ಮೈಸೂರು: ಅರಿವು ಸಂಸ್ಥೆ ವತಿಯಿಂದ ಇಂದು ನಗರದ ನಂಜುಮಳಿಗೆ ವೃತ್ತದ ಸುತ್ತಮುತ್ತ ಮನೆ-ಮನೆಗೆ ತೆರಳಿ ತಾಂಬೂಲ, ಹಣ್ಣು, ಹೂವು ಮತ್ತು ಕುಂಕುಮ ನೀಡಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕರಪತ್ರವನ್ನು ನೀಡುವು ದರ ಮೂಲಕ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಹರ್ಷಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತೇಜಸ್ ಶಂಕರ್ ಮಾತನಾಡಿ, ಪ್ರಜಾತಂತ್ರ ದೇಶದಲ್ಲಿ ಮತದಾನ ಪ್ರಮುಖ ಹಕ್ಕಾಗಿದೆ. ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ಬದಲಾವಣೆಯ ಧ್ವನಿ. ಇದು ನಮಗೆ ಕೊಟ್ಟಿರುವ ಹಕ್ಕಾಗಿದೆ….
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಮಾಜಿ ಯೋಧ ಪಿ.ಕೆ.ಬಿದ್ದಪ್ಪ ಕರ್ನಾಟಕ ಪ್ರಜಾ ಪಾರ್ಟಿ ಅಭ್ಯರ್ಥಿ
March 24, 2019ಮೈಸೂರು: ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ಗೆ ಕೇಂದ್ರ ಚುನಾವಣಾ ಆಯೋಗ `ಹೊಲಿಗೆ ಯಂತ್ರ’ವನ್ನು ಚಿಹ್ನೆಯಾಗಿ ನೀಡಿದೆ ಎಂದು ತಿಳಿಸಿದ ಪಕ್ಷದ ಸಂಸ್ಥಾಪಕ ಹಾಗೂ ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಡಾ.ಬಿ. ಶಿವಣ್ಣ, ಇದೇ ವೇಳೆ ಮಾಜಿ ಸೈನಿಕ ಪಿ.ಕೆ.ಬಿದ್ದಪ್ಪ ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಚಿಹ್ನೆ ಇರುವ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 2018ರ ಮೇ ತಿಂಗಳಲ್ಲಿ…
ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಲು `ಸಿ-ವಿಜಿಲ್’ ಆ್ಯಪ್
March 24, 2019ಮೈಸೂರು: ಚುನಾವಣೆ ವೇಳೆ ಹಣ, ಮದ್ಯ ಸೇರಿದಂತೆ ಆಮಿಷ ವೊಡ್ಡುವುದು, ಬೆದರಿಕೆ ಹಾಕುವುದು ಹಾಗೂ ರಾಜಕೀಯ ಪಕ್ಷಗಳ ಕಾರ್ಯ ಕರ್ತರಿಗೆ ಮೂಗುದಾರ ಹಾಕಲು ಇದೇ ಮೊದಲ ಬಾರಿ ಚುನಾವಣಾ ಆಯೋಗ `ಆ್ಯಪ್’ವೊಂದನ್ನು ರೂಪಿಸಿದ್ದು, ಈ ಮೂಲಕ ತ್ವರಿತಗತಿಯಲ್ಲಿ ಆಯೋಗ ಕ್ರಮ ಕೈಗೊಳ್ಳಲಿದೆ. ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಕೇಂದ್ರ ಚುನಾವಣಾ ಆಯೋಗ ಅಕ್ರಮ ತಡೆಗೆ ದೇಶದಾದ್ಯಂತ `ಸಿ-ವಿಜಿಲ್’ ಆ್ಯಪ್ ಬಿಡುಗಡೆ ಮಾಡಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಯಾಚನೆ ವೇಳೆ ನಡೆಸುವ ಅಕ್ರಮ ಗಳ…
ಯಡಿಯೂರಪ್ಪ ವಿರುದ್ಧ `ಡೈರಿ’ ಅಸ್ತ್ರ: ಕಾಂಗ್ರೆಸ್ ನವದ್ವಾರಕ್ಕೆ ಬೀಗ
March 24, 2019ಮೈಸೂರು: ಕಾಂಗ್ರೆಸ್‍ನ ಪ್ರಮುಖ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಬಿಡುಗಡೆ ಮಾಡಿದ್ದ ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾ ಟಕ ಮತ್ತು ಗೋವಾ ವಲಯದ ಡಿಜಿ ಬಿ.ಆರ್.ಬಾಲಕೃಷ್ಣ ಸ್ಪಷ್ಟಪಡಿಸುವ ಮೂಲಕ ಕಾಂಗ್ರೆಸ್ ನವರ ನವದ್ವಾರ ಗಳಿಗೂ ಫೆವಿಕಾಲ್ ಹಾಕಿ ದಂತಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಗೋ. ಮಧುಸೂದನ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂ ರಪ್ಪನವರು ಸ್ವಹಸ್ತಾಕ್ಷರದಲ್ಲಿ ಬರೆದಿರುವ…
ಪ್ರಾಮಾಣಿಕತೆ ಸೋಲಿಸಿ ನರಕ ಸೃಷ್ಟಿಸುವ ನಾಯಕರ ಆಯ್ಕೆ ಬೇಡ
March 24, 2019ಮೈಸೂರು:ಮೈಸೂರಿನ ಪ್ರಜ್ಞಾವಂತ ಮತದಾರರೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕತೆ (ಪ್ರಧಾನಿ ಮೋದಿ)ಯನ್ನು ಸೋಲಿಸಿ, ನರಕವನ್ನೇ ಕೃತಕ ವಾಗಿ ಸೃಷ್ಟಿಸುವ ಮಹಾಘಟಬಂಧನ್ ನಾಯಕರ ಆಡಳಿತವನ್ನು ಆಯ್ಕೆ ಮಾಡಿಕೊಳ್ಳ ಬೇಡಿ ಎಂದು ಹಿರಿಯ ರಂಗಕರ್ಮಿ ಹಾಗೂ ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಸ್.ಎನ್.ಸೇತುರಾಮ್ ಸಲಹೆ ನೀಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ನಾದ ಬ್ರಹ್ಮ ಸಭಾಂಗಣದಲ್ಲಿ ನಮೋ ಭಾರತ್ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ `ಮೋದಿ ವರ್ಸಸ್ ಮಹಾಘಟ ಬಂಧನ್’ ಕುರಿತಾದ ವಿಶೇಷ ಉಪ ನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು….
ದಲಿತರ ನಿಜವಾದ ಶತ್ರು ಬಿಎಸ್‍ಪಿ
March 24, 2019ಮೈಸೂರು: ಜಾತ್ಯಾ ತೀತ ಹಾಗೂ ದಲಿತ ಸಮುದಾಯದ ಮತ ಗಳನ್ನು ಒಡೆಯುವ ಸಂಚಿನಲ್ಲಿ ಬಿಜೆಪಿ ಹಾಗೂ ಬಿಎಸ್‍ಪಿ ರಹಸ್ಯ ಒಪ್ಪಂದ ಮಾಡಿ ಕೊಂಡಿವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರಗುರು ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್, ಕರ್ನಾಟಕ ರಾಜ್ಯ ಪ್ರಗತಿಪರ ಚಿಂತ ಕರ ವೇದಿಕೆ ಹಾಗೂ ಸಂವಿಧಾನ ಸಂರ ಕ್ಷಣಾ ಹೋರಾಟ ಸಮಿತಿ ಸಂಯುಕ್ತಾ ಶ್ರಯದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ದಲಿತರ…
ಇಂದು ಕಾಂಗ್ರೆಸ್ ಪಟ್ಟಿ ಪ್ರಕಟ
March 23, 2019ರಾಹುಲ್ ನೇತೃತ್ವದಲ್ಲಿ ದೆಹಲಿಯಲ್ಲಿ ಶುಕ್ರವಾರ ಇಡೀ ದಿನ ಸರಣಿ ಸಭೆ-ಚರ್ಚೆ ಕರ್ನಾಟಕದ 13 ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮ; 7 ಕ್ಷೇತ್ರ ನಿರ್ಧಾರ ಗೊಂದಲ ಖರ್ಗೆ, ಖಂಡ್ರೆ, ಮುನಿಯಪ್ಪ, ಮೊಯ್ಲಿ, ಧ್ರುವನಾರಾಯಣ್‍ಗೆ ಟಿಕೆಟ್ ಖಚಿತ ನವದೆಹಲಿ: ಕರ್ನಾಟಕದಲ್ಲಿನ ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೆ ಹೋಗಿದೆ. ಶುಕ್ರವಾರ ಕರ್ನಾಟಕದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದ ಕೈ ಪಾಳಯ, ಶನಿವಾರಕ್ಕೆ ಮುಂದೂಡಿದೆ. ಶುಕ್ರವಾರ ಇಡೀ ದಿನ ನವ ದೆಹಲಿಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್…
ಹಾಸನದಲ್ಲಿ ಪ್ರಜ್ವಲ್ ನಾಮಪತ್ರ ಸಲ್ಲಿಕೆ
March 23, 2019ಹಾಸನ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಶುಕ್ರವಾರ ಅಪಾರ ಬೆಂಬಲಿಗರು, ಕಾರ್ಯಕರ್ತರೊಂದಿಗೆ ನಗರದ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮಧ್ಯಾಹ್ನ 12.35ರಲ್ಲಿ ತೆರಳಿ ಜಿಲ್ಲಾ ಚುನಾವಣಾಧಿಕಾರಿಗಳು ಆದ ಜಿಲ್ಲಾಧಿಕಾರಿ ಅಕ್ರಂಪಾಷ ಅವರಿಗೆ ನಾಮಪತ್ರ ಸಲ್ಲಿಸಿದರು. ಪ್ರಜ್ವಲ್‍ರೊಂದಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಇದ್ದರು. ಈ ವೇಳೆ ಸಿಎಂ…
ಬೆಂಗಳೂರು ದಕ್ಷಿಣದಿಂದ ಪ್ರಧಾನಿ ಮೋದಿ ಸ್ಪರ್ಧೆ?
March 23, 2019ಬೆಂಗಳೂರು: ಕರ್ನಾಟಕದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜ್ಯ ನಾಯಕರು ದುಂಬಾಲು ಬಿದ್ದಿರುವ ಬೆನ್ನಲ್ಲೇ, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿ ಈಗಾಗಲೇ ರಾಜ್ಯದ 21 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸದೇ ಇರುವುದು ಮೋದಿ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಬೆಂಗಳೂರು ದಕ್ಷಿಣ…
ನಿಖಿಲ್ ಪ್ರಚಾರ ವಾಹನಕ್ಕೆ ಕೆ.ಆರ್.ಪೇಟೆ ಬಳಿ ಕಲ್ಲೆಸೆತ
March 23, 2019ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅವರ ಪ್ರಚಾರ ವಾಹನಗಳ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿದ್ದು, ಶಾಸಕ ನಾರಾಯಣ ಗೌಡ ಅವರ ಆಪ್ತ ಸಹಾಯಕನ ಕಾರು ಸೇರಿದಂತೆ 3 ಕಾರುಗಳು ಜಖಂಗೊಂಡ ಘಟನೆ ಕೆ.ಆರ್.ಪೇಟೆ ತಾಲೂಕು ಸೋಮನ ಹಳ್ಳಿಯಲ್ಲಿ ಇಂದು ಸಂಜೆ ನಡೆದಿದೆ. ಬೂಕನಕೆರೆಯಲ್ಲಿ ಪ್ರಚಾರ ಮುಗಿಸಿ ನಿಖಿಲ್ ಕುಮಾರ್ ಪ್ರಚಾರ ವಾಹನಗಳು ಸೋಮನಹಳ್ಳಿಗೆ ಬಂದಾಗ ಸುಮಾರು 20ರಿಂದ 30 ಜನರಿದ್ದ ಗುಂಪು `ಗೋ ಬ್ಯಾಕ್ ನಿಖಿಲ್’…










