ತ್ರಿವೇಣಿ ಸಂಗಮದಲ್ಲಿ ಶೆಡ್‍ಗಳ ತೆರವು ಖಂಡಿಸಿ ಪ್ರತಿಭಟನೆ
ಮಂಡ್ಯ

ತ್ರಿವೇಣಿ ಸಂಗಮದಲ್ಲಿ ಶೆಡ್‍ಗಳ ತೆರವು ಖಂಡಿಸಿ ಪ್ರತಿಭಟನೆ

July 10, 2018

ಶ್ರೀರಂಗಪಟ್ಟಣ:  ಪಟ್ಟಣದ ಹೊರವಲಯದ ತ್ರಿವೇಣಿ ಸಂಗಮದಲ್ಲಿ ರೈತರು ತಮ್ಮ ಜಮೀನುಗಳಲ್ಲಿ ನಿರ್ಮಿಸಿ ಕೊಂಡಿದ್ದ ಶೆಡ್‍ಗಳನ್ನು ತಾಲೂಕು ಆಡಳಿತ ತೆರವು ಮಾಡಿರುವ ಕ್ರಮ ಖಂಡಿಸಿ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ರೈತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪಟ್ಟಣದ ಮಿನಿವಿಧಾನಸೌಧದ ಎದುರು ಸೋಮವಾರ ಜಮಾಯಿಸಿದ ಗಂಜಾಂನ ಹಾಗೂ ಸಂಗಮ್‍ನ ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳು ಆರ್‍ಐ ದೊಡ್ಡಯ್ಯ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ರಮೇಶ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಸಂಗಮ್‍ನಲ್ಲಿ ಅಸ್ಥಿ ವಿಸರ್ಜನೆಗೆ ಸಂಬಂಧಿ ಸಿದಂತೆ ಸುಳ್ಳು ಆರೋಪ ಮಾಡಿ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಶಾಸಕ ರವೀಂದ್ರರ ಕುಮ್ಮಕ್ಕಿನಿಂದ ತಾಲೂಕು ಆಡಳಿತದ ಮೇಲೆ ಒತ್ತಡ ತಂದು ಸ್ಥಳೀಯ ರೈತರ ಜಮೀನಿನ ದನಕರುಗಳ ಶೆಡ್‍ಗಳನ್ನು ತೆರವುಗೊಳಿ ಸಲಾಗಿದೆ ಎಂದು ಆರೋಪಿಸಿದರು.

ಸಂಗಂನಲ್ಲಿ ನಡೆಯುತ್ತಿದ್ದ ಅಸ್ಥಿ ವಿಸರ್ಜನೆ ಪಿಂಡ ಪ್ರಧಾನದಂತಹ ಧಾರ್ಮಿಕ ಕ್ರಿಯೆ ಗಳನ್ನು ನಡೆಸದಂತೆ ತಡೆ ಒಡ್ಡಿರುವುದು ಸರಿಯಿಲ್ಲ. ಜನತೆ ಧಾರ್ಮಿಕ ನಂಬಿಕೆಯಿಂದ ಪಟ್ಟಣದ ಕಾವೇರಿ ತೀರಕ್ಕೆ ಜಾತಿ ಧರ್ಮಗಳ ಭೇದವಿಲ್ಲದೆ ಆಗಮಿಸಿ ತಮ್ಮ ಧಾರ್ಮಿಕ ಕ್ರಿಯೆ ಗಳನ್ನು ನಡೆಸುತ್ತಾರೆ. ಇದಕ್ಕೂ ರಾಜಕೀಯ ಬೆರಸಿ ಸಣ್ಣತನ ತೋರುವುದು ಸರಿಯಲ್ಲ ಎಂದರು.

