ಮಂಡ್ಯ

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ
ಮಂಡ್ಯ

ರೈತರ ಕಬ್ಬಿನ ಬಾಕಿ ಹಣ ಪಾವತಿಗೆ ಸೂಚನೆ ತಪ್ಪಿದ್ದಲ್ಲಿ ದಾಸ್ತಾನು ಸಕ್ಕರೆ ವಶಕ್ಕೆ: ಡಿಸಿ ಎಚ್ಚರಿಕೆ

May 31, 2018

ಮಂಡ್ಯ: ಸಕ್ಕರೆ ಕಾರ್ಖಾನೆ ಗಳಿಗೆ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ಪಾವತಿಸಬೇಕಾದ ಬಾಕಿ ಹಣವನ್ನು ಜೂ.5 ರೊಳಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಪ್ಪದೇ ಪಾವತಿಸಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆಗಳಲ್ಲಿ ಸಂಗ್ರಹ ವಾಗಿರುವ ಸಕ್ಕರೆಯನ್ನು ವಶಪಡಿಸಿ ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಪತ್ರಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಸಾಕಷ್ಟು ಬಾರಿ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ತಿಳಿಸ…

ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ
ಮಂಡ್ಯ

ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ

May 31, 2018

ಮಂಡ್ಯ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸು ವಂತೆ ಆಗ್ರಹಿಸಿ ಬ್ಯಾಂಕ್ ನೌಕರರು ಇಂದು ಕರೆ ನೀಡಿದ್ದ ಅಖಿಲ ಭಾರತ ಬ್ಯಾಂಕ್ ಬಂದ್ ಯಶಸ್ವಿಯಾಗಿದ್ದು, ಗ್ರಾಹಕರು ಪರದಾಡುವಂತಾಯಿತು. ಅಖಿಲ ಭಾರತ ಬ್ಯಾಂಕ್ ಯೂನಿಯನ್ ನೀಡಿದ್ದ ಇಂದಿನ ಬಂದ್ ಕರೆಗೆ ಜಿಲ್ಲೆ ಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಬ್ಯಾಂಕುಗಳ ವಹಿವಾಟು ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಆಂಧ್ರ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್, ಕೋಟೆಕ್ ಮಹಿಂದ್ರ…

ವಿಷವಿಕ್ಕಿ ಜೋಡೆತ್ತುಗಳ ಹತ್ಯೆ
ಮಂಡ್ಯ

ವಿಷವಿಕ್ಕಿ ಜೋಡೆತ್ತುಗಳ ಹತ್ಯೆ

May 31, 2018

ಮಂಡ್ಯ:  ದುಷ್ಕರ್ಮಿಗಳು ಲಕ್ಷಾಂತರ ರೂ. ಬೆಲೆಬಾಳುವ ಜೋಡಿ ಎತ್ತುಗಳಿಗೆ ವಿಷ ಉಣ ಸಿ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹಂಪಾಪುರದ ಬಳಿಯ ನೀಲಗಿರಿ ತೋಪಿನಲ್ಲಿ ನಡೆದಿದೆ. ಮೃತ ಎತ್ತುಗಳು ಯಾರಿಗೆ ಸೇರಿದ್ದಾಗಿವೆ. ಎಲ್ಲಿಂದ ತಂದು ಈ ಜೋಡೆತ್ತುಗಳನ್ನು ಇಲ್ಲಿ ಕೊಲ್ಲಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಜೋಡಿ ಎತ್ತುಗಳನ್ನು ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಬಳಸುತ್ತಿದ್ದು, ಉತ್ತರ ಕರ್ನಾಟಕದ ಕಡೆಯವರು ಈ ದುಷ್ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ ಹಂಪಾಪುರ…

ಬೈಕ್‍ನಿಂದ ಬಿದ್ದು ಸವಾರ ಸಾವು
ಮಂಡ್ಯ

ಬೈಕ್‍ನಿಂದ ಬಿದ್ದು ಸವಾರ ಸಾವು

May 31, 2018

ಮಂಡ್ಯ: ಬೈಕ್‍ನಿಂದ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವರ ಪುತ್ರ ಶಿವರಾಮು(35) ಮೃತಪಟ್ಟ ವರು. ಮಂಗಳವಾರ ರಾತ್ರಿ 8 ಗಂಟೆಯಲ್ಲಿ ಶಿವರಾಮು ಅವರು ತಮ್ಮ ಬೈಕ್‍ನಲ್ಲಿ ಆಲದಹಳ್ಳಿ ಗ್ರಾಮ ದಿಂದ ಹಿಟ್ಟನಹಳ್ಳಿಕೊಪ್ಪಲು ಗ್ರಾಮಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಮಾರ್ಗ ಮಧ್ಯೆ ಬೈಕ್‍ನಿಂದ ಆಯತಪ್ಪಿ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿ ದ್ದಾನೆ ಎನ್ನಲಾಗಿದೆ. ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿ ದ್ದಾರೆ.

ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ
ಮಂಡ್ಯ

ಸಾಧನೆಗೆ ಅಡ್ಡಿಯಾಗದ ಅಂಗವಿಕಲತೆ

May 30, 2018

ಭಾರತೀನಗರ:  ಸಾಧನೆ ಎಂಬುದು ಉಳ್ಳವರ ಸ್ವತ್ತಲ್ಲ. ಅದು ಸಾಧಕನ ಸ್ವತ್ತು ಎಂಬ ನಾಣ್ನುಡಿಯಂತೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದ ಯುವಕ ಬಿ.ಬೋರೇಗೌಡ ಅವರು ಸಾಧನೆಯ ಶಿಖರವೇರಿ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಹೌದು ಬೋರೇಗೌಡ ಅವರು 4 ವರ್ಷ ದವರಾಗಿದ್ದಾಗಲೇ ಪೊಲೀಯೊ ಪೀಡಿತ ರಾಗಿ ಬಲಗಾಲಿನ ಸ್ವಾಧೀನ ಕಳೆದುಕೊಂಡರು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡ ಅವರು ಇತ್ತೀಚೆಗೆ ಥೈಲ್ಯಾಂಡ್‍ನ ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್ ಟ್ಯ್ರಾಂಕ್ ಅಂಡ್ ಟರ್ಫ್ ಫೆಡರೇಷನ್(ಎಟಿಟಿಎಫ್) ಇಂಟರ್ ನ್ಯಾಷನಲ್ ಫ್ಯಾರ ಅಥ್ಲೆಟಿಕ್ಸ್ ಚಾಂಪಿಯನ್…

ಹಳ್ಳಕ್ಕೆ ಉರುಳಿದ ಟ್ರಾಕ್ಟರ್: ಮೂವರ ಸಾವು
ಮಂಡ್ಯ

ಹಳ್ಳಕ್ಕೆ ಉರುಳಿದ ಟ್ರಾಕ್ಟರ್: ಮೂವರ ಸಾವು

May 30, 2018

ಮಂಡ್ಯ: ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ನೇರಳೆಕೆರೆ ಗ್ರಾಮದ ಬಳಿ ಇಂದು ನಡೆದಿದೆ.ಟ್ರಾಕ್ಟರ್ ಚಾಲಕ ಪ್ರಸನ್ನ, ದೊಡ್ಡಪಾಳ್ಯ ಗ್ರಾಮದ ನಾಥೇಗೌಡರ ಮಗ ಪ್ರವೀಣ್(32) ಮತ್ತು ಹಂಗರಹಳ್ಳಿ ಗ್ರಾಮದ ಮಟ್ಟಿಗೌಡರ ಪುತ್ರ ನಿಖಿಲ್(34) ಮೃತ ದುರ್ದೈವಿಗಳು. ಘಟನೆ ಹಿನ್ನೆಲೆ: ಇಂದು ಮಧ್ಯಾಹ್ನ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಕ್ವಾರಿಯಿಂದ ಯಾಚೇನಹಳ್ಳಿ ಗ್ರಾಮಕ್ಕೆ ಕಲ್ಲುಗಳನ್ನು ತುಂಬಿಕೊಂಡು ಟ್ರಾಕ್ಟರ್ (ಕೆಎ 11, ಟಿ…

ತಾಲೂಕು ಕಚೇರಿ ಎದುರು ರೈತರ ಪ್ರತಿಭಟನೆ
ಮಂಡ್ಯ

ತಾಲೂಕು ಕಚೇರಿ ಎದುರು ರೈತರ ಪ್ರತಿಭಟನೆ

May 30, 2018

ಮದ್ದೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ರೈತರ ಹಾಗೂ ಜನಸಾಮಾನ್ಯರ ಕೆಲಸಗಳು ಸಮ ರ್ಪಕವಾಗಿ ಆಗುತ್ತಿಲ್ಲವೆಂದು ಆರೋಪಿಸಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.ತಾಲೂಕು ಕಚೇರಿ ಎದುರು ಜಮಾ ಯಿಸಿದ ರೈತರು, ಇಲ್ಲಿನ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಪುಟ್ಟಸ್ವಾಮಿ ಮಾತ ನಾಡಿ, ತಾಲೂಕು ಕಚೇರಿಯಲ್ಲಿ ಖಾತೆ ಬದಲಾವಣೆ, ಆರ್‍ಟಿಸಿ, ಪಡಿತರ ಚೀಟಿ ವಿತರಣೆ, ಒತ್ತುವರಿ ತೆರವು ಸೇರಿದಂತೆ ಇನ್ನಿತರ ಕೆಲಸಗಳು ತ್ವರಿತವಾಗಿ ನಡೆ ಯುತ್ತಿಲ್ಲ. ಇದರಿಂದ ನಿತ್ಯ ರೈತರು ಹಾಗೂ ಸಾರ್ವಜನಿಕರು ತಮ್ಮ…

ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ
ಮಂಡ್ಯ

ಸುಹೇಲ್‍ಗೆ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ

May 30, 2018

ಮಂಡ್ಯ: ಅಮೆರಿಕಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಸಿ.ಎಸ್.ಮೊಹಮ್ಮದ್ ಸುಹೇಲ್ ತಂಡಕ್ಕೆ ಎರಡನೇ ಗ್ರ್ಯಾಂಡ್ ಅವಾರ್ಡ್ ಪ್ರಶಸ್ತಿ ದೊರಕಿದೆ ಎಂದು ಸುಹೇಲ್ ತಂದೆ ಅನಾರ್ಕಲಿ ಸಲೀಂ ತಿಳಿಸಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಅಮೆರಿಕಾದ ಪಿಟ್ಸ್‍ಬರ್ಗ್‍ನಲ್ಲಿ ಮೇ 13 ರಿಂದ 18ರವರೆಗೆ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಸೆಂಟ್ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿ ಶ್ರೀರಂಗಪಟ್ಟಣದ ಸಿ.ಎಸ್‍ಮೊಹಮ್ಮದ್ ಸುಹೇಲ್ ಮತ್ತು ಪುತ್ತೂರಿನ ವಿವೇಕಾ ನಂದ ಕಾಲೇಜಿನ ಸ್ವಸ್ತಿಕ್ ಪದ್ಮ…

ಮದುವೆಯಾಗಲು ವಿದ್ಯಾರ್ಥಿನಿ ಅಪಹರಣ
ಮಂಡ್ಯ

ಮದುವೆಯಾಗಲು ವಿದ್ಯಾರ್ಥಿನಿ ಅಪಹರಣ

May 30, 2018

ಮೇಲುಕೋಟೆ:  ವಿವಾಹ ವಾಗುವಂತೆ ಪೀಡಿಸುತ್ತಿದ್ದ ಯುವಕ ಮತ್ತು ಆತನ ಸ್ನೇಹಿತರಿಂದ ಅಪಹರಣ ಕ್ಕೊಳಗಾಗಿದ್ದ ವಿದ್ಯಾರ್ಥಿನಿಯೋರ್ವಳು ತನ್ನ ಜಾಣ್ಮೆಯಿಂದ ತಪ್ಪಿಸಿಕೊಂಡು ಬಂದು ಪೋಷಕರ ಸಹಾಯದಿಂದ ಮೇಲುಕೋಟೆ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಮಂಗಳ ವಾರ ನಡೆದಿದೆ. ಸಿಂಗ್ರೀಗೌಡನಕೊಪ್ಪಲು ಗ್ರಾಮದ ನಿವಾಸಿ, ಮೈಸೂರಿನ ಮಹಾರಾಣ ಕಾಲೇಜಿನ ಅಂತಿಮ ಬಿಎಸ್ಸಿ ವಿದ್ಯಾರ್ಥಿನಿ ಅಪಹರಣ ಕಾರರಿಂದ ತಪ್ಪಿಸಿಕೊಂಡು ಬಂದ ಯುವತಿ. ಈಕೆಯನ್ನು ಬಹು ದಿನಗಳಿಂದ ವಿವಾಹವಾಗುವಂತೆ ಪೀಡಿಸುತ್ತಿದ್ದ ನರಹಳ್ಳಿ ಗ್ರಾಮದ ಯುವಕ ಕುಮಾರ್ ಅಲಿಯಾಸ್ ಕುಡುಕ ಮತ್ತು ಆತನ ಮೂವರು ಸ್ನೇಹಿತರು…

ನಟ, ಮಾಜಿ ಸಚಿವ ಅಂಬರೀಶ್ ಹುಟ್ಟುಹಬ್ಬ ಆಚರಣೆ
ಮಂಡ್ಯ

ನಟ, ಮಾಜಿ ಸಚಿವ ಅಂಬರೀಶ್ ಹುಟ್ಟುಹಬ್ಬ ಆಚರಣೆ

May 30, 2018

ಮಂಡ್ಯ: ಮಂಡ್ಯದಲ್ಲಿ ರೆಬೆಲ್‍ಸ್ಟಾರ್ ಅಂಬರೀಶ್ ಹುಟ್ಟುಹಬ್ಬ ವನ್ನು ಸಂಭ್ರಮದಿಂದ ಆಚರಿಸುತ್ತಿರುವ ಅಭಿಮಾನಿಗಳು ಅಂಬರೀಶ್ ಮತ್ತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳ ಬೇಕೆಂದು ಮನವಿ ಮಾಡಿದರು. ನಗರದ ಗಾಂಧಿ ಪಾರ್ಕ್‍ನಲ್ಲಿ, ಅಂಬ ರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಅಂಬಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅಭಿಮಾನಿಗಳು ಅಂಬಿ ಕಟೌಟ್‍ಗೆ ಅರಿಶಿಣ, ಕುಂಕುಮ, ಹಾಲಿನ ಅಭಿಷೇಕ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದರು. ಹುಟ್ಟು ಹಬ್ಬದ ಸಂಭ್ರಮದ ನಡುವೆಯೇ ಅಂಬಿ ರಾಜಕೀಯ ನಿವೃತ್ತಿ ಬಗ್ಗೆ ಅಭಿಮಾನಿಗಳು…

1 84 85 86 87 88