ಮಂಡ್ಯ

ಪೂರ್ವಿಕರಿಂದ ಮಳೆ ನೀರು ಸಂಗ್ರಹ ತಂತ್ರಜ್ಞಾನ ಪರಿಚಯ
ಮಂಡ್ಯ

ಪೂರ್ವಿಕರಿಂದ ಮಳೆ ನೀರು ಸಂಗ್ರಹ ತಂತ್ರಜ್ಞಾನ ಪರಿಚಯ

July 15, 2018

ಮೇಲುಕೋಟೆ: ನಮ್ಮ ಪೂರ್ವಿಕರು ಮಳೆ ನೀರು ಸಂಗ್ರಹ ತಂತ್ರ ಜ್ಞಾನವನ್ನು ಮೇಲುಕೋಟೆ ಕಲ್ಯಾಣಿಗಳ ನಿರ್ಮಾಣದ ಮೂಲಕ ಶತಮಾನಗಳ ಹಿಂದೆಯೇ ನಮಗೆ ತೋರಿಸಿ ಕೊಟ್ಟಿದ್ದಾರೆ ಎಂದು ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ರಾಮ ರಾಜು ತಿಳಿಸಿದರು. ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಆವರಣದಲ್ಲಿ ಡಿಎಸ್‍ಸಿಇ ಸಮುದಾಯ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ನೀರು ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ನಾವು ಮಳೆ…

ಮಂಡ್ಯದಲ್ಲಿ ಲಾಕಪ್ ಡೆತ್
ಮಂಡ್ಯ, ಮೈಸೂರು

ಮಂಡ್ಯದಲ್ಲಿ ಲಾಕಪ್ ಡೆತ್

July 14, 2018

ಮಂಡ್ಯ: ಬೈಕ್ ಕಳ್ಳತನ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿ ಅನುಮಾನಾಸ್ಪದ ರೀತಿ ಠಾಣೆ ಯಲ್ಲೇ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೂಲತಃ ಮದ್ದೂರು ತಾಲೂಕಿನ ಬೆಳ್ತೂರು ಗ್ರಾಮದ ನಿವಾಸಿ ಬೆಟ್ಟಯ್ಯ ಎಂಬುವವರ ಪುತ್ರ ಮೂರ್ತಿ(45) ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ ಆರೋಪಿ. ಕಳೆದ ಸೋಮವಾರ ಬೈಕ್ ಕಳ್ಳತನ ಆರೋಪದ ಮೇಲೆ ನಗರದ ಪಶ್ಚಿಮ ಠಾಣೆಯ ಪೊಲೀಸರು ಈತನನ್ನು ಬಂಧಿಸಿ, ಕರೆದುಕೊಂಡು ಬಂದಿದ್ದರು. ಆದರೆ ಇಂದು ಬೆಳಿಗ್ಗೆ ಠಾಣೆಯ ಬಾತ್‍ರೂಂನಲ್ಲೇ ನೇಣು ಬಿಗಿದ…

ಜಿಲ್ಲೆಯ ವಿವಿಧೆಡೆ ಸರಣಿ ಪ್ರತಿಭಟನೆ: ಸಾಲಮನ್ನಾಕ್ಕಾಗಿ ರೈತರು, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಉಚಿತ ಬಸ್‍ಪಾಸ್‍ಗೆ ವಿದ್ಯಾರ್ಥಿಗಳ ಆಗ್ರಹ
ಮಂಡ್ಯ

ಜಿಲ್ಲೆಯ ವಿವಿಧೆಡೆ ಸರಣಿ ಪ್ರತಿಭಟನೆ: ಸಾಲಮನ್ನಾಕ್ಕಾಗಿ ರೈತರು, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಉಚಿತ ಬಸ್‍ಪಾಸ್‍ಗೆ ವಿದ್ಯಾರ್ಥಿಗಳ ಆಗ್ರಹ

July 14, 2018

ಮಂಡ್ಯ:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು, ಸ್ತ್ರೀಶಕ್ತಿ ಸಂಘದ ಕಾರ್ಯಕರ್ತರು, ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲೆಯ ವಿವಿಧೆಡೆ ಸರಣಿ ಪ್ರತಿಭಟನೆ ನಡೆಸಿದರು. ಮಂಡ್ಯ, ಮದ್ದೂರು, ನಾಗಮಂಗಲ ಸೇರಿದಂತೆ ವಿವಿಧೆಡೆ ರೈತಸಂಘ ಮತ್ತು ಸ್ತ್ರೀಶಕ್ತಿ ಸಂಘದ ಮಹಿಳೆ ಯರು ಸಾಲಮನ್ನಾಕ್ಕೆ, ವಿದ್ಯಾರ್ಥಿಗಳು ಉಚಿತ ಬಸ್‍ಪಾಸ್‍ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ಮಂಡ್ಯ ವರದಿ, ಮೆರವಣಿಗೆ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ ಹಾಗೂ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯದ…

ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ
ಮಂಡ್ಯ

ನಾಳೆ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಪುಣ್ಯಸ್ಮರಣೆ

July 14, 2018

ಪಾಂಡವಪುರ:  ಬೇಬಿಬೆಟ್ಟದ ಶ್ರೀರಾಮಯೋಗಿಶ್ವರ ಮಠದ ಪೀಠಾಧ್ಯಕ್ಷ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮ ಜು.15 ರಂದು ಮಠದ ಆವರಣದಲ್ಲಿ ನಡೆಯಲಿದೆ ಎಂದು ಮಠದ ಕಿರಿಯ ಶ್ರೀಗಳಾದ ಶ್ರೀಗುರು ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಿಂಗೈಕ್ಯ ಸದಾಶಿವ ಸ್ವಾಮೀಜಿಗಳು ಸಾಕಷ್ಟು ಧರ್ಮ ಪ್ರಚಾರ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಜಾತಿ-ಭೇದ, ಮೇಲುಕೀಳು, ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಧಾರ್ಮಿಕ ಪ್ರಚಾರ ಮಾಡಿ ಜನರ ಪ್ರೀತಿ ಗಳಿಸಿದ್ದರು. ಅವರ ಅಗಲಿಕೆ ನೋವುಂಟು ಮಾಡಿದೆ ಎಂದರು….

ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುಗಡೆ: ನದಿ ತೀರದ ಜನರಿಗೆ ಮುನ್ನೆಚ್ಚರಿಕೆ
ಮಂಡ್ಯ

ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುಗಡೆ: ನದಿ ತೀರದ ಜನರಿಗೆ ಮುನ್ನೆಚ್ಚರಿಕೆ

July 14, 2018

ಮಂಡ್ಯ: ಡ್ಯಾಂ ಮತ್ತು ನದಿಗಳ ಸನಿಹದಲ್ಲಿರುವ ಜನರೆ ಎಚ್ಚರವಾಗಿರಿ. ನಿರಂತರ ಭಾರೀ ಮಳೆಯಿಂದಾಗಿ ಕಾವೇರಿ ನದಿ ಹರಿಯುವ ಡ್ಯಾಂಗಳು ಭರ್ತಿಯಾಗಿದೆ. ಶನಿವಾರ ಅಥವಾ ಭಾನುವಾರ ಜಲಾಶಯಗಳ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಈಗಾಗಲೇ ಕೆಆರ್‌ಎಸ್‌, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಯಾವುದೇ ಸಮಯದಲ್ಲಿ ಡ್ಯಾಂ ನಿಂದ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ. ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಲಿದ್ದು, ವಿಶೇಷವಾಗಿ ರಾಮನಗರ, ಮಂಡ್ಯ, ಹಾಸನ ಹಾಗೂ ಮೈಸೂರಿನ ಕೆಲ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ….

ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳು
ಮಂಡ್ಯ

ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳು

July 14, 2018

ಕೆ.ಆರ್.ಪೇಟೆ: ಮದ್ಯಪಾನದಿಂದ ಸಂಸಾರದ ನೆಮ್ಮದಿ ಹಾಳಾಗಲಿದ್ದು, ಹಣವೂ ವ್ಯರ್ಥವಾಗಲಿದೆ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ಸಿಂಧುಘಟ್ಟ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಪ್ರಗತಿ ಬಂಧು ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಮ್ಮಿ ಕೊಂಡಿದ್ದ ರಾಜ್ಯಮಟ್ಟದ 1223ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮದ್ಯಪಾನ, ಬೀಡಿ-ಸಿಗರೇಟು, ಗುಟ್ಕಾ, ಗಾಂಜಾ ಸೇರಿದಂತೆ ಮಾದಕ ವಸ್ತುಗಳಿಂದ ಪ್ರತಿಯೊಬ್ಬರೂ ದೂರವಿರಬೇಕು….

