ಮಂಡ್ಯ

ಹೈವೊಲ್ಟೇಜ್ ಕಣ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ
ಮಂಡ್ಯ

ಹೈವೊಲ್ಟೇಜ್ ಕಣ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಕ್ಷಣಗಣನೆ

April 18, 2019

ಸಿಎಂ ಪುತ್ರ ನಿಖಿಲ್- ಅಂಬರೀಶ್ ಪತ್ನಿ ಸುಮಲತಾ ಭವಿಷ್ಯ ನಿರ್ಧರಿಸಲಿರುವ ಮತದಾರ ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಗುರುವಾರ ಬೆಳಿಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿಯೂ ಮತ್ತು ಮಾಜಿ ಸಚಿವ, ನಟ ಅಂಬರೀಶ್ ಪತ್ನಿ ಸುಮ ಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ರುವುದು ಇಡೀ ದೇಶದ ಗಮನ ಸೆಳೆ ಯಲು ಕಾರಣವಾಗಿದೆ….

ಕೆ.ಆರ್.ಪೇಟೆಯಲ್ಲಿ ಮನೆ ಮನೆ ಮತಯಾಚನೆ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮನೆ ಮನೆ ಮತಯಾಚನೆ

April 18, 2019

ಕೆ.ಆರ್.ಪೇಟೆ: ಮತ ಕೇಂದ್ರದಲ್ಲಿ ಎರಡು ಮತ ಯಂತ್ರಗಳಿದ್ದು ಆತುರ ಪಡದೆ ನಿಧಾನವಾಗಿ ಪರಿಶೀಲಿಸಿ ಮತದಾನ ಮಾಡಬೇಕು ಎಂದು ಪುರಸಭಾ ಮಾಜಿ ಸದಸ್ಯ ಕೆ.ಕೆ.ರಮೇಶ್ ಮನವಿ ಮಾಡಿದರು. ಅವರು ಪಟ್ಟಣ ಅಗ್ರಹಾರ ಬಡಾವಣೆ, ಹೇಮಾವತಿ ಬಡಾವಣೆ ಸೇರಿಸದಂತೆ ವಿವಿಧ ಬಡಾವಣೆಗಳಲ್ಲಿ ಸಂಚಾರ ನಡೆಸಿ ಮನೆ ಮನೆ ಪ್ರಚಾರ ಮಾಡಿದರು. ಯಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ವಿನೂತನ ಮಾದರಿಯಲ್ಲಿ ಸುಮಲತಾ ಅಂಬರೀಶ್ ಪರವಾಗಿ ಮತಯಾಚನೆ ಮಾತನಾಡಿದರು. ವಿಪಕ್ಷದವರು ಮೂವರು ಸುಮಲತಾಗಳನ್ನು ಕಣಕ್ಕೆ ಇಳಿಸಿರುವುದರಿಂದ ಕೆಲವರಿಗೆ ಮತದಾನ ಮಾಡಲು ತೊಂದರೆಯಾಗುತ್ತಿದೆ….

