ಬಾಣೆ ಸಮಸ್ಯೆ ಕಾನೂನಾತ್ಮಕವಾಗಿ ಬಗೆಹರಿಸಿದ್ದರೂ ಅನಗತ್ಯ ಗೊಂದಲ ಸೃಷ್ಟಿ : ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಆರೋಪ
ಕೊಡಗು

ಬಾಣೆ ಸಮಸ್ಯೆ ಕಾನೂನಾತ್ಮಕವಾಗಿ ಬಗೆಹರಿಸಿದ್ದರೂ ಅನಗತ್ಯ ಗೊಂದಲ ಸೃಷ್ಟಿ : ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಆರೋಪ

June 28, 2018

ಮಡಿಕೇರಿ:  ಕೊಡಗಿನ ‘ಬಾಣೆ’ ಜಾಗದ ಸಮಸ್ಯೆಗಳು ಕಾನೂನಾತ್ಮಕವಾಗಿ ಈಗಾಗಲೆ ಬಗೆಹರಿದಿದ್ದರೂ, ಇದನ್ನು ಅರಣ್ಯದ ಜಾಗ ಎಂದು ಬಿಂಬಿಸುವ ಮೂಲಕ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಇಡೀ ಕೊಡಗನ್ನು ಅರಣ್ಯೀಕರಣ ಮಾಡುವ ಪಿತೂರಿ ಡೋಂಗಿ ಪರಿಸರವಾದಿಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯು ತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲರಾದ ಎ.ಕೆ.ಸುಬ್ಬಯ್ಯ ಈ ಸಮ ಸ್ಯೆಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಯುವ ಸಮೂಹ ಮುಂದೆ ಬರಬೇಕೆಂದು ಕರೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಂದಾಯ ಇಲಾಖೆಯಲ್ಲಿ ಆಡಿಟ್ ನಡೆಸಿದವರು ನೀಡಿದ ವರದಿಯಲ್ಲಿ, ಕೊಡ ಗಿನ ಬಾಣೆ ಜಮೀನುಗಳೆಲ್ಲವೂ ಅರಣ್ಯ ವಾಗಿದೆ. ಇದರಿಂದಾಗಿ ಬಾಣೆ ಜಾಗಕ್ಕೆ ಕಂದಾಯ ವಿಧಿಸಿ ಪರಿವರ್ತನೆ ಮಾಡುವ ಅಧಿಕಾರ ಇಲ್ಲವೆಂದು ತಿಳಿಸಿದೆ. ಈ ವರದಿ ಯನ್ನು ಉದ್ದೇಶ ಪೂರ್ವಕವಾಗಿ ರಚಿಸ ಲಾಗಿದ್ದು, ಇದರ ಹಿಂದೆ ಡೋಂಗಿ ಪರಿ ಸರವಾದಿಗಳ ಮತ್ತು ಅರಣ್ಯ ಇಲಾಖೆಯ ಕೈವಾಡವಿದೆ ಎಂದು ಆರೋಪಿಸಿದರು.

ಬಾಣೆ ಜಾಗದ ಸಮಸ್ಯೆ ಈಗಾಗಲೆ ಕಾನೂನು ಭಾಗದಲ್ಲಿ ಇತ್ಯರ್ಥವಾಗಿರುವ ಸಮಗ್ರ ಮಾಹಿತಿಯನ್ನು ಮತ್ತು ಮುಂದಿನ ಹೋರಾಟದ ರೂಪುರೇಷೆಯನ್ನು ಯುವ ಸಮೂಹಕ್ಕೆ ಒದಗಿಸಿಕೊಡುವ ನಿಟ್ಟಿನಲ್ಲಿ ತಾನು ಅಗತ್ಯ ತರಬೇತಿ ಶಿಬಿರ ನಡೆಸಲು ಸಿದ್ಧನಿದ್ದೇನೆ ಎಂದು ಎ.ಕೆ.ಸುಬ್ಬಯ್ಯ ಹೇಳಿ ದರು. ಮುಂದಿನ ಪೀಳಿಗೆಗೆ ಈ ರೀತಿಯ ಸೂಕ್ಷ್ಮ ವಿಚಾರಗಳ ಪರಿಜ್ಞಾನವಿಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಚಕ್ಕೇರ ಪೂವಯ್ಯ ಪ್ರಕರಣದಲ್ಲಿ ಹೊರಡಿ ಸಲಾಗಿರುವ ನ್ಯಾಯಾಲಯದ ಆದೇಶ ವನ್ನೆ ತಪ್ಪಾಗಿ ಅರ್ಥೈಸುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟರು.

