ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ
ಮಂಡ್ಯ

ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

July 12, 2018

ಪಾಂಡವಪುರ:  ‘ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಆ ಮೂಲಕ ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು.

ತಾಲೂಕಿನ ಕದಲಗೆರೆ ಗ್ರಾಮದಲ್ಲಿ ನೂತನ ಬೋರೆ ದೇವರ ದೇವಸ್ಥಾನ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಠಾಪನ ಮಹೋತ್ಸವ ಉದ್ಘಾಟಿಸಿ ಅವರು ಮಾತ ನಾಡಿದರು. ಮೇಲುಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಪ್ರಾಧಿಕಾರ ವನ್ನು ರಚಿಸಿ ಕ್ಷೇತ್ರದ ಅಭಿವೃದ್ಧಿ ಪಡಿಸಲಾಗುವುದು. ಜೊತೆಗೆ, ಕ್ಷೇತ್ರದ ಎಲ್ಲಾ ಕಲ್ಯಾಣ ಗಳನ್ನು ಸಣ್ಣ ನೀರಾವರಿ ಇಲಾಖೆಯಿಂದಲೇ ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಜಕ್ಕನಹಳ್ಳಿ ವೃತ್ತದಲ್ಲಿ ಆಸ್ಪತ್ರೆ, ಬಸ್ ನಿಲ್ದಾಣದ ಜೊತೆಗೆ ವೃತ್ತವನ್ನು ವಾಣಿಜ್ಯ ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಕನಸು ಹೊತ್ತಿದ್ದೇನೆ. ಜಕ್ಕನಹಳ್ಳಿಯಲ್ಲಿ ರೈತರಿಗೆ ಅನುಕೂಲವಾಗುವಂತೆ ಕೋಲ್ಡ್ ಸ್ಟೋರೇಜ್‍ನ್ನು ತೆರೆಯಲು ಯೋಜನೆ ರೂಪಿಸಿದ್ದೇನೆ. ನೀರಾವರಿ ವಂಚಿತ ಪ್ರದೇಶವಾಗಿರುವ ಮೇಲುಕೋಟೆ, ಬಳಘಟ್ಟ ಪಂಚಾಯಿತಿಗೆ ಏತನೀರಾವರಿ ಕಲ್ಪಿಸಿ ಕೃಷಿಗೆ ಅನುಕೂಲ ಮಾಡಿಕೊಡಲಾಗುವುದು. ಕದಲಗೆರೆ ಕೆರೆ ಹಾಗೂ ನಾಗರಕಟ್ಟೆ ಕೆರೆಯನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ 34 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡುವ ಮೂಲಕ ರೈತ ಪರವಾದ ಸರ್ಕಾರ ಎಂಬುದನ್ನು ಸಾಬೀತು ಮಾಡಿದ್ದಾರೆ. ಆದರೆ, ಇದನ್ನು ಸಹಿಸದ ಕೆಲವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಸಾಲ ಮನ್ನಾ ದಿಂದ ಹೆಚ್ಚು ಒಕ್ಕಲಿಗರಿಗೆಯೇ ಅನುಕೂಲವಾಗಿದೆ ಎನ್ನುವ ರೀತಿ ಬಿಂಬಿಸುತ್ತಿದ್ದಾರೆ. ನನ್ನ ಪ್ರಕಾರ ಒಕ್ಕಲು ತನ ಮಾಡುವ ಪ್ರತಿಯೊಬ್ಬ ರೈತನೂ ಕೂಡ ಒಕ್ಕಲಿಗನೆ. ಸಾಲ ಮನ್ನಾದಿಂದ ರಾಜ್ಯದ ಎಲ್ಲಾ ವರ್ಗದ ಜನರಿಗೂ ಅನುಕೂಲವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಹೇಮಲತಾ, ಸದಸ್ಯ ಕೆ.ಎಸ್.ನಾರಾಯಣ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕರಾದ ಅಶ್ವಥ್‍ಕುಮಾರಗೌಡ, ಕೆ.ಎಚ್.ಪುಟ್ಟ ಸ್ವಾಮಿ, ವಿಎಸ್‍ಎಸ್‍ಎನ್‍ಬಿ ಅಧ್ಯಕ್ಷ ಕೆ.ಎಸ್. ಜಯರಾಮು, ಮುಖಂಡರಾದ ಎಂ.ಬಿ. ಶ್ರೀನಿವಾಸ್, ಪುಟ್ಟೇಗೌಡ, ಅನಿಲ್‍ಕುಮಾರ್, ಜೆ.ಪಿ.ಶಿವಶಂಕರ್, ದಾಸೇಗೌಡ, ಕುಮಾರ್, ಬೆಟ್ಟಸ್ವಾಮಿಗೌಡ, ಕಾಳಮರೀಗೌಡ, ಜಯಚಂದ್ರ, ದೇವರಾಜು, ರಾಜಣ್ಣ, ನವೀನ, ಮೇಲು ಕೋಟೆ ಗಂಗಾ, ಯ.ಕೆಂಪೇಗೌಡ ಹಾಜರಿದ್ದರು.

Translate »