ಶ್ರೀರಂಗಪಟ್ಟಣ ಜೂನಿಯರ್ ಕಾಲೇಜಿನಲ್ಲಿ ಮಸ್ಟರಿಂಗ್
ಮಂಡ್ಯ

ಶ್ರೀರಂಗಪಟ್ಟಣ ಜೂನಿಯರ್ ಕಾಲೇಜಿನಲ್ಲಿ ಮಸ್ಟರಿಂಗ್

April 18, 2019

ಶ್ರೀರಂಗಪಟ್ಟಣ: 2019ರ ಲೊಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಇಂದು ಎಲ್ಲಾ ಮತಯಂತ್ರಗಳು ಹಾಗೂ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆ ಗಳಿಗೆ ಸರದಿ ಸಾಲಿನಲ್ಲಿ ಮತಗಟ್ಟೆಗಳಿಗೆ ಮತ ಪೆಟ್ಟಿಗೆ ಸಮೇತ ನಿಯೊಜಿತ ಮತ ಕೇಂದ್ರಗಳಿಗೆ ಚುನಾವಣಾಧಿಕಾರಿಗಳನ್ನು ಕಳುಹಿಸಲಾಯಿತು, ಎರಡು ಲಕ್ಷದ ಹನ್ನೊಂದು ಸಾವಿರ ಮತದಾರ ರಿರುವ ಶ್ರೀರಂಗಪಟ್ಟಣ ವಿಧಾನಸಬಾ ಕ್ಷೇತ್ರದಲ್ಲಿ ಸುಮಾರು 249 ಮತಗಟ್ಟೆಗಳಿದ್ದು, ಅದರಲ್ಲಿ ಐವತ್ತು ಸೂಕ್ಷ್ಮ ಹಾಗೂ ಆತೀ ಸೂಕ್ಷ ಮತಗಟ್ಟೆಗಳನ್ನು ಗುರುತಿಸಲಾಗಿದೆ, ತಾಲೂಕಿನ ಅರಕೆರೆ ಗ್ರಾಮದಲ್ಲಿ…

ಲೋಕಸಭಾ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಜ್ಜು
ಮಂಡ್ಯ

ಲೋಕಸಭಾ ಚುನಾವಣೆಗೆ ಮಂಡ್ಯ ಜಿಲ್ಲಾಡಳಿತ ಸಜ್ಜು

April 18, 2019

 17,12,012 ಮತದಾರರಿಂದ ಮತದಾನ 8 ಕ್ಷೇತ್ರಗಳಲ್ಲಿ ಒಟ್ಟು 2046 ಮತಗಟ್ಟೆಗಳನ್ನು ಸ್ಥಾಪನೆ. ಚುನಾವಣೆಯಲ್ಲಿ ಕಣದಲ್ಲಿದ್ದಾರೆ ಒಟ್ಟು 22 ಅಭ್ಯರ್ಥಿಗಳು ಚುನಾವಣಾ ಕಾರ್ಯಕ್ಕೆ 9904 ಸಿಬ್ಬಂದಿಗಳ ನೇಮಕ ಮಂಡ್ಯ: ಗುರುವಾರ (ಏ.18 ರಂದು) ನಡೆಯುವ ಮಂಡ್ಯ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ಗುರುವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಪಾರದರ್ಶಕ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿ ಕಾರಿಯೂ ಆದ ಚುನಾವಣಾಧಿಕಾರಿ ಪಿ.ಸಿ.ಜಾಫರ್ ಮನವಿ…

ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ
ಮಂಡ್ಯ

ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ

April 18, 2019

ಗೃಹಿಣಿ ಸಾವು; ಮೂವರಿಗೆ ಗಾಯ ಮತದಾನಕ್ಕಾಗಿ ಬೆಂಗಳೂರಿನಿಂದ ಕೊಡಗಿಗೆ ತೆರಳುತ್ತಿದ್ದ ಕುಟುಂಬ ಶ್ರೀರಂಗಪಟ್ಟಣ: ನಿಂತಿದ್ದ ಟಿಪ್ಪರ್‍ಗೆ ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿ ಣಾಮ ಗೃಹಿಣಿ ಸಾವನ್ನಪ್ಪಿ ಮೂವರು ತೀವ್ರವಾಗಿ ಗಾಯ ಗೊಂಡ ಘಟನೆ ತಾಲೂಕಿನ ಬಾಬುರಾಯನಕೊಪ್ಪಲು ಗ್ರಾಮ ದಲ್ಲಿ ಬುಧವಾರ ಸಂಭವಿಸಿದೆ. ಮೂಲತಃ ಕೊಡಗಿನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಆಶಾ (50) ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಪತಿ ಅಣ್ಣಯ್ಯ (60) ಮತ್ತು ಅವರ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಳೆ…

ಮಣ್ಣಿನ ಮಕ್ಕಳು 1 ಲೋಟ ಹಾಲು ಕರೆದು ತೋರಿಸಲಿ: ಸ್ವಾಭಿಮಾನ ಸಮಾವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸವಾಲು
ಮಂಡ್ಯ

ಮಣ್ಣಿನ ಮಕ್ಕಳು 1 ಲೋಟ ಹಾಲು ಕರೆದು ತೋರಿಸಲಿ: ಸ್ವಾಭಿಮಾನ ಸಮಾವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸವಾಲು

April 17, 2019

ಮಂಡ್ಯ: ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರಲ್ಲ, 1 ಲೋಟ ಹಾಲು ಕರೆದು ತೋರಿಸಲಿ, ಹಸು ಕರು ಹಾಕಿದಾಗ ಅದಕ್ಕೆ ಏನು ಆಹಾರ ಕೊಡು ತ್ತಾರೋ ಹೇಳಲಿ ನೋಡೋಣ ಎಂದು ಚಾಲೆಂಜಿಂಗ್ ಸ್ಟಾರ್ ಎಂದೇ ಹೆಸರಾಗಿರುವ ದರ್ಶನ್ ತೂಗುದೀಪ ಅವರು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ, ನಿಖಿಲ್‍ಗೆ ಸವಾಲು ಹಾಕಿದರು. ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾಭಿಮಾನ ಸಮಾವೇಶದಲ್ಲಿ ಜೋರು ಧ್ವನಿ ಯಲ್ಲಿ ಮಾತನಾಡಿದ `ಯಜಮಾನ’ ದರ್ಶನ್, ಅಮ್ಮ ಗೆದ್ದರೆ `ಮಂಡ್ಯ ಅಂದರೆ ಏನು’ ಅಂತಾ…

ಪಾಂಡವಪುರದಲ್ಲಿ ಪುತ್ರ ನಿಖಿಲ್‍ಗಾಗಿ ಅಮ್ಮನ ಪ್ರಚಾರ
ಮಂಡ್ಯ

ಪಾಂಡವಪುರದಲ್ಲಿ ಪುತ್ರ ನಿಖಿಲ್‍ಗಾಗಿ ಅಮ್ಮನ ಪ್ರಚಾರ

April 17, 2019

ಪಾಂಡವಪುರ: ಜಿಲ್ಲೆಯ ಜನತೆ ನಿಖಿಲ್ ಕುಮಾರಸ್ವಾಮಿಗೆ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಶಾಸಕಿ, ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದರು. ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕಡೆಯ ದಿನವಾದ ಮಂಗಳ ವಾರ ಪಾಂಡವಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ಪತಿ ಹೆಚ್.ಡಿ.ಕುಮಾರಸ್ವಾಮಿ, ಮಾವ ಹೆಚ್.ಡಿ.ದೇವೇಗೌಡ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟ ಮಂಡ್ಯ ಜಿಲ್ಲೆಯಲ್ಲಿ ಪುತ್ರ ನಿಖಿಲ್ ಸಹ ರಾಜಕೀಯ ಜೀವನ ಆರಂಭಿಸಿದ್ದಾನೆ. ಜಿಲ್ಲೆಯ ಮಹಾ ಜನತೆ ದೇವೇಗೌಡರು, ಕುಮಾರಸ್ವಾಮಿ…

ಮುಸ್ಲಿಂ ಮುಖಂಡರಿಂದ ಸುಮಲತಾ ಪರ ಮತಯಾಚನೆ
ಮಂಡ್ಯ

ಮುಸ್ಲಿಂ ಮುಖಂಡರಿಂದ ಸುಮಲತಾ ಪರ ಮತಯಾಚನೆ

April 17, 2019

ಕೆ.ಆರ್.ಪೇಟೆ: ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮುಸ್ಲಿಂ ಮುಖಂಡರು ಮುಸ್ಲಿಂ ಬಂಧುಗಳ ಮನೆ ಮನೆಗೆ ತೆರಳಿ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರವಾಗಿ ಮತಯಾಚನೆ ಮಾಡಿದರು. ಅಂಬರೀಶ್ ಅವರು ಯಾವತ್ತೂ ಜಾತಿ-ಧರ್ಮದ ರಾಜಕಾರಣ ಮಾಡಿದ ವ್ಯಕ್ತಿಯಲ್ಲ. ಕೇಂದ್ರ-ರಾಜ್ಯ ಸಚಿವರಾಗಿ ಎಲ್ಲಾ ಧರ್ಮ, ಜಾತಿಯವರಿಗೂ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮುಸ್ಲಿಮ ರನ್ನು ಒಡಹುಟ್ಟಿದವರಂತೆ ಪ್ರೀತಿ ವಿಶ್ವಾಸ ದಿಂದ ಕಂಡಿದ್ದಾರೆ, ಕೈಲಾದ ನೆರವು ನೀಡಿದ್ದಾರೆ. ಹಾಗಾಗಿ ಅಂಬರೀಶ್ ಅವರ ಸೇವೆಯನ್ನು ಪರಿಗಣಿಸಿ ಅವರ ಪತ್ನಿ ಪಕ್ಷೇತರ…

