ಮಂಡ್ಯ

ಚುನಾವಣೆ ವೆಚ್ಚಕ್ಕೆ ಜಿ.ಮಾದೇಗೌಡರಿಂದ ಹಣದ ಬೇಡಿಕೆ
ಮಂಡ್ಯ, ಮೈಸೂರು

ಚುನಾವಣೆ ವೆಚ್ಚಕ್ಕೆ ಜಿ.ಮಾದೇಗೌಡರಿಂದ ಹಣದ ಬೇಡಿಕೆ

April 8, 2019

ಮಂಡ್ಯ:ಇಡೀ ರಾಜ್ಯದಲ್ಲೇ ಹೈವೋಲ್ಟೇಜ್ ಕ್ಷೇತ್ರವೆನಿಸಿ ಕೊಂಡಿರುವ ಮಂಡ್ಯದಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂಬ ಆರೋಪಗಳ ನಡುವೆಯೇ ಹಿರಿಯ ಕಾಂಗ್ರೆಸ್ ಮುತ್ಸದ್ಧಿ, ಮಾಜಿ ಸಂಸದ ಜಿ.ಮಾದೇಗೌಡರು ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟ ರಾಜು ಬಳಿ ಹಣದ ಬೇಡಿಕೆಯಿಟ್ಟ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕ್ಷೇತ್ರದಲ್ಲಿ ಸಿಎಂ ಕುಮಾರ ಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಪತ್ನಿ ಸುಮಲತಾ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ…

ಎಲ್ಲವೂ ಮೀರಿ ಹೋಗಿದೆ: ಸಚಿವ ಜಿಟಿಡಿ
ಮಂಡ್ಯ

ಎಲ್ಲವೂ ಮೀರಿ ಹೋಗಿದೆ: ಸಚಿವ ಜಿಟಿಡಿ

April 3, 2019

ನಿಖಿಲ್ ಪರ ಪ್ರಚಾರಕ್ಕೆ ಸೋತ ಕಾಂಗ್ರೆಸ್ ಶಾಸಕರು ಬರೋದಿಲ್ಲಾ ಎಂದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಂಡ್ಯ: ಎಲ್ಲವೂ ಕೈ ಮೀರಿ ಹೋಗಿದೆ. ನಿಖಿಲ್ ಪರ ಪ್ರಚಾರಕ್ಕೆ ಸೋತ ಕಾಂಗ್ರೆಸ್‍ನ ಶಾಸಕರ್ಯಾರೂ ಬರೋದಿಲ್ಲಾ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಪ್ರಚಾರಕ್ಕೆ ಇಂದು ಮಳವಳ್ಳಿ ಕ್ಷೇತ್ರಕ್ಕೆ ಆಗಮಿಸಿದ್ದ ಸಚಿವರು ಚಿಕ್ಕಮುಲಗೂಡು ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿನ ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ತಮ್ಮದೇ ಆದ ಧಾಟಿಯಲ್ಲಿ…

