ಮಂಡ್ಯ

ವಿಷಪೂರಿತ ಆಹಾರ ಸೇವನೆ: ಮೂರು ಮೇಕೆ ಸಾವು
ಮಂಡ್ಯ

ವಿಷಪೂರಿತ ಆಹಾರ ಸೇವನೆ: ಮೂರು ಮೇಕೆ ಸಾವು

August 17, 2018

ಮದ್ದೂರು: ವಿಷಪೂರಿತ ಆಹಾರ ಸೇವಿಸಿ ಮೂರು ಮೇಕೆಗಳು ಸಾವನ್ನಪ್ಪಿರುವ ಘಟನೆ ಪಟ್ಟಣದ ಹೆಚ್‍ಕೆವಿ ನಗರದಲ್ಲಿ ನಡೆದಿದೆ. ಹೆಚ್‍ಕೆವಿ ನಗರದ ನಿವಾಸಿ ನಂದೀಶ್ ಎಂಬುವರಿಗೆ ಸೇರಿದ 3 ಮೇಕೆಗಳು ತಮ್ಮ ಜಮೀನಿನ ಬಳಿ ಮೇಯುತ್ತಿದ್ದ ವೇಳೆ ವಿಷಪೂರಿತ ಸೊಪ್ಪು ಸೇವಿಸಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಸುಮಾರು 30 ಸಾವಿರ ರೂ. ಮೌಲ್ಯದ ಮೇಕೆಗಳು ಸಾವನಪ್ಪಿದ ಹಿನ್ನೆಲೆಯಲ್ಲಿ ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಹನುಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಸರ್ಕಾರದಿಂದ ಸಿಗುವ ಪರಿಹಾರ ನೀಡುವ ಭರವಸೆ ನೀಡಿದರು.

ನದಿಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಕ್ರಮ ವಹಿಸಿ: ಡಿಸಿ
ಮಂಡ್ಯ

ನದಿಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಕ್ರಮ ವಹಿಸಿ: ಡಿಸಿ

August 15, 2018

ಮಂಡ್ಯ:  ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೃಷ್ಣ ರಾಜಸಾಗರ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ, ಜಲಾಶಯದಿಂದ 1,50, 000 ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟಿರುವುದರಿಂದ ನದಿ ಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಕ್ರಮ ವಹಿಸಲು ಮುಂದಾಗಬೇಕು ಎಂದು ಜಿಲ್ಲಾ ಧಿಕಾರಿ ಎನ್.ಮಂಜುಶ್ರೀ ತಿಳಿಸಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನದಿ ಪಾತ್ರದ ಗ್ರಾಮಗಳ ಜನರ ಸುರ ಕ್ಷತೆಗೆ ಮುಂಜಾಗ್ರತೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ…

ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
ಮಂಡ್ಯ

ವೇತನಕ್ಕೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

August 15, 2018

ಕೆ.ಆರ್.ಪೇಟೆ: ತಾಲೂಕಿನ ಗ್ರಾಪಂ ನೌಕರರಿಗೆ ನೀಡಬೇಕಿರುವ ವೇತನ ಬಿಡುಗಡೆ ಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮ ಪಂಚಾ ಯಿತಿ ನೌಕರರ ಸಂಘದ ಸದಸ್ಯರು ಪಟ್ಟಣ ದಲ್ಲಿಂದು ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಕೂಡಲೇ ಕಳೆದ 15ತಿಂಗಳಿಂದ ವೇತನ ನೀಡದ ತಾಲೂಕಿನ 34 ಗ್ರಾಪಂ ನೌಕರರಿಗೆ ವೇತನ ನೀಡುವಂತೆ ಆಗ್ರಹಿಸಿದರು. ಗ್ರಾಪಂ ನೌಕರರ ಖಾತೆಗೆ ನೇರವಾಗಿ ವೇತನ ವನ್ನು ಜಮಾ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆವಿಗೂ ಅದು ಜಾರಿಯಾ ಗಿಲ್ಲ. ಇದರಿಂದಾಗಿ…

ರಾಜ್ಯಮಟ್ಟದಲ್ಲಿ ದೋಸ್ತಿ, ಜಿಲ್ಲೆಯಲ್ಲಿ ಜಂಗೀ ಕುಸ್ತಿ…!
ಮಂಡ್ಯ

ರಾಜ್ಯಮಟ್ಟದಲ್ಲಿ ದೋಸ್ತಿ, ಜಿಲ್ಲೆಯಲ್ಲಿ ಜಂಗೀ ಕುಸ್ತಿ…!