ಪಾಂಡವಪುರ ಜಿಪಂ ಸದಸ್ಯ ತಿಮ್ಮೇಗೌಡ ಮನೆಗೆ ಐಟಿ ದಾಳಿ
ಮಂಡ್ಯ

ಪಾಂಡವಪುರ ಜಿಪಂ ಸದಸ್ಯ ತಿಮ್ಮೇಗೌಡ ಮನೆಗೆ ಐಟಿ ದಾಳಿ

April 17, 2019

ಪಾಂಡವಪುರ: ಚಿಕ್ಕಾಡೆ ಜಿಪಂ ಸದಸ್ಯ ತಿಮ್ಮೇಗೌಡ ಅವರ ಮನೆಗೆ ಮಂಗಳವಾರ ನಸುಕಿನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿದರು. ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿರುವ ತಿಮ್ಮೇಗೌಡರ ಮನೆಗೆ 8 ಅಧಿಕಾರಿಗಳ ತಂಡ ಬೆಳಿಗ್ಗೆ 6.30ರಲ್ಲಿ ದಾಳಿ ನಡೆಸಿತು. ಸಾಮಿಲ್, ಮರದ ಅಂಗಡಿ ಮತ್ತು ಪೆಟ್ರೋಲ್ ಬಂಕ್ ಮಾಲೀಕರಾಗಿರುವ ತಿಮ್ಮೇಗೌಡ ಸಚಿವ ಸಿ.ಎಸ್.ಪುಟ್ಟರಾಜು ಅವರ ಪರಮಾಪ್ತರು. ತಿಮ್ಮೇಗೌಡರ ಮೊದಲ ಪುತ್ರ ಚೇತನ್ ಜತೆ ಇಬ್ಬರು ಅಧಿಕಾರಿಗಳು ಮರದ ಅಂಗಡಿ, ಸಾಮಿಲ್‍ಗೆ ತೆರಳಿ ಪರಿಶೀಲನೆ ನಡೆಸಿದರೆ,…

ವಿಜಯಪುರ ಮಹಿಳೆಯರ ಮತ ಪ್ರಚಾರ
ಮಂಡ್ಯ

ವಿಜಯಪುರ ಮಹಿಳೆಯರ ಮತ ಪ್ರಚಾರ

April 17, 2019

ಕೆ.ಆರ್.ಪೇಟೆ: ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅಭಿಮಾನಿಗಳ ಮಹಿಳಾ ಸಂಘದ 56 ಸದಸ್ಯೆಯರು 450 ಕಿ.ಮೀ ದೂರದ ವಿಜಯಪುರದಿಂದ ಕೃಷ್ಣರಾಜಪೇಟೆ ತಾಲೂಕಿಗೆ ಬಂದು ಸುಮಲತಾ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಪಟ್ಟಣದ ವಿವಿಧ ಬಡಾವಣೆಗಳು ಸೇರಿದಂತೆ ಮುಖ್ಯ ರಸ್ತೆಯಲ್ಲಿ ಗುಂಪಾಗಿ ಸಂಚಾರ ಮಾಡಿದ ಮಹಿಳೆಯರು ಸುಮಲತಾ ಅಮ್ಮನವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಈ ಸಮಯದಲ್ಲಿ ಶೃತಿ ಎಂಬವರು ಮಾತನಾಡಿ, ನಾವು ಅಂಬರೀಶ್ ಅಭಿಮಾನಿಗಳು. ಈಗ ಸುಮಲತಾ ಅಂಬರೀಶ್ ಅವರು ಗೆಲ್ಲಬೇಕು…

1 44 45 46 47 48 108
Translate »