ನೀವು ಸಚಿವರಾಗಿರಲು ಯಾರು ಕಾರಣ ನೆನಪಿಸಿಕೊಳ್ಳಿ?
ಮಂಡ್ಯ

ನೀವು ಸಚಿವರಾಗಿರಲು ಯಾರು ಕಾರಣ ನೆನಪಿಸಿಕೊಳ್ಳಿ?

April 3, 2019

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣಗೆ ಚುರುಕು ಮುಟ್ಟಿಸಿದ ಸುಮಲತಾ ಅಂಬರೀಶ್
ಮದ್ದೂರು: `ಅಂಬರೀಶ್ ಜಿಲ್ಲೆಗೆ ಏನೂ ಮಾಡಿಲ್ಲ’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳು ತ್ತಿದ್ದಾರೆ. ಅಂಬಿ ಜಿಲ್ಲೆಗೆ, ನಿಮಗೆ ಏನೇ ನೆಲ್ಲಾ ಮಾಡಿದ್ದಾರೆ ಎಂಬುದನ್ನು ತಮ್ಮಣ್ಣ ಅವರು ತಮ್ಮ ಆತ್ಮ ಸಾಕ್ಷಿಯನ್ನು ಕೇಳಿಕೊಳ್ಳಲಿ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಕುಟುಕಿದರು.

ತಾಲೂಕಿನ ಉಪ್ಪಿನಕೆರೆಯಲ್ಲಿ ಮಂಗಳ ವಾರ ಚುನಾವಣಾ ಪ್ರಚಾರ ವೇಳೆ ಮಾತ ನಾಡಿದ ಅವರು, ಇವತ್ತು ಸಚಿವರಾಗಿ ತಮ್ಮಣ್ಣ ಅವರು ಅಧಿಕಾರ ನಡೆಸುತ್ತಿರುವುದಕ್ಕೆ ಯಾರು ಕಾರಣ? ಅವತ್ತು ಅಂಬರೀಶ್ ಮನೆಯಲ್ಲಿ ಕುಳಿತು ನನಗೆ ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ನೀವು ಚಡಪಡಿಸುತ್ತಿದ್ದಾಗ ಅಂಬ ರೀಶ್, ಯಾರಿಗೆ ಫೆÇೀನ್ ಮಾಡಿ ನಿಮ್ಮನ್ನು ಮಂತ್ರಿ ಮಾಡಿದರು ಅಂತಾ ನೆನಪಿಸಿ ಕೊಳ್ಳಿ ಎಂದು ಪ್ರತ್ಯುತ್ತರ ನೀಡಿದರು.
ಓದಿಸಿ ಬೆಳೆಸಿದರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರನ್ನು ಚಿಕ್ಕವಯಸ್ಸಿನಲ್ಲಿ ಓದಿಸಿ ಬೆಳೆಸಿದ್ದು ನಮ್ಮ ಮಾವ ಹುಚ್ಚೇ ಗೌಡ ಅವರು. ಅಂಬರೀಶ್ ಅವರ ತಂದೆ ಮಳವಳ್ಳಿ ಹುಚ್ಚೇಗೌಡರು ತಮ್ಮಣ್ಣ ಅವರನ್ನು ಚಿಕ್ಕವಯಸ್ಸಿನಲ್ಲಿ ಮನೆಗೆ ತಂದು ಬೆಳೆಸಿ, ಓದಿಸಿದರು. `ತಮ್ಮನ್ನು ಓದಿಸಿ ಬೆಳೆಸಿದವರು ಯಾರು?’ ಎಂದು ತಮ್ಮಣ್ಣ ಅವರೇ ಹೇಳಲಿ ಎಂದು ಸುಮಲತಾ ವಾಗ್ದಾಳಿ ನಡೆಸಿದರು.

ಕೃತಘ್ನ: ಅನ್ನಹಾಕಿ ಓದಿಸಿ, ಬೆಳೆಸಿದ ಮನೆಗೇ ಈಗ ಇವರು ಏನೆಲ್ಲಾ ಮಾಡುತ್ತಿ ದ್ದಾರೆ. ಸ್ವಲ್ಪವೂ ಕೃತಜ್ಞತೆ ಇಲ್ಲದ ಮನುಷ್ಯ. ಇಷ್ಟೆಲ್ಲ ವಯಸ್ಸಾಗಿ ಅನುಭವ ಪಡೆ ದಿದ್ದರೂ ಹೆಂಗಸರ ಬಗ್ಗೆ ಹೇಗೆಲ್ಲಾ ಮಾತನಾಡ್ತಾರೆ ನೋಡಿ ಎಂದು ಬೇಸರ ವ್ಯಕ್ತಪಡಿ ಸಿದರು.

ಇವತ್ತು ಅಧಿಕಾರ ಕ್ಕಾಗಿ ಸಂಬಂಧಗಳನ್ನೇ ಕಳೆದುಕೊಂಡಿ ದ್ದಾರೆ. ಇವರಿಗೆ ಅಧಿಕಾರ ಹಾಗೂ ಹಣ ಎರಡನ್ನು ಬಿಟ್ಟರೆ ಯಾವುದೇ ಸಂಬಂಧ ಗಳು ಬೇಕಾಗಿಲ್ಲ. ಸಂಬಂಧದಲ್ಲಿ ಅಂಬ ರೀಶ್ ಅಣ್ಣನಾಗಬೇಕಿದ್ದು, ಈಗ ಅವೆಲ್ಲ ವನ್ನೂ ಮರೆತಿದ್ದಾರೆ ಎಂದು ಸುಮಲತಾ ಅವರು, ಇಂದು ಸಾರಿಗೆ ಸಚಿವರ ಹೀಯಾಳಿಕೆ ಮಾತುಗಳಿಗೆ ಕೊನೆಗೂ ಸರಿಯಾದ ತಿರುಗೇಟನ್ನೇ ನೀಡಿದರು.

Translate »