಾಜಪೇಟೆ, ಜ.23- ಸಾರ್ವಜನಿಕ ಆಸ್ಪತ್ರೆಗೆ ಕುಡಿಯುವ ನೀರಿನ ಸೌಲಭ್ಯ, ಆಸ್ಪತ್ರೆಯ ಎದುರು ರಸ್ತೆ ಡಾಂಬರೀಕರಣ ಮತ್ತು ಕಾಂಪೌಂಡ್ ನಿರ್ಮಿಸುವ ಕಾಮ ಗಾರಿಗೆ ಶಾಸಕರ ಅನುದಾನದಿಂದ 3 ಲಕ್ಷ ರೂ. ನೀಡುವುದಾಗಿ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು

ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷ ಸಮಿತಿ ಕಾರ್ಯಕರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂದರ್ಭ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅವರು ಆಸ್ಪತ್ರೆಯ ಕುಂದು ಕೊರತೆಗಳ ಬಗ್ಗೆ ಉಪವಿಭಾಗಾಧಿಕಾರಿ ಜವರೆಗೌಡ ಮತ್ತು ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ವಿವರವಾಗಿ ತಿಳಿಸಿದರು. ನಂತರ ಸಭೆಯಲ್ಲಿ ಆಸ್ಪತ್ರೆಯ ಒಳ ರೋಗಿಗಳಿಗೆ ಕುಡಿಯಲು ಬಿಸಿ ನೀರು ಕೊಡುವುದು ಹಾಗೂ ನೀರಿನ ಟ್ಯಾಂಕ್ ಗಳಿಗೆ ಸುಣ್ಣ ಬಣ್ಣ ಬಳಿಯುವುದು ಮತ್ತು ಆಪರೇಶನ್‍ಗೆ ಬೇಕಾಗುವಂತಹ ಉಪಕರಣಗಳನ್ನು ಒದಗಿಸುವುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರಿಧರ್, ಸರ್ಕಲ್ ಇನ್ಸ್‍ಪ್ಯೆಕ್ಟರ್ ಕ್ಯಾತೆಗೌಡ, ಸಮಿತಿಯ ನಾಮನಿರ್ದೇಶಕರಾದ ಜೋಕಿಂ ರಾಡ್ರಿಗಾಸ್, ಜೂನಾ, ಸುಭಶ್, ಆಸ್ಪತ್ರೆಯ ವೈದ್ಯಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.