ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ತ್ರಿವೇಣಿ ಸಂಗಮದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ನಿರ್ಮಿಸಿ ಕೊಂಡಿದ್ದ ಶೆಡ್‍ಗಳನ್ನು ತಾಲೂಕು ಆಡಳಿತ ತೆರವು ಮಾಡಿರುವ ಕ್ರಮ ಖಂಡಿಸಿ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ರೈತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಟ್ಟಣದ ಮಿನಿವಿಧಾನಸೌಧದ ಎದುರು ಸೋಮವಾರ ಜಮಾಯಿಸಿದ ಗಂಜಾಂನ ಹಾಗೂ ಸಂಗಮ್‍ನ ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳು ಆರ್‍ಐ ದೊಡ್ಡಯ್ಯ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಹಾಲಿ…
ಉಪಚುನಾವಣೆ: ಮಂಡ್ಯ ನಗರಸಭೆ `ಕೈ’ ತೆಕ್ಕೆಗೆ
July 10, 2018ನೂತನ ಅಧ್ಯಕ್ಷೆಯಾಗಿ ಷಹಜಹಾನ್ ಆಯ್ಕೆ, ಕಾಂಗ್ರೆಸ್‍ಗೆ ಜಯ: ಜೆಡಿಎಸ್‍ಗೆ ಭಾರೀ ಮುಖಭಂಗ ಮಂಡ್ಯ: ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಉಪ ಚುನಾವಣೆ ಯಲ್ಲಿ ನೂತನ ಅಧ್ಯಕ್ಷರಾಗಿ 26ನೇ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಷಹಜಹಾನ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೊಸಹಳ್ಳಿ ಬೋರೇಗೌಡರ ನಿಧನದಿಂದ ತೆರವಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಉಪಚುನಾವಣೆ ನಿಗದಿಯಾಗಿತ್ತು. ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನಗರದ 26ನೇ ವಾರ್ಡ್‍ನ ಸದಸ್ಯೆ, ಮೂಡಾ ಅಧ್ಯಕ್ಷ ಮುನಾವರ್ ಖಾನ್ ಪತ್ನಿ ಷಹಜಹಾನ್ ಪ್ರತಿಸ್ಪರ್ಧಿ 1ನೇ ವಾರ್ಡ್‍ನ…
ಸದಾಶಿವ ಶ್ರೀಗಳ ಅಗಲಿಕೆ ಒಂದು ಕಣ್ಣು ಕಳೆದುಕೊಂಡಂತೆ: ಪುಣ್ಯಸ್ಮರಣೆ ಪೂರ್ವಭಾವಿ ಸಭೆಯಲ್ಲಿ ಸಚಿವ ಸಿಎಸ್‍ಪಿ ವಿಷಾದ
July 9, 2018ಚಿನಕುರಳಿ: ಸದಾಶಿವ ಸ್ವಾಮೀಜಿ ಗಳ ಅಗಲಿಕೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಕಳೆದುಕೊಂಡ ನಾವು ಒಂದು ಕಣ್ಣನ್ನು ಕಳೆದುಕೊಂಡಂತಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ವಿಷಾದ ವ್ಯಕ್ತಪಡಿಸಿದರು. ಜು.15ರಂದು ನಡೆಯುವ ತಾಲೂಕಿನ ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಮರಿದೇವರು ಸ್ವಾಮೀಜಿಗಳ ಶಿಷ್ಯರಾಗಿದ್ದ ಶ್ರೀಸದಾಶಿವ ಸ್ವಾಮೀಜಿಗಳು ಹಾಗೂ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ಈ ಮಠಗಳ ಎರಡು ಕಣ್ಣುಗಳಾಗಿದ್ದರು. ಆದರೆ…
ಮೋಕ್ಷಕ್ಕಾಗಿ ಕುಟುಂಬ ಆತ್ಮಹತ್ಯೆಗೆ ಪ್ರಚೋದನೆ
