ಮಂಡ್ಯ

ಲಂಚವಿಲ್ಲದೆ ಇಲ್ಲಿ ಚಿಕಿತ್ಸೆ ಸಿಗಲ್ಲ..!
ಮಂಡ್ಯ

ಲಂಚವಿಲ್ಲದೆ ಇಲ್ಲಿ ಚಿಕಿತ್ಸೆ ಸಿಗಲ್ಲ..!

July 7, 2018

ಮಂಡ್ಯ: ಇಲ್ಲಿ ಲಂಚವಿಲ್ಲದೇ ಚಿಕಿತ್ಸೆಯೇ ಸಿಗುವುದಿಲ್ಲ, ಬಹಿರಂಗವಾಗಿ ಲಂಚ ಬಾಕ ವೈದ್ಯರ ಹಣ ವಸೂಲಿ ದಂಧೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಾಗಮಂಗಲ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ವಸಂತಲಕ್ಷ್ಮಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿ ರುವ ದೃಶ್ಯವೀಗ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಶುಲ್ಕ ಪಡೆಯದೆ ಉಚಿತ ಚಿಕಿತ್ಸೆ ನೀಡಬೇಕು. ಆದರೆ ಡಾ.ವಸಂತಲಕ್ಷ್ಮಿ ರೋಗಿಗಳಿಂದ 10, 20 ಹಾಗೂ 30, 50 ರೂ.ಗಳನ್ನು…

ಉದ್ಯೋಗ ಖಾತ್ರಿ ಕೂಲಿಕಾರರಿಗೆ ವಂಚನೆ ಖಂಡಿಸಿ ಧರಣಿ
ಮಂಡ್ಯ

ಉದ್ಯೋಗ ಖಾತ್ರಿ ಕೂಲಿಕಾರರಿಗೆ ವಂಚನೆ ಖಂಡಿಸಿ ಧರಣಿ

July 7, 2018

ಮದ್ದೂರು:  ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಕೂಲಿ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಆಬಲವಾಡಿ ಗ್ರಾಪಂ ಅಧಿಕಾರಿಗಳ ವಿರುದ್ಧ ಕೊಪ್ಪ ಹೋಬಳಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಆಬಲವಾಡಿ, ಅವ್ವೇರಹಳ್ಳಿ, ನಂಬಿನಾಯಕನಹಳ್ಳಿ ಗ್ರಾಮಸ್ಥರು ಧರಣಿ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆ ಕೊಪ್ಪ ಹೋಬಳಿ ಅಧ್ಯಕ್ಷ ಮೂಗೂರೇಗೌಡ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಸರಿಯಾಗಿ ಕೆಲಸ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಶೌಚಾಲಯ,…

ಹೆಚ್‍ಡಿಕೆ ಬಜೆಟ್‍ಗೆ ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ
ಮಂಡ್ಯ

ಹೆಚ್‍ಡಿಕೆ ಬಜೆಟ್‍ಗೆ ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ

July 6, 2018

ರೈತರ ತುಟಿಗೆ ತುಪ್ಪ ಸವರುವ ಬಜೆಟ್: ರೈತರ ಆಕ್ರೋಶ ಮಂಡ್ಯ: ಇಡೀ ರಾಜ್ಯದಲ್ಲೇ ಜೆಡಿಎಸ್‍ಗೆ ಅತ್ಯಧಿಕ ನೆಲೆಕೊಟ್ಟ ಜಿಲ್ಲೆ ಮಂಡ್ಯ. ಅಂತೆಯೇ ಹೆಚ್.ಡಿ.ಕುಮಾರ ಸ್ವಾಮಿ ಸಿಎಂ ಆಗುತ್ತಿದ್ದಂತೆ ಜಿಲ್ಲೆಯ ಜನ ಕುಣಿದು ಕುಪ್ಪಳಿಸಿದ್ದರು. ಜೊತೆಗೆ ಬಜೆಟ್ ಮೇಲೆ ಜಿಲ್ಲೆಯ ಜನಕ್ಕೆ ಭಾರಿ ನಿರೀಕ್ಷೆ ಇತ್ತು. ಅಂತೆಯೇ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದರೂ, ಹಾಸನಕ್ಕೆ ನೀಡಿದ ಅರ್ಧ ಭಾಗದ ಅನುದಾನವನ್ನೂ ಮಂಡ್ಯಕ್ಕೆ ನೀಡಿಲ್ಲ ಎಂಬ ಅಸಮಾಧಾನ ಜಿಲ್ಲೆಯಲ್ಲಿ ಅಲ್ಲಲ್ಲಿ ಹೊಗೆಯಾಡುತ್ತಿದೆ. ಸಾಲಮನ್ನಾ ಘೋಷಣೆಯಾಗಿದ್ದರೂ ಬಹುತೇಕ ರೈತರು ಇದು ರೈತ…

ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ
ಮಂಡ್ಯ

ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ

July 6, 2018

ಮಂಡ್ಯ:  ಇತ್ತೀಚೆಗೆ ನಿಧನರಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡರ ನಿವಾಸಕ್ಕಿಂದು ಮಾಜಿ ಸಚಿವ, ನಟ ಅಂಬರೀಶ್ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬೋರೇಗೌಡರ ನಿಧನದ ದಿನ ಮತ್ತು ತಿಥಿ ಕಾರ್ಯದಲ್ಲೂ ಪಾಲ್ಗೊಳ್ಳದ ಅಂಬ ರೀಶ್ ಇಂದು ಅವರ ಮನೆಗೆ ದಿಢೀರ್ ಭೇಟಿ ನೀಡಿ ಬೋರೇಗೌಡರ ತಂದೆ, ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿ ದರು. ಅಂಬರೀಶ್‍ಗೆ ನಟ ರಾಕ್‍ಲೈನ್ ವೆಂಕ ಟೇಶ್ ಮತ್ತು ಬೆಂಬಲಿಗರು ಸಾಥ್ ನೀಡಿದರು. ಈ ವೇಳೆ ಮಾತನಾಡಿದ…

ಸದಾಶಿವ ಸ್ವಾಮೀಜಿಗಳ ಅಂತ್ಯಕ್ರಿಯೆ
ಮಂಡ್ಯ

ಸದಾಶಿವ ಸ್ವಾಮೀಜಿಗಳ ಅಂತ್ಯಕ್ರಿಯೆ

July 6, 2018

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಸದಾಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬೇಬಿ ಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಆವರಣದಲ್ಲಿ ನಡೆಯಿತು.ರಾಜ್ಯದ ನಾನಾ ಭಾಗಗಳಿಂದ ಆಗಮಿ ಸಿದ್ದ ವಿವಿಧ ಮಠಗಳ ಮಠಾಧೀಶರು, ಮಠದ ಭಕ್ತರು ಹಾಗೂ ಸಾರ್ವಜನಿಕರು ಮಠದ ಆವರಣದಲ್ಲಿ ಇಡಲಾಗಿದ್ದ ಸದಾ ಶಿವ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಬೆಳಿಗ್ಗೆ 11.30ರ ವೇಳೆಗೆ ಸ್ವಾಮೀಜಿ ಅವರ ಮೃತದೇಹವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮಠದ ಆವರಣದಲ್ಲಿ ಒಂದು ಸುತ್ತು ಮೆರವಣಿಗೆ ನಡೆಸಲಾಯಿತು. ನಂತರ ಮಠದ…

