ಮಂಡ್ಯ

ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು
ಮಂಡ್ಯ

ಹಸಿರು ಉಳಿಸಲು ಕುಂಚ ಹಿಡಿದ ಮಕ್ಕಳು

June 13, 2018

ಮಂಡ್ಯ: ಬೆಳಿಗ್ಗೆ 10ರ ಎಳೆ ಬಿಸಿಲು. ಮರದ ನೆರಳಿನ ಅಡಿಯಲ್ಲಿ ಹರಡಿಕೊಂಡಿದ್ದ ಹುಲ್ಲುಹಾಸಿನ ಮೇಲೆ ಕುಳಿ ತಿದ್ದ ಮಕ್ಕಳು ಉತ್ಸಾಹದ ಚಿಲುಮೆಯಂತಿ ದ್ದರು. ಕೈಯಲ್ಲಿ ಬಣ್ಣ ಬಣ್ಣದ ಪೆನ್ಸಿಲ್ ಹಿಡಿ ದಿದ್ದ ಅವರು ಪರಿಸರದ ಬಗ್ಗೆ ತಮ್ಮದೇ ಆದ ಕಲ್ಪನೆಗಳನ್ನು ಚಿತ್ರಗಳ ಮುಖೇನ ಹರಿ ಬಿಡಲು ಸಿದ್ಧರಾಗಿದ್ದರು…ಇದು ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಹಾಗೂ ಅರಣ್ಯ ಇಲಾಖೆಯು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಂಗಳವಾರ ಮಂಡ್ಯದ ಜಿಲ್ಲಾ ಡಳಿತ ಭವನದ…

ಪಿಕ್ ಪಾಕೆಟ್, ಮೊಬೈಲ್ ಕಳ್ಳನ ಬಂಧನ
ಮಂಡ್ಯ

ಪಿಕ್ ಪಾಕೆಟ್, ಮೊಬೈಲ್ ಕಳ್ಳನ ಬಂಧನ

June 13, 2018

ಮಂಡ್ಯ: ಮಕ್ಕಳನ್ನು ಬಳಸಿಕೊಂಡು ಮೊಬೈಲ್ ಮತ್ತು ಪಿಕ್ ಪಾಕೇಟ್ ಮಾಡುತ್ತಿದ್ದ ತೆಲಂಗಾಣ ಮೂಲದ ಕಳ್ಳನೋರ್ವನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಾಗಮಂಗಲದಲ್ಲಿ ಮಂಗಳವಾರ ನಡೆದಿದೆ. ತೆಲಂಗಾಣ ಮೂಲದ ಮಂಜೇಶ ಎಂಬಾತನೇ ಪಿಕ್ ಪಾಕೆಟ್‍ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ . ಘಟನೆ ವಿವರ: ಇಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಬಳಿ ವ್ಯಕ್ತಿಯೊಬ್ಬನ ಜೇಬಿನಲ್ಲಿದ್ದ 7 ಸಾವಿರ ರೂಪಾಯಿ ನಗದನ್ನು ಮಂಜೇಶ ಕದಿಯಲೆತ್ನಿಸಿ ದ್ದಾನೆ, ತಕ್ಷಣ ಎಚ್ಚೆತ್ತ ಆತ ಕಿರುಚಿಕೊಂಡು ಕಳ್ಳನನ್ನು ಹಿಡಿಯಲು ಮುಂದಾದ, ಸಾರ್ವಜನಿಕರು…

ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಾಗಯ್ಯ, ಲಾಳನಕೆರೆ
ಮಂಡ್ಯ

ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ನಾಗಯ್ಯ, ಲಾಳನಕೆರೆ

June 12, 2018

ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಂತರಿಕ ಭಿನ್ನಮತ ಸ್ಫೋಟ ಗೊಂಡಿದೆ. ಸಕ್ಕರೆ ನಾಡಿನ ಉಸ್ತುವಾರಿ ಪಟ್ಟಕ್ಕಾಗಿ ಸಚಿವರಿಬ್ಬರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಖಾತೆ ಹಂಚಿಕೆ ಕ್ಯಾತೆ ಮುಗಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿಗಾಗಿ ಸಚಿವ ಸಿ.ಎಸ್.ಪುಟ್ಟರಾಜು ಪಟ್ಟು ಹಿಡಿದಿದ್ದು, ಬೀಗರಾದ ಸಚಿವ ಡಿ.ಸಿ.ತಮ್ಮಣ್ಣ ಪರ ಜೆಡಿಎಸ್‍ನ ದೊಡ್ಡಗೌಡರು ಬ್ಯಾಟಿಂಗ್ ನಡೆಸುತ್ತಿರುವುದು ಜೆಡಿಎಸ್‍ನೊಳಗಿನ ಭಿನ್ನಮತಕ್ಕೆ ನಾಂದಿಯಾಗಿದೆ. ಮಂಡ್ಯ ದಳದೊಳಗಿನ ಈ ಆಂತರಿಕ ಕಚ್ಚಾಟ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಹಂಚಿಕೆ…

ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಖಂಡಿಸಿ ಪುರಸಭೆಗೆ ಮುತ್ತಿಗೆ
ಮಂಡ್ಯ

ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಖಂಡಿಸಿ ಪುರಸಭೆಗೆ ಮುತ್ತಿಗೆ

June 12, 2018

ಮದ್ದೂರು:  ಸಕ್ಷಮ ಪ್ರಾಧಿಕಾರ ದಿಂದ ವಿನ್ಯಾಸ ಅನುಮೋದನೆ ಪಡೆಯದ ಖಾತೆಗಳನ್ನು ರದ್ದು ಪಡಿಸಬೇಕೆಂದು ಪೌರಾ ಡಳಿತ ನಿರ್ದೇಶನಾಲಯ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಸರಿಯಲ್ಲ ಎಂದು ಆರೋಪಿಸಿ ಕರುನಾಡ ಜನಜಾಗೃತಿ ಸೇನೆ ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕುರುನಾಡ ಜನಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಮ.ನ.ಪ್ರಸನ್ನಕುಮಾರ್ ಮಾತನಾಡಿ, ಪ್ರಸ್ತುತ ಈ ಆದೇಶದಿಂದ ಇ-ಖಾತೆಗೆ (ಈ ಸ್ವತ್ತು) ಅರ್ಜಿ ಸಲ್ಲಿಸಿರುವ ನಾಗರಿಕರಿಗೆ ಇ-ಖಾತೆ ಸಿಗುತ್ತಿಲ್ಲ. ಇದರಿಂದ ಮದುವೆ, ಇನ್ನಿತರ…

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ
ಮಂಡ್ಯ

ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟ

June 12, 2018

ಮಂಡ್ಯ: ಮಂಡ್ಯ ಜಿಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಲ್.ಬಾಗಲವಾಡೆ ಅವರು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ವಾರ್ಡ್‍ವಾರು ಮೀಸಲಾತಿ ಪ್ರಕಟಿಸಿದ್ದಾರೆ. ಮಂಡ್ಯ ನಗರಸಭೆಯ 35 ವಾರ್ಡ್‍ಗಳ ಮೀಸಲಾತಿ ಈ ಕೆಳಗಿನಂತಿದೆ. ಮಂಡ್ಯ ನಗರಸಭೆ: ವಾರ್ಡ್ 1 – ಹಿಂದುಳಿದ ವರ್ಗ (ಎ) ಮಹಿಳೆ, ವಾರ್ಡ್ 2- ಸಾಮಾನ್ಯ, ವಾರ್ಡ್ 3-ಹಿಂದುಳಿದ ವರ್ಗ (ಬಿ) ಮಹಿಳೆ, ವಾರ್ಡ್ 4- ಸಾಮಾನ್ಯ ಮಹಿಳೆ, ವಾರ್ಡ್ 5 – ಹಿಂದುಳಿದ ವರ್ಗ (ಎ),…

