ಮಂಡ್ಯ

ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ
ಮಂಡ್ಯ

ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ

June 30, 2018

ಮಂಡ್ಯ: ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ತುಂಬು ಗರ್ಭಿಣಿಯರಿಗೆ ಮುತೈದೆಯರು ಸೀಮಂತ ಶಾಸ್ತ್ರ ಗಳನ್ನು ಮಾಡುತ್ತಿದ್ದರು. ಟೇಬಲ್ ಮೇಲೆ ಬಗೆಬಗೆಯ ಹಣ್ಣುಗಳನ್ನು ಇಡಲಾಗಿತ್ತು. ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತಿದ ಜನರು. ಇದು ಮನೆಯಲ್ಲಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಶುಭ ಸಮಾರಂಭವಲ್ಲ. ಬದಲಾಗಿ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಕಂಡು ಬಂದ ದೃಶ್ಯ. ಹೌದು. ಇತ್ತೀಚೆಗೆ ಪಾಂಡವಪುರದ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಎಸ್‍ಐಗೆ ಸಿಬ್ಬಂದಿಗಳು ಸೀಮಂತ ಮಾಡಿ ಸಂಭ್ರಮಿಸಿ ದ್ದರು. ಅದರಂತೆ ಶುಕ್ರವಾರ ಮಳವಳ್ಳಿ ಪೊಲೀಸ್…

ಎಸ್ಪಿ ಕಚೇರಿಯಲ್ಲಿ ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ!
ಮಂಡ್ಯ

ಎಸ್ಪಿ ಕಚೇರಿಯಲ್ಲಿ ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ!

June 30, 2018

ಮಂಡ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಹಿಳೆ ಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆತ್ಮಹತ್ಯೆ ಯತ್ನ ಪ್ರಕರಣ ಶುಕ್ರವಾರ ನಡೆದಿದೆ. ಮಹಿಳಾ ಪೊಲೀಸ್ ಪೇದೆ ಕಮಲಮ್ಮ (56) ಎಂಬುವವರೇ ಎಸ್ಪಿ ಕಚೇರಿಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದ ಪೇದೆ ಕಮಲಮ್ಮ ಅವರನ್ನು ಸಹೋದ್ಯೋಗಿಗಳು ಜಿಲ್ಲಾ ಸ್ಪತ್ರೆಗೆ ದಾಖಲಿಸಿದ್ದಾರೆ. ಮೊನ್ನೆಯಷ್ಟೆ ಎಸ್ಪಿ ಕಚೇರಿಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಹೊಳಲಿನ ಮಹಿಳೆ ಯೋರ್ವಳು ಆತ್ಮಹತ್ಯೆಗೆ ಯತ್ನಿಸಿ ದ್ದಳು. ಇದೀಗ ಪೊಲೀಸ್ ಸಿಬ್ಬಂದಿಯೇ ಕಚೇರಿಯಲ್ಲಿ…

ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!
ಮಂಡ್ಯ

ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!

June 30, 2018

ಮಂಡ್ಯ: ಬ್ಯಾಂಕ್‍ಗಳಲ್ಲಿ ಸಾಮಾನ್ಯವಾಗಿ ಹರಿದ ಮತ್ತು ವಿರೂಪ ಗೊಂಡ ನೋಟುಗಳನ್ನು ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ಆದರೆ ಹರಿದ ಮತ್ತು ಕಪ್ಪು ಮಸಿ ಮೆತ್ತ್ತಿದ 2 ಸಾವಿರ ರೂ. ಮುಖ ಬೆಲೆಯ ನೋಟುಗಳು ಬ್ಯಾಂಕ್ ಎಟಿಎಂ ನಿಂದಲೇ ಗ್ರಾಹಕರೊಬ್ಬರ ಕೈಗೆ ಬಂದಿ ರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ವಿಜಯಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಗ್ರಾಹಕರಾದ ಸುನೀಲ್ ಹಾಗೂ ಭರತ್ ಎಂಬುವವರು ಎಟಿಎಂನಲ್ಲಿ ಹಣ ಡ್ರಾ ಮಾಡಿ ದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದ ಹಿನ್ನೆಲೆ: ಗ್ರಾಹಕರಾದ ಸುನೀಲ್…

ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ
ಮಂಡ್ಯ

ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ

June 28, 2018

ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ, ಎಲ್ಲೆಡೆ ಬೆಂಗಳೂರು ನಿರ್ಮಾತೃವಿನ ಗುಣಗಾನ ಮಂಡ್ಯ:  ಜಿಲ್ಲಾದ್ಯಂತ ಬುಧ ವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೆಂಗಳೂರು ನಿರ್ಮಾತೃ ವಿನ ಗುಣಗಾನ ನಡೆಯಿತು. ಸಾಧನೆಗೆ ಇತಿಹಾಸದ ಅರಿವು ಅಗತ್ಯ: ‘ಜೀವನದಲ್ಲಿ ಯಾರಾದರೂ ಸಾಧನೆ ಮಾಡ ಬೇಕಾದರೆ ಇತಿಹಾಸದ ಅರಿವು ಅಗತ್ಯ. ಕೆಂಪೇಗೌಡರು ತಮ್ಮ ಜೀವನದಲ್ಲಿ ಇತಿ ಹಾಸ ಸೃಷ್ಟಿಸಿದ ವೀರವ್ಯಕ್ತಿ’ ಎಂದು ಬಿ.ಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಬಿ.ಶಂಕರೇಗೌಡ ಹೇಳಿದರು….

ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರ ವಹಿಸಿ: ಕೃಷಿ ಸಂಬಂಧಿಸಿದ ಸಭೆಯಲ್ಲಿ ಡಿಸಿ ಮಂಜುಶ್ರೀ ಸೂಚನೆ
ಮಂಡ್ಯ

ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರ ವಹಿಸಿ: ಕೃಷಿ ಸಂಬಂಧಿಸಿದ ಸಭೆಯಲ್ಲಿ ಡಿಸಿ ಮಂಜುಶ್ರೀ ಸೂಚನೆ

June 28, 2018

ಮಂಡ್ಯ: ‘ಜಿಲ್ಲೆಯ ರೈತರಿಗೆ ಯಾವುದೇ ಕಾರಣಕ್ಕೂ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆಯಾಗದ ರೀತಿಯಲ್ಲಿ ಮುನ್ನೆಚ್ಚರಿಕೆಯಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧ ವಾರ ಕೃಷಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಜಿಲ್ಲೆಯಲ್ಲಿ ಉತ್ತಮ ಮಳೆ ಹಾಗೂ ನೀರಿನ ಲಭ್ಯತೆ ಇರುವ ಕಾರಣ ಬಿತ್ತನೆ ಕಾರ್ಯವು ಸದ್ಯದಲ್ಲೇ ಆರಂಭಗೊಳ್ಳಲಿದ್ದು, ಜುಲೈ ಮೊದಲ ವಾರದೊಳಗೆ ಜಿಲ್ಲೆಯ ರೈತರಿಗೆ ಅಗತ್ಯವಾದ…

ಪೊಲೀಸ್ ಠಾಣೆಯ ಮುಂಭಾಗ ರೈತರ ಪ್ರತಿಭಟನೆ
ಮಂಡ್ಯ

ಪೊಲೀಸ್ ಠಾಣೆಯ ಮುಂಭಾಗ ರೈತರ ಪ್ರತಿಭಟನೆ

June 28, 2018

ಕೆ.ಆರ್.ಪೇಟೆ:  ರೈತ ಹೋರಾಟ ಗಾರರ ಮೇಲೆ ಹೂಡಿರುವ ಸುಳ್ಳು ಮೊಕ ದ್ದಮೆಯನ್ನು ಹಿಂಪಡೆಯಬೇಕು. ಜಾತಿ ನಿಂದನೆ ಆರೋಪದಡಿಯಲ್ಲಿ ಬಂಧಿಸಿರುವ ರೈತ ಮುಖಂಡ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ಪೋಲಿಸ್ ಠಾಣೆಯ ಮುಂಭಾಗ ಬುಧವಾರ ತಾಲೂಕು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಆರ್. ಜಯರಾಂ, ಜಿಲ್ಲಾ ಮಾಜಿ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ನೇತೃತ್ವದಲ್ಲಿ ಧರಣಿ ನಡೆಸಿದ ಮುಖಂ…

ಸಿಎಂ ಹೆಚ್‍ಡಿಕೆಯಿಂದ ಜನಪರ ಬಜೆಟ್ ಮಂಡನೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಸಿಎಂ ಹೆಚ್‍ಡಿಕೆಯಿಂದ ಜನಪರ ಬಜೆಟ್ ಮಂಡನೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

June 27, 2018

ಮೇಲುಕೋಟೆ:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೂರ್ಣ ಪ್ರಮಾಣದ ಜನಪರ ಬಜೆಟ್ ಮಂಡಿಸುವುದು 100ಕ್ಕೆ 200ರಷ್ಟು ಖಚಿತ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ತಿಳಿಸಿದರು. ಸಚಿವರಾದ ಬಳಿಕ ಮೊದಲ ಬಾರಿಗೆ ಮಂಗಳವಾರ ಮೇಲುಕೋಟೆ ಶ್ರೀಚೆಲುವ ನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಮಾಧ್ಯಮಗಳು ಈ ಬಗ್ಗೆ ಗೊಂದಲ ಸೃಷ್ಠಿಸಿವೆ ಎಂದ ಸಚಿವರು, ಬಜೆಟ್‍ನಲ್ಲಿ ರೈತರ…

