ನಂಜುಮಳಿಗೆ ಸುತ್ತಮುತ್ತ ಮತದಾನದ ಅರಿವು
ಮೈಸೂರು

ನಂಜುಮಳಿಗೆ ಸುತ್ತಮುತ್ತ ಮತದಾನದ ಅರಿವು

March 24, 2019

ಮೈಸೂರು: ಅರಿವು ಸಂಸ್ಥೆ ವತಿಯಿಂದ ಇಂದು ನಗರದ ನಂಜುಮಳಿಗೆ ವೃತ್ತದ ಸುತ್ತಮುತ್ತ ಮನೆ-ಮನೆಗೆ ತೆರಳಿ ತಾಂಬೂಲ, ಹಣ್ಣು, ಹೂವು ಮತ್ತು ಕುಂಕುಮ ನೀಡಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕರಪತ್ರವನ್