ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಮಾಜಿ ಯೋಧ ಪಿ.ಕೆ.ಬಿದ್ದಪ್ಪ  ಕರ್ನಾಟಕ ಪ್ರಜಾ ಪಾರ್ಟಿ ಅಭ್ಯರ್ಥಿ
ಮೈಸೂರು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಮಾಜಿ ಯೋಧ ಪಿ.ಕೆ.ಬಿದ್ದಪ್ಪ  ಕರ್ನಾಟಕ ಪ್ರಜಾ ಪಾರ್ಟಿ ಅಭ್ಯರ್ಥಿ

March 24, 2019

ಮೈಸೂರು: ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ಗೆ ಕೇಂದ್ರ ಚುನಾವಣಾ ಆಯೋಗ `ಹೊಲಿಗೆ ಯಂತ್ರ’ವನ್ನು ಚಿಹ್ನೆಯಾಗಿ ನೀಡಿದೆ ಎಂದು ತಿಳಿಸಿದ ಪಕ್ಷದ ಸಂಸ್ಥಾಪಕ ಹಾಗೂ ಮೈಸೂರು ವಕೀಲರ ಸಂಘದ ಕಾರ್ಯದರ್ಶಿ ಡಾ.ಬಿ. ಶಿವಣ್ಣ, ಇದೇ ವೇಳೆ ಮಾಜಿ ಸೈನಿಕ ಪಿ.ಕೆ.ಬಿದ್ದಪ್ಪ ಅವರನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಚಿಹ್ನೆ ಇರುವ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ 2018ರ ಮೇ ತಿಂಗಳಲ್ಲಿ ಪ್ರಾದೇಶಿಕ ಪಕ್ಷವಾಗಿ ಕರ್ನಾಟಕ ಪ್ರಜಾ ಪಾರ್ಟಿ ಸ್ಥಾಪಿಸಲಾಗಿದೆ. ಇದೀಗ ಚುನಾವಣಾ ಆಯೋಗ ಪಕ್ಷಕ್ಕೆ ಚಿಹ್ನೆ ನೀಡಿದೆ ಎಂದು ತಿಳಿಸಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪಿ.ಕೆ.ಬಿದ್ದಪ್ಪ ಮಾತನಾಡಿ, ಕೊಡಗಿನ ಕುಗ್ರಾಮದಲ್ಲಿ ಜನಿಸಿದ ನಾನು 20 ವರ್ಷಗಳು ಭಾರ ತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಇದೀಗ ಬೆಳವಾಡಿ ಗ್ರಾಮದಲ್ಲಿ ವಾಸವಿದ್ದು, ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಮಾ.26ರಂದು ಮಧ್ಯಾಹ್ನ 12ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಹೇಳಿದರು. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಸಿ.ಕಾರ್ತಿಕ್, ರಾಜ್ಯ ಖಜಾಂಚಿ ಬಿ.ಆದರ್ಶ್, ಮೈಸೂರು ಜಿಲ್ಲಾ ಅಲ್ಪಸಂಖ್ಯಾತ ಮಹಿಳಾ ಘಟಕದ ಅಧ್ಯಕ್ಷೆ ಬರ್‍ಬಾರ ಬವೇರ್, ಮುಖಂಡ ರಾಮಚಂದ್ರರಾವ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »