ಕೆ.ವಿ.ರಾಮೇಗೌಡರಿಗೆ ಪೂನಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ
ಮಂಡ್ಯ

ಕೆ.ವಿ.ರಾಮೇಗೌಡರಿಗೆ ಪೂನಾ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

July 15, 2018

ಮಂಡ್ಯ:  ಪತ್ರಿಕಾ ಕ್ಷೇತ್ರದಲ್ಲಿ 51 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ರುವ ಮಂಡ್ಯದ ಕೆ.ವಿ. ರಾಮೇಗೌಡರಿಗೆ ಪೂನಾ ಶಾಂತಿ ಶಿಕ್ಷಣ, ವಾಸ್ತವಿಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪೂನಾದ ಮೌಲಾನ ಅಬ್ದುಲ್ ಕಲಾಂ ಅಜಾದ್ ಭವನದಲ್ಲಿ ಶನಿವಾರ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳು ರಾಮೇಗೌಡ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿ ಗೌರವಿಸಿದರು.

ಕೆ.ಆರ್.ಪೇಟೆ ತಾಲೂಕಿನ ಕೊಮ್ಮೇನಹಳ್ಳಿ ಗ್ರಾಮದ ರಾಮೇಗೌಡ ಅವರು ಅಂಗವೈಕಲ್ಯದಿಂದ ಬಳಲುತ್ತಿದ್ದರು. ಬಾಲ್ಯದಲ್ಲೇ ತಂದೆ ಕಳೆದುಕೊಂಡು ಎಸ್‍ಎಸ್‍ಎಲ್‍ಸಿವರೆಗೆ ವ್ಯಾಸಂಗ ಮಾಡಿದ್ದರು. ನಂತರ ಬಸ್ ತಪಾಸಕ, ಕಂಡಕ್ಟರ್ ಆಗಿ ಸೇವೆ ಸಲ್ಲಿಸಿ ನಂತರ ಪತ್ರಿಕೋದ್ಯಮಕ್ಕೆ ಕಾಲಿಟ್ಟರು.

ಪತ್ರಿಕಾ ಮಾರಾಟಗಾರರಾಗಿ, ವಿತರಕರಾಗಿ, ವರದಿಗಾರರಾಗಿ ಕೆಲಸ ನಿರ್ವಹಿಸಿದ್ದರು. ಪತ್ರಿಕೋದ್ಯಮದ ಸುಧೀರ್ಘ ಸೇವೆಯನ್ನು ಗುರುತಿಸಿ ಇವರಿಗೆ ಪೂನಾ ಶಾಂತಿ ಶಿಕ್ಷಣ, ವಾಸ್ತವಿಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಡಾಕ್ಟರೇಟ್ ಪದವಿ ಸ್ವೀಕರಿಸಿದ ಕೆ.ವಿ.ರಾಮೇಗೌಡ ಅವರನ್ನು ಕುಟುಂಬದವರು, ಪತ್ರಿಕಾ ಸ್ನೇಹಿತರು ಅಭಿನಂದಿಸಿದ್ದಾರೆ.

Translate »