‘ಕಡ್ಡಾಯ ಮತದಾನ ಮಾಡಿ ದೇಶ ಕಾಪಾಡಿ’
ಮಂಡ್ಯ

‘ಕಡ್ಡಾಯ ಮತದಾನ ಮಾಡಿ ದೇಶ ಕಾಪಾಡಿ’

April 3, 2019

ಕಿಕ್ಕೇರಿ: ಕಡ್ಡಾಯ ಮತದಾನ ಮಾಡುವು ದರಿಂದ ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿ ಸುಭದ್ರ ದೇಶ ನಿರ್ಮಾಣ ವಾಗಲು ಸಾಧ್ಯವಾಗಲಿದೆ ಎಂದು ತಹಸಿ ಲ್ದಾರ್ ಎಂ.ಶಿವಮೂರ್ತಿ ತಿಳಿಸಿದರು.

ಪಟ್ಟಣದಲ್ಲಿನ ಕೆ.ಎಸ್.ನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದಲ್ಲಿ 90 ಕೋಟಿ ಮತದಾರರಿದ್ದರೂ ಮತದಾನ ಪ್ರಮಾಣ ಮಾತ್ರ ಕಡಿಮೆ ಇರುತ್ತದೆ. ಪ್ರಜ್ಞಾ ವಂತರೇ ಮತದಾನ ಮಾಡಲು ಹಿಂಜರಿ ಯುತ್ತಾರೆ. ಇಂಥ ನಿರಾಸಕ್ತಿಯಿಂದಾಗಿ ದಕ್ಷ, ಪ್ರಾಮಾಣಿಕ ನಾಯಕರನ್ನು ಚುನಾಯಿ ಸಲು ಕಷ್ಟವಾಗುತ್ತದೆ ಎಂಬುದನ್ನು ಎಲ್ಲರೂ ಅರಿಯಬೇಕು. ನಿಷ್ಪಕ್ಷಪಾತ, ನಿರ್ಭಯ ವಾಗಿ ಮತದಾನ ಮಾಡಲು ನಾಗರಿಕರು ಮುಂದಾಗಬೇಕು. ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು ಎಂದರು.

ತಾಲೂಕಿನಲ್ಲಿ 76 ಸಾವಿರ ಮಹಿಳೆಯ ರಿದ್ದು, ಮತದಾನದಲ್ಲಿ ಅವರ ಪ್ರಧಾನ ಪಾತ್ರವಿದೆ. ಯುವಕರು ಮತ ಜಾಗೃತಿಗೆ ಕೈಜೋಡಿಸಬೇಕು. 1 ದಿನದ ಆಸೆಗಾಗಿ ಮತ ಮಾರಿಕೊಳ್ಳದಿರಿ. ಸದೃಢ ಸಮಾಜ ನಿರ್ಮಾಣ ನಿಮ್ಮ ಕೈಯಲ್ಲಿಯೇ ಇದೆ. ಅರಾಜಕತೆ, ಅಶಾಂತಿ ದೂರಮಾಡಲು ಇರುವ ಪ್ರಬಲ ಅಸ್ತ್ರ ಮತದಾನ ಎಂದು ತಿಳಿಹೇಳಿದರು.

ಸಹಾಯಕ ಚುನಾವಣಾಧಿಕಾರಿ ವೆಂಕ ಟೇಶ್, ಮತದಾನ ಮಾಡಲು ಅಡ್ಡಿಪಡಿ ಸುವುದು, ತಾವು ತಿಳಿಸಿದವರಿಗೇ ಮತ ಹಾಕಬೇಕು ಎಂದು ಒತ್ತಾಯಿಸುವುದು, ಪ್ರಚೋದಿಸುವುದು ಶಿಕ್ಷಾರ್ಹ ಅಪರಾಧ ಎಂದು ಗಮನ ಸೆಳೆದರು. ಬಳಿಕ ಸಾರ್ವ ಜನಿಕರು ಕಡ್ಡಾಯವಾಗಿ ಮತ ಮಾಡುವು ದಾಗಿ ಪ್ರತಿಜ್ಞೆ ಮಾಡಿದರು.

ತಹಸಿಲ್ದಾರ್ ಎಂ.ಶಿವಮೂರ್ತಿ, ಸಿಡಿಪಿಒ ದೇವುಕುಮಾರ್, ಇಒ ಚಂದ್ರ ಮೌಳಿ, ಉದ್ಯೋಗಖಾತ್ರಿ ಯೋಜನೆ ಸಹಾಯಕ ನಿರ್ದೇಶಕಿ ಮೇನಕಾದೇವಿ, ಉಪ ತಹಸಿಲ್ದಾರ್ ಲಕ್ಷ್ಮಿಕಾಂತ್, ಪಿಡಿಒ ಕೆಂಪೇಗೌಡ, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಲೆಕ್ಕಿಗ ಸೋಮಾಚಾರ್ ಮತ್ತಿತರರಿದ್ದರು.

Translate »