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ
ಮಂಡ್ಯ

ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮ: ಆತಂಕ

June 12, 2018

ಮಂಡ್ಯ: ಬಹುಭಾಷಾ ನಟ ಪ್ರಕಾಶ್ ರೈ ಅವರು ಸೋಮವಾರ ಜಿಲ್ಲೆ ಯಲ್ಲಿ ಮಿಂಚಿನ ಸಂಚಾರ ನಡೆಸಿ ವಿವಿಧ ಶಾಲೆಗಳಿಗೆ ಭೇಟಿ ನೀಡಿದರು.ಇಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ಕೆ.ಆರ್.ಪೇಟೆಯ ಸರ್ಕಾರಿ ಶತ ಮಾನದ ಶಾಲೆ, ಪಾಂಡವಪುರದ ಫ್ರೆಂಚ್ ರಾಕ್ ಶಾಲೆ ಹಾಗೂ ಭಾರತೀನಗರದ ಮೆಣಸ ಗೆರೆ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳು ಹಾಗೂ ಶಿಕ್ಷಣ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಿದರು. ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳದ್ದಲ್ಲಿ ಭವಿಷ್ಯದಲ್ಲಿ ಶಿಕ್ಷಣ ಬಡವರ ಪಾಲಿಗೆ ಗಗನ ಕುಸುಮವಾಗ…

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ
ಮಂಡ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲೆಯಲ್ಲಿ ಶೇ.83.92 ರಷ್ಟು ಶಾಂತಿಯುತ ಮತದಾನ

June 9, 2018

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರ ದಿಂದ ವಿಧಾನ ಪರಿಷತ್‍ಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಶೇ. 83.92ರಷ್ಟು ಮತದಾನವಾಗಿದೆ.ಮಂಡ್ಯ ನಗರದಲ್ಲಿ 3 ಮತಗಟ್ಟೆ ಕೇಂದ್ರ ಗಳನ್ನು ಸ್ಥಾಪಿಸಲಾಗಿತ್ತು. ಮಳವಳ್ಳಿ, ಮದ್ದೂರು, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ಕೆ.ಆರ್.ಪೇಟೆ ತಾಲೂಕುಗಳಲ್ಲಿ ಒಂದೊಂದು ಮತಗಟ್ಟೆ ಕೇಂದ್ರ ತೆರೆಯಲಾಗಿತ್ತು. ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಶಾಂತಿ ಯುತವಾಗಿ ನಡೆಯಿತು. ಪಾಂಡವಪುರ ಅತೀ ಹೆಚ್ಚು ಶೇ.92. 19ರಷ್ಟು ಮತಚಲಾವಣೆ ಯಾದರೆ, ಶ್ರೀರಂಗ ಪಟ್ಟಣದಲ್ಲಿ ಅತೀ ಕಡಿಮೆ ಶೇ.71.60ರಷ್ಟು ಮತದಾನವಾಗಿದೆ. ಇನ್ನುಳಿದಂತೆ…

ಜೀವನ ಸಾರ್ಥಕಕ್ಕೆ ಸಮಾಜ ಸೇವೆ ಅವಶ್ಯ
ಮಂಡ್ಯ

ಜೀವನ ಸಾರ್ಥಕಕ್ಕೆ ಸಮಾಜ ಸೇವೆ ಅವಶ್ಯ

June 9, 2018

ಭಾರತೀನಗರ:  ಮಾನವನ ಜೀವನ ಸಾರ್ಥಕವಾಗಬೇಕಾದರೆ ಸಮಾಜದ ಯಾವ ರಂಗದಲ್ಲಾದರೂ ಸೇವೆ ಸಲ್ಲಿಸ ಬೇಕೆಂದು ಭಾರತೀ ಎಜುಕೇಷನ್ ಟ್ರಸ್ಟ್‍ನ ಕಾರ್ಯಾಧ್ಯಕ್ಷ ಮಧು ಜಿ. ಮಾದೇಗೌಡ ತಿಳಿಸಿದರು. ಇಲ್ಲಿನ ಭಾರತೀ ಎಜುಕೇಷನ್ ಟ್ರಸ್ಟ್‍ನ ಭಾರತೀ ಕಾಲೇಜಿನ ರಾಸಾಯನಶಾಸ್ತ್ರ ಉಪ ನ್ಯಾಸಕ ಪ್ರೊ.ಎಂ.ಟಿ.ಪುಟ್ಟಸ್ವಾಮಿ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರನ್ನು ಅಭಿನಂದಿಸಿ ಅವರ ಮಾತನಾಡಿದರು. ಮನುಷ್ಯನ ಜೀವನದಲ್ಲಿ ವೃತ್ತಿ, ಪ್ರವೃತ್ತಿ ಮತ್ತು ನಿವೃತ್ತಿ ಬಹಳ ಮುಖ್ಯವಾದ ಘಟಕ. ಈ ಘಟಕವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ದಾಟಬೇಕಾಗಿದೆ. ಈ ಮಧ್ಯೆ…