ಗಣಿ, ಕಂದಾಯ ಇಲಾಖಾಧಿಕಾರಿಗಳ ದಾಳಿ: 10ಕ್ಕೂ ಹೆಚ್ಚು ಅಕ್ರಮ ಜಲ್ಲಿ ಕ್ರಷರ್ ಗಳಿಗೆ ಬೀಗ
ಮಂಡ್ಯ

ಗಣಿ, ಕಂದಾಯ ಇಲಾಖಾಧಿಕಾರಿಗಳ ದಾಳಿ: 10ಕ್ಕೂ ಹೆಚ್ಚು ಅಕ್ರಮ ಜಲ್ಲಿ ಕ್ರಷರ್ ಗಳಿಗೆ ಬೀಗ

July 5, 2018

ಮಂಡ್ಯ:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯಸರ್ಕಾರ ಟೇಕಾಫ್ ಆಗುತ್ತಿರುವ ಬೆನ್ನಲ್ಲೇ ಜೆಡಿಎಸ್ ವಿರೋಧಿಗಳನ್ನು ಹಣಿಯುವ ಪ್ರಕ್ರಿಯೆ ಸದ್ದಿಲ್ಲದೆ ಶುರುವಾಗಿದೆ. ಇದರ ಭಾಗವಾಗಿ ಮೊನ್ನೆಯಷ್ಟೇ ನಾಗಮಂಗಲ ತಾಲೂಕಿನ ವಿವಿಧೆಡೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರಿಗೆ ಸೇರಿದಂತೆ 10ಕ್ಕೂ ಹೆಚ್ಚು ಅಕ್ರಮ ಕ್ರಷರ್ ಮತ್ತು ಗಣಿಗಾರಿಕೆಗಳಿಗೆ ಬೀಗ ಜಡಿಯಲಾಗಿದೆ. ನಾಗಮಂಗಲ ತಾಲೂಕಿನ ವಿವಿಧೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಾಗಭೂಷಣ್ ಹಾಗೂ ಕಂದಾಯ ಇಲಾಖೆ ತಾಲೂಕು ತಹಶೀಲ್ದಾರ್ ಎಂ.ನಂಜುಂಡಯ್ಯ ನೇತೃತ್ವದ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಅನುಮತಿ ಇಲ್ಲದೆ…

ಕಬ್ಬಿನ ಬಾಕಿ ಪಾವತಿಗೆ ಆಗ್ರಹಿಸಿ ರೈತರ ಪ್ರತಿಭಟನೆ
ಮಂಡ್ಯ

ಕಬ್ಬಿನ ಬಾಕಿ ಪಾವತಿಗೆ ಆಗ್ರಹಿಸಿ ರೈತರ ಪ್ರತಿಭಟನೆ

July 5, 2018

 ಕಾರ್ಖಾನೆ ಕಚೇರಿಗೆ ಮುತ್ತಿಗೆ ಆತ್ಮಹತ್ಯೆಗೆ ಯತ್ನಿಸಿದ ರೈತ 14 ರೊಳಗೆ ಬಾಕಿ ಪಾವತಿಸುವ ಭರವಸೆ ಭಾರತೀನಗರ: ರೈತರಿಗೆ ಕೊಡಬೇಕಾಗಿರುವ ಕಬ್ಬಿನ ಬಾಕಿ ಹಣ ಪಾವತಿಸಬೇಕು ಎಂದು ಆಗ್ರಹಿಸಿ ನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಕಚೇರಿಗೆ ಬುಧವಾರ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಾರ್ಖಾನೆಯ ಕಚೇರಿ ಮುಂಭಾಗ ಸಮಾವೇಶಗೊಂಡ ರೈತಸಂಘದ ಕಾರ್ಯಕರ್ತರು ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ ಮಾತನಾಡಿ, ಕಾರ್ಖಾನೆಯ ಆಡಳಿತ ಮಂಡಳಿ ರೈತರನ್ನು ವಂಚಿಸುತ್ತಲೇ…

ಕ್ರಷರ್ ಕಚೇರಿಯಲ್ಲಿ ದಾಂಧಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮಂಡ್ಯ