ಟ್ರ್ಯಾಕ್ಟರ್ ಅಡಿ ಸಿಲುಕಿ ನಿವೃತ್ತ ಡಿಸಿ ನಾಗರಾಜು ಸಾವು
ಮಂಡ್ಯ, ಮೈಸೂರು

ಟ್ರ್ಯಾಕ್ಟರ್ ಅಡಿ ಸಿಲುಕಿ ನಿವೃತ್ತ ಡಿಸಿ ನಾಗರಾಜು ಸಾವು

July 13, 2018

ಮಂಡ್ಯ: ಜಮೀನು ಉಳುಮೆ ಮಾಡುತ್ತಿದ್ದಾಗ ಟ್ರ್ಯಾಕ್ಟರ್ ಅಡಿ ಸಿಲುಕಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಜಿ ಕಮೀಷ್ನರ್ ಆಗಿದ್ದ ನಿವೃತ್ತ ಜಿಲ್ಲಾಧಿಕಾರಿ ಎಸ್. ಎನ್.ನಾಗರಾಜು (62) ಅವರು ಇಂದು ಬೆಳಿಗ್ಗೆ ಪಾಂಡವಪುರ ತಾಲೂಕು ದೊಡ್ಡ ಬ್ಯಾಡರಹಳ್ಳಿಯಲ್ಲಿ ಸಾವನ್ನಪ್ಪಿದ್ದಾರೆ. ಮೂಲತಃ ರೈತರ ಮಗನಾಗಿದ್ದ ನಾಗರಾಜು, ಹುಟ್ಟೂರಿಗೆ ತೆರಳಿ ತಮ್ಮ ಜಮೀನಿನಲ್ಲಿ ತಾವೇ ಬೇಸಾಯ ಮಾಡಿಕೊಂಡು ನಿವೃತ್ತಿ ಜೀವನ ನಡೆಸುತ್ತಿದ್ದರು. ಮಾವು, ಸಪೋಟ, ತೆಂಗು, ಪರಂಗಿ ಬೆಳೆಯನ್ನು ಸಮೃದ್ಧವಾಗಿ ಬೆಳೆದು `ಪ್ರಗತಿ ಪರ ರೈತ’ ಎನಿಸಿಕೊಂಡಿದ್ದರು. ತಾವೇ ಟ್ರ್ಯಾಕ್ಟರ್ ನಲ್ಲಿ…

3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್
ಮಂಡ್ಯ

3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್

July 13, 2018

ಮಂಡ್ಯ:  ಜೀವನದಿ ಕಾವೇರಿ ಉಗಮತಾಣ ಕೊಡಗಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಇನ್ನೆರಡು ದಿನಗಳಲ್ಲೇ ಅಣೆಕಟ್ಟೆ ಭರ್ತಿಯಾಗುವ ಸಾಧ್ಯತೆ ಇದೆ.! ಕಳೆದ 3 ವರ್ಷಗಳಿಂದ ಬರದಿಂದಾಗಿ ಜಲಾಶಯ ಭರ್ತಿಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗುತ್ತಿರುವುದು ಕಾವೇರಿಕೊಳ್ಳದ ರೈತರಲ್ಲಿ ಸಂತಸ ತಂದಿದೆ. ಇದರಿಂದಾಗಿ ಜಲಾಶಯ ತುಂಬುವ ಶುಭ ಘಳಿಗೆಗಾಗಿ ಜನರು ಕಾತರರಾಗಿದ್ದಾರೆ. 124.80 ಅಡಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ…

ಮೇಲುಕೋಟೆ ಸರ್ಕಾರಿ ಬಾಲಕರ ಶಾಲೆ ಬಲವರ್ಧನೆ
ಮಂಡ್ಯ

ಮೇಲುಕೋಟೆ ಸರ್ಕಾರಿ ಬಾಲಕರ ಶಾಲೆ ಬಲವರ್ಧನೆ

July 13, 2018

ಮೇಲುಕೋಟೆ:  ಶತಮಾನಗಳ ಇತಿಹಾಸವಿರುವ ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯನ್ನು ಬಲವರ್ಧನೆಗೊಳಿಸಲಾಗುವುದು ಎಂದು ಬೆಂಗಳೂರು ಲಯನ್ ಕ್ಲಬ್ ಆಪ್ ರಾಯಲ್ ಪ್ಯಾಲೇಸ್ 317 ಎಫ್ ಅಧ್ಯಕ್ಷೆ ಡಾ.ದೀಪಾ ನಾಗರಾಜ್ ತಿಳಿಸಿದರು. ಇಲ್ಲಿನ ಶಾಲಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ಬ್ಯಾಗ್, ಟೈ, ಬೆಲ್ಟ್, ಐಡಿ ಕಾರ್ಡ್, ಲೇಖನ ಸಾಮಗ್ರಿ, ಉತ್ತರ ಪತ್ರಿಕೆಗಳ ಬಂಡಲ್ ವಿತರಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಶಾಲೆ ನವೀಕರಣ ಕಾಮಗಾರಿ ಆರಂಭವಾಗಲಿದ್ದು, ಶತಮಾನದ ಶಾಲೆಯನ್ನು ಜಿಲ್ಲೆಯಲ್ಲೇ ಮಾದರಿ ಶಾಲೆ ಯನ್ನಾಗಿ ಮಾಡಲಾಗುವುದು….

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ರಸ್ತೆ ತಡೆ
ಮಂಡ್ಯ

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹಿಸಿ ರಸ್ತೆ ತಡೆ

July 13, 2018

ಮದ್ದೂರು:  ರೈತರ ಎಲ್ಲಾ ಬಗೆಯ ಕೃಷಿ ಸಾಲ ಹಾಗೂ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ)ದ ಕಾರ್ಯಕರ್ತರು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ತಾಲೂಕಿನ ಶಿವಪುರದಲ್ಲಿ ಹೆದ್ದಾರಿಯಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ರೈತರ ಹಾಗೂ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿ ಮಾತು ತಪ್ಪಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿ ಹೆದ್ದಾರಿ ತಡೆದರು….

1 83 84 85 86 87 108
Translate »