ಮಂಡ್ಯ

ಹಿಂದೂ ಧರ್ಮದ ಉಳಿವಿಗಾಗಿ ಜಾಗೃತರಾಗಿ
ಮಂಡ್ಯ

ಹಿಂದೂ ಧರ್ಮದ ಉಳಿವಿಗಾಗಿ ಜಾಗೃತರಾಗಿ

June 27, 2018

ಮಳವಳ್ಳಿ; ಹಿಂದೂ ಧರ್ಮದ ಏಕತೆ ಮತ್ತು ಉಳಿವಿಗಾಗಿ ನಾವು ಜಾಗೃತರಾಗಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಬಸವರಾಜು ತಿಳಿಸಿದರು. ಪಟ್ಟಣದ ಶ್ರೀವೀರಭದ್ರೇಶ್ವರ ದೇವಸ್ಥಾನ ದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಹಿಂದೂಗಳ ಮೇಲಾಗು ತ್ತಿರುವ ಅಕ್ರಮಣಗಳನ್ನು ತಡೆಗಟ್ಟುವುದು ಸೇರಿದಂತೆ ಧರ್ಮದ ಪಾವಿತ್ರ್ಯತೆಗಾಗಿ ನಾವೆಲ್ಲರೂ ಸಂಘಟಿತರಾಗಬೇಕಿದೆ ಎಂದು ಹಿಂದೂ ಧರ್ಮದ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಹಿಂದೂ ಧರ್ಮದ ರಕ್ಷಣೆಯೇ ನಮ್ಮ ಗುರಿ. ಧರ್ಮವನ್ನು ಹೊಡೆಯುವ, ಹೀನಾಯ…

ರಾಜ್ಯದಲ್ಲೇ ಎಪಿಎಂಸಿ ಎಳನೀರು ಮಾರುಕಟ್ಟೆ ನಂಬರ್ ಒನ್
ಮಂಡ್ಯ

ರಾಜ್ಯದಲ್ಲೇ ಎಪಿಎಂಸಿ ಎಳನೀರು ಮಾರುಕಟ್ಟೆ ನಂಬರ್ ಒನ್

June 27, 2018

ಮದ್ದೂರು:  ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ 1.5ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಎಪಿಎಂಸಿ ಅಧ್ಯಕ್ಷ ಕುದರಗುಂಡಿ ನಾಗೇಶ್, ಉಪಾಧ್ಯಕ್ಷೆ ಮಮತಾ ಶಂಕರೇಗೌಡ ವೀಕ್ಷಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿಯೇ ಎಪಿಎಂಸಿ ಎಳನೀರು ಮಾರುಕಟ್ಟೆ ನಂಬರ್ ಒನ್ ಆಗಿದೆ. ಈ ಹಿಂದೆ ಮಾರುಕಟ್ಟೆಯ ರಸ್ತೆ ಸಂಪೂರ್ಣ ಹಾಳಾಗಿ ಧೂಳುಮಯವಾಗಿತ್ತು. ಪ್ರತಿನಿತ್ಯ ವಹಿವಾಟಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ 1.5ಕೋಟಿ ರೂ. ಬಿಡುಗಡೆಗೊಂಡು ಗುಣಮಟ್ಟದ ರಸ್ತೆ ನಿರ್ಮಾಣವಾಗುತ್ತಿದೆ ಎಂದರು. ಈ ಸಂದರ್ಭ ಎಪಿಎಂಸಿ ನಿರ್ದೇಶಕರಾದ ಕರಿಯಪ್ಪ, ಮಹೇಂದ್ರ, ಎಪಿಎಂಸಿ ಕಾರ್ಯದರ್ಶಿ…

ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿರಿ
ಮಂಡ್ಯ

ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿರಿ

June 27, 2018

ಕೆ.ಆರ್.ಪೇಟೆ; ಸಮಾಜದಲ್ಲಿ ನಡೆಯುವ ಶೇ.80ರಷ್ಟು ಅಪರಾಧಗಳಿಗೆ ದುಶ್ಚಟಗಳೇ ಮೂಲ ಕಾರಣ. ಹಾಗಾಗಿ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿರ ಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಸಂಸ್ಥೆ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಮನವಿ ಮಾಡಿದರು. ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗೂ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‍ಎಸ್‍ಎಸ್ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾ ರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನಾ…

ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ: ಸಣ್ಣ ನೀರಾವರಿ ಸಚಿವ ಪುಟ್ಟರಾಜು ಘೋಷಣೆ
ಮಂಡ್ಯ

ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ: ಸಣ್ಣ ನೀರಾವರಿ ಸಚಿವ ಪುಟ್ಟರಾಜು ಘೋಷಣೆ