ಗ್ರಾಮಕ್ಕೆ ಬರಬೇಡಿ: ನಿಖಿಲ್‍ಗೆ ಹಿಟ್ಟನಹಳ್ಳಿ ಗ್ರಾಮಸ್ಥರ ತಡೆ
ಮಂಡ್ಯ

ಗ್ರಾಮಕ್ಕೆ ಬರಬೇಡಿ: ನಿಖಿಲ್‍ಗೆ ಹಿಟ್ಟನಹಳ್ಳಿ ಗ್ರಾಮಸ್ಥರ ತಡೆ

April 3, 2019

ಮಂಡ್ಯ: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಮಂಗಳ ವಾರ ಮಳವಳ್ಳಿ ತಾಲ್ಲೂಕಿನ ವಿವಿಧೆಡೆ ಪ್ರಚಾರ ನಡೆಸಿದಾಗ ಮುಜುಗರದ ಸನ್ನಿ ವೇಶವನ್ನು ಎದುರಿಸಬೇಕಾಯಿತು. ಜತೆಗೆ ತಾಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪ್ರಚಾರಕ್ಕೆ ಗೈರು ಹಾಜರಾಗಿ ದ್ದರು. ನಿಖಿಲ್ ಜೊತೆಗೆ ಬಂದಿದ್ದ ಜೆಡಿಎಸ್ ಮುಖಂಡರನ್ನು ಹೊರತುಪಡಿಸಿ ನೂರು ನೂರೈವತ್ತು ಕಾರ್ಯಕರ್ತರು ಕಂಡು ಬಂದರು. ಪ್ರವೇಶಕ್ಕೆ ತಡೆ: ಮಳವಳ್ಳಿ ತಾಲ್ಲೂಕಿನ ಹಿಟ್ಟನಹಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಪುತ್ರ ನಿಖಿಲ್ ಅವರ ಗ್ರಾಮ ಪ್ರವೇಶಕ್ಕೆ ತಡೆಯೊಡ್ಡಲಾಯಿತು. ರಸ್ತೆಬದಿಯಲ್ಲಿ ಇರುವ ಅಂಗಡಿ…

ನೀವು ಸಚಿವರಾಗಿರಲು ಯಾರು ಕಾರಣ ನೆನಪಿಸಿಕೊಳ್ಳಿ?
ಮಂಡ್ಯ

ನೀವು ಸಚಿವರಾಗಿರಲು ಯಾರು ಕಾರಣ ನೆನಪಿಸಿಕೊಳ್ಳಿ?

April 3, 2019

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣಗೆ ಚುರುಕು ಮುಟ್ಟಿಸಿದ ಸುಮಲತಾ ಅಂಬರೀಶ್ ಮದ್ದೂರು: `ಅಂಬರೀಶ್ ಜಿಲ್ಲೆಗೆ ಏನೂ ಮಾಡಿಲ್ಲ’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳು ತ್ತಿದ್ದಾರೆ. ಅಂಬಿ ಜಿಲ್ಲೆಗೆ, ನಿಮಗೆ ಏನೇ ನೆಲ್ಲಾ ಮಾಡಿದ್ದಾರೆ ಎಂಬುದನ್ನು ತಮ್ಮಣ್ಣ ಅವರು ತಮ್ಮ ಆತ್ಮ ಸಾಕ್ಷಿಯನ್ನು ಕೇಳಿಕೊಳ್ಳಲಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕುಟುಕಿದರು. ತಾಲೂಕಿನ ಉಪ್ಪಿನಕೆರೆಯಲ್ಲಿ ಮಂಗಳ ವಾರ ಚುನಾವಣಾ ಪ್ರಚಾರ ವೇಳೆ ಮಾತ ನಾಡಿದ ಅವರು, ಇವತ್ತು ಸಚಿವರಾಗಿ ತಮ್ಮಣ್ಣ ಅವರು ಅಧಿಕಾರ ನಡೆಸುತ್ತಿರುವುದಕ್ಕೆ ಯಾರು…

ಮತದಾರರೇ ರಾಜರು: ಪ್ರಜಾಕೀಯ ಉಪೇಂದ್ರ
ಮಂಡ್ಯ

ಮತದಾರರೇ ರಾಜರು: ಪ್ರಜಾಕೀಯ ಉಪೇಂದ್ರ

April 3, 2019

ಭಾರತೀನಗರ: ಮತದಾರರೇ ರಾಜರು, ನಿಮ್ಮ ದುಡ್ಡಲ್ಲಿ ರಾಜಕಾರಣಿಗಳು ಮೆರೆಯು ತ್ತಿದ್ದಾರೆ ಎಂದು ಚಿತ್ರನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು. ಭಾರತೀನಗರದಲ್ಲಿ ಪ್ರಜಾ ಕೀಯ ಪಕ್ಷದ ಅಭ್ಯರ್ಥಿ ದಿವಾ ಕರ್ ಸಿ.ಪಿ.ಗೌಡ ಅವರ ಪರ ವಾಗಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿ ದರು. ಜನರ ಹಿತಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದೇನೆ. ಆದ್ದ ರಿಂದ ನಮ್ಮ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಜನರಿಂದ ರಾಜಕೀಯ ಆಗಬೇಕು. ರಾಜಕೀಯ ವ್ಯಾಪಾರವಲ್ಲ, ಸಮಾಜಸೇವೆ. ಭ್ರಷ್ಟಾಚಾರ…

