ಮೇಲುಕೋಟೆ ಸರ್ಕಾರಿ ಬಾಲಕರ ಶಾಲೆ ಬಲವರ್ಧನೆ
ಮಂಡ್ಯ

ಮೇಲುಕೋಟೆ ಸರ್ಕಾರಿ ಬಾಲಕರ ಶಾಲೆ ಬಲವರ್ಧನೆ

July 13, 2018

ಮೇಲುಕೋಟೆ:  ಶತಮಾನಗಳ ಇತಿಹಾಸವಿರುವ ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯನ್ನು ಬಲವರ್ಧನೆಗೊಳಿಸಲಾಗುವುದು ಎಂದು ಬೆಂಗಳೂರು ಲಯನ್ ಕ್ಲಬ್ ಆಪ್ ರಾಯಲ್ ಪ್ಯಾಲೇಸ್ 317 ಎಫ್ ಅಧ್ಯಕ್ಷೆ ಡಾ.ದೀಪಾ ನಾಗರಾಜ್ ತಿಳಿಸಿದರು.

ಇಲ್ಲಿನ ಶಾಲಾವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ಬ್ಯಾಗ್, ಟೈ, ಬೆಲ್ಟ್, ಐಡಿ ಕಾರ್ಡ್, ಲೇಖನ ಸಾಮಗ್ರಿ, ಉತ್ತರ ಪತ್ರಿಕೆಗಳ ಬಂಡಲ್ ವಿತರಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಶಾಲೆ ನವೀಕರಣ ಕಾಮಗಾರಿ ಆರಂಭವಾಗಲಿದ್ದು, ಶತಮಾನದ ಶಾಲೆಯನ್ನು ಜಿಲ್ಲೆಯಲ್ಲೇ ಮಾದರಿ ಶಾಲೆ ಯನ್ನಾಗಿ ಮಾಡಲಾಗುವುದು. ಗುಣಮಟ್ಟದ ಶೌಚಾಲಯ ಬ್ಲಾಕ್, ಭೋಜನಶಾಲೆ, ಪ್ಲಾಸ್ಟಿಂಗ್ ಮತ್ತು ಪೈಂಟಿಂಗ್ ಹೀಗೆ ಎಲ್ಲಾ ಕಾರ್ಯವನ್ನು ಮಾಡಿ ಕೊಡಲಾಗುವುದು. ಜೊತೆಗೆ ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಗೆ ಆದ್ಯತೆ ನೀಡಲಾಗು ವುದು. ಮಕ್ಕಳು ಮತ್ತು ಪೋಷಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲಯನ್ ಡಾ.ಗೀತಾ, ಮಕ್ಕಳು ಸಮಾನವಾಗಿ ಬೆರೆತು ಗುಣಾತ್ಮಕ ಶಿಕ್ಷಣ ಪಡೆಯಲು ಆಧುನಿಕ ಸೌಲಭ್ಯಗಳನ್ನು ನೀಡಲಾಗುತ್ತದೆ. ಉಚಿತ ಪ್ರವಾಸಕ್ಕೂ ಸಹ ಅಗತ್ಯ ಸಹ ಕಾರ ನೀಡಲಾಗುತ್ತದೆ. ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಿಕ್ಷಕರ ಪಾತ್ರ ದೊಡ್ಡದು ಎಂದರು.

ಜಿಪಂ ಮಾಜಿ ಸದಸ್ಯ ಹೆಚ್.ಮಂಜುನಾಥ್ ಮಾತನಾಡಿ, ಶಾಲೆಯ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಜಿಪಂ ವತಿಯಿಂದ 2ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಲಾಗು ವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಮಕ್ಕಳ ಪೋಷಕರಿಗೆ ಒಂದೊಂದು ತೆಂಗಿನ ಸಸಿ ವಿತರಿಸುವ ಮೂಲಕ ಪರಿಸರ ಪ್ರಜ್ಞೆ ಮೂಡಿಸಲಾಯಿತು. ಬಳಿಕ ಶಾಲಾವರಣದಲ್ಲೂ ತೆಂಗಿನ ಸಸಿಗಳನ್ನು ನೆಡಲಾಯಿತು. ಇಂಡಿಯನ್ ಆಯಿಲ್ ವಿತರಕಿ ಶೋಭಾ, ಶಾಲಾ ಅಕ್ಷರ ದಾಸೋಹದ ಅಡುಗೆ ಮನೆಗೆ ಮಿಕ್ಸರ್ ಗ್ರೈಂಡರ್ ಕೊಡುಗೆ ನೀಡುವ ಸಲುವಾಗಿ ಲಯನ್ಸ್ ಅಧ್ಯಕ್ಷರಿಗೆ ಸಹಾಯಧನ ನೀಡಿದರು.

ಸಮಾರಂಭದಲ್ಲಿ ಲಯನ್ ಶಿವಕುಮಾರ್, ನಾಗರನವಿಲೆ ಲಯನ್ ಡಾ.ಗೀತಾ, ಲಯನ್ ಡಾ. ಸಿಂಹಶಾಸ್ತ್ರೀ, ಲಯನ್ ಶಿವಕುಮಾರ್, ಲಯನ್ ಶಿವಪ್ರಕಾಶ್, ಡಾ. ಪ್ರದೀಪ್, ಲಯನ್ ಮುಕುಂದ ಐಯ್ಯಂಗಾರ್, ಕುಮಾರ ಸ್ವಾಮಿ, ಶಶಾವಿಕ್ಷೇಮಂ ಅಧ್ಯಕ್ಷ ಸಾಹಿತಿ ಸಿಂಹ, ಗ್ರಾಪಂ ಸದಸ್ಯರಾದ ಅವ್ವ ಗಂಗಾಧರ್, ರಾಜೇಶ್, ಬಲರಾಮೇಗೌಡ, ಎಸ್‍ಡಿಎಂಸಿ ಅಧ್ಯಕ್ಷ ಎಂ.ಬಿ.ಚೆಲುವೇಗೌಡ, ಕನಗೋನಹಳ್ಳಿ ಪರಮೇಶ್ವರ್‍ಗೌಡ, ಮಾಜಿ ಅಧ್ಯಕ್ಷ ವೆಂಕಟೇಶ್, ಶಿಕ್ಷಕರಾದ ಮಹಾಲಕ್ಷ್ಮಿ, ಜಯಂತಿ ಮತ್ತಿತರರಿದ್ದರು.

Translate »