ಮಂಡ್ಯ

ಎಸಿಬಿ ಮುಚ್ಚಿ, ಲೋಕಾಯುಕ್ತ ಪುನರ್ ಸ್ಥಾಪಿಸಿ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಸಲಹೆ
ಮಂಡ್ಯ

ಎಸಿಬಿ ಮುಚ್ಚಿ, ಲೋಕಾಯುಕ್ತ ಪುನರ್ ಸ್ಥಾಪಿಸಿ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಗಡೆ ಸಲಹೆ

July 16, 2018

ಮಂಡ್ಯ: ಮೊದಲು ಎಸಿಬಿ ಮುಚ್ಚಿ, ಬಲಿಷ್ಠ ಲೋಕಾಯುಕ್ತ ಸಂಸ್ಥೆ ಯನ್ನು ಪುನರ್ ಸ್ಥಾಪಿಸಿ ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾತು ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಸಲಹೆ ನೀಡಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸಿಬಿಯೂ ಒಂದು ತನಿಖಾ ಸಂಸ್ಥೆಯೇ ಎಂದು ಪ್ರಶ್ನೆ ಮಾಡಿದ ಅವರು, ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಒಂದು ಸ್ವತಂತ್ರ ಸಂಸ್ಥೆ ಬೇಕು. ಆದರೆ ಎಸಿಬಿ ಸ್ವತಂತ್ರ ಸಂಸ್ಥೆಯಲ್ಲ. ನಾನು ಕೊಟ್ಟ ವರದಿ ಮೇಲೆಯೇ ಕಾಂಗ್ರೆಸ್ ಬಳ್ಳಾರಿಗೆ ಪಾದಯಾತ್ರೆ ಮಾಡಿತು….

ಎಚ್‍ಡಿಕೆಯ ವಿಷಕಂಠ ಹೇಳಿಕೆ ಕಾಂಗ್ರೆಸ್‍ಗೆ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್
ಮಂಡ್ಯ

ಎಚ್‍ಡಿಕೆಯ ವಿಷಕಂಠ ಹೇಳಿಕೆ ಕಾಂಗ್ರೆಸ್‍ಗೆ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

July 16, 2018

ಮಂಡ್ಯ:  ಜೆಡಿಎಸ್ ಅಭಿನಂದನಾ ವೇದಿಕೆಯಲ್ಲಿ ಸಿಎಂ ಕಣ್ಣೀರಿಟ್ಟು, ವಿಷ ಕಂಠನಾಗಿದ್ದೇನೆ ಎಂದಿರುವ ಎಚ್‍ಡಿಕೆಯ ಹೇಳಿಕೆಗೂ ಕಾಂಗ್ರೆಸ್‍ಗೂ ಸಂಬಂಧವಿಲ್ಲ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಠಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಅವರ ಪಕ್ಷದ ವೇದಿಕೆಯಲ್ಲಿ ತಮ್ಮ ಅಭಿ ಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಏನೇ ಪಕ್ಷದ ವೇದಿಕೆಯಲ್ಲಿ ಹೇಳಿದ್ದ ಮಾತುಗಳು ಕಾಂಗ್ರೆಸ್‍ಗೆ ಅನ್ವಯಿಸಲ್ಲ. ನಾವು ಜೆಡಿಎಸ್‍ಗೆ ನಮ್ಮ ಪೂರ್ಣ ಸಹಕಾರ ನೀಡುತ್ತಿದ್ದೇವೆ. ಸಿಎಂ ಯಾವ ಕಾರಣಕ್ಕೆ ಕಣ್ಣೀರಿಟ್ಟಿದಾರೋ ಗೊತ್ತಿಲ್ಲ. ಈ ಬಗ್ಗೆ ಸಿಎಂ ಅವರನ್ನೇ ಕೇಳಬೇಕು ಎಂದು…