ಧಾರ್ಮಿಕ ವಿಧಿ ವಿಧಾನ ನಡೆಸಲು ಅವಕಾಶ ನೀಡಬೇಡಿ ಎಂದು ರಾಜ್ಯ ಸರ್ಕಾರ ಜಿಲ್ಲಾ ಡಳಿತಕ್ಕೆ ಆದೇಶ ನೀಡಿದ್ದರೆ ಅದನ್ನು ಬಹಿ ರಂಗಪಡಿಸಲಿ, ನೂರಾರು ಆಟೋ ಚಾಲಕರು, ಅಂಗಡಿ ವ್ಯಾಪಾರಿಗಳು, ಕೂಲಿಕಾರರು, ಬ್ರಾಹ್ಮಣ ರಂತಹ ನೂರಾರು ಕುಟುಂಬಗಳಿಗೆ ಆಶ್ರ್ರಯ ವಾಗಿರುವ ಈ ಜಾಗದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಅಡ್ಡಿಪಡಿಸಿರುವುದು ಸರಿಯಲ್ಲ ಎಂದು ಅವರು ಆಕ್ರೋಶವ್ಯಕ್ತಪಡಿಸಿದರು.

ಬಲೂನ್ ಸ್ಫೋಟ ಪ್ರಕರಣದಲ್ಲಿ ಸುಳ್ಳು ಆರೋಪ: ಶಾಸಕರು ಬಲೂನ್ ಸ್ಫೋಟ ನಡೆದಾಗ ಆ ಮಕ್ಕಳ ಪೋಷಕರಿಗೆ ಸಹಾಯ ಮಾಡಲಿಲ್ಲ. ಚುನಾವಣೆಯಲ್ಲಿ ಗೆದ್ದ ಸಾಕಷ್ಟು ದಿನಗಳ ಬಳಿಕ ಮಾಧ್ಯಮಗಳ ಮುಂದೆ ಆರ್ಥಿಕ ಸಹಾಯ ಮಾಡಿ ಪ್ರಚಾರ ಪಡೆದು ಕೊಳ್ಳುತ್ತಿದ್ದಾರೆ. ಘಟನೆ ದಿನ ನಾನು ತಕ್ಷಣ ಸ್ಪಂದಿಸಿ ಸರ್ಕಾರಿ ಆಸ್ಪತ್ರೆಯಿಂದ ಮೈಸೂರಿನ ಖಾಸಗಿ ಆಸ್ಪತ್ರೆ ರವಾನಿಸಿ ಅಗತ್ಯ ಚಿಕಿತ್ಸೆ ಕೊಡಿಸಿದ್ದೇನೆ. ಸಹಾಯ ಮಾಡಿದ್ದನ್ನು ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ ಅದಕ್ಕೆಲ್ಲಾ ನನ್ನ ಬಳಿ ದಾಖಲೆಗಳಿವೆ. ಸುಳ್ಳು ಆರೋಪಗಳನ್ನು ಹೊರಿಸಿ ನನ್ನ ಚಾರಿತ್ರ್ಯ ವಧೆ ಮಾಡುವುದನ್ನು ಅವರು ನಿಲ್ಲಿಸಲಿ ಎಂದರು.

ಆರ್‍ಐ ದೊಡ್ಡಯ್ಯನ ಮೇಲೆ ಕ್ರಮ ಕೈಗೊಳ್ಳಿ: ತಾಲೂಕಿನ ಕಂದಾಯ ರಾಜಸ್ವ ನೀರಿಕ್ಷಕ ದೊಡ್ಡಯ್ಯ ಹಲವು ವರ್ಷಗಳಿಂದ ಇಲ್ಲೇ ಕಾರ್ಯ ನಿರ್ವಹಿಸುತ್ತಿದ್ದು, ಈತನ ಮೇಲೆ ಹಲವು ಆರೋಪ, ಪ್ರಕರಣಗಳು ದಾಖಲಾಗಿವೆ. ಕ್ಷೇತ್ರದ ಜನರ ವಿರೋಧದ ನಡುವೆಯೂ ತನ್ನ ಅಧಿಕಾರದಿಂದ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದು, ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಹಶೀಲ್ದಾರ್ ಡಿ.ನಾಗೇಶ್‍ಗೆ ಮನವಿ ನೀಡಿದರು.

ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯರಾದ ಎಂ.ಎಲ್.ದಿನೇಶ್, ಶ್ರೀಕಂಠು, ಟಿಎಪಿಸಿ ಎಂಎಸ್ ನಿರ್ದೇಶಕ ಚಂದ್ರಶೇಖರ್, ರೈತ ಬಾಲಸುಬ್ರಮಣ್ಯ, ಮರಿಲಿಂಗೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

Translate »