ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಲು `ಸಿ-ವಿಜಿಲ್’ ಆ್ಯಪ್
ಮೈಸೂರು

ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಲು `ಸಿ-ವಿಜಿಲ್’ ಆ್ಯಪ್

March 24, 2019

ಮೈಸೂರು: ಚುನಾವಣೆ ವೇಳೆ ಹಣ, ಮದ್ಯ ಸೇರಿದಂತೆ ಆಮಿಷ ವೊಡ್ಡುವುದು, ಬೆದರಿಕೆ ಹಾಕುವುದು ಹಾಗೂ ರಾಜಕೀಯ ಪಕ್ಷಗಳ ಕಾರ್ಯ ಕರ್ತರಿಗೆ ಮೂಗುದಾರ ಹಾಕಲು ಇದೇ ಮೊದಲ ಬಾರಿ ಚುನಾವಣಾ ಆಯೋಗ `ಆ್ಯಪ್’ವೊಂದನ್ನು ರೂಪಿಸಿದ್ದು, ಈ ಮೂಲಕ ತ್ವರಿತಗತಿಯಲ್ಲಿ ಆಯೋಗ ಕ್ರಮ ಕೈಗೊಳ್ಳಲಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಕೇಂದ್ರ ಚುನಾವಣಾ ಆಯೋಗ ಅಕ್ರಮ ತಡೆಗೆ ದೇಶದಾದ್ಯಂತ `ಸಿ-ವಿಜಿಲ್’ ಆ್ಯಪ್ ಬಿಡುಗಡೆ ಮಾಡಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಯಾಚನೆ ವೇಳೆ ನಡೆಸುವ ಅಕ್ರಮ ಗಳ ಮೇಲೆ ಹದ್ದಿನ ಕಣ್ಣಿಡಲಿದೆ.

ಹೇಗೆ ನಿರ್ವಹಣೆ: ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಸಿ-ವಿಜಿಲ್ ಆ್ಯಪ್ ಬಳಕೆ ಅತ್ಯಂತ ಸುಲಭ. ಮತದಾರರು, ಸಾರ್ವಜನಿಕರು ತಮ್ಮ ಆ್ಯಂಡ್ರಾಯ್ಡ್ ಮೊಬೈಲ್‍ನಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡು, ಅಕ್ರಮದ ವಿಡಿಯೋ ತುಣುಕು ಅಥವಾ ಫೋಟೊ ವನ್ನು ಕಳುಹಿಸಬಹುದು. ಘಟನೆ ನಡೆದ 10 ನಿಮಿಷದೊಳಗೆ ಚಿತ್ರಣವನ್ನು ಕಳುಹಿ ಸಬೇಕು. ಈ ಆ್ಯಪ್ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದ್ದು, ದೂರು ಬಂದ ಕೂಡಲೇ ಫ್ಲೈಯಿಂಗ್ ಸ್ಕ್ವಾಡ್‍ಗೆ ರವಾನಿಸಲಾಗುತ್ತದೆ. ಆ ಸ್ಥಳಕ್ಕೆ ಸಂಬಂ ಧಿಸಿದ ಸ್ಕ್ವಾಡ್ ಭೇಟಿ ನೀಡಿ ಪರಿಶೀಲಿ ಸುತ್ತದೆ. 45 ನಿಮಿಷದೊಳಗೆ ಸ್ಕ್ವಾಡ್ ನಲ್ಲಿನ ಅಧಿಕಾರಿಗಳು ಜಿಲ್ಲಾ ಚುನಾವಣಾ ಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. 100 ನಿಮಿಷದೊಳಗೆ ಪ್ರಕರಣವನ್ನು ಇತ್ಯರ್ಥ ಮಾಡಲಾಗುತ್ತದೆ. ಒಂದು ವೇಳೆ ಗಂಭೀರ ಸ್ವರೂಪದ ಪ್ರಕರಣವಾಗಿದ್ದರೆ ಅದನ್ನು ವಿಚಾರಣೆಗೊಳಪಡಿಸಲಾಗು ತ್ತದೆ. ಯಾರೇ ದೂರು ನೀಡಿದರೂ ಅವರ ಹೆಸರನ್ನು ಗೌಪ್ಯವಾಗಿರಿಸಲಾಗು ತ್ತದೆ. ಅಲ್ಲದೆ ದೂರು ಇತ್ಯರ್ಥವಾದ ಬಳಿಕ ಆಯೋಗದ ವತಿಯಿಂದ ಸಂದೇಶ ರವಾನೆಯಾಗುತ್ತದೆ.

ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಪ್ರಯೋಗ: ಚುನಾವಣಾ ಆಯೋಗ ವರ್ಷದಿಂದ ವರ್ಷಕ್ಕೆ ಚುನಾ ವಣೆಯನ್ನು ಮುಕ್ತ ಮತ್ತು ನ್ಯಾಯ ಸಮ್ಮತ ವಾಗಿ ನಡೆಸಲು ನೂತನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಫಲವಾಗಿಯೇ ಸಿ-ವಿಜಿಲ್ ಆ್ಯಪ್ ಅನ್ನು ಲೋಕಸಭಾ ಚುನಾ ವಣೆಯಲ್ಲಿ ಬಳಸಲಾಗುತ್ತಿದೆ. ದೇಶದಲ್ಲಿ ಏಳು ಹಂತದಲ್ಲಿ ನಡೆಯಲಿರುವ ಚುನಾ ವಣೆಯಲ್ಲಿ ಈ ಆ್ಯಪ್ ಅಕ್ರಮ ಎಸಗುವ ರಾಜಕಾರಣಿಗಳಿಗೆ ಮಗ್ಗಲು ಮುಳ್ಳಾಗಿ ಪರಿಣಮಿಸಲಿದೆ. ಇತ್ತೀಚೆಗೆ ನಡೆದ ಮಧÀ್ಯ ಪ್ರದೇಶ, ಛತ್ತೀಸ್‍ಗಡ್, ರಾಜಸ್ತಾನ, ತೆಲಂ ಗಾಣ ಹಾಗೂ ಮಿಜೊರಾಂನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಸಿ-ವಿಜಿಲ್ ಆ್ಯಪ್ ಬಳಸಲಾಗಿತ್ತು. ಆಗ ಸಾಕಷ್ಟು ದೂರು ಸಲ್ಲಿಕೆಯಾಗಿದ್ದವು. ಅಕ್ರಮ ತಡೆಗೆ ಸಾರ್ವಜನಿಕ ವಲಯ ದಿಂದ ವ್ಯಕ್ತವಾದ ಸಹಕಾರದ ಹಿನ್ನೆಲೆ ಯಲ್ಲಿ ಇದೀಗ ಆಯೋಗ ಲೋಕಸಭಾ ಚುನಾವಣೆಯಲ್ಲಿ ಸಿ-ವಿಜಿಲ್ ಆ್ಯಪ್ ಪ್ರಯೋಗ ಮಾಡುತ್ತಿದೆ.

ಮೂರು ವಿಧದಲ್ಲಿ: ಈ ಆ್ಯಪ್‍ನಲ್ಲಿ ದಾಖಲಾದ ದೂರುಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ. ಹಳೆಯ ಹಾಗೂ ಸುಳ್ಳು ದೂರÀನ್ನು ತೆಗೆದು ಹಾಕು ವುದು ಒಂದು ವಿಧಾನವಾದರೆ, ಅನು ಮಾನ ಬಂದರೆ ಪರಿಶೀಲನೆ ನಡೆಸುವು ದಕ್ಕೆ ಎಆರ್‍ಒಗಳಿಗೆ ರವಾನಿಸುವುದು ಮತ್ತೊಂದು ವಿಧಾನವಾಗಿದೆ. ಗಂಭೀರ ಪ್ರಕ ರಣವಾಗಿದ್ದರೆ ಪೆಂಡಿಂಗ್ ಇಟ್ಟು, ವಿಚಾರಣೆ ನಡೆಸಿ ನೀತಿ ಸಂಹಿತೆ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಮೂರನೇ ವಿಧಾನ.

ಎಂ.ಟಿ.ಯೋಗೇಶ್ ಕುಮಾರ್

Translate »