ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ
ಮಂಡ್ಯ

ಜಿಲ್ಲಾದ್ಯಂತ ಕೆಂಪೇಗೌಡರ ಜಯಂತಿ ಸಂಭ್ರಮ

June 28, 2018
  • ಜಾನಪದ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ, ಎಲ್ಲೆಡೆ ಬೆಂಗಳೂರು ನಿರ್ಮಾತೃವಿನ ಗುಣಗಾನ

ಮಂಡ್ಯ:  ಜಿಲ್ಲಾದ್ಯಂತ ಬುಧ ವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನಗರ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೆಂಗಳೂರು ನಿರ್ಮಾತೃ ವಿನ ಗುಣಗಾನ ನಡೆಯಿತು.

ಸಾಧನೆಗೆ ಇತಿಹಾಸದ ಅರಿವು ಅಗತ್ಯ: ‘ಜೀವನದಲ್ಲಿ ಯಾರಾದರೂ ಸಾಧನೆ ಮಾಡ ಬೇಕಾದರೆ ಇತಿಹಾಸದ ಅರಿವು ಅಗತ್ಯ. ಕೆಂಪೇಗೌಡರು ತಮ್ಮ ಜೀವನದಲ್ಲಿ ಇತಿ ಹಾಸ ಸೃಷ್ಟಿಸಿದ ವೀರವ್ಯಕ್ತಿ’ ಎಂದು ಬಿ.ಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಸ್.ಬಿ.ಶಂಕರೇಗೌಡ ಹೇಳಿದರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸ ಅರಿತವರಿಂದ ಮಾತ್ರ ಇತಿ ಹಾಸ ಸೃಷ್ಟಿಸಲು ಸಾಧ್ಯ. ಕೆಂಪೇಗೌಡರು ಮುಂದಾಲೋಚನೆಯಿಂದ ಕಟ್ಟಿದ ನಗರ ಬೆಂಗಳೂರು. ಆ ನಗರ ಇಂದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಅವರು ಬೆಂಗಳೂರು ಕಟ್ಟದಿದ್ದರೆ ಮತ್ತೊಂದು ಜಿಲ್ಲೆ ರಾಜ್ಯದ ರಾಜ್ಯಧಾನಿಯಾಗುತ್ತಿತ್ತು. ಕೆಂಪೇಗೌಡರಿಗೆ ಜನಪರ ಆಡಳಿತ ನೀಡಿದ ಕೀರ್ತಿ ಸಲ್ಲುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿ ವಾಸ್, ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷ ನಾಗರತ್ನ ಸ್ವಾಮಿ, ಜಿಲ್ಲಾಧಿಕಾರಿ ಮಂಜುಶ್ರೀ, ಎಸ್‍ಪಿ ರಾಧಿಕಾ, ಎಡಿಸಿ ವಿಜಯ್ ಇತರರಿದ್ದರು.ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂಭಾಗ ನಾಡಪ್ರಭು ಕೆಂಪೇ ಗೌಡ ಭಾವಚಿತ್ರದ ಮೆರವಣಿಗೆಗೆ ಎಡಿಸಿ ಬಿ.ಪಿ.ವಿಜಯ್ ಚಾಲನೆ ನೀಡಿದರು.

ಸಿರಿಗನ್ನಡ ವೇದಿಕೆ: ನಗರದ ಸೇವಾ ಕಿರಣ ವೃದ್ಧಾಶ್ರಮದಲ್ಲಿ ಕಸ್ತೂರಿ ಸಿರಿ ಗನ್ನಡ ವೇದಿಕೆಯಿಂದ ನಾಡಪ್ರಭು ಕೆಂಪೇ ಗೌಡರ ಜನ್ಮದಿನ ಆಚರಿಸಲಾಯಿತು.ಸೇವಾಕಿರಣ ವೃದ್ಧಾಶ್ರಮದ ಕಾರ್ಯ ದರ್ಶಿ ಜಿ.ಅವಿ.ನಾಗರಾಜು, ಕಸ್ತೂರಿ ಸಿರಿ ಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೇರ ಮಹದೇವು, ಮಕ್ಕಳ ವೇದಿಕೆ ಅಧ್ಯಕ್ಷ ಬಿ.ವಿ. ಶ್ರೀನಿವಾಸಮೂರ್ತಿ ವೃದ್ಧರಿಗೆ ಸಿಹಿ ಮತ್ತು ಹಣ್ಣು ವಿತರಣೆ ಮಾಡಿದರು. ಕಾರ್ಯ ಕ್ರಮದಲ್ಲಿ ಮುಖಂಡರಾದ ನೀನಾ ಪಟೇಲ್, ಮಂಜುಳಾ ರಮೇಶ್, ಕಮಲಾ ರಾಜು, ವಕೀಲ ಎಂ.ಗುರುಪ್ರಸಾದ್ ಇದ್ದರು.