ಶ್ರೀಸಣ್ಣಕ್ಕಿರಾಯಸ್ವಾಮಿ ಕುಂಭಾಭಿಷೇಕ
ಮಂಡ್ಯ

ಶ್ರೀಸಣ್ಣಕ್ಕಿರಾಯಸ್ವಾಮಿ ಕುಂಭಾಭಿಷೇಕ

June 27, 2018

ಭಾರತೀನಗರ: ಇಲ್ಲಿನ ದೊಡ್ಡ ರಸಿನಕೆರೆ ಶ್ರೀಸಣ್ಣಕ್ಕಿರಾಯಸ್ವಾಮಿ ದೇವಾ ಲಯದ 5ನೇ ವರ್ಷದ ಕುಂಭಾಭಿಷೇಕ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಬೆಂಗಳೂರಿನ ರಾಜಶೇಖರ್ ದೀಕ್ಷಿತ್ ಹಾಗೂ ರಘು ಶರ್ಮಾ ಅವರ ನೇತೃತ್ವ ದಲ್ಲಿ ಬೆಳಿಗ್ಗೆ 7 ಗಂಟೆಗೆ ವೇದಿಕಾರ್ಚನೆ, ಮೂಲದೇವರಿಗೆ ಉಪಚಾರ ಪೂಜೆ, ಪಂಚಾ ಮೃತ ಅಭಿಷೇಕ, ರುದ್ರಾಭಿಷೇಕ, ಶ್ರೀಗಣ ಹೋಮ, ಶ್ರೀರುದ್ರಹೋಮ, ಮಹಾ ಪೂರ್ಣಾಹುತಿ ಜರುಗಿತು. ಶ್ರೀಸಣ್ಣಕ್ಕಿರಾಯ ಬಸವನನ್ನು ಹೂವಿ ನಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ರಾತ್ರಿವರೆಗೂ ಭಕ್ತಾದಿಗಳು ಸ್ವಾಮಿಗೆ ಪೂಜೆ ಸಲ್ಲಿಸಿದರು….

ಪ್ಲಾಸ್ಟಿಕ್ ಕೈ ಚೀಲಗಳ ನಿಷೇಧಕ್ಕೆ ಆಗ್ರಹ
ಮಂಡ್ಯ

ಪ್ಲಾಸ್ಟಿಕ್ ಕೈ ಚೀಲಗಳ ನಿಷೇಧಕ್ಕೆ ಆಗ್ರಹ

June 27, 2018

ಮಂಡ್ಯ:  ಮಹಾರಾಷ್ಟ್ರ ಮಾದರಿ ಯಲ್ಲಿ ಪ್ಲಾಸ್ಟಿಕ್ ಕೈ ಚೀಲಗಳನ್ನು ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ವಕೀಲರು ಜಿಲ್ಲಾಧಿಕಾರಿ ಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಅಖಿಲ ಭಾರತ ವಕೀಲರ ಸಂಘದ ಮಂಡ್ಯ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಟಿ.ವಿಶ್ವನಾಥ್ ಮತ್ತು ಪದಾಧಿಕಾರಿಗಳು ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ಮನವಿ ನೀಡಿ, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗಿದ್ದು, ಪರಿಸರ ಮತ್ತು ಜೀವ ಸಂಕುಲಗಳಿಗೆ ಅತ್ಯಂತ ಕೆಟ್ಟ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಸಂಪೂರ್ಣವಾಗಿ…

ಮೃತ ಶಿವಣ್ಣ ಕುಟುಂಬಕ್ಕೆ ಸಚಿವರಿಂದ ಸಾಂತ್ವನ
ಮಂಡ್ಯ

ಮೃತ ಶಿವಣ್ಣ ಕುಟುಂಬಕ್ಕೆ ಸಚಿವರಿಂದ ಸಾಂತ್ವನ

June 27, 2018

ಪಾಂಡವಪುರ: ಇತ್ತೀಚೆಗೆ ಮೃತಪಟ್ಟ ತಾಲೂಕಿನ ಸಣಬ ಗ್ರಾಮದ ಜೆಡಿಎಸ್ ಮುಖಂಡ ಶಿವಣ್ಣ ಅವರ ಮನೆಗೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಮೃತರ ಪತ್ನಿ ಜಯ ಲಕ್ಷ್ಮಿ ಹಾಗೂ ಕುಟುಂಬದವರಿಗೆ ಸಾಂತ್ವ್ವನ ಹೇಳಿದರು. ನಂತರ ಮಾತನಾಡಿದ ಅವರು, ಶಿವಣ್ಣ ನವರ ಅಕಾಲಿಕ ಮರಣ ನನಗೆ ವೈಯುಕ್ತಿಕ ವಾಗಿ ನೋವುಂಟು ಮಾಡಿದೆ. ಶಿವಣ್ಣ ನಮ್ಮ ಪಕ್ಷದ ಮುಖಂಡ ಎನ್ನುವುದಕ್ಕಿಂತ ನಮ್ಮ ಮನೆಯ ಮಗನಂತಿದ್ದರು. ಸದಾ ನಮ್ಮ ಕುಟುಂಬದೊಂದಿಗೆ ನಿಕಟಪೂರ್ವ ಸಂಬಂಧ ಹೊಂದಿದ್ದ ಅವರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದರು….

1 90 91 92 93 94 108
Translate »