ಮಡಿಕೇರಿಯಲ್ಲಿ ಭಾರೀ ಮಳೆ
ಕೊಡಗು

ಮಡಿಕೇರಿಯಲ್ಲಿ ಭಾರೀ ಮಳೆ

June 28, 2018

ಮಡಿಕೇರಿ: ಆರಿದ್ರಾ ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದೆ. ಬುಧವಾರ ಮಧ್ಯಾಹ್ನ ಸುಮಾರು ಮೂರು ಗಂಟೆ ಸಮಯ ದಲ್ಲಿ ಸುರಿದ ಭಾರಿ ಮಳೆಗೆ ನಗರದ ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ನಗರದ ಮ್ಯಾನ್ಸ್ ಕಾಂಪೌಂಡ್ ಮುಂಭಾ ಗದ ಬಡಾವಣೆಯಲ್ಲಿ ತೋಡು ಉಕ್ಕಿ ಹರಿದ ಪರಿಣಾಮ ಸಂಪೂರ್ಣ ಪ್ರದೇಶ ಜಲಮಯವಾಗಿತ್ತು. ಕೊಳಚೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದು, ಮನೆಯೊಳಗಿದ್ದ ವಸ್ತುಗಳಿಗೆ ಹಾನಿ ಸಂಭವಿಸಿದೆ.
ಆರಿದ್ರಾ ಮಳೆಯ ಬಿರುಸಿಗೆ ಯುಜಿಡಿ ಚರಂಡಿ ಕಾಮಗಾರಿಯ ಮುಖವಾಡ ಕಳಚಿದ್ದು, ಕಳಪೆ ಕಾಮಗಾರಿಯಿಂದ ರಸ್ತೆಗೆ ಹಾಕಿದ್ದ ಡಾಂಬರು ಮಳೆ ನೀರಿನ ರಭಸಕ್ಕೆ ಸಂಪೂರ್ಣ ಕಿತ್ತುಹೋಗಿ ಕಲ್ಲುಗಳು ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ. ನಗರದ ಕೋಟೆ ಮಾರಿ ಯಮ್ಮ ದೇವಾಲಯಕ್ಕೆ ತೆರಳುವ ರಸ್ತೆಯಲ್ಲಿ ಭಾರಿ ನೀರು ಹರಿದು ಚರಂಡಿ ಮತ್ತು ರಸ್ತೆ ಯಾವುದು ಎಂಬುದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾದ ಪರಿಣಾಮ ವಾಹನ ಚಾಲಕರು ಪರದಾಡುವಂತಾಯಿತು.

ಒಂದು ಗಂಟೆಗಳ ಕಾಲ ಅಂದಾಜು ಎರಡು ಇಂಚು ಮಳೆ ಸುರಿದ ಪರಿಣಾಮ ಜನ ಮತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

Translate »