ವಿಜಯಪುರ ಮಹಿಳೆಯರ ಮತ ಪ್ರಚಾರ
ಮಂಡ್ಯ

ವಿಜಯಪುರ ಮಹಿಳೆಯರ ಮತ ಪ್ರಚಾರ

April 17, 2019

ಕೆ.ಆರ್.ಪೇಟೆ: ಅಂಬರೀಶ್ ಮತ್ತು ಸುಮಲತಾ ಅಂಬರೀಶ್ ಅಭಿಮಾನಿಗಳ ಮಹಿಳಾ ಸಂಘದ 56 ಸದಸ್ಯೆಯರು 450 ಕಿ.ಮೀ ದೂರದ ವಿಜಯಪುರದಿಂದ ಕೃಷ್ಣರಾಜಪೇಟೆ ತಾಲೂಕಿಗೆ ಬಂದು ಸುಮಲತಾ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ.

ಪಟ್ಟಣದ ವಿವಿಧ ಬಡಾವಣೆಗಳು ಸೇರಿದಂತೆ ಮುಖ್ಯ ರಸ್ತೆಯಲ್ಲಿ ಗುಂಪಾಗಿ ಸಂಚಾರ ಮಾಡಿದ ಮಹಿಳೆಯರು ಸುಮಲತಾ ಅಮ್ಮನವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಈ ಸಮಯದಲ್ಲಿ ಶೃತಿ ಎಂಬವರು ಮಾತನಾಡಿ, ನಾವು ಅಂಬರೀಶ್ ಅಭಿಮಾನಿಗಳು. ಈಗ ಸುಮಲತಾ ಅಂಬರೀಶ್ ಅವರು ಗೆಲ್ಲಬೇಕು ಎಂಬುದೇ ನಮ್ಮ ಆಸೆ. ಅದಕ್ಕಾಗಿ ಮಹಿಳಾ ಸಂಘದ ಸದಸ್ಯೆಯರಾದ ನಾವೆಲ್ಲಾ ಸ್ವಂತ ಹಣ ಹಾಕಿಕೊಂಡು ಒಂದು ಬಸ್‍ನಲ್ಲಿ 56 ಜನರು ಬಂದಿz್ದÉೀವೆ. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದೇವೆ. ಇಂದು (ಮಂಗಳವಾರ) ಪಟ್ಟಣದಲ್ಲಿ ಪ್ರಚಾರ ಮಾಡುತ್ತಿz್ದÉೀವೆ ಎಂದು ವಿವರಿಸಿದರು.

ದೂರದ ವಿಜಯಪುರದಿಂದ ಬಂದು ಪ್ರಚಾರ ಮಾಡುತ್ತಿರುವ ಮಹಿಳೆಯರನ್ನು ಸ್ಥಳೀಯರು ಆತ್ಮೀಯತೆಯಿಂದ ಸ್ವಾಗತಿಸಿ ಮತ ಚಲಾಯಿಸುವ ಭರವಸೆ ನೀಡುತ್ತಿದ್ದರು.

Translate »