August 13, 2018

ಮಂಡ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಆಯೋಗವು ಆ.29ರಂದು ಮುಹೂರ್ತ ಫಿಕ್ಸ್ ಮಾಡಿ ಅಧಿಸೂಚನೆ ಹೊರಡಿ ಸಿದೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಜಿಲ್ಲಾ ಸ್ಥಳೀಯ ಸಂಸ್ಥೆಗಳ ಒಡೆಯರು ಯಾರಾಗುತ್ತಾರೆ ಎಂಬೆಲ್ಲಾ ಲೆಕ್ಕಾಚಾರಗಳು ಶುರುವಾಗಿದೆ. ಮಂಡ್ಯ ಜಿಲ್ಲೆ ಹೇಳಿ ಕೇಳಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಭದ್ರಕೋಟೆಯಾಗಿದೆ. ಸಹಜ ವಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಹೆಚ್ಚಿನ ಪೈಪೋಟಿ ಏರ್ಪಟ್ಟಿದ್ದು, ಜಿಲ್ಲೆಯ ರಾಜಕೀಯ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಜೆಡಿಎಸ್,…

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಸಚಿವರ ತರಾಟೆ
ಮಂಡ್ಯ

ಜಿಲ್ಲಾಸ್ಪತ್ರೆ ಅವ್ಯವಸ್ಥೆಗೆ ಸಚಿವರ ತರಾಟೆ

August 13, 2018

ಮಂಡ್ಯ: ಮಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಕಂಡು ಆಕ್ರೋಶಗೊಂಡ ಮಂಡ್ಯ ಜಿಲ್ಲಾ ಉಸ್ತುವಾರಿ, ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾಸ್ಪತ್ರೆ ಆವರಣದಲ್ಲಿಂದು ನಡೆಯಿತು. ಇಂದು ಬೆಳಗ್ಗೆ ವಿ.ಸಿ.ಫಾರಂ ಗೇಟ್ ಬಳಿ ಅಪಘಾತದಲ್ಲಿ ಮೃತಪಟ್ಟವರನ್ನು ನೋಡಲು ಮಿಮ್ಸ್‍ನ ಶವಾಗಾರಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆಯಿತು. ಏನಿದು ಘಟನೆ: ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಹೆರಿಗೆ ವಾರ್ಡ್ ಬಳಿ ಬಾಣಂತಿಯರ ಸಂಬಂಧಿಕರಿಗೆ…

ರಿವಾಲ್ವರ್ ಇದ್ದರೂ ಬಳಸಲಾಗದೇ ಹತ್ಯೆಯಾದ ರೌಡಿ ಅರಸಯ್ಯ
ಮಂಡ್ಯ

ರಿವಾಲ್ವರ್ ಇದ್ದರೂ ಬಳಸಲಾಗದೇ ಹತ್ಯೆಯಾದ ರೌಡಿ ಅರಸಯ್ಯ

August 13, 2018

ಮಂಡ್ಯ: ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ನಡೆದ ರೌಡಿ ಅರಸಯ್ಯನ ಮೇಲಿನ ಹಂತಕರ ದಾಳಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಹಂತಕರ ದಾಳಿ ವೇಳೆ ಅರಸಯ್ಯ ತನ್ನ ಇನ್ನೋವಾ ಕಾರಿನಲ್ಲಿ ರಿವಾಲ್ವರ್ ಇಟ್ಟುಕೊಂಡಿದ್ದ! ಆದರೆ ಆ ರಿವಾಲ್ವರ್, ಆತನ ಸಹಾಯಕ್ಕೆ ಬಂದೇ ಇಲ್ಲ ಎಂಬ ಸಂಗತಿ ಬಯಲಾಗಿದೆ. ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಆಗಿದ್ದ ಅರಸಯ್ಯ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಸಮಾಜ ಸೇವಕ ಎಂಬ ಸ್ವಘೋಷಿತ ಪಟ್ಟ ಕಟ್ಟಿಕೊಂಡಿದ್ದ. ಶ್ರೀರಂಗಪಟ್ಟಣ ಬಳಿ ಮಹಾಕಾಳಿ ದೇವಸ್ಥಾನ ನಿರ್ಮಾಣ ಮಾಡಿ ಟ್ರಸ್ಟಿಯೂ ಕೂಡ…

ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ
ಮಂಡ್ಯ

ಸೀತಾಪುರ ಗದ್ದೆಯಲ್ಲಿ ನಾಟಿ ಮಾಡಿದ ಸಿಎಂ ಕುಮಾರಸ್ವಾಮಿ ನಾಡಿನ ದೊರೆ ಸಂದೇಶ: ಅನ್ನದಾತರೇ ಧೈರ್ಯಗೆಡದಿರಿ… ನಿಮ್ಮೊಂದಿಗೆ ನಾವಿದ್ದೇವೆ

August 12, 2018

ಮೈಸೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಕೆಸರು ಗದ್ದೆಯಲ್ಲಿ ರೈತ ಮಹಿಳೆ ಯರೊಂದಿಗೆ ಭತ್ತದ ನಾಟಿ ಮಾಡಿದರು. ಸಾಲ ಭೀತಿಯಿಂದ ಹತಾಶರಾಗಿ ಆತ್ಮಹತ್ಯೆ ಹಾದಿ ಹಿಡಿದಿರುವ ಮಣ್ಣಿನ ಮಕ್ಕಳಿಗೆ ಸರ್ಕಾರ ನಿಮ್ಮೊಂದಿಗಿದೆ ಎಂಬ ಸಂದೇಶ ದೊಂದಿಗೆ ಸೀತಾಪುರದ ಕುಳ್ಳಮ್ಮ ಮತ್ತು ಕೆಂಚೇಗೌಡ ಕುಟುಂಬಕ್ಕೆ ಸೇರಿದ 5 ಎಕರೆ ಜಮೀನಿನಲ್ಲಿ ಮುಖ್ಯಮಂತ್ರಿಗಳು ಹೊಸ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದಾರೆ. ಸಚಿವರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಶಾಸಕರಾದ…

ಗೌರಿ-ಗಣೇಶ ಹಬ್ಬದೊಳಗೆ ರಾಜ್ಯದ ಜನತೆಗೆ ಬಂಪರ್ ಗಿಫ್ಟ್
ಮಂಡ್ಯ

ಗೌರಿ-ಗಣೇಶ ಹಬ್ಬದೊಳಗೆ ರಾಜ್ಯದ ಜನತೆಗೆ ಬಂಪರ್ ಗಿಫ್ಟ್

August 12, 2018

ಮೈಸೂರು: ಹತಾಶರಾಗಿ ರೈತ ತಂದೆ-ತಾಯಂದಿರು ಆತ್ಮಹತ್ಯೆಗೆ ಶರಣಾಗಬೇಡಿ. ಗೌರಿ-ಗಣೇಶ ಹಬ್ಬದೊಳಗಾಗಿ ರಾಜ್ಯದ ಜನತೆಗೆ ಬಂಪರ್ ಗಿಫ್ಟ್ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕು ಸೀತಾಪುರ ಗ್ರಾಮದ ಗದ್ದೆಯಲ್ಲಿ ಭತ್ತದ ನಾಟಿ ಮಾಡಿದ ನಂತರ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ರೈತರು ಮಾಡಿರುವ ರಾಷ್ಟ್ರೀಕೃತ ಬ್ಯಾಂಕ್ ಸಾಲವನ್ನೂ ಮನ್ನಾ ಮಾಡಲು ಚಿಂತನೆ ನಡೆಸಿದ್ದೇನೆ. ಕ್ಯಾಬಿನೆಟ್‍ನಲ್ಲಿ ನಿರ್ಧಾರ ಕೈಗೊಂಡ ನಂತರ ನಿಲುವು ಪ್ರಕಟಿಸುತ್ತೇನೆ. ಕೇವಲ ರೈತರ ಸಾಲ ಮನ್ನಾ ಮಾತ್ರವಲ್ಲದೆ, ಹೊಸ ಕೃಷಿ ನೀತಿ ಮಾಡಲು…