ಅಭ್ಯರ್ಥಿಗಳ ಹಣಾಹಣಿ ನಡುವೆ ಚುನಾವಣೆ ಅಧಿಕಾರಿಗಳಿಂದ ಮತದಾನ ಜಾಗೃತಿ
ಮಂಡ್ಯ

ಅಭ್ಯರ್ಥಿಗಳ ಹಣಾಹಣಿ ನಡುವೆ ಚುನಾವಣೆ ಅಧಿಕಾರಿಗಳಿಂದ ಮತದಾನ ಜಾಗೃತಿ

April 3, 2019

ಜಿಲ್ಲಾ ಚುನಾವಣಾ ವೀಕ್ಷಕ ರಂಜಿತ್ ಕುಮಾರ್‍ರಿಂದ ಚೆಕ್‍ಪೋಸ್ಟ್ ತಪಾಸಣೆ ಇಒ, ತಹಸಿಲ್ದಾರ್‍ಗಳಿಂದ ಮತದಾರರಿಗೆ ಅರಿವು-ಮತದಾನಕ್ಕೆ ಪ್ರೋತ್ಸಾಹ ಮಂಡ್ಯ: ಜೆಡಿಎಸ್ ಅಭ್ಯರ್ಥಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕೆ. ಹಾಗೂ ಬಿಜೆಪಿ ಮತ್ತು ರೈತ ಸಂಘ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವಿನ ನೇರ ಹಣಾಹಣಿ, ತೀವ್ರ ಪೈಪೋಟಿಯ ಕಾರಣದಿಂದಾಗಿಯೇ ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯ, ದೇಶದ ಮಾಧ್ಯಮಗಳ ಗಮನ ಸೆಳೆದಿದೆ. ಇದರೊಟ್ಟಿಗೆ ಸ್ಟಾರ್ ನಟರ ಪ್ರಚಾರವೂ ಸೇರಿಕೊಂಡಿರುವುದರಿಂದ ಎಲ್ಲರ ಗಮನ ಸಕ್ಕರೆ ನಾಡಿನ…

‘ಕಡ್ಡಾಯ ಮತದಾನ ಮಾಡಿ ದೇಶ ಕಾಪಾಡಿ’
ಮಂಡ್ಯ

‘ಕಡ್ಡಾಯ ಮತದಾನ ಮಾಡಿ ದೇಶ ಕಾಪಾಡಿ’

April 3, 2019

ಕಿಕ್ಕೇರಿ: ಕಡ್ಡಾಯ ಮತದಾನ ಮಾಡುವು ದರಿಂದ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿ ಸುಭದ್ರ ದೇಶ ನಿರ್ಮಾಣ ವಾಗಲು ಸಾಧ್ಯವಾಗಲಿದೆ ಎಂದು ತಹಸಿ ಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು. ಪಟ್ಟಣದಲ್ಲಿನ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ 90 ಕೋಟಿ ಮತದಾರರಿದ್ದರೂ ಮತದಾನ ಪ್ರಮಾಣ ಮಾತ್ರ ಕಡಿಮೆ ಇರುತ್ತದೆ. ಪ್ರಜ್ಞಾ ವಂತರೇ ಮತದಾನ ಮಾಡಲು ಹಿಂಜರಿ ಯುತ್ತಾರೆ. ಇಂಥ ನಿರಾಸಕ್ತಿಯಿಂದಾಗಿ ದಕ್ಷ, ಪ್ರಾಮಾಣಿಕ ನಾಯಕರನ್ನು ಚುನಾಯಿ ಸಲು ಕಷ್ಟವಾಗುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು. ನಿಷ್ಪಕ್ಷಪಾತ,…