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ
ಮಂಡ್ಯ

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ

July 16, 2018

ಪಾಂಡವಪುರ: ಲಿಂಗೈಕ್ಯ ಶ್ರೀ ಸದಾಶಿವ ಸ್ವಾಮೀಜಿಗಳು ಶ್ರದ್ಧಾ ಭಕ್ತಿಯಿಂದ ಮಠದಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಶ್ವತ ವಾದ ಕೆಲಸ ಮಾಡಿದ್ದಾರೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿಜೀ ತಿಳಿಸಿದರು. ತಾಲೂಕಿನ ಬೇಬಿಬೆಟ್ಟದ ಶ್ರೀರಾಮ ಯೋಗಿಶ್ವರ ಮಠದ ಆವರಣದಲ್ಲಿ ಭಾನು ವಾರ ನಡೆದ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಗಳ 11ನೇ ದಿನದ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಮೇಲು-ಕೀಳೆಂಬ ಭಾವನೆ ಬಿಟ್ಟು ಭಕ್ತರ ಮನೆ ಮನೆಗೆ ತೆರಳಿ ಧರ್ಮ ಪ್ರಚಾರ ಮಾಡುವ ಮೂಲಕ ಭಕ್ತರ ಪ್ರೀತಿ ಸಂಪಾದಿ ಸಿದ್ದರು….

ಕೆಆರ್‌ಎಸ್‌ ಭರ್ತಿ
ಮಂಡ್ಯ, ಮೈಸೂರು

ಕೆಆರ್‌ಎಸ್‌ ಭರ್ತಿ

July 15, 2018

ಮಂಡ್ಯ:  ಜಲಾ ನಯನ ಪ್ರದೇಶದಲ್ಲಿ ಉತ್ತಮ ಮಳೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಕನ್ನಡಿಗರ ಜೀವನದಿ ಕಾವೇರಿ ಮಾತೆ ಮೈದುಂಬಿ ಹರಿಯುತ್ತಿದ್ದು, ಕೃಷ್ಣರಾಜಸಾಗರ ಜಲಾಶಯ ಭರ್ತಿಯಾಗಿದೆ. ಸದ್ಯಕ್ಕೆ 123.20 ಅಡಿ ನೀರು ತುಂಬಿರುವುದರಿಂದ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ 17 ಗೇಟ್‍ಗಳ ಮೂಲಕ ಸುಮಾರು 50ಸಾವಿರ ಕ್ಯೂಸೆಕ್ಸ್ ನೀರನ್ನು ಇಂದು ನದಿಗೆ ಬಿಡಲಾಗುತ್ತಿದೆ. ಸತತ ಮೂರು ವರ್ಷಗಳ ಬರಗಾಲದಿಂದ ನೀರಿನ ಕೊರತೆ ಅನುಭವಿಸಿದ್ದ ಕೆಆರ್‌ಎಸ್‌ ಈ ಬಾರಿ ಸಂಪೂರ್ಣ ಭರ್ತಿ ಯಾಗಿದೆ. ದಶಕಗಳ ನಂತರ ಅವಧಿಗೂ ಮುನ್ನವೇ ಕೆಆರ್‌ಎಸ್‌ ಭರ್ತಿಯಾಗಿರು ವುದು…

ಎಪಿಎಂಸಿ ಸರ್ವತೋಮುಖ ಅಭಿವೃದ್ಧಿಗೆ ಬದ್ಧ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು
ಮಂಡ್ಯ

ಎಪಿಎಂಸಿ ಸರ್ವತೋಮುಖ ಅಭಿವೃದ್ಧಿಗೆ ಬದ್ಧ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು

July 15, 2018

ಪಾಂಡವಪುರ: ಪಟ್ಟಣದ ಎಪಿಎಂಸಿ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಎಪಿಎಂಸಿ ಆಡಳಿತ ಮಂಡಳಿ ಕೇಳಿರುವ ಹಣಕ್ಕಿಂತ ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸುತ್ತೇನೆ ಎಂದು ಸಣ್ಣ ನೀರಾವರಿ ಸಿ.ಎಸ್.ಪುಟ್ಟರಾಜು ತಿಳಿಸಿದರು. ಪಟ್ಟಣದ ಹಾರೋಹಳ್ಳಿ ಬಳಿಯ ಎಪಿಎಂಸಿಯಲ್ಲಿ ಆಡಳಿತ ಮಂಡಳಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಪಿಎಂ ಎಸಿ ರೈತರ ಬೆನ್ನೆಲುಬಾಗಿ ಕೆಲಸ ಮಾಡುವ ಸಂಸ್ಥೆಯಾಗಿದೆ. ಪಾಂಡವಪುರ ಎಪಿಎಂಸಿ ಅಭಿವೃದ್ಧಿಗೆ ಸರ್ಕಾರದಿಂದ 4 ಕೋಟಿ ಹಣ ಬಿಡುಗಡೆ ಮಾಡಿಸಿ ಕೊಡುವಂತೆ ಆಡಳಿತ…

ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಡುಗಡ್ಡೆಯಲ್ಲಿ ಸಿಲುಕಿದ್ದ ಮತ್ತೊಬ್ಬನ ರಕ್ಷಣೆ
ಮಂಡ್ಯ

ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ, ನಡುಗಡ್ಡೆಯಲ್ಲಿ ಸಿಲುಕಿದ್ದ ಮತ್ತೊಬ್ಬನ ರಕ್ಷಣೆ

July 15, 2018

ಮಂಡ್ಯ:  ಕೆಆರ್‌ಎಸ್‌ನಿಂದ ಹೆಚ್ಚು ವರಿ ನೀರು ಬಿಟ್ಟ ಬೆನ್ನಲ್ಲೇ ಅಪಾಯಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಯುವಕರಿಬ್ಬರ ಪೈಕಿ ಓರ್ವ ರಕ್ಷಿಸಲ್ಪಟ್ಟು, ಮತ್ತೊಬ್ಬ ಕೊಚ್ಚಿ ಹೋಗಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಚಂದ್ರವನ ಆಶ್ರಮ ಸಮೀಪದ ಗೂಳಿತಿಟ್ಟು ಬಳಿ ಇಂದು ಸಂಜೆ 5 ಗಂಟೆ ಯಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಮಹಾದೇವ ಬಿನ್ ವೆಂಕಟಯ್ಯ (28) ಎಂಬ ಯುವಕನನ್ನೇ ರಕ್ಷಿಸಲಾಗಿದ್ದು ಮತ್ತೊಬ್ಬನ ಮಾಹಿತಿ ತಿಳಿದು ಬಂದಿಲ್ಲ. ಕಾವೇರಿ ನದಿಯಲ್ಲಿ ನೀರು ಹೆಚ್ಚಳವಾದ ಪರಿಣಾಮ…

ಕೆ.ವಿ.ರಾಮೇಗೌಡರಿಗೆ ಪೂನಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ
ಮಂಡ್ಯ

ಕೆ.ವಿ.ರಾಮೇಗೌಡರಿಗೆ ಪೂನಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

July 15, 2018

ಮಂಡ್ಯ:  ಪತ್ರಿಕಾ ಕ್ಷೇತ್ರದಲ್ಲಿ 51 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ರುವ ಮಂಡ್ಯದ ಕೆ.ವಿ. ರಾಮೇಗೌಡರಿಗೆ ಪೂನಾ ಶಾಂತಿ ಶಿಕ್ಷಣ, ವಾಸ್ತವಿಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪೂನಾದ ಮೌಲಾನ ಅಬ್ದುಲ್ ಕಲಾಂ ಅಜಾದ್ ಭವನದಲ್ಲಿ ಶನಿವಾರ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳು ರಾಮೇಗೌಡ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಿದರು. ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮದ ರಾಮೇಗೌಡ ಅವರು ಅಂಗವೈಕಲ್ಯದಿಂದ ಬಳಲುತ್ತಿದ್ದರು. ಬಾಲ್ಯದಲ್ಲೇ ತಂದೆ ಕಳೆದುಕೊಂಡು ಎಸ್‍ಎಸ್‍ಎಲ್‍ಸಿವರೆಗೆ ವ್ಯಾಸಂಗ…

ಶ್ರವಣಬೆಳಗೊಳ ಮಾರ್ಗ ರಸ್ತೆ ದುರಸ್ತಿಗೆ ವರ್ತಕರ ಆಗ್ರಹ
ಮಂಡ್ಯ

ಶ್ರವಣಬೆಳಗೊಳ ಮಾರ್ಗ ರಸ್ತೆ ದುರಸ್ತಿಗೆ ವರ್ತಕರ ಆಗ್ರಹ

July 15, 2018

ಕೆ.ಆರ್.ಪೇಟೆ:  ಪಟ್ಟಣದ ಬಸವೇಶ್ವರ ವೃತ್ತದಿಂದ ಶ್ರವಣಬೆಳಗೊಳಕ್ಕೆ ಹೋಗುವ ನಡು ರಸ್ತೆಯಲ್ಲಿ ಕೊಳೆತು ನಾರುತ್ತಿರುವ ಮಳೆ ನೀರಿನಿಂದ ಸಾರ್ವ ಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಹೀಗಾಗಿ ತಕ್ಷಣ ರಸ್ತೆ ದುರಸ್ತಿಗೆ ಕ್ರಮ ವಹಿಸ ಬೇಕೆಂದು ಆಗ್ರಹಿಸಿ ಸದರಿ ರಸ್ತೆಯ ವರ್ತಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕಳೆದ 3 ತಿಂಗಳ ಹಿಂದೆ ಈ ರಸ್ತೆಯನ್ನು ದುರಸ್ಥಿ ಮಾಡಲಾಗಿತ್ತು. ಈ ವೇಳೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತೆ ಯಿಂದ ಗುತ್ತಿಗೆದಾರರು ಮನಬಂದಂತೆ ರಸ್ತೆ ದುರಸ್ಥಿ ಮಾಡಿದ್ದಾರೆ. ಆದರೆ ಮಳೆ…