ಶ್ರೀರಂಗಪಟ್ಟಣ ಬಳಿ ಬೆಂಗಳೂರು ರೌಡಿಶೀಟರ್ ಹತ್ಯೆ
ಮಂಡ್ಯ

ಶ್ರೀರಂಗಪಟ್ಟಣ ಬಳಿ ಬೆಂಗಳೂರು ರೌಡಿಶೀಟರ್ ಹತ್ಯೆ

August 12, 2018

ಮಂಡ್ಯ: ಬೆಂಗಳೂರಿನ ರೌಡಿಶೀಟರ್ ವೊಬ್ಬನನ್ನು ಅಲ್ಲಿನ ಮತ್ತೊಂದು ರೌಡಿ ಗ್ಯಾಂಗ್ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣ ಬಳಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದೆ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೊಲೆ, ಸುಲಿಗೆ ಹಾಗೂ ಡಕಾಯಿತಿ ಪ್ರಕರಣ ದಾಖಲಾಗಿದ್ದ ಕುಖ್ಯಾತ ರೌಡಿ ಅರಸಯ್ಯ ಎಂಬಾತನೇ ಹತ್ಯೆಗೊಳಗಾದವನಾಗಿದ್ದು, ಈತನ ವಿರೋಧಿ ಗ್ಯಾಂಗ್ ಇಂದು ಮಧ್ಯಾಹ್ನ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಅರಸಯ್ಯನನ್ನು ಶ್ರೀರಂಗಪಟ್ಟಣದ ಟಿ.ಎಂ.ಹೊಸೂರು ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆತ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ…

ಅರ್ಹರಿಗೆ ಸೌಲಭ್ಯ ಕಲ್ಪಿಸಲು ಸಂಘಟಿತರಾಗಿ: ಶಾಸಕ ನಾರಾಯಣಗೌಡರಿಂದ ಎಸ್‍ಸಿ, ಎಸ್‍ಟಿ ರೈತರಿಗೆ ಕೊಳವೆ ಬಾವಿ ಪರಿಕರ ವಿತರಣೆ
ಮಂಡ್ಯ

ಅರ್ಹರಿಗೆ ಸೌಲಭ್ಯ ಕಲ್ಪಿಸಲು ಸಂಘಟಿತರಾಗಿ: ಶಾಸಕ ನಾರಾಯಣಗೌಡರಿಂದ ಎಸ್‍ಸಿ, ಎಸ್‍ಟಿ ರೈತರಿಗೆ ಕೊಳವೆ ಬಾವಿ ಪರಿಕರ ವಿತರಣೆ

August 9, 2018

ಕೆ.ಆರ್.ಪೇಟೆ:  ‘ದಲಿತರಿಗೆ ಶಿಕ್ಷಣ, ಅಭಿವೃದ್ಧಿಗೆ ನೆರವು ನೀಡಲು ಸ್ಥಾಪಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಪಾರದರ್ಶಕವಾಗಿ ಕೆಲಸ ಮಾಡಬೇಕು. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ತಲುಪಿಸಲು ದಲಿತ ಬಂಧುಗಳು ಸಂಘಟಿತರಾಗಿ ಹೋರಾಡ ಬೇಕು’ ಎಂದು ಶಾಸಕ ಡಾ.ಕೆ.ಸಿ.ನಾರಾ ಯಣಗೌಡ ಸಲಹೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದ ಆವರಣ ದಲ್ಲಿ ಬುಧವಾರ ನಡೆದ ಕಾರ್ಯಕ್ರಮ ದಲ್ಲಿ ತಾಲೂಕಿನ 27 ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ತಲಾ 2.50 ಲಕ್ಷ ರೂ. ಮೌಲ್ಯದ ಕೊಳವೆ ಬಾವಿಯ…

1 72 73 74 75 76 108
Translate »