ಕ್ರಷರ್ ಕಚೇರಿಯಲ್ಲಿ ದಾಂಧಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

July 5, 2018

ಮಂಡ್ಯ: ಕ್ರಷರ್ ನಲ್ಲಿ ಸೋಲಿಂಗ್ (ಬೋಡ್ರಸ್ ಕಲ್ಲು)ತೆಗೆದು ಕೊಳ್ಳದ ವಿಚಾರಕ್ಕೆ ಸಂಬಂಧಿಸಿ ದಂತೆ ಐವರ ತಂಡವೊಂದು ಕ್ರಷರ್ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕು ಚನ್ನನಕೆರೆ ಬಳಿ ಮಂಗಳವಾರ ಸಂಜೆ ನಡೆದಿದೆ. ಚನ್ನನಕೆರೆ ಬಳಿಯ ಕೆಎಸ್‍ಸಿ(ಕಾವೇರಿ ಸ್ಟೋನ್ ಕ್ರಷರ್) ಕಚೇರಿ ಮೇಲೆಯೇ ಐವರು ದಾಳಿ ಮಾಡಿದ್ದು ಸಿಬ್ಬಂದಿ ಸೋಮ ಅಲಿಯಾಸ್ ಸೋಮಶೇಖರ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾಂಧಲೆ ನಡೆಸಿರುವ ಟಿ.ಎಂ. ಹೊಸೂರಿನ…

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಡಿ.ಸಿ.ತಮ್ಮಣ್ಣ
ಮಂಡ್ಯ

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಡಿ.ಸಿ.ತಮ್ಮಣ್ಣ

July 5, 2018

ಮದ್ದೂರು: ‘ನಾನು ಶಾಸಕನಾಗಿ ಬಂದ ಮೇಲೆ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಿದ್ದು, ಕಡಿಮೆ ವೆಚ್ಚದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದೇ ನನ್ನ ಗುರಿಯಾಗಿದೆ’ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ತಾಲೂಕಿನ ಸಮೀಪದ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದ ಜಿಟಿಟಿಸಿ ಉಪಕೇಂದ್ರದ ನೂತನ ಆಡಳಿತ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 992ಲಕ್ಷ ರೂ. ವೆಚ್ಚ ದಡಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುತ್ತಿದ್ದು, ಬೆಂಗಳೂರಿನ ಪ್ರತಿಷ್ಠಿತ ಉಷಾ ಕನ್​ಷ್ಟ್ರಕ್ಷನ್  ಸಂಸ್ಥೆಯು ಈ…

ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನಿಧನ
ಮಂಡ್ಯ

ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ನಿಧನ

July 5, 2018

ಬೆಂಗಳೂರಿನ ಭಕ್ತರ ಮನೆಯಲ್ಲಿ ಹೃದಯಾಘಾತ, ಭಕ್ತರು-ಗಣ್ಯರಿಂದ ಸಂತಾಪ ಪಾಂಡವಪುರ: ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಶ್ರೀಸದಾಶಿವ ಸ್ವಾಮೀಜಿ(60) ಅವರು ಬುಧವಾರ ಮುಂಜಾನೆ 5.30ರಲ್ಲಿ ಹೃದಯಾಘಾತದಿಂದ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಭಕ್ತರ ಮನೆಗೆ ತೆರಳಿದ ಸಂದರ್ಭದಲ್ಲಿ ಸ್ವಾಮೀಜಿ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಭಕ್ತರ ಕುಟುಂಬದ ವಿವಾಹಕ್ಕೆಂದು ತೆರಳಿದ್ದ ಸ್ವಾಮೀಜಿ ವಿವಾಹದಲ್ಲಿ ಪಾಲ್ಗೊಂಡ ಬಳಿಕ ಕಳೆದ ರಾತ್ರಿ ಶಾಂತಕುಮಾರ್ ಎಂಬ ಭಕ್ತರೊಬ್ಬರ ಮನೆಯಲ್ಲಿ ತಂಗಿದ್ದರು. ಭಕ್ತರ ಮನೆಯಲ್ಲಿ ಮಲಗಿದ್ದಾಗ ಬೆಳಿಗ್ಗೆ 5 ಗಂಟೆಗೆ ಪೂಜೆಗೆಂದು ಎದ್ದೇಳಿಸಿದಾಗ ಸ್ವಾಮೀಜಿ ಇಹಲೋಕ…

1 88 89 90 91 92 108
Translate »