June 26, 2018

ಪಾಂಡವಪುರ: ತಾಲೂಕಿನ ಮೇಲುಕೋಟೆ ಹೋಬಳಿ ಬಳಘಟ್ಟ ಗ್ರಾಮದ ಏತ ನೀರಾವರಿ ಯೋಜನೆಗೆ 25 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಳಘಟ್ಟ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳು ನೀರಾ ವರಿಯಿಂದ ವಂಚಿತವಾಗಿವೆ. ಇಲ್ಲಿನ ರೈತರಿಗೆ ಕೃಷಿ ಚಟುವಟಿಕೆಗಳಿಗೆ ನೀರು ದೊರಕುತ್ತಿಲ್ಲ. ಜನ ಜಾನುವಾರು ಗಳಿಗೂ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದ್ದು,…

ನಾಳೆ ನಾಡಪ್ರಭು ಕೆಂಪೇಗೌಡ ಜಯಂತಿ
ಮಂಡ್ಯ

ನಾಳೆ ನಾಡಪ್ರಭು ಕೆಂಪೇಗೌಡ ಜಯಂತಿ

June 26, 2018

ಮಂಡ್ಯ:  ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಜೂ.27 ರಂದು ಬೆಳಿಗ್ಗೆ 11 ಗಂಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆವಹಿಸುವರು. ಆದಿಚುಂಚನ ಗಿರಿ ಕ್ಷೇತ್ರದ ಕಾರ್ಯದರ್ಶಿ ಶ್ರೀಪುರುಷೋತ್ತಮನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ನಾಡಪ್ರಭು ಕೆಂಪೇಗೌಡರ ಅಲಂಕೃತ ಭಾವಚಿತ್ರದ ಮೆರವಣಿಗೆ…

ವಕೀಲರಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ
ಮಂಡ್ಯ

ವಕೀಲರಿಂದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ

June 26, 2018

ಮದ್ದೂರು:  ಕೇಂದ್ರ ಸರ್ಕಾರ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಕರ್ನಾಟಕದವರು ಬೆಳೆ ಪದ್ಧತಿ ಬದಲಾಯಿಸಬೇಕೆಂದು ಕಾವೇರಿ ಜಲಾನಯನ ಪ್ರದೇಶಕ್ಕೆ ಸೂಚಿಸಿರುವುದು ಸರಿಯಲ್ಲ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬೆಳೆ ಪದ್ಧತಿ ಬಗ್ಗೆ ನಿರ್ಧಾರ ಮಾಡುವ ವರು ಆ ಭಾಗದ ರೈತರು. ಈ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿ ಪ್ರಸ್ತಾಪ ಹಿಂತೆಗೆದು ಕೊಳ್ಳಬೇಕು ಎಂದರು. ಕೃಷಿ, ವಿಜ್ಞಾನ ಕೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಕೇಂದ್ರ ಮತ್ತು ರಾಜ್ಯ…

ಬಜೆಟ್‍ನಲ್ಲಿ ಸಾಲಮನ್ನಾ ಘೋಷಣೆ ಸಾಧ್ಯತೆ: ಸಿಎಸ್‍ಪಿ
ಮಂಡ್ಯ

ಬಜೆಟ್‍ನಲ್ಲಿ ಸಾಲಮನ್ನಾ ಘೋಷಣೆ ಸಾಧ್ಯತೆ: ಸಿಎಸ್‍ಪಿ

June 26, 2018

ಪಾಂಡವಪುರ: ಚುನಾವಣೆಗೂ ಮುನ್ನಾ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದ ಭರ ವಸೆಯಂತೆ ರೈತರ ಸಾಲಮನ್ನಾ ಮಾಡುವ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಸಣ್ಣ ನೀರಾ ವರಿ ಸಚಿವ ಸಿ.ಎಸ್.ಪುಟ್ಟರಾಜು ವಿಶ್ವಾಸ ವ್ಯಕ್ತ ಪಡಿಸಿದರು. ಪಟ್ಟಣದ ಕೃಷ್ಣಾ ನಗರದ ತಮ್ಮ ನಿವಾಸದ ಎದುರು ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ನಂತರ ಮಾತನಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಚಿಂತಿಸುತ್ತಿದ್ದು, ರೈತರಿಗೆ ಅನುಕೂಲವಾಗುವ ಹೊಸ…

ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಪೊಲೀಸರಿಂದ ತಡೆ: ದಲಿತ ಮುಖಂಡರಿಂದ ತಾಪಂಗೆ ಮುತ್ತಿಗೆ
ಮಂಡ್ಯ

ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಪೊಲೀಸರಿಂದ ತಡೆ: ದಲಿತ ಮುಖಂಡರಿಂದ ತಾಪಂಗೆ ಮುತ್ತಿಗೆ

June 26, 2018

ನಾಗಮಂಗಲ: ಪಟ್ಟಣದ ಮಿನಿವಿಧಾನ ಸೌಧದ ಮುಂಭಾಗ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಸ್ಥಾಪನೆಗೆ ಪೊಲೀಸರು ತಡೆಯೊಡ್ಡಿದಕ್ಕೆ ಆಕ್ರೋಶಗೊಂಡ ಪಟ್ಟಣದಲ್ಲಿ ಭಾನುವಾರ ದಲಿತ ಮುಖಂಡರು ಪ್ರತಿಭಟನೆ ನಡೆಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಪೊಲೀಸರ ಕ್ರಮ ವನ್ನು ಖಂಡಿಸಿ ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಏನಿದು ವಿವಾದ?: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಇರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯಂತೆ ಸಂವಿಧಾನ…

ದೇವೇಗೌಡರಿಂದ ಮಾತ್ರ ಕಾವೇರಿ ಬಿಕ್ಕಟ್ಟಿಗೆ ಪರಿಹಾರ
ಮಂಡ್ಯ

ದೇವೇಗೌಡರಿಂದ ಮಾತ್ರ ಕಾವೇರಿ ಬಿಕ್ಕಟ್ಟಿಗೆ ಪರಿಹಾರ

June 25, 2018

 ಮೋದಿಯವರ ಮೇಲೆ ಪ್ರಭಾವ ಬಳಸಿ ರಾಜ್ಯದ ಜನತೆ ಹಿತ ಕಾಪಾಡಲಿ ಹೆಚ್‍ಡಿಕೆ ನಮ್ ಸಿಎಂ ಎನ್ನೋ ಜಮೀರ್ ಹೇಳಿಕೆಯಲ್ಲಿ ತಪ್ಪೇನಿದೆ: ಸಿಆರ್‍ಎಸ್ ಮಂಡ್ಯ:  ಕರ್ನಾಟಕ ಮತ್ತು ತಮಿಳುನಾಡು ನಡುವೆ ಹಲವು ದಶಕ ಗಳಿಂದ ನೆನೆಗುದಿಗೆ ಬಿದ್ದಿರುವ ಕಾವೇರಿ ವಿವಾದವನ್ನು ಬಗೆಹರಿಸಲು ನೀರಾವರಿ ತಜ್ಞರೆನಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಎನ್.ಚಲುವರಾಯ ಸ್ವಾಮಿ ಹೇಳಿದರು. ನಗರಸಭೆ ಅಧ್ಯಕ್ಷ ದಿವಂಗತ ಹೊಸಹಳ್ಳಿ ಬೋರೇಗೌಡರ ಕುಟುಂಬಕ್ಕೆ ಸಾಂತ್ವನ ಹೇಳಲು ನಗರಕ್ಕಿಂದು ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು….

ಕೀಳರಿಮೆ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ
ಮಂಡ್ಯ

ಕೀಳರಿಮೆ ಬಿಟ್ಟು ಸ್ವಾವಲಂಬಿ ಬದುಕು ನಡೆಸಿ

June 25, 2018

ಕೆ.ಆರ್.ಪೇಟೆ:  ವಿಕಲ ಚೇತನರು ಕೀಳರಿಮೆ ಬಿಟ್ಟು ಸರ್ಕಾರ ದಿಂದ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಗಂಜಿಗೆರೆ ಗ್ರಾಪಂ ಅಧ್ಯಕ್ಷೆ ವೀರಾಜಮ್ಮ ಸಲಹೆ ನೀಡಿದರು. ತಾಲೂಕಿನ ಗಂಜಿಗೆರೆ ಗ್ರಾಪಂ ವತಿ ಯಿಂದ ಅಂಗವಿಕಲರ ಶೇ. 5ರ ಮೀಸಲು ನಿಧಿ ಅನುದಾನದಲ್ಲಿ 1ಲಕ್ಷ ರೂ. ವೆಚ್ಚದ ಸೋಲಾರ್ ದೀಪಗಳನ್ನು 25 ಅಂಗವಿ ಕಲ ಫಲಾನುಭವಿಗಳಿಗೆ ವಿತರಿಸಿ ಅವರು ಮಾತನಾಡಿದರು. ಗ್ರಾಪಂಗೆ ಬರುವ ಎಲ್ಲಾ ಬಗೆಯ ಅನು ದಾನದ ಪೈಕಿ ಶೇ.5ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಸದ್ಬಳಕೆ ಮಾಡಬೇಕೆಂದು…

1 91 92 93 94 95 108
Translate »