‘ಬಾಣೆ’ ಜಾಗದ ಕುರಿತ ಇಲ್ಲಿಯವರೆ ಗಿನ ಎಲ್ಲಾ ಬೆಳವಣಿಗೆಗಳನ್ನು ಕತ್ತಲೆ ಯಲ್ಲಿಟ್ಟು, ಬಾಣೆ ಜಾಗವನ್ನು ಅರಣ್ಯ ಇಲಾಖೆಗೆ ಸೇರಿದ್ದೆಂದು ಪ್ರತಿಪಾದಿಸುವ ವಿಚಾರದ ಹಿಂದೆ ಇಡೀ ಪಶ್ಚಿಮ ಘಟ್ಟ ವ್ಯಾಪ್ತಿ ಯಲ್ಲಿನ ಕೃಷಿಯನ್ನು ನಾಶಪಡಿಸಿ, ಅರಣ್ಯ ವನ್ನಾಗಿ ಪರಿವರ್ತಿಸುವ ಹುನ್ನಾರ ಅಡ ಗಿದೆ ಎಂದು ಎ.ಕೆ.ಸುಬ್ಬಯ್ಯ ಆರೋಪಿಸಿದರು.

ಪ್ರಸ್ತುತ ಇಡೀ ಕೊಡಗನ್ನು ಅರಣ್ಯ ವೆಂದು ಘೋಷಿಸುವುದಕ್ಕೆ ‘ಬಾಣೆ’ ಜಾಗ ಅಡ್ಡಿಯಾಗಿ ಪರಿಣಮಿಸಿದೆ. ಇದನ್ನು ಇಲ್ಲ ವಾಗಿಸುವ ಪ್ರಯತ್ನವಾಗಿ, ಈ ಜಾಗದ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಕಂದಾಯ ಇಲಾಖೆಯ ಆಡಿಟ್ ವರದಿಯ ದ್ದಾಗಿದೆ. ಇಂತಹ ವಿಚಾರಗಳ ಬಗ್ಗೆ ಯುವ ಪೀಳಿಗೆ ಜಾಗೃತವಾಗಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶವೆಲ್ಲವೂ ಅರಣ್ಯವೆಂದು ಪರಿಗಣಿಸ ಲ್ಪಟ್ಟು ಖಾಸಗಿಯವರ ಕೈಗೆ ಹೋಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಸಣ್ಣ ಬೆಳೆಗಾರರ ಸಂಘದ ಪ್ರಮುಖ ರಾದ ಚೇರಂಡ ನಂದಾ ಸುಬ್ಬಯ್ಯ ಮಾತ ನಾಡಿ, ಕೊಡಗಿನ ಕಾಫಿ ತೋಟಗಳು ಪರಿ ಸರ ಸಂರಕ್ಷಣೆಗೆ ಪೂರಕವಾಗಿದ್ದು, ಪರಿ ಸರ ಸಂರಕ್ಷಣೆಯ ಪಾಠವನ್ನು ಅರಣ್ಯ ಇಲಾಖೆ ಮಾಡಬೇಕಾಗಿಲ್ಲವೆಂದರು. ಕೃಷಿ ಅರಣ್ಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದ ಅವರು, ಖಾಸಗಿ ಭೂಮಿಯಲ್ಲಿ ಮರಗಳನ್ನು ಅಭಿವೃದ್ಧಿ ಪಡಿ ಸಲು ಉತ್ತೇಜನ ನೀಡುವ ಅಗತ್ಯ ವಿದೆ ಎಂದರು. ಪರಿಸರ ಸಂರಕ್ಷಣೆಯ ಕುರಿತು ಜಿಲ್ಲೆಯಲ್ಲಿ ಉಂಟಾಗಿರುವ ಗೊಂದ ಲದ ವಾತಾವರಣದ ಬಗ್ಗೆ ಶಾಸಕರುಗಳು ಯಾಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿವಕೀಲ ರಾದ ಕೆ.ಆರ್.ವಿದ್ಯಾಧರ್ ಉಪಸ್ಥಿತರಿದ್ದರು.

Translate »