ತ್ರಿವೇಣಿ ಸಂಗಮದಲ್ಲಿ ಸಂತರ ಪುರಪ್ರವೇಶ ಸಂಭ್ರಮ
ಮೈಸೂರು

ತ್ರಿವೇಣಿ ಸಂಗಮದಲ್ಲಿ ಸಂತರ ಪುರಪ್ರವೇಶ ಸಂಭ್ರಮ

February 19, 2019

ತಿ.ನರಸೀಪುರ: ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವ 11ನೇ ಕುಂಭಮೇಳದ ಎರಡನೇ ದಿನವಾದ ಸೋಮವಾರ ಮಹಾತ್ಮರು, ಸಂತರ ಪುರ ಪ್ರವೇಶ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಪಟ್ಟಣದ ಶ್ರೀಗುಂಜಾನರಸಿಂಹಸ್ವಾಮಿ ದೇವಾ ಲಯ ದಿಂದ ಆರಂಭಗೊಂಡ ಮಹಾಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ ಮೆರವಣಿಗೆ ವಿಶ್ವಕರ್ಮ ಬೀದಿ, ಪ್ರಾಥಮಿಕ ಶಾಲೆ ರಸ್ತೆ, ಭಗವಾನ್ ವೃತ್ತ, ಲಿಂಕ್ ರಸ್ತೆ, ಜೋಡಿ ರಸ್ತೆ, ಸೇತುವೆ ಮಾರ್ಗವಾಗಿ ಸಂಗಮದ ಸ್ಥಳಕ್ಕೆ ತಲುಪಿತು.

ಆದಿಚುಂಚನಗಿರಿ ಮೈಸೂರು ಶಾಖಾಮಠದ ಶ್ರೀ ಸೋಮೇ ಶ್ವರ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶಿವಾನಂದ ಪುರಿ ಸ್ವಾಮೀಜಿ, ಚುಂಚನಕಟ್ಟೆಯ ಶಿವಾನಂದ ಸ್ವಾಮೀಜಿ, ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾ ನಿಲ ಯದ ಮಾತೆಯರು, ಪಟ್ಟಣದ ದೊರೆಸ್ವಾಮೀಜಿ, ಚಂದ್ರ ಶೇಖರ್ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳಿಂದ ಆಗ ಮಿಸಿದ್ದ ಕಿರಿಯ ಸ್ವಾಮೀಜಿಗಳು ಹಾಗೂ ಬಾಲ ಸ್ವಾಮೀಜಿ ಗಳು ಭಾಗವಹಿಸಿದ್ದರು. ಶ್ರೀ ಮಹೇಶ್ವರರ ಮೂರ್ತಿ ಪ್ರತಿ ಷ್ಠಾಪಿತ ರಥದ ಹಿಂದೆ ಸಂತರಿದ್ದ ರಥಗಳು ಸಾಗಿದವು. ನಂದಿಕಂಬ, ಡೊಳ್ಳು ಕುಣಿತ, ವೀರಗಾಸೆ, ಕೀಲು ಕುದುರೆ, ಮರಗಾಲು, ಪೂಜಾ ಕುಣಿತ, ಕಂಸಾಳೆ, ಜಾನಪದ ಕುಣಿತ, ಬೆಂಕಿ ವರಸೆ ಸೇರಿದಂತೆ ವಿವಿಧ ಕಲಾ ತಂಡ ಗಳು ಮೆರವಣಿಗೆಯ ಮೆರಗು ಹೆಚ್ಚಿಸಿದ್ದವು. ಮಾರ್ಗ ದುದ್ದಕ್ಕೂ ಸಹಸ್ರಾರು ಭಕ್ತರು ನಿಂತು ಪುರಪ್ರವೇಶ ಉತ್ಸವವನ್ನು ಕಣ್ತುಂಬಿಕೊಂಡರು.

ಹಿರಿಯ ಶ್ರೀಗಳ ಗೈರು: ಮಹಾತ್ಮರ ಪುರ ಪ್ರವೇಶದಲ್ಲಿ ಸಾಮಾನ್ಯವಾಗಿ ಸುತ್ತೂರು, ಆದಿ ಚುಂಚನಗಿರಿ, ಓಂಕಾರಾಶ್ರಮ ಕೈಲಾಸ ಆಶ್ರಮ ಸೇರಿದಂತೆ ವಿವಿಧ ಮಠಮಾನ್ಯಗಳ ಹಿರಿಯ ಶ್ರೀಗಳು ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಬಹುತೇಕ ಎಲ್ಲಾ ಮಠಗಳ ಹಿರಿಯ ಶ್ರೀಗಳು ಗೈರಾಗಿದ್ದರು. ಶಾಖಾ ಮಠಗಳ ಸ್ವಾಮೀಜಿಗಳೊ ಡನೆ ಕೆಲವು ಮಠಗಳ ಕಿರಿಯಶ್ರೀಗಳು ಪಾಲ್ಗೊಂಡಿದ್ದರು.

Translate »