July 9, 2018ಮಂಡ್ಯ: ಮಂತ್ರವಾದಿಗಳ ಪ್ರಚೋದನೆಯಿಂದ ದೆಹಲಿಯ ಭಾಟಿಯಾ ಕುಟುಂಬದ 11 ಮಂದಿ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅದೇ ಮಾದರಿಯಲ್ಲಿ ಮಂಗಳಮುಖಿ ಮಂತ್ರವಾದಿಯೋರ್ವ ಮೋಕ್ಷಕ್ಕಾಗಿ ಮಹಿಳೆಯೋರ್ವಳ ಕುಟುಂಬವನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಮಂಡ್ಯ ತಾಲೂಕಿನ ಮಾರಗೋಡನಹಳ್ಳಿಯ ಅನಿತಾ ಕುಟುಂಬಕ್ಕೆ ಮಂಗಳಮುಖಿ ಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ತಾನು ಬೆಳವಾಡಿಯ ಬಳಿ ಕೆಲಸದ ನಿಮಿತ್ತ ಹೋಗಿದ್ದ ವೇಳೆ ಮಂಗಳಮುಖಿ ಮಂತ್ರವಾದಿಯೋರ್ವ “ನಿನ್ನ ಸಾವಿನಿಂದ ಮಕ್ಕಳಿಗೆ ಮುಕ್ತಿ, ಮೋಕ್ಷ…
ಹೆಚ್‍ಡಿಕೆಯಿಂದ ರೈತರ ಬೇಡಿಕೆ ಈಡೇರಿಕೆ
July 9, 2018ಮದ್ದೂರು: ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲಿದ್ದಾರೆ. ಈ ಬಗ್ಗೆ ಆತಂಕ ಬೇಡ. ಆದರೆ ಕಾಲಾವಕಾಶ ಬೇಕು ಎಂದು ಶಾಸಕ ಸುರೇಶ್‍ಗೌಡ ತಿಳಿಸಿದರು. ತಾಲೂಕಿನ ಕಿರಂಗೂರು ಗ್ರಾಮದಲ್ಲಿ ನಡೆದ ತೋಪಿನ ತಿಮ್ಮಪ್ಪ ದೇವರ ಹರಿಸೇವೆ ಯಲ್ಲಿ ಮಾತನಾಡಿದ ಅವರು, ಸಿಎಂ ಅವರು ಸಿದ್ದರಾಮಯ್ಯರ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗುವ ಜೊತೆಗೆ ರೈತರ ಸಾಲ ಮನ್ನಾ ಮಾಡಿ ದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ರೈತರಿಗೆ ಹಾಗೂ ಎಲ್ಲ ಸಮುದಾಯಗಳಿಗೆ ಉಪಯುಕ್ತ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ ಎಂದು…
ರೈತರ ಬದುಕಿಗೆ ನೆರವಾಗಲು ಬ್ಯಾಂಕ್‍ನಿಂದ ಸಾಲ
July 9, 2018ಭಾರತೀನಗರ: ಬ್ಯಾಂಕ್ ಎಂದರೆ ರೈತರಿಂದ ಹಣ ಕಟ್ಟಿಸಿಕೊಂಡು ಹಣ ಕೊಡುವುದಲ್ಲ. ರೈತರ ಬದುಕಿಗೆ ನೆರವಾಗಲು ಬ್ಯಾಂಕ್‍ನಿಂದ ಸಾಲ ನೀಡಲಾಗುತ್ತಿದೆ ಎಂದು ಕೆ.ಎಂ.ದೊಡ್ಡಿ ವಿಜಯಬ್ಯಾಂಕ್ ಶಾಖೆಯ ಹಿರಿಯ ಶಾಖಾ ಪ್ರಬಂಧಕಿ ದೀಪ್ತಿ ಸಿ.ಗಂಗಾಧರ್ ತಿಳಿಸಿದರು. ಇಲ್ಲಿನ ವಿಜಯಾ ಬ್ಯಾಂಕ್ ವತಿಯಿಂದ ನಡೆದ ಕೃಷಿ ಸಾಲ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕ್‍ನೊಂದಿಗೆ ನಿಕಟ ಸಂಪರ್ಕ ಹೊಂದಿದಾಗ ಮಾತ್ರ ರೈತರು ಸೌಲಭ್ಯ ಪಡೆಯಬಹುದು. ಬ್ಯಾಂಕ್‍ನಿಂದ ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸಿ ಬ್ಯಾಂಕ್ ಅಭಿವೃದ್ಧಿಗೂ ಸº ಕರಿಸಬೇಕು. ಬ್ಯಾಂಕ್‍ಗಳಲ್ಲಿ…
ನಾಮಕರಣಕ್ಕೆ ಹೋಗುತ್ತಿದ್ದ ಪ್ರಯಾಣಿಕರ ಕಾರು ಅಪಘಾತ
July 9, 2018ಮಂಡ್ಯ: ನಾಮಕರಣಕ್ಕೆ ಹೋಗುತಿದ್ದ ಪ್ರಯಾಣಿಕರ ಕಾರು ಅಪಘಾತ ಕ್ಕೀಡಾಗಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯ ಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಒಡೆಯರಹಳ್ಳಿ ಬಳಿ ಇಂದು ನಡೆದಿದೆ. ತುರುವೆಕೆರೆಯ ಸಂತೋಷ್ ಬಿನ್ ಮಂಜುನಾಥ್(23) ಸಾವನ್ನಪ್ಪಿದ್ದು, ವಿನೋದ್, ವಿಜಯ್ ಕುಮಾರ್, ಚೌಡೇಶ್ ಕುಮಾರ್, ನವನೀತ್ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ: ಸಂತೋಷ್ ಅವರನ್ನೊಳ ಗೊಂಡ ಸ್ನೇಹಿತರ ತಂಡ ಕಾರ್ (ಕೆ.ಎ.06. ಡಿ.8182)ನಲ್ಲಿ ಬೆಂಗಳೂರಿನಿಂದ ಎ.ಸಿ.ಗಿರಿಗೆ ಬರುತ್ತಿದ್ದರು. ಮಾರ್ಗ ಮಧ್ಯೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಹೆಚ್.75 ರಸ್ತೆಯಲ್ಲಿ ವಡೇರ ಹಳ್ಳಿ ಗೇಟ್…
ಶೋಕಿಗಾಗಿ ಬೈಕ್ ಕಳ್ಳತನ: ಮೂವರು ಅಪ್ರಾಪ್ತರ ಬಂಧನ
July 9, 2018ಮಂಡ್ಯ: ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಪಾಂಡವಪುರ ಸೇರಿದಂತೆ ಸುತ್ತಮುತ್ತಲಿನಲ್ಲಿ ಬೈಕ್ ಕಳವು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಂ.ಕೆ.ದೀಪಕ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡಕ್ಕೆ ಜು.4 ರಂದು ಸಿಕ್ಕಿಬಿದ್ದ ಕಾನೂನು ಸಂಘರ್ಷ ಕ್ಕೊಳಪಡುವ ಮೂವರು ಬಾಲಕರನ್ನು ವಿಚಾರಣೆಗೊಳಪಡಿಸಿದಾಗ ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ. ಪಾಂಡವ ಪುರ ಟಿಎಪಿಸಿಎಂಎಸ್ ಕಲ್ಯಾಣ ಮಂಟಪ ಬಳಿ 2, ಬಿಜಿಎಸ್…
ಎಸ್‍ಟಿಜಿಯಲ್ಲಿ `ಮಾನ್ಸೂನ್ ಮ್ಯಾರಥಾನ್ ಓಟ’
July 9, 2018ಚಿನಕುರುಳಿ: ಇಲ್ಲಿನ ಎಸ್‍ಟಿಜಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ `ಮಾನ್ಸೂನ್ ಮ್ಯಾರಥಾನ್ ಓಟದ’ ಸ್ಪರ್ಧೆ ನಡೆಯಿತು. ವಿಶ್ವ ಜನಸಂಖ್ಯಾ ದಿನಾಚರಣೆ, ಸಣ್ಣ ತಮ್ಮೇಗೌಡ, ಅಂಕಮ್ಮನವರ 26ನೇ ವರ್ಷದ ಪುಣ್ಯಸ್ಮರಣೆ ಹಾಗೂ ಮುಂಗಾರು ಮಳೆ ಆಹ್ವಾನಿಸಿ ಎಸ್‍ಟಿಜಿ ಶಿಕ್ಷಣ ಸಂಸ್ಥೆ ಆಯೋ ಜಿಸಿದ್ದ `ಮಾನ್ಸೂನ್ ಮ್ಯಾರಥಾನ್ ಓಟದ’ ಸ್ಪರ್ಧೆಗೆ ಸಂಸ್ಥೆ ಸಿಇಓ ಸಿ.ಪಿ.ಶಿವರಾಜು ಚಾಲನೆ ನೀಡಿದರು. ಎಸ್‍ಟಿಜಿ ಪಬ್ಲಿಕ್ ಶಾಲೆಯಿಂದ ಹೊರಟ ಮ್ಯಾರಥಾನ್ ಸ್ಪರ್ಧಿಗಳು ಚಿನಕುರಳಿ ಗ್ರಾಮ ಬಳಸಿಕೊಂಡು ಸುಮಾರು ಮೂರೂವರೆ ಕಿ.ಮಿ. ಓಡುವ ಮೂಲಕ ಶಾಲೆಗೆ ಆಗಮಿಸಿದರು. ಸ್ಪರ್ಧೆಯಲ್ಲಿ…
ಮೇಲುಕೋಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ
July 8, 2018ಜನಸಂಪರ್ಕ ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ಜನರ ಹಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಚಿವರು ಪಾಂಡವಪುರ: ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಬದ್ಧ ಎಂದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ನೀಲಿನಕ್ಷೆ ತಯಾರಿಸಲಾಗಿದೆ. ಯೋಜನೆಯನ್ನೂ ರೂಪಿಸಲಾಗಿದೆ ಎಂದರು. ಪಟ್ಟಣದಲ್ಲಿ…