ಆನ್‍ಲೈನ್‍ನಲ್ಲಿ ಯುವತಿಗೆ 13 ಸಾವಿರ ರೂ. ವಂಚನೆ
ಮಂಡ್ಯ

ಆನ್‍ಲೈನ್‍ನಲ್ಲಿ ಯುವತಿಗೆ 13 ಸಾವಿರ ರೂ. ವಂಚನೆ

June 9, 2018

ಮಂಡ್ಯ: ಬ್ಯಾಂಕ್‍ನವರೆಂದು ಕರೆ ಮಾಡಿ ಆಧಾರ್ ಮತ್ತು ಓಟಿಪಿ ನಂಬರ್ ಪಡೆದು ಯುವತಿ ಯೊಬ್ಬಳ ಖಾತೆ ಯಿಂದ ಆನ್‍ಲೈನ್ ಮೂಲಕ 13 ಸಾವಿರ ರೂ. ಎಗರಿಸಿದ ಘಟನೆ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲ ತಾಲೂಕಿನ ಕಸುವಿನಹಳ್ಳಿ ಗ್ರಾಮದ ಜ್ಯೋತಿ ಎಂಬ ಯುವತಿಯೇ ವಂಚನೆಗೊಳಗಾದವರು. ಘಟನೆ ಹಿನ್ನೆಲೆ: ಜ್ಯೋತಿ ಅವರ ಮೊ: 9591821316ಗೆ ರಾಹುಲ್ ಹೆಸರಿನ ವ್ಯಕ್ತಿಯೊಬ್ಬ ಮೊ: 8617802782 ನಿಂದ ಬುಧ ವಾರ ಸಂಜೆ ಹಿಂದಿಯಲ್ಲಿ ಮಾತನಾಡಿದ್ದಾನೆ. ತಾನು ಬ್ಯಾಂಕಿನವ ನೆಂದು ನಿಮ್ಮ ಎಟಿಎಂ ಕಾರ್ಡ್ ರಿನ್ಯೂವಲ್ ಮಾಡಲು…

ಚಿರತೆ ದಾಳಿಗೆ ಎತ್ತು ಬಲಿ
ಮಂಡ್ಯ

ಚಿರತೆ ದಾಳಿಗೆ ಎತ್ತು ಬಲಿ

June 9, 2018

ಕೆ.ಆರ್.ಪೇಟೆ: ಚಿರತೆ ದಾಳಿಗೆ ಎತ್ತು ಬಲಿಯಾಗಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಗದ್ದೆಹೊಸೂರು ಗ್ರಾಮದ ಹೊರವಲಯದ ತೋಟದ ಬಳಿ ನಡೆದಿದೆ. ಗ್ರಾಮದ ನಿವಾಸಿ ನಾಗಣ್ಣ ಅವರಿಗೆ ಸೇರಿದ ಎತ್ತು ಚಿರತೆ ದಾಳಿಗೆ ಬಲಿಯಾಗಿದ್ದು, ಅವರಿಗೆ ಸುಮಾರು 30ಸಾವಿರ ರೂ. ನಷ್ಟ ಸಂಭವಿಸಿದೆ. ಶುಕ್ರವಾರ ಬೆಳಿಗ್ಗೆ ರೈತ ನಾಗಣ್ಣ ಅವರು ತಮ್ಮ ಎತ್ತಿನಗಾಡಿಯಲ್ಲಿ ತೋಟಕ್ಕೆ ಕಾಯಿ ಕೀಳಲು ಹೋಗಿದ್ದರು. ಈ ವೇಳೆ ತಮ್ಮ ಕಬ್ಬಿನ ಗದ್ದೆ ಬಳಿ ಎತ್ತಿನಗಾಡಿ ನಿಲ್ಲಿಸಿ ಎತ್ತುಗಳನ್ನು ಕಟ್ಟಿ ಕಾಯಿ ಕೀಳಲು ತೋಟದ ಕೊನೆ…

1 98 99 100 101 102 108
Translate »