ಅನ್ನಸಂತರ್ಪಣೆ: ನಗರದ ಹೊಸಹಳ್ಳಿ ವೃತ್ತದಲ್ಲಿ ಒಕ್ಕಲಿಗರ ಬಳಗ ಆಯೋಜಿ ಸಿದ್ದ ನಾಡಪ್ರಭು ಕೆಂಪೇಗೌಡರ 508ನೇ ಜನ್ಮ ದಿನಾಚರಣೆ ಪ್ರಯುಕ್ತ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಮುಖಂಡ ರಾದ ಎಸ್.ನಾರಾಯಣ್, ಅಪ್ಪಾಜಪ್ಪ, ಅಶೋಕ್, ಗೋವಿಂದ್‍ರಾಜ್ ಇದ್ದರು.

ಮದ್ದೂರು: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಕೆಂಪೇಗೌಡ ಒಕ್ಕಲಿಗರ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲಾಯಿತು.

ತಹಶೀಲ್ದಾರ್ ನಾಗರಾಜು, ಉಪನ್ಯಾ ಸಕ ಚಂದ್ರು ಮಾತನಾಡಿದರು. ಸುನೀಲ್ ಕುಮಾರ್ ಕೆಂಪೇಗೌಡ ವೇಷಧಾರಿಯಾಗಿ ಗಮನ ಸೆಳೆದರು. ಮಕ್ಕಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಸತ್ಯಾಗ್ರಹಸೌಧದಿಂದ ತಾಲೂಕು ಕ್ರೀಡಾಂ ಗಣವರೆಗೆ ವಿವಿಧ ಜಾನಪದ ಕಲಾಪ್ರಕಾರ ಗಳೊಂದಿಗೆ ಮತ್ತು ವಿವಿಧ ಶಾಲಾ ಮಕ್ಕಳು ಮೆರವಣಿಗೆಯೊಂದಿಗೆ ಕೆಂಪೇಗೌಡರ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಇಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಜಯ ಲಕ್ಷಮ್ಮ, ಎಂಪಿಎಂಸಿ ಅಧ್ಯಕ್ಷ ಕುದರಗುಂಡಿ ನಾಗೇಶ್, ಪುರಸಭಾ ಪ್ರಭಾರ ಅಧ್ಯಕ್ಷೆ ಪಾರ್ವತಮ್ಮ ಶಂಕರ್, ಜಿಪಂ ಸದಸ್ಯೆ ರೇಣುಕಾ ರಾಮಕೃಷ್ಣ, ನಾಡಪ್ರಭು ಕೆಂಪೇ ಗೌಡ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಬಿ.ಕೃಷ್ಣ, ಅಧ್ಯಕ್ಷ ಸಿದ್ದೇಗೌಡ, ಕಾರ್ಯ ದರ್ಶಿ ಸುರೇಶ್, ಉಪಾಧ್ಯಕ್ಷ ತಿಪ್ಪೂರು ರಾಜೇಶ್, ಬಿಇಒ ರೇಣುಕಮ್ಮ, ತಾಪಂ ಇಒ ಕೆ.ಮಣ ಕಂಠ, ಪುರಸಭಾ ಮುಖ್ಯಾ ಧಿಕಾರಿ ಕುಮಾರ್ ಹಾಜರಿದ್ದರು.

ಪಾಂಡವಪುರ: ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕು ಆಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಆರ್.ಯಶೋದ ಉದ್ಘಾಟಿಸಿದರು.

