ಮೈಸೂರು: ಉತ್ತರ ಭಾರತದಲ್ಲಿ ಗಂಗಾ ನದಿಯಂತೆ ದಕ್ಷಿಣ ಭಾರತದಲ್ಲಿ ಕಾವೇರಿ ನದಿ ಪುಣ್ಯ ಸ್ನಾನ ಮಾಡಲು ಅರ್ಹ ಎಂದು ಶ್ರೀ ಲಗಧ ಮಹರ್ಷಿ ಜ್ಯೌತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ಬಿ. ಅಮ ರೇಶ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ತಿ.ನರಸೀಪುರದ ಶ್ರೀ ಕ್ಷೇತ್ರ ತಿರುಮ ಕೂಡಲುವಿನಲ್ಲಿ ನಡೆಯುತ್ತಿರುವ 11ನೇ ಕುಂಭ ಮೇಳದ ಧಾರ್ಮಿಕ ಸಭೆಯಲ್ಲಿ ಸೋಮವಾರ ಬೆಳಿಗ್ಗೆ ಮಾಘ ಸ್ನಾನದ ಮಹತ್ವ ಕುರಿತು ಮಾತನಾಡಿದರು.
ಎಲ್ಲರೂ ಮಹಾತ್ಮರಲ್ಲ, ಹಾಗೇ ಎಲ್ಲಾ ನದಿಗಳು ಸಹ ತೀರ್ಥ ಕ್ಷೇತ್ರಗಳಲ್ಲ. ಪ್ರತಿ ಯೊಂದು ಮಾಸಕ್ಕೂ ತನ್ನದೇ ಆದ ಮಹತ್ವ ವಿದೆ. ಪುಣ್ಯ ಸ್ನಾನ ಮಾಡುವುದಕ್ಕೂ ಮಾಸ ವಿದೆ. ಆ ಮಾಸದಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗಲಿದೆ. ಪುಣ್ಯ ಸ್ನಾನಕ್ಕೆ ಹೇಗೆ ಉತ್ತರದಲ್ಲಿ ಗಂಗಾ ನದಿ ಮೀಸ ಲಾಗಿದೆಯೋ, ಹಾಗೆ ದಕ್ಷಿಣದಲ್ಲಿ ಪುಣ್ಯ ಸ್ಥಾನಕ್ಕೆ ಕಾವೇರಿ ನದಿ ಇದೆ. ನರಸೀಪುರದ ಈ ತ್ರಿವೇಣಿ ಸಂಗಮ ಪುಣ್ಯ ಸ್ನಾನಕ್ಕೆ ಅರ್ಹವಾದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳು ಮಾಘ ಮಾಸದಲ್ಲಿ ಪುಣ್ಯ ಸ್ನಾನ ಮಾಡಿದರೆ ಸಕಲ ದೋಷ ಪರಿ ಹಾರವಾಗಿ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ಪ್ರತೀತಿ ಇದೆ ಎಂದರು.
ಮಾಜಿ ಸಚಿವ ಎನ್.ಮಹೇಶ ಮಾತ ನಾಡಿ, ಭಾರತ ಆಧ್ಯಾತ್ಮ ಕೇಂದ್ರವಾಗಿದೆ. ಇಡೀ ಪ್ರಪಂಚಕ್ಕೆ ಭಾರತ ಆಧ್ಯಾತ್ಮ ಸಂದೇಶವನ್ನು ಸಾರಿದೆ. ಎಲ್ಲಾ ಆಧ್ಯಾತ್ಮಿಕ ಸಾಧಕರು ಆತ್ಮ ಮತ್ತು ಪರಮಾತ್ಮ ಒಂದೇ ಎಂದು ನಂಬಿದ್ದಾರೆ. ತಿರುಮಕೂಡಲು ನರಸೀಪುರದಲ್ಲಿ ನಡೆಯುತ್ತಿರುವ ಕುಂಭ ಮೇಳ ಮಹತ್ವ ಪಡೆದಿದೆ. ಒಂದೆಡೆ ಶೈವ ಪರಂಪರೆಯ ದೇವಾಲಯ ಮತ್ತೊಂ ದೆಡೆ ವೈಷ್ಣವ ಪರಂಪರೆ ದೇವಾಲಯ ವಿದೆ. ಭಕ್ತರು ಎರಡೂ ಪರಂಪರೆಯ ದೇವಾ ಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಪುಣ್ಯ ಸ್ನಾನ ಮಾಡುವ ಮೂಲಕ ಅದ್ವೈತ ಭಾವನೆ ವ್ಯಕ್ತಪಡಿಸಿದ್ದಾರೆ. ಮೇಲು- ಕೀಳು ಎಂದರೆ ಅದು ಆಧ್ಯಾತ್ಮವಾಗಲ್ಲ. ರಾಜಕೀಯ ವಾಗು ತ್ತದೆ. ಆದ್ದರಿಂದ ಆಧ್ಯಾತ್ಮದ ಕಡೆ ಎಲ್ಲರೂ ಒಲವು ತೋರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಗಿನೆಲೆಯ ಕನಕ ಗುರುಪೀಠದ ಶ್ರೀ ಶಿವಾನಂದ ಪುರಿ ಸ್ವಾಮೀಜಿ, ಆದಿ ಚುಂಚನ ಗಿರಿ ಶಾಖಾ ಮಠದ ಶ್ರೀ ಸೋಮೇಶ್ವರ ನಾಥ ಸ್ವಾಮೀಜಿ, ಬೆನಕನಹಳ್ಳಿ ಭಕ್ತಕನದಾಸ ಮಠದ ಶ್ರೀ ದೊರೆ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ಶಾಂತಾನಂದ ಸ್ವಾಮೀಜಿ, ಮಂಡ್ಯದ ವೆಂಕ ಟಪ್ಪ ಸ್ವಾಮೀಜಿ, ಮೂಗೂರು ಮಠದ ಶಿವಾನಂದ ಸ್ವಾಮೀಜಿ, ಸಿದ್ದರೂಢ ಮಠದ ಮಾತಾಜಿ ವೇದಾವತಿ, ಶಾಸಕರಾದ ಡಾ. ಯತೀಂದ್ರ, ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್, ಪುರಸಭಾ ಸದಸ್ಯರಾದ ಟಿ.ಎಂ. ನಂಜುಂಡ ಸ್ವಾಮಿ, ಎಲ್.ಮಂಜುನಾಥ್, ಎನ್.ಸೋಮಣ್ಣ, ಪಿ.ಮರಯ್ಯ, ಆಲ ಗೂಡು ನಾಗರಾಜು, ಜಯಪಾಲ್ ಭರಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.