ಪೊಲೀಸ್ ಠಾಣೆಯ ಮುಂಭಾಗ ರೈತರ ಪ್ರತಿಭಟನೆ
ಮಂಡ್ಯ

ಪೊಲೀಸ್ ಠಾಣೆಯ ಮುಂಭಾಗ ರೈತರ ಪ್ರತಿಭಟನೆ

June 28, 2018

ಕೆ.ಆರ್.ಪೇಟೆ:  ರೈತ ಹೋರಾಟ ಗಾರರ ಮೇಲೆ ಹೂಡಿರುವ ಸುಳ್ಳು ಮೊಕ ದ್ದಮೆಯನ್ನು ಹಿಂಪಡೆಯಬೇಕು. ಜಾತಿ ನಿಂದನೆ ಆರೋಪದಡಿಯಲ್ಲಿ ಬಂಧಿಸಿರುವ ರೈತ ಮುಖಂಡ ರವಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪಟ್ಟಣದ ಪೋಲಿಸ್ ಠಾಣೆಯ ಮುಂಭಾಗ ಬುಧವಾರ ತಾಲೂಕು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಆರ್. ಜಯರಾಂ, ಜಿಲ್ಲಾ ಮಾಜಿ ಉಪಾಧ್ಯಕ್ಷ ಮುದುಗೆರೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ನೇತೃತ್ವದಲ್ಲಿ ಧರಣಿ ನಡೆಸಿದ ಮುಖಂ ಡರು ಹಾಗೂ ರೈತರು ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಾಕವಳ್ಳಿ ಗ್ರಾಮ ಪಂಚಾ ಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ವಿಶಾಲ ಮೂರ್ತಿ ಅವರು ಕಚೇರಿಗೆ ಜನಸಾಮಾ ನ್ಯರ ಸಮಸ್ಯೆಗಳನ್ನು ಚರ್ಚೆ ಮಾಡಲು ಬಂದಿದ್ದ ರೈತ ಮುಖಂಡರ ವಿರುದ್ಧ ಜಾತಿನಿಂದÀನೆ ಮತ್ತು ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಸುಳ್ಳು ಕೇಸನ್ನು ಮಾಡಿಸುವ ಮೂಲಕ ಪ್ರತಿ ಭಟನಾಕಾರರನ್ನು ಹತ್ತಿಕ್ಕಲು ಹೊರಟಿದ್ದಾರೆ. ಹಾಗಾಗಿ ಈ ಸುಳ್ಳು ಮೊಕದ್ದಮೆಯ ಹಿನ್ನೆಲೆ ಯಲ್ಲಿ ತಪ್ಪನ್ನೇ ಮಾಡದ ರೈತ ಹೋರಾಟ ಗಾರರು ಬಂಧಿಗಳಾಗಿ ಜೈಲು ಸೇರುವಂತಾ ಗಿದೆ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈ ಎಸ್‍ಪಿ ಧರ್ಮೇಂದ್ರ ಮಾತನಾಡಿ, ಪೋಲಿಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ಗಳೆರಡೂ ದಾಖಲಾಗಿವೆ. ರೈತ ಹೋರಾಟ ಗಾರರ ವಿರುದ್ಧ ಸುಳ್ಳು ದೂರನ್ನು ದಾಖ ಲಿಸಿ ಶಿಕ್ಷೆಗೆ ಒಳಪಡಿಸಬೇಕು ಎಂಬ ದುರು ದ್ದೇಶ ಪೊಲೀಸರಿಗಿಲ್ಲ. ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿ ತಪ್ಪು ಮಾಡಿದವರನ್ನು ಮಾತ್ರ ಶಿಕ್ಷೆಗೆ ಒಳಪಡಿಸುತ್ತೇವೆ. ನಿಷ್ಪಕ್ಷಪಾತ ವಾದ ತನಿಖೆಯನ್ನು ಖುದ್ದು ನಾನೇ ನಡೆ ಸುತ್ತೇನೆ. ರೈತ ಮುಖಂಡರು ಆತಂಕಕ್ಕೆ ಒಳ ಗಾಗುವ ಅಗತ್ಯವಿಲ್ಲ. ರೈತ ಮುಖಂಡರು ತಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಪೊಲೀಸರಿಗೆ ತನಿಖೆಯ ಸಮಯದಲ್ಲಿ ಹಾಜರುಪಡಿಸಬೇಕು ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದು ಕೊಂಡರು. ಠಾಣೆಯ ಮುಂಭಾಗ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಿದ್ದರು. ಪ್ರತಿ ಭಟನೆಯಲ್ಲಿ ಜಿಲ್ಲಾ ರೈತ ಸಂಘದ ಕಾರ್ಯ ದರ್ಶಿ ನಾರಾಯಣಸ್ವಾಮಿ, ಖಜಾಂಚಿ ನೀತಿ ಮಂಗಲ ಮಹೇಶ್, ಉಪಾಧ್ಯಕ್ಷ ಬೂಕನಕೆರೆ ನಾಗರಾಜು, ಮುಖಂಡರಾದ ಮುದ್ದುಕುಮಾರ್, ಕಾರಿಗನಹಳ್ಳಿ ಪುಟ್ಟೇ ಗೌಡ, ನಗರೂರು ಕುಮಾರ್, ಮಂಚನಹಳ್ಳಿ ನಾಗಣ್ಣಗೌಡ ಇತರರು ಪಾಲ್ಗೊಂಡಿದ್ದರು.

ಬಂಧನ ಖಂಡಿಸಿ ಜೈಲಿನಲ್ಲಿ ರೈತ ಉಪವಾಸ

ಮಂಡ್ಯ: ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ರೈತ ಮಾಕವಳ್ಳಿ ಗ್ರಾಮದ ಕೋಳಿ ರವಿ ನಗರದ ಕೇಂದ್ರ ಕಾರಾಗೃಹದಲ್ಲಿ ಉಪವಾಸ ಧರಣಿ ಕುಳಿತಿದ್ದಾರೆ. ಮಾಕವಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಅವರು ನೀಡಿದ್ದ ಜಾತಿ ನಿಂದನೆ ಪ್ರಕರಣದಲ್ಲಿ ರೈತ ರವಿ ಅವರನ್ನು ಇತ್ತೀಚೆಗಷ್ಟೇ ಬಂಧಿಸಿದ್ದು ಮಂಡ್ಯ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಸುಳ್ಳು ಜಾತಿ ನಿಂದನೆ ಪ್ರಕರಣದಲ್ಲಿ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ. ಇದು ಪೊಲೀಸರ ದೌರ್ಜನ್ಯ ಎಂದು ಆರೋಪಿಸಿ ಕಳೆದ ರಾತ್ರಿಯಿಂದ ರವಿ ಅವರು ಉಪವಾಸ ಧರಣಿ ಕುಳಿತಿದ್ದಾರೆ ಎನ್ನಲಾಗಿದ್ದು ಜೈಲಿನಲ್ಲಿ ಉಪವಾಸ ಕುಳಿತ ರೈತನ ಮನವೊಲಿಕೆಗೆ ಜೈಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Translate »