ರೈತರ ಪರ ಕೆಲಸ ಮಾಡಲು ಅವಕಾಶ ಕೊಡಿ
ಮಂಡ್ಯ

ರೈತರ ಪರ ಕೆಲಸ ಮಾಡಲು ಅವಕಾಶ ಕೊಡಿ

April 2, 2019

ಕೆ.ಆರ್.ಪೇಟೆ: ನನ್ನ ತಾತ ಮತ್ತು ನನ್ನ ತಂದೆಯವರಂತೆ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ಹೊತ್ತು ಬಂದಿದ್ದೇನೆ ಅವರಂತೆಯೇ ರೈತರ ನಡುವೆ ಇದ್ದು ರೈತ ಪರವಾಗಿ ಕೆಲಸ ಮಾಡಲು ಮಂಡ್ಯ ಜಿಲ್ಲೆಯ ಜನತೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‍ಕುಮಾರ ಸ್ವಾಮಿ ಮನವಿ ಮಾಡಿದರು. ಅವರು ತಾಲೂಕಿನ ಸಂತೇಬಾಚ ಹಳ್ಳಿ ಹೋಬಳಿಯ ಸಾರಂಗಿ, ಕೈಗೋನ ಹಳ್ಳಿ, ರಂಗನಾಥಪುರ ಕ್ರಾಸ್, ಭಾರತೀ ಪುರ ಕ್ರಾಸ್ ಗ್ರಾಮ ಪಂಚಾಯಿತಿ ಕೇಂದ್ರ ಮತ್ತು ಕಿಕ್ಕೇರಿ ಹೋಬಳಿಯ…

ಮಂಡ್ಯದಲ್ಲಿ ನ್ಯಾಯ ಸಮ್ಮತ, ಮುಕ್ತ ಚುನಾವಣೆ ಅನುಮಾನ: ಸುಮಲತಾ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ನ್ಯಾಯ ಸಮ್ಮತ, ಮುಕ್ತ ಚುನಾವಣೆ ಅನುಮಾನ: ಸುಮಲತಾ

April 1, 2019

ಮಂಡ್ಯ: ನಾನು ಕಣಕ್ಕಿಳಿದ ಮೊದಲ ದಿನದಿಂದಲೂ ನನಗೆ ಅನ್ಯಾಯವಾಗು ತ್ತಲೇ ಇದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವೇ ಆಗುತ್ತಿಲ್ಲ. ನನಗೆ ನ್ಯಾಯ ಸಿಗುತ್ತಲೇ ಇಲ್ಲ. ಈ ಚುನಾವಣೆ ನ್ಯಾಯಸಮ್ಮತ ಹಾಗೂ ಮುಕ್ತ ರೀತಿಯಲ್ಲಿ ನಡೆಯುವುದೇ ಅನುಮಾನ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದರು. ನಗರದಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಸುದ್ದಿ ಗೋಷ್ಠಿ ನಡೆಸಿದ ಅವರು, ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಚುನಾವಣೆ ನಡೆಸಲು ಇದೆಯೋ ಅಥವಾ ಮುಖ್ಯಮಂತ್ರಿಗಳ ಮಗನನ್ನು ಗೆಲ್ಲಿಸಲು…

ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ
ಮಂಡ್ಯ, ಮೈಸೂರು

ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ

April 1, 2019

ಪ್ರಾದೇಶಿಕ ಆಯುಕ್ತರಿಂದ ಡಿಸಿ ಕಚೇರಿಯಲ್ಲಿ ವಿಚಾರಣೆ ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿಚಾರವಾಗಿ ದೂರು ದಾಖಲಾಗಿದ್ದರಿಂದ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮೈಸೂರು ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್‍ಕುಮಾರ್ ಅವರು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ಭಾನುವಾರ ವಿಚಾರಣೆ ನಡೆಸಿದರು. ಪಕ್ಷೇತರ ಅಭ್ಯರ್ಥಿ ಎ.ಸುಮಲತಾ (ಅಂಬರೀಶ್ ಪತ್ನಿ) ಅವರ ಚುನಾವಣಾ ಏಜೆಂಟ್ ಮದನ್‍ಕುಮಾರ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಶನಿವಾರ ಮಂಡ್ಯ ಚುನಾವಣಾ ಶಾಖೆಗೆ ಭೇಟಿ ನೀಡಿ ಸಭೆ…

1 46 47 48 49 50 108
Translate »