ದೇಶದಲ್ಲಿನ ಉಗ್ರರ ಮೊದಲು ಮಟ್ಟ ಹಾಕಿ
ಮೈಸೂರು

ದೇಶದಲ್ಲಿನ ಉಗ್ರರ ಮೊದಲು ಮಟ್ಟ ಹಾಕಿ

February 19, 2019

ತಿ.ನರಸೀಪುರ: ದೇಶದ ಒಳಗಿರುವ ಉಗ್ರವಾದವನ್ನು ಮೊದಲು ಮಟ್ಟ ಹಾಕಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಕುಂಭಮೇಳದಲ್ಲಿ ಪಾಲ್ಗೊಳ್ಳಲು ಆಗ ಮಿಸಿದ್ದ ಅವರು ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿ, ಪಾಕಿಸ್ತಾನ ಜಾಗತಿಕ ಉಗ್ರ ರಾಷ್ಟ್ರ ಎಂದು ಘೋಷಿಸುವುದು ನಮ್ಮ ಕೈಯ್ಯ ಲಿಲ್ಲ. ಘೋಷಿಸುವಂತೆ ನಾವು ಶಿಫಾರಸ್ಸು ಮಾಡಬಹುದಷ್ಟೇ. ಬೇರೆ ಬೇರೆ ರಾಷ್ಟ್ರ ಗಳಿಗೆ ಈ ಸಂಬಂಧ ಮನವಿ ಮಾಡ ಬಹುದು. ಇದಕ್ಕಿಂತ ಮುಖ್ಯವಾಗಿ ಉಗ್ರ ರಿಂದ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಪಾಕಿಸ್ತಾನ ವನ್ನು ಉಗ್ರ ರಾಷ್ಟವಾಗಿ ಘೋಷಿಸುವುದು ಒಂದು ಕಡೆ ಇರಲಿ. ದೇಶದ ಒಳಗೆ ಇರುವ ಉಗ್ರವಾದವನ್ನು ಮೊದಲು ಮಟ್ಟ ಹಾಕಬೇಕು ಎಂದು ತಿಳಿಸಿದರು.

ಔರಾದ್ಕರ್ ವರದಿ: ಪೊಲೀಸ್ ಸೌಲ ಭ್ಯಕ್ಕೆ ಸಂಬಂಧಿಸಿದ ಔರಾದ್ಕರ್ ವರದಿ ಜಾರಿಗೊಳಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿ ಸಿದ ಅವರು, ಆ ವರದಿ ಬಗ್ಗೆ ಅಧಿಕಾರಿ ಗಳೇ ಗೊಂದಲದಲ್ಲಿದ್ದಾರೆ. ಗೊಂದಲ ವಿದ್ದರೆ ಸರಿಪಡಿಸಿ ಕೊಡುವಂತೆ ಅಧಿಕಾರಿ ಗಳಿಗೆ ಸೂಚನೆ ಕೊಟ್ಟಿದ್ದೇನೆ. ನಾನು ವರದಿ ಜಾರಿಗೊಳಿಸಲು ಸಿದ್ದನಿದ್ದೇನೆ. ಪೆÇಲೀಸ್ ಸಿಬ್ಬಂದಿಗಳಿಗೆ ಈ ಬಗ್ಗೆ ಯಾವುದೇ ಆತಂಕ ಬೇಡ. ನನಗೆ ಪೆÇಲೀಸ್ ಸಿಬ್ಬಂದಿ ಗಳ ಮೇಲೆ ವಿಶೇಷ ಕಾಳಜಿ ಇದೆ ಎಂದು ಭರವಸೆ ಅವರು ನೀಡಿದರು.

ಸೀಟು ಹಂಚಿಕೆ: ಲೋಕಸಭಾ ಚುನಾ ವಣೆಯಲ್ಲಿ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರ ಸ್ವಾಮಿ ಅವರು, ನಾನು ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಆಡಳಿತದ ಹೊಣೆ ಹೊತ್ತಿದ್ದೇನೆ. ನಾನು ಆಡಳಿತ ನಡೆಸುವ ಬಗ್ಗೆ ಹೆಚ್ಚು ಗಮನ ಕೊಡುತ್ತೇನೆ. ಸೀಟು ಹಂಚಿಕೆ ವಿಚಾರವನ್ನು ನಮ್ಮ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರು ನೋಡಿ ಕೊಳ್ಳುತ್ತಾರೆ. ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿ ನಿರ್ಧರಿಸುತ್ತಾರೆ ಎಂದರು.

ಸ್ಥಳೀಯ ನಿರ್ಧಾರ: ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತ ನಾಡಿ, ಸ್ಥಳಿಯವಾಗಿ ಹಲವು ಒಪ್ಪಂದ ಗಳು ಆಗಿರುತ್ತವೆ. ಮೊನ್ನೆ ಉತ್ತರ ಕರ್ನಾ ಟಕದ ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ನೇಹಿತರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಇಲ್ಲು ಅದೇ ರೀತಿ ಆಗಿರಬಹುದು. ಆದರೆ ನನ್ನ ಗಮನಕ್ಕೆ ಬಂದಿಲ್ಲ. ಅದ ನ್ನೆಲ್ಲಾ ಪಕ್ಷದ ಸ್ಥಳಿಯರೇ ನೋಡಿ ಕೊಳ್ಳುತ್ತಾರೆ ಎಂದರು.

Translate »