ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಜನರಿಂದ ಪುಣ್ಯಸ್ನಾನ
ಮೈಸೂರು

ತ್ರಿವೇಣಿ ಸಂಗಮದಲ್ಲಿ ಲಕ್ಷಾಂತರ ಜನರಿಂದ ಪುಣ್ಯಸ್ನಾನ

February 19, 2019

ತಿ.ನರಸೀಪುರ: ದಕ್ಷಿಣಕಾಶಿ ತಿ.ನರಸೀಪುರದಲ್ಲಿ ನಡೆಯು ತ್ತಿರುವ 11ನೇ ಕುಂಭ ಮೇಳದ 2ನೆ ದಿನ ವಾದ ಸೋಮವಾರ ಲಕ್ಷಾಂತರ ಸಂಖ್ಯೆಯ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಪುನೀತ ಭಾವದಲ್ಲಿ ಮಿಂದೆದ್ದರು.

ಉತ್ತರ ಭಾರತದ ಮಾದರಿಯಲ್ಲಿ 3 ವರ್ಷಕ್ಕೊಮ್ಮೆ ತಿ.ನರಸೀಪುರದಲ್ಲಿ ಕಾವೇರಿ, ಕಪಿಲ ಹಾಗೂ ಗುಪ್ತಗಾಮಿನಿ ಸ್ಫಟಿಕ ಸರೋ ವರ ಕೂಡುವ ತ್ರಿವೇಣಿ ಸಂಗಮದಲ್ಲಿ ವೈಭವಯುತ ಕುಂಭಮೇಳ ಆಚರಿಸ ಲಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರ, ತಮಿಳುನಾಡು, ತೆಲಂಗಾಣ, ಕೇರಳ ಸೇರಿ ದಂತೆ ವಿವಿಧ ರಾಜ್ಯಗಳಿಂದಲೂ ಸಹಸ್ರ ಸಂಖ್ಯೆಯ ಭಕ್ತರು ಈ ಧಾರ್ಮಿಕ ಉತ್ಸವ ದಲ್ಲಿ ಪಾಲ್ಗೊಳ್ಳುತ್ತಾರೆ. ಮಾಘ ಮಾಸದ ಹುಣ್ಣಿಮೆಗಿಂತ ಎರಡು ದಿನ ಮುನ್ನ ಆರಂಭವಾಗಿರುವ ಕುಂಭ ಮೇಳ ಭಕ್ತಿ ಭಾವದ ಸಂಚಲನ ಮೂಡಿಸುತ್ತದೆ. ಇಂದು ಬೆಳಿಗ್ಗೆ ಕಡಿಮೆಯಿದ್ದ ಭಕ್ತರ ಸಂಖ್ಯೆ ಮಧ್ಯಾಹ್ನದ ವೇಳೆಗೆ ಹೆಚ್ಚಾಯಿತು. ಸಂಜೆ ಯಾಗುತ್ತಿದ್ದಂತೆ ಭಕ್ತರು ಸಾಗರೋಪಾದಿ ಯಲ್ಲಿ ಹರಿದು ಬಂದರು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ನಂತರ, ಅಗಸ್ತ್ಯೇಶ್ವರ, ಗುಂಜಾನರಸಿಂಹ ಸ್ವಾಮಿ, ಆನಂದೇಶ್ವರ ಸೇರಿದಂತೆ ವಿವಿಧ ದೇವಾ ಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಕಳೆದೆರಡು ದಿನಗಳಲ್ಲಿ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಂಡಿದ್ದು, ಹುಣ್ಣಿಮೆ ದಿನ ಶುಭ ಮುರ್ಹೂತದಲ್ಲಿ ಪುಣ್ಯ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕಡೆಯ ದಿನವಾದ ಮಂಗಳವಾರ ನೂಕು ನುಗ್ಗಲು ಉಂಟಾಗುವ ಸಾಧ್ಯತೆಯಿದೆ. ಹಾಗಾಗಿ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಕಾಲೇಜು ವಿದ್ಯಾರ್ಥಿಗಳ ಸಂಭ್ರಮ: ಒಂದೆಡೆ ಸಾಧು-ಸಂತರು, ಹಿರಿಯ ನಾಗರಿಕರು, ಪುರುಷರು, ಮಹಿಳೆಯರು ತ್ರಿವೇಣಿ ಸಂಗಮದಲ್ಲಿ ಭಕ್ತಿಯಿಂದ ಸ್ನಾನ ಮಾಡಿ ದೇವರಿಗೆ ನಮಿಸುತ್ತಿದ್ದರೆ, ಮತ್ತೊಂ ದೆಡೆ ವಿವಿಧ ಕಾಲೇಜುಗಳ ವಿದ್ಯಾರ್ಥಿ ಗಳು ತಂಡೋಪ ತಂಡವಾಗಿ ಆಗಮಿಸಿ ನೀರಿನಲ್ಲಿ ಮಿಂದೆದ್ದು ಸಂಭ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಸ್ವಚ್ಛತೆ ಬಗ್ಗೆ ಜಾಗೃತಿ: ಇಂದು ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಪೊಲೀಸರು ಧ್ವನಿ ವರ್ಧಕದ ಮೂಲಕ ಜೇಬು, ಸರ ಗಳ್ಳರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜಾಗೃತಿ ಮೂಡಿಸುತ್ತಿದ್ದರು. ಅಲ್ಲದೆ ನದಿ ಯಲ್ಲಿ ಸ್ನಾನ ಮಾಡುವಾಗ ಜೋಪಾನ ವಾಗಿ ಇರುವಂತೆ, ಸ್ನಾನದ ವೇಳೆ ಸೋಪು, ಶಾಂಪು ಬಳಸದಂತೆ, ಬಟ್ಟೆ ಇನ್ನಿತರ ವಸ್ತುಗಳನ್ನು ನದಿಯಲ್ಲಿ ಬಿಡದಂತೆ, ಹೆಚ್ಚು ಸಮಯ ನೀರಿನಲ್ಲಿ ಇರದೆ ಬೇರೆ ಯವರಿಗೂ ಸ್ಥಳಾವಕಾಶ ಕಲ್ಪಿಸುವಂತೆ ಮನವಿ ಮಾಡುತ್ತಿದ್ದರು.

Translate »