ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಖಂಡಿಸಿ ಪುರಸಭೆಗೆ ಮುತ್ತಿಗೆ
ಮಂಡ್ಯ

ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಖಂಡಿಸಿ ಪುರಸಭೆಗೆ ಮುತ್ತಿಗೆ

June 12, 2018

ಮದ್ದೂರು:  ಸಕ್ಷಮ ಪ್ರಾಧಿಕಾರ ದಿಂದ ವಿನ್ಯಾಸ ಅನುಮೋದನೆ ಪಡೆಯದ ಖಾತೆಗಳನ್ನು ರದ್ದು ಪಡಿಸಬೇಕೆಂದು ಪೌರಾ ಡಳಿತ ನಿರ್ದೇಶನಾಲಯ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಆದೇಶ ಸರಿಯಲ್ಲ ಎಂದು ಆರೋಪಿಸಿ ಕರುನಾಡ ಜನಜಾಗೃತಿ ಸೇನೆ ಮತ್ತು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕುರುನಾಡ ಜನಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಮ.ನ.ಪ್ರಸನ್ನಕುಮಾರ್ ಮಾತನಾಡಿ, ಪ್ರಸ್ತುತ ಈ ಆದೇಶದಿಂದ ಇ-ಖಾತೆಗೆ (ಈ ಸ್ವತ್ತು) ಅರ್ಜಿ ಸಲ್ಲಿಸಿರುವ ನಾಗರಿಕರಿಗೆ ಇ-ಖಾತೆ ಸಿಗುತ್ತಿಲ್ಲ. ಇದರಿಂದ ಮದುವೆ, ಇನ್ನಿತರ ಶುಭ ಸಮಾರಂಭಗಳಿಗೆ, ಆಸ್ತಿ ವಿಭಾಗ ಮಾಡಿಕೊಳ್ಳುವರಿಗೆ, ದಾನಪತ್ರ ಬರೆಸಿಕೊಳ್ಳುವವರು ಇನ್ನಿತರ ಸಂಬಂಧ ಆಸ್ತಿಗಳನ್ನು ಪರಭಾರೆ ಮಾಡುವ ನಾಗರಿಕರಿಗೆ ಈ ಆದೇಶದಿಂದ ಇ-ಸ್ವತ್ತು ದೊರಕದಿರು ವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಆಸ್ತಿಗಳನ್ನು, ಜಮೀನು ಅನ್ಯಕ್ರಾಂತ ಭೂ ಪರಿವರ್ತನೆಯನ್ನು ಎಸಿ ಅನುಮೋದನೆ ಪಡೆಯದೇ ಪರಿವರ್ತಿಸಿ ಕೊಂಡಿರುತ್ತಾರೆ. ಆ ಪರಿವರ್ತಿತಾ ಆಸ್ತಿ ಯನ್ನು ಸ್ಥಳೀಯ ಪುರಸಭೆಯಲ್ಲಿ ಖಾತೆ ನೋಂದಣಿಗೆ ಅರ್ಜಿ ಸಲ್ಲಿಸಿದಾಗ ಪುರಸಭೆ ಮುಖ್ಯಾಧಿಕಾರಿಗಳು ಈ ಅರ್ಜಿ ಸಂಬಂಧ ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ಅನು ಮೋದನೆ ಪಡೆಯಬೇಕೆಂಬ ನಿಯಮ ತಿಳಿಸದೇ ವಿನ್ಯಾಸವನ್ನು ತಾವೇ ಪರಿಶೀಲಿಸಿ, ಆ ವಿನ್ಯಾಸದ ಆಧಾರ ಮೇಲೆ ಅಭಿವೃದ್ಧಿ ಶುಲ್ಕ ಪಡೆದು ಖಾತೆ ಅಂಗೀಕರಿಸುತ್ತಾರೆ ಎಂದು ತಿಳಿಸಿದರು.

ಈಗ ಅಂತಹ ಖಾತೆಗಳನ್ನು ನಿಯಮ ಬಾಹಿರ ಖಾತೆಗಳೆಂದು ಪರಿಗಣಿಸಿ ರದ್ದು ಪಡಿಸಲು ಸೂಚನೆ ನೀಡಿರುತ್ತಾರೆ. ಇಂತಹ ಖಾತೆಯನ್ನು ಅಂಗೀಕರಿಸಿದ ಪುರಸಭಾ ಮುಖ್ಯಾಧಿಕಾರಿಗಳಿಗೆ ಯಾವುದೇ ಶಿಸ್ತು ಕ್ರಮದ ಅಥವಾ ದಂಡನೆ ಆದೇಶಗಳಿಲ್ಲ. ಆದರೆ ಅಧಿಕಾರಿಗಳು ಹೇಳಿದಂತೆ ದಾಖಲೆ ಒದಗಿಸಿ ಖಾತೆ ಮಾಡಿಸಿಕೊಂಡ ನಾಗರಿಕರ ಮೇಲೆ ನಿಯಮ ಬಾಹಿರ ಖಾತೆಯೆಂದು ಖಾತೆ ರದ್ದುಪಡಿಸುವ ದಂಡ ಪ್ರಯೋಗ ಮಾಡು ತ್ತಿದ್ದಾರೆ. ಇದರ ಹಿಂದೆ ನಾಗರಿಕರಿಂದ ಅವುಗಳನ್ನು ಅಕ್ರಮ ಸಕ್ರಮದಡಿ ಮತ್ತೊಮ್ಮೆ ಅಭಿವೃದ್ಧಿ ಶುಲ್ಕ ವಸೂಲಿ ಮಾಡುವ ಹುನ್ನಾರವಾಗಿದೆ ಎಂದರು.

ಆದ್ದರಿಂದ ಈ ಕ್ರಮ ಕೈ ಬಿಟ್ಟು, ಪ್ರಸಕ್ತ ಅಕ್ರಮ, ಸಕ್ರಮ ಜಾರಿಮಾಡುವ ದಿನಾಂಕದ ಹಿಂದಿನ ಆಸ್ತಿಗಳ ಖಾತೆಗಳನ್ನು ರದ್ದುಗೊಳಿ ಸದಂತೆ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಪೌರಾಡಳಿತ ನಿರ್ದೇಶನಾಲಯಕ್ಕೆ ಆಗ್ರಹ ಪಡಿಸಿದ್ದು, ಸಮಸ್ಯೆ ಸರಿಪಡಿಸದಿ ದ್ದರೆ ಮುಂದಿನ ದಿನಗಳಲ್ಲಿ ಮದ್ದೂರು ಬಂದ್ ಮಾಡಿ ಉಗ್ರ ಹೋರಾಟ ರೂಪಿಸ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಪುರಸಭೆ ವ್ಯವಸ್ಥಾಪಕ ಚಂದ್ರಶೇಖರ್ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಈ ಬಗ್ಗೆ ಪೌರಾಡಳಿತ ನಿರ್ದೇ ಶನಾಲಯಕ್ಕೆ ನಿಮ್ಮ ಮನವಿ ತಲುಪಿಸಲಾ ಗುವುದು ಎಂದು ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಸಂಚಾಲಕಿ ಪ್ರಿಯಾಂಕ ಅಪ್ಪು.ಪಿ ಗೌಡ, ಮುಖಂಡರಾದ ಆರ್.ಶ್ರೀನಿವಾಸ್, ಪರಮೇಶ್, ನಿಂಗರಾಜು, ಸುರೇಶ್ ಇನ್ನಿತರರಿದ್ದರು.

Translate »