ಶ್ರೀರಂಗಪಟ್ಟಣದಲ್ಲಿ ಹಾಡಹಗಲೇ ಪುಡಿರೌಡಿಗಳ ಹಟ್ಟಹಾಸ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹಾಡಹಗಲೇ ಪುಡಿರೌಡಿಗಳ ಹಟ್ಟಹಾಸ

July 15, 2018

ಮಂಡ್ಯ:  ಹಾಡಹಗಲೇ ಪುಡಿರೌಡಿಗಳ ತಂಡವೊಂದು ರಾಡು, ಲಾಂಗ್, ಬಾಟಲಿಗಳನ್ನಿಡಿದು ದಾಳಿ ಮಾಡಿ ಮೂವರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ. ಭರತ್, ಚಂದ್ರು, ಸತ್ಯನಾರಾಯಣ ಎಂಬುವವರೇ ತೀವ್ರ ಗಾಯಗೊಂಡವರು. ಹಿನ್ನೆಲೆ: ಪಟ್ಟಣದ ಮುಖ್ಯರಸ್ತೆಯ ಕೋಟೆದ್ವಾರದ ಎದುರಿನ ಮೀನಿನ ಅಂಗಡಿ ಯಲ್ಲಿ ಕೆಲಸ ಮಾಡುತ್ತಿದ್ದ ಮೂವರ ಮೇಲೆ ದುಷ್ಕರ್ಮಿಗಳು ದಿಢೀರ್ ದಾಳಿ ನಡೆಸಿ ಮೀನಿನ ಅಂಗಡಿಯೊಳಗಿದ್ದ ರವಿ ಅವರ ಮಗ ಭರತ್‍ನಿಗೆ ರಾಡಿನಿಂದ ಹೊಡೆದು ಬಾಟಲಿಯಿಂದ ಚುಚ್ಚಿದ್ದಾರೆ. ತಪ್ಪಿಸಿಕೊಳ್ಳಲು ಓಡುತ್ತಿದ್ದ ಮತ್ತೊಬ್ಬ ರಾಮಚಂದ್ರ ಅವರ…

ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನುವಾರುಗಳ ರಕ್ಷಣೆ
ಮಂಡ್ಯ

ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನುವಾರುಗಳ ರಕ್ಷಣೆ

July 15, 2018

ಭಾರತೀನಗರ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 20 ಜಾನು ವಾರುಗಳನ್ನು ಶನಿವಾರ ಕೆ.ಎಂ.ದೊಡ್ಡಿ ಪೊಲೀಸರು ರಕ್ಷಿಸಿ, ಇಬ್ಬರನ್ನು ಬಂಧಿಸಿದ್ದಾರೆ.ಹೊಳೆನರಸೀಪುರದ ಮೂಲದ ಚಾಲಕ ಸಯ್ಯದ್ ರಿಜ್ವ್ವಾನ್(25), ಕ್ಲೀನರ್ ನೂರ್ ಅಹಮದ್ (52) ಬಂಧಿತ ಆರೋಪಿಗಳು. ವಿವರ: ಶನಿವಾರ ಮುಂಜಾನೆ ಹೊಳೆ ನರಸೀಪುರದಿಂದ ಟೆಂಪೋದಲ್ಲಿ ಅಕ್ರಮ ವಾಗಿ 20 ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ವಿಚಾರ ತಿಳಿದ ಪ್ರಾಣಿದಯಾ ಸಂಘದವರು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಟೆಂಪೋವನ್ನು ಹಿಂಬಾಲಿಸಿಕೊಂಡು ಬಂದ ಪ್ರಾಣಿದಯಾ ಸಂಘದ ಜೋಶಾಹಿ ತಂಡ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಗೆ…

1 82 83 84 85 86 108
Translate »