ಯಡಿಯೂರಪ್ಪ ವಿರುದ್ಧ `ಡೈರಿ’ ಅಸ್ತ್ರ: ಕಾಂಗ್ರೆಸ್ ನವದ್ವಾರಕ್ಕೆ ಬೀಗ
ಮೈಸೂರು

ಯಡಿಯೂರಪ್ಪ ವಿರುದ್ಧ `ಡೈರಿ’ ಅಸ್ತ್ರ: ಕಾಂಗ್ರೆಸ್ ನವದ್ವಾರಕ್ಕೆ ಬೀಗ

March 24, 2019

ಮೈಸೂರು: ಕಾಂಗ್ರೆಸ್‍ನ ಪ್ರಮುಖ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲ ಬಿಡುಗಡೆ ಮಾಡಿದ್ದ ಡೈರಿ ನಕಲಿ ಎಂದು ಆದಾಯ ತೆರಿಗೆ ಇಲಾಖೆಯ ಕರ್ನಾ ಟಕ ಮತ್ತು ಗೋವಾ ವಲಯದ ಡಿಜಿ ಬಿ.ಆರ್.ಬಾಲಕೃಷ್ಣ ಸ್ಪಷ್ಟಪಡಿಸುವ ಮೂಲಕ ಕಾಂಗ್ರೆಸ್ ನವರ ನವದ್ವಾರ ಗಳಿಗೂ ಫೆವಿಕಾಲ್ ಹಾಕಿ ದಂತಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಗೋ. ಮಧುಸೂದನ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂ ರಪ್ಪನವರು ಸ್ವಹಸ್ತಾಕ್ಷರದಲ್ಲಿ ಬರೆದಿರುವ ಡೈರಿ ಎಂದು ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್‍ನ ಸುರ್ಜೇವಾಲ ಬಿಡುಗಡೆ ಮಾಡಿದ್ದರು. ಬಿಜೆಪಿ ನಾಯಕರು ಹಾಗೂ ಪಕ್ಷಕ್ಕೆ 1800 ಕೋಟಿ ರೂ. ಕಪ್ಪ ನೀಡಿದ್ದಾರೆ ಎಂಬ ಸುಳ್ಳು ವಿವರವುಳ್ಳ ಒಂದು ಹಾಳೆ ಹಾಗೂ ಮಹಿಳಾ ರಾಜಕಾರಣಿ ಕುಮಾರಿ ಶೋಭಾ ಕರಂದ್ಲಾಜೆ ಅವರನ್ನು ವಿವಾಹವಾಗಿರು ವುದಾಗಿ ಬರೆದಿದ್ದಾರೆಂಬ ಮತ್ತೊಂದು ಹಾಳೆಯನ್ನು ಬಿಡುಗಡೆ ಮಾಡಿದ್ದರು. ಆದರೆ ಇಂದು ಆದಾಯ ತೆರಿಗೆ ಇಲಾ ಖೆಯ ಕರ್ನಾಟಕ ಮತ್ತು ಗೋವಾ ವಲ ಯದ ಡಿಜಿ ಬಿ.ಆರ್.ಬಾಲಕೃಷ್ಣ ಅವರು ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್‍ನವರು ಬಿಡುಗಡೆ ಮಾಡಿದ ಡೈರಿ ನಕಲಿ. ಈ ರೀತಿಯ ಯಾವುದೇ ಡೈರಿ ಆದಾಯ ತೆರಿಗೆ ಇಲಾ ಖೆಯ ವಶದಲ್ಲಿಲ್ಲ. ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿ ದ್ದಾರೆ. ಈ ಮೂಲಕ ಕಾಂಗ್ರೆಸ್‍ನವರ ಬಾಯಿಗೆ ಮಾತ್ರವಲ್ಲ, ನವರಂಧ್ರಗಳಿಗೂ ಫೆವಿಕಾಲ್ ಹಾಕಿದ್ದಾರೆ. ಇನ್ನು ಮುಂದೆ ಕಮಕ್ ಕಿಮಕ್ ಎನ್ನುವಂತಿಲ್ಲ ಎಂದು ವ್ಯಂಗ್ಯವಾಡಿದರು.

ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ನಿತ್ಯ ಜಾರಿ ನಿರ್ದೇ ಶನಾಲಯ(ಇಡಿ)ದ ಮುಂದೆ ಹಾಜರಾ ಗುತ್ತಿದ್ದಾರೆ. ಏಳೆಂಟು ಗಂಟೆಗಳ ಕಾಲ ವಿಚಾರಣೆಗೆ ಒಳಪಡುತ್ತಿದ್ದಾರೆ. ಹೆಲಿಕಾಪ್ಟರ್ ಡೀಲ್‍ದಾರರು ಹೇಳಿಕೆ ನೀಡುತ್ತಿದ್ದಾರೆ. ಈ ಪ್ರಕರಣವನ್ನು ಮರೆಮಾಚಿಕೊಳ್ಳುವ ಉದ್ದೇಶದೊಂದಿಗೆ ನೀಚತನದಿಂದ ಈ ಡೈರಿ ಹುಟ್ಟು ಹಾಕಿದ್ದಾರೆ. ಸುಳ್ಳು ಡೈರಿ ಯಲ್ಲಿ ಆರ್ಥಿಕ ಆರೋಪದ ಜೊತೆಗೆ ಗೌರವಾನ್ವಿತ ಮಹಿಳಾ ರಾಜಕಾರಣಿ ಶೋಭಾ ಕರಂದ್ಲಾಜೆ ಅವರ ಚಾರಿತ್ರ್ಯವಧೆ ಮಾಡಿದ್ದಾರೆ. ರಾವಣ, ಕಂಸ, ದುಶ್ಯಾಸನ ವಂಶಕ್ಕೆ ಸೇರಿದ ಕಾಂಗ್ರೆಸ್‍ನವರ ಆರೋಪ ವನ್ನು ಪರಮಾತ್ಮ ಕೃಷ್ಣನ ಹೆಸರುಳ್ಳ ಬಾಲಕೃಷ್ಣ ಅವರೇ ಅಳಿಸಿಹಾಕಿ ದ್ದಾರೆ. ಈ ಮೂಲಕ ಬಿಜೆಪಿಯ ನೈತಿಕತೆಯನ್ನು ಎತ್ತಿ ಹಿಡಿ ದಂತಾಗಿದೆ. ಅತ್ಯಂತ ಜವಾಬ್ದಾರಿಯುತ ವಾಗಿ ನಡೆದುಕೊಂಡಿರುವ ಬಾಲಕೃಷ್ಣ ಅವರನ್ನು ಅಭಿನಂದಿಸುತ್ತೇನೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕೇವಲ ದೇಹವಷ್ಟೇ. ಅವರ ಮಿದುಳು ಸುರ್ಜೇ ವಾಲ ಹಾಗೂ ಕಪಿಲ್‍ಸಿಬಲ್ ಆಗಿದ್ದಾರೆ. ಇವರಿಬ್ಬರು ಹೇಳಿಕೊಟ್ಟಿದ್ದು, ಬರೆದು ಕೊಟ್ಟಿದ್ದನ್ನು ರಾಹುಲ್ ಪ್ರಸ್ತುತಪಡಿ ಸುತ್ತಾರೆ ಎಂದು ಟೀಕಿಸಿದರು.

ಬಿ.ಎಸ್.ಯಡಿಯೂರಪ್ಪನವರು ಬೂಕನಕೆರೆ ಎಂಬ ಕುಗ್ರಾಮದ ರೈತಾಪಿ ಕುಟುಂಬದಿಂದ ಬೆಳೆದು ಬಂದವರು. ಆರ್ಥಿಕ ಸಮಸ್ಯೆಯಿದ್ದ ಕಾರಣ ಮಂಡ್ಯ ದಲ್ಲಿದ್ದ ತಾತನ ಮನೆಯಲ್ಲಿ ಉಳಿದು ಕೊಂಡು, ಬೆಳಿಗ್ಗೆ, ಸಂಜೆ ತರಕಾರಿ ವ್ಯಾಪಾರ ಮಾಡುವುದರೊಂದಿಗೆ ವಿದ್ಯಾ ಭ್ಯಾಸ ಮಾಡಿದರು. ಸ್ವಾಭಿಮಾನದ ಹೋರಾಟದಿಂದ ಈ ಮಟ್ಟಕ್ಕೆ ಬೆಳೆದಿ ರುವ ಇವರ ವಿರುದ್ಧ ಆರೋಪ ಮಾಡುವ ನೈತಿಕ ಅಧಿಕಾರ ಕಾಂಗ್ರೆಸ್‍ಗೆ ಎಲ್ಲಿದೆ. ವೈಯಕ್ತಿಕವಾಗಿ ಅಪಮಾನಿಸಿದ್ದಲ್ಲದೆ, ಚುನಾವಣಾ ಸಂದರ್ಭದಲ್ಲಿ ಸುಳ್ಳು ಆರೋಪ ಮಾಡಿರುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಕಾಂಗ್ರೆಸ್ ಕುಚೇ ಷ್ಟೆಯ ವಿರುದ್ಧ ನಾವು ನೈತಿಕ ಹಾಗೂ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಚುನಾವಣಾ ಆಯೋಗಕ್ಕೆ ದೂರು ನೀಡು ವುದರೊಂದಿಗೆ ಸಂಬಂಧಪಟ್ಟ ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡು ತ್ತೇವೆ ಎಂದರು. ಚೌಕಿದಾರ್ ಚೋರ್ ಹೈ ಎಂದು ಹೇಳುವ ರಾಹುಲ್ ಈಗ ಚೋರ್ ಯಾರೆಂಬುದನ್ನು ಸ್ಪಷ್ಟಪಡಿಸ ಬೇಕು. ರಾಹುಲ್, ಕಪಿಲ್ ಸಿಬಲ್, ಸುರ್ಜೇವಾಲ, ಡಿ.ಕೆ.ಶಿವಕುಮಾರ್ ಚೋರ್ ಎಂಬುದು ಜನರಿಗೆ ಗೊತ್ತಾ ಗಿದೆ. ಸುಳ್ಳಿನ ಆಧಾರದಲ್ಲಿ ಚುನಾವಣೆ ನಡೆಸುವ ದುಶ್ಚಟ ಮುಂದುವರೆಸ ಬಾರದು. ಕಾಂಗ್ರೆಸ್ ಕೀಳು ಭಾವನೆ ಯಿಂದ ರಾಜ್ಯ ಹಾಗೂ ದೇಶದ ನಾರಿ ಕುಲವನ್ನೇ ಅವಮಾನಿಸಿದೆ. ರಾಹುಲ್‍ಗಾಂಧಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತದ ಸಂಚಾಲಕ ಎನ್.ವಿ.ಫಣೀಶ್, ಮಾಧ್ಯಮ ಪ್ರಮುಖ್ ಪ್ರಭಾಕರ್ ಶಿಂಧೆ, ಸಹಪ್ರಮುಖ್ ಮಹೇಶ್‍ರಾಜ್ ಅರಸ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Translate »