ಮತದಾರರೇ ರಾಜರು: ಪ್ರಜಾಕೀಯ ಉಪೇಂದ್ರ
ಮಂಡ್ಯ

ಮತದಾರರೇ ರಾಜರು: ಪ್ರಜಾಕೀಯ ಉಪೇಂದ್ರ

April 3, 2019

ಭಾರತೀನಗರ: ಮತದಾರರೇ ರಾಜರು, ನಿಮ್ಮ ದುಡ್ಡಲ್ಲಿ ರಾಜಕಾರಣಿಗಳು ಮೆರೆಯು ತ್ತಿದ್ದಾರೆ ಎಂದು ಚಿತ್ರನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದರು.

ಭಾರತೀನಗರದಲ್ಲಿ ಪ್ರಜಾ ಕೀಯ ಪಕ್ಷದ ಅಭ್ಯರ್ಥಿ ದಿವಾ ಕರ್ ಸಿ.ಪಿ.ಗೌಡ ಅವರ ಪರ ವಾಗಿ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿ ದರು. ಜನರ ಹಿತಕ್ಕಾಗಿ, ದೇಶದ ಅಭಿವೃದ್ಧಿಗಾಗಿ ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದೇನೆ. ಆದ್ದ ರಿಂದ ನಮ್ಮ ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ಜನರಿಂದ ರಾಜಕೀಯ ಆಗಬೇಕು. ರಾಜಕೀಯ ವ್ಯಾಪಾರವಲ್ಲ, ಸಮಾಜಸೇವೆ. ಭ್ರಷ್ಟಾಚಾರ ರಹಿತ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದಲೇ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದೇನೆ ಎಂದರು.

ನಾನು ಜನರಿಗೋಸ್ಕರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ. ಸಿನಿಮಾ ವ್ಯಾಪಾರ-ರಾಜಕೀಯ ಸೇವೆ, ಎರಡನ್ನೂ ಮೈಗೂಡಿ ಸಿಕೊಂಡಿದ್ದೇನೆ ಎಂದರು.

ನಮ್ಮ ಪಕ್ಷದಲ್ಲಿ ಸಮಾಜ ಸೇವೆಗೆ ಆದ್ಯತೆ. ಜನಸಾಮಾನ್ಯ ರನ್ನು ಅರಿತುಕೊಂಡು ಕೆಲಸ ಮಾಡುವ ಉದ್ದೇಶಕ್ಕೆ ಎಲ್ಲರೂ ಬೆಂಬಲಿಸಬೇಕು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಇದರಲ್ಲಿ ಜಾತಿ, ಹಣದ ಮೇಲೆ ರಾಜಕಾರಣ ನಡೆಸುವುದಿಲ್ಲ. ಭವಿಷ್ಯದ ಉತ್ತಮ ರಾಜಕಾರಣಕ್ಕಾಗಿ ಇದನ್ನು ಮಾಡಲಾಗುತ್ತಿದೆ ಎಂದರು.

Translate »