ಪ್ರಾಮಾಣಿಕತೆ ಸೋಲಿಸಿ ನರಕ  ಸೃಷ್ಟಿಸುವ ನಾಯಕರ ಆಯ್ಕೆ ಬೇಡ
ಮೈಸೂರು

ಪ್ರಾಮಾಣಿಕತೆ ಸೋಲಿಸಿ ನರಕ  ಸೃಷ್ಟಿಸುವ ನಾಯಕರ ಆಯ್ಕೆ ಬೇಡ

March 24, 2019

ಮೈಸೂರು:ಮೈಸೂರಿನ ಪ್ರಜ್ಞಾವಂತ ಮತದಾರರೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಾಮಾಣಿಕತೆ (ಪ್ರಧಾನಿ ಮೋದಿ)ಯನ್ನು ಸೋಲಿಸಿ, ನರಕವನ್ನೇ ಕೃತಕ ವಾಗಿ ಸೃಷ್ಟಿಸುವ ಮಹಾಘಟಬಂಧನ್ ನಾಯಕರ ಆಡಳಿತವನ್ನು ಆಯ್ಕೆ ಮಾಡಿಕೊಳ್ಳ ಬೇಡಿ ಎಂದು ಹಿರಿಯ ರಂಗಕರ್ಮಿ ಹಾಗೂ ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಸ್.ಎನ್.ಸೇತುರಾಮ್ ಸಲಹೆ ನೀಡಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯ ನಾದ ಬ್ರಹ್ಮ ಸಭಾಂಗಣದಲ್ಲಿ ನಮೋ ಭಾರತ್ ಮೈಸೂರು ಘಟಕದ ವತಿಯಿಂದ ಆಯೋಜಿಸಿದ್ದ `ಮೋದಿ ವರ್ಸಸ್ ಮಹಾಘಟ ಬಂಧನ್’ ಕುರಿತಾದ ವಿಶೇಷ ಉಪ ನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಘಟಬಂಧನ್ ನಾಯಕರ ಆಡಳಿತ ಬಗ್ಗೆ ಹೇಳುವುದಾದರೆ, ಕಳೆದ 6 ವರ್ಷಗಳಿಂದ ಸಿಲಿಕಾನ್ ಸಿಟಿ ಬೆಂಗ ಳೂರಿನ ರಸ್ತೆಗಳು ರಿಪೇರಿ ಆಗಿಲ್ಲ. ಕಸ ಸಮಸ್ಯೆ ನಿವಾರಿಸಿಲ್ಲ. ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಭಣಗೊಂಡಿದೆ. ಇವೆಲ್ಲಾ ಮಹಾಘಟಬಂಧನ ಸರ್ಕಾರದ ಆಡಳಿತ ವೈಖರಿ. ಬೆಂಗಳೂರಿನ ಹೊಸಕೆರೆಹಳ್ಳಿ ಯಲ್ಲಿ ನಾನು ವಾಸಿಸುತ್ತಿದ್ದೇನೆ. ನಿತ್ಯ ಓಡಾಡುವ ಮಾರ್ಗದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಕಳೆದ 5ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಇಂದಿಗೂ ಆ ಕಾಮಗಾರಿ ಮಂದಗತಿಯಲ್ಲಿ ಸಾಗು ತ್ತಿದೆ. ಆದ್ದರಿಂದ ದೇಶದ ಅಧಿಕಾರದ ಚುಕ್ಕಾಣಿಯನ್ನು ಇಂತಹ ಭ್ರಷ್ಟರ ಕೈಗೆ ನೀಡಬೇಡಿ ಎಂದು ವಿನಂತಿಸಿದರು.

ಪ್ರಧಾನಿ ಮೋದಿ 2016ರ ನವಂಬರ್ ತಿಂಗಳಲ್ಲಿ ಏಕಾಏಕಿ ಅಧಿಕ ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದರು. ಕೇಂದ್ರ ಸರ್ಕಾರದ ಈ ನಿರ್ಧಾರ ನನಗೆ ಆಶ್ಚರ್ಯವಾಯಿತು. ನೋಟ್ ಬ್ಯಾನ್ ನಂತಹ ದೊಡ್ಡ ನಿರ್ಧಾರ ತೆಗೆದು ಕೊಂಡು ಪ್ರಧಾನಿ ಮೋದಿ ಕಾಳ ಧನಿಕರಿಗೆ ಬಿಸಿ ಮುಟ್ಟಿಸಿದರು. ಯಾರು ಕಪ್ಪು ಹಣ ವ್ಯವಹಾರದಲ್ಲಿ ತೊಡಗಿದ್ದರೋ ಅಂತಹ ವರು ಈ ನಿರ್ಧಾರವನ್ನು ವಿರೋಧಿಸಿ ದರು. ಆದರೆ, ಈ ನಿರ್ಧಾರ ಕಳೆದ 20 ವರ್ಷಗಳ ಹಿಂದೆಯೇ ತೆಗೆದುಕೊಳ್ಳ ಬೇಕಿತ್ತು. ಇದರಿಂದ ನಮ್ಮ ದೇಶಕ್ಕೆ ಖೋಟಾ ನೋಟು ಪೂರೈಸುತ್ತಿದ್ದ ವೈರಿ ರಾಷ್ಟ್ರಗಳಿಗೆ ಬಾರೀ ಆಘಾತವಾಗಿದೆ ಎಂದರು.

ಹಲವು ವರ್ಷಗಳಿಂದ ಹಿಂದಿನ ಸರ್ಕಾರ ಗಳ ಕಾರ್ಯವೈಖರಿಯನ್ನು ಗಮನಿಸಿ ದರೆ, ಬಜೆಟ್‍ನಲ್ಲಿ ಪ್ರಾಜೆಕ್ಟ್ ಘೋಷಿಸಿ ಕಾರ್ಯರೂಪಕ್ಕೆ ತರದಿರುವುದು. ಮುಂದಿನ ಬಜೆಟ್‍ನಲ್ಲೂ ಇದನ್ನೇ ಮತ್ತೆ ಘೋಷಿಸುವುದು ಇಲ್ಲಿಯವರೆಗೂ ಪಾಲಿಸಿಕೊಂಡು ಬಂದ ಸಂಪ್ರದಾಯ. ಆದರೆ, ಪ್ರಧಾನಿ ಮೋದಿ, ನೆಹರು ಕಾಲ ದಿಂದ ಇಲ್ಲಿಯವರೆಗೆ ಘೋಷಿಸಿದ್ದ ಆದೆಷ್ಟೋ ಕಾಮಗಾರಿಗಳಿಗೆ ಮುಕ್ತಿ ಕೊಡಿಸಿದ್ದಾರೆ. ಅಲ್ಲದೆ, ದೇಶ ಕಟ್ಟಬೇಕಾದ ಪ್ರತಿಭೆಗಳು ಇಲ್ಲಿನ ವ್ಯವಸ್ಥೆಯನ್ನು ಖಂಡಿಸಿ ವಿದೇಶಕ್ಕೆ ಹೋದರೆ, ಅವರ ಸಮಸ್ಯೆಯನ್ನೇ ಇಲ್ಲಿ ಯವರೆಗೂ ಕೇಳಲಿಲ್ಲ. ಇದು ಮಹಾ ಘಟಬಂಧನ್ ನಾಯಕರ ಕಾರ್ಯ ವೈಖರಿ ಎಂದು ಎಳೆಎಳೆಯಾಗಿ ಬಿಡಿಸಿದರು.

ನಮ್ಮ ಪರಂಪರೆ, ಸಂಸ್ಕøತಿಗೆ ವಿಶ್ವ ಗುರುವಾಗುವ ಎಲ್ಲಾ ಲಕ್ಷಣಗಳಿದ್ದರೂ ಇದನ್ನು ವಿಶ್ವಕ್ಕೆ ಪರಿಚಯಿಸದೇ ಪಾಶ್ಚಿ ಮಾತ್ಯ ಸಂಸ್ಕøತಿಯನ್ನು ಅಪ್ಪಿಕೊಂಡು ನಮ್ಮ ಯುವಪೀಳಿಗೆಯನ್ನು ದಾರಿತಪ್ಪಿ ಸಿದ್ದೇ ಹಿಂದಿನ ಸರ್ಕಾರಗಳ ಸಾಧನೆ. ಅಲ್ಲದೆ, ಹಿಂದಿನ ಸರ್ಕಾರಗಳು ತೆರಿಗೆದಾರ ರನ್ನು ಕಾನೂನು ಮೂಲಕ ಹಿಂಸಿಸಿದರು. ತೆರಿಗೆದಾರರು ಈ ಹಿಂಸೆ ತಾಳಲಾರದೇ, ಕಳ್ಳಮಾರ್ಗವನ್ನು ಹುಡುಕಿಕೊಳ್ಳುವಂತೆ ಮಾಡಿದ್ದೆ ಇವರ ಸಾಧನೆ. ಆದರೆ, ಪ್ರಧಾನಿ ಮೋದಿ ಜಿಎಸ್‍ಟಿ ಮೂಲಕ ದೇಶದ ತೆರಿಗೆ ಪದ್ಧತಿಯಲ್ಲಿ ಅಮೂಲಾಗ್ರ ಬದಲಾವಣೆ ತಂದು ತೆರಿಗೆದಾರರ ನಂಬಿಕೆ ಉಳಿಸಿಕೊಂಡಿರುವುದರಿಂದ ಮತ್ತೊಮ್ಮೆ ಮೋದಿ ಅಧಿಕಾರದಲ್ಲಿ ಮುಂದುವರೆಸೋಣ ಎಂದರು.

ನಮ್ಮ ಶತ್ರು ದೇಶದ ಕುತಂತ್ರಕ್ಕೆ ಎದೆ ಕೊಟ್ಟು ನಿಲ್ಲುವ ಭಾರತೀಯ ಸೇನೆಯನ್ನು ಅವಮಾನಿಸಿ, ಸೈನಿಕರ ಆತ್ಮಸ್ಥೈರ್ಯ ವನ್ನು ಕುಗ್ಗಿಸಿದ ಕೀರ್ತಿ ಮಹಾಘಟ ಬಂದನ್ ನಾಯಕರಿಗೆ ಸಲ್ಲುತ್ತದೆ. ಈ ಚುನಾವಣೆಯಲ್ಲಿ ಅವರನ್ನು ಬೆಂಬಲಿಸು ವುದು ಬೇಡ. ಮಹಾಘಟಬಂಧನ ನಾಯಕರೆಲ್ಲಾ ಒಂದಾಗಿ ಮೋದಿ ವಿರುದ್ಧ ಚುನಾವಣೆ ಎದುರಿಸಲಿ. ಆದರೆ, ಮತ ದಾರರಾದ ನಾವು ಮೋದಿ ಪ್ರಾಮಾ ಣಿಕತೆಯನ್ನು ಬೆಂಬಲಿಸಿ ಮತ್ತೆ ಅಧಿಕಾರದಲ್ಲಿ ಮುಂದುವರೆಸುವುದು ಉತ್ತಮ ಎಂದು ಹೇಳಿದರು.

ನೆಹರು ಅಧಿಕಾರಕ್ಕೆ ಬಂದಾಗ ಬಡತನ ನಿರ್ಮೂಲನೆ, ಬಡವರಿಗೆ ಉಚಿತ ಆರೋಗ್ಯ ಮತ್ತು ಶಿಕ್ಷಣ, ದೇಶದ ಭದ್ರತೆಗೆ ಮೊದಲ ಆದ್ಯತೆ ಎನ್ನುತ್ತಿದ್ದರು. ಈ ಮಾತು ಕಾರ್ಯರೂಪಕ್ಕೆ ತರಲಿಲ್ಲ. ಮಹಾಘಟಬಂಧನ್ ನಾಯಕರ ಸುಳ್ಳಿಗೆ ಇದಕ್ಕಿಂತ ಸಾಕ್ಷಿ ಬೇಕೇ?. ಆದ್ದರಿಂದ ಮಹಾಘಟಬಂಧನ್ ನಾಯಕರು, ಅಧಿ ಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಿರಂಕುಶ ಪ್ರಜಾಪ್ರಭುತ್ವವನ್ನು ಸ್ಥಾಪಿಸಿ, ನಮ್ಮನ್ನು ಮತ್ತೆ ಹಿಂಸಿಸುತ್ತಾರೆ. ಇಂಥವರ ಅಧಿಕಾರ ಕೊಡುವುದು ಬೇಡ ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದರು.

ಪ್ರಧಾನಿ ಮೋದಿ ದೇಶ ಕಂಡ ಅಪ್ರತಿಮ ನಾಯಕ. ಹಲವು ವರ್ಷಗಳ ನಂತರ ಈ ನಾಯಕ ನಮಗೆ ಸಿಕ್ಕಿದ್ದಾರೆ. ಮೋದಿ ಆಡಳಿತವನ್ನು ಮೆಚ್ಚಿ ವಿದೇಶದಲ್ಲಿ ಅನಿ ವಾಸಿ ಭಾರತೀಯರು ಈ ಬಾರಿ ಮತದಾನ ದಲ್ಲಿ ಪಾಲ್ಗೊಳ್ಳಲು ಹಾಗೂ ಮತ್ತೆ ಮೋದಿ ಗೆಲುವಿಗೆ ಪ್ರಚಾರ ಮಾಡುತ್ತಿ ದ್ದಾರೆ. ದೇಶವಾಸಿಗಳಾದ ನಾವು ಮೋದಿಯ ಪ್ರಾಮಾಣಿಕ ನಾಯಕತ್ವ ಗುರುತಿಸದಿದ್ದರೆ ನಮಗೆ ನಾವೇ ಮಾಡಿಕೊಳ್ಳುವ ಆತ್ಮ ವಂಚನೆ. ಈ ಚುನಾವಣೆಯಲ್ಲಿ ಕುಟುಂಬ ಕೇಂದ್ರಿತ ರಾಜಕಾರಣಕ್ಕೆ ತೀಲಾಂಜಲಿ ನೀಡಿ, ಮತ್ತೊಮ್ಮೆ ಮೋದಿಯನ್ನು ಅಧಿ ಕಾರಕ್ಕೆ ತರೋಣವೆಂದು ಮತದಾರರನ್ನು ಹುರಿದುಂಬಿಸಿದರು. ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಮಹೇಶ್ವರ್‍ರಾವ್, ವೈದ್ಯೆ ಡಾ.ನಾಗ ಲಕ್ಷ್ಮಿ ಭಟ್ಟಾಚಾರ್ಯ, ಪಿ.ಡಿ.ಮೇದಪ್ಪ, ಸಂತೋಷ್‍ಕುಮಾರ್, ಗೋಕುಲ್ ಗೋವರ್ಧನ ಸೇರಿದಂತೆ ಇತರರಿದ್ದರು.

Translate »