ಕನ್ನಡ ಪ್ರಾಧ್ಯಾಪಕಿ ಸರಸ್ವತಿ ಮಾತನಾಡಿ ದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ರಾದ ಸಿ.ಅಶೋಕ್, ಎಚ್.ತ್ಯಾಗರಾಜು, ಶಾಂತಲರಾಮಕೃಷ್ಣ, ಅನುಸೂಯ ದೇವ ರಾಜು, ಪುರಸಭೆ ಅಧ್ಯಕ್ಷೆ ತಾಯಮ್ಮ, ತಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಶೋಭಾ, ಶಿವಣ್ಣ, ನಿಂಗೇಗೌಡ, ರಾಮೇ ಗೌಡ, ಮಾಜಿ ಅಧ್ಯಕ್ಷೆ ರಾಧಮ್ಮ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷೆ ರತ್ನಮ್ಮ, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಬಿಇಓ ಮಲ್ಲೇ ಶ್ವರಿ, ಪುರಸಭೆ ಮುಖ್ಯಾಧಿಕಾರಿ ಕರಿಬಸ ವಯ್ಯ, ಕಸಾಪ ಅಧ್ಯಕ್ಷ ಎಂ.ರಮೇಶ್ ಇದ್ದರು.

ನಾಗಮಂಗಲ: ಪಟ್ಟಣದ ಮಿನಿ ವಿಧಾನ ಸೌಧದ ಮುಂಭಾಗ ತಾಲೂಕು ಆಡಳಿತ ದಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿಯ ಕಾರ್ಯಕ್ರಮದಲ್ಲಿ ಕೆಂಪೇ ಗೌಡರ ಭಾವಚಿತ್ರಕ್ಕೆ ಶಾಸಕ ಕೆ.ಸುರೇಶ್ ಗೌಡ ಪುಷ್ಪ ನಮನ ಸಲ್ಲಿಸಿದರು.
ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಬಿಜಿಎಸ್ ಕಾಲೇಜಿನ ನಿವೃತ್ತ ಪ್ರಾಂಶು ಪಾಲ ಬೈರೇಗೌಡ ಮಾತನಾಡಿದರು.

ಇದಕ್ಕೂ ಮೊದಲು ನಾಡಪ್ರಭು ಕೆಂಪೇ ಗೌಡರ ಭಾವಚಿತ್ರವನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸೌಮ್ಯಕೇಶವಸ್ವಾಮಿ ದೇವ ಸ್ಥಾನದಿಂದ ಹೊರಟ ಮೆರವಣಿಗೆ, ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಮಿನಿ ವಿಧಾನಸೌಧ ಮುಂಭಾಗ ನಿರ್ಮಿಸಿದ್ದ ವೇದಿಕೆಗೆ ಆಗಮಿ ಸಿತು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಶಿವಪ್ರಕಾಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ್, ಪುರಸಭೆ ಅಧ್ಯಕ್ಷ ವಿಜಯ್‍ಕುಮಾರ್, ಪುರಸಭಾ ಸದಸ್ಯ ನೂರ್‍ಅಹಮದ್, ತಹಶೀಲ್ದಾರ್ ನಂಜುಂಡಯ್ಯ, ಮುಖಂಡರಾದ ಲಕ್ಷ್ಮಿ ಅಶ್ವಿನ್‍ಗೌಡ, ಜವರೇಗೌಡ ಹಾಜರಿದ್ದರು.

ಶ್ರೀರಂಗಪಟ್ಟಣ: ಪಟ್ಟಣದ ಮಿನಿ ವಿಧಾನ ಸೌಧ ಆವರಣದಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಯಿತು. ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು.ಇದಕ್ಕೂ ಮುನ್ನಾ ಕುದುರೆ ರಥದ ಮೂಲಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಎಸ್.ನಾಗರತ್ನ, ಸದಸ್ಯ ಉಮೇಶ್, ಪುರಸಭೆ ಸದಸ್ಯರಾದ ನಂದಿಶ್, ಪಕ್ರಶ್, ಪದ್ದಮ್ಮ, ತಹಶೀಲ್ದಾರ್ ನಾಗೇಶ್, ಒಕ್ಕಲಿಗ ಸಂಘದ ಅಧ್ಯಕ್ಷ ನಿಂಗೇಗೌಡ ಇದ್ದರು.

ಮಳವಳ್ಳಿ: ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ಒಕ್ಕಲಿಗರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಿಸಲಾಯಿತು.
ಪಟ್ಟಣದ ತಾ.ಪಂ.ಕಚೇರಿ ಆವರಣ ದಿಂದ ಕೆಂಪೇಗೌಡ ಭಾವಚಿತ್ರವನ್ನು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಡಾ.ಅನ್ನದಾನಿ, ತಾ.ಪಂ.ಅಧ್ಯಕ್ಷ ವಿಶ್ವಾಸ್, ಜಿ.ಪಂ ಸದಸ್ಯ ನಾಗೇಶ್ ಇದ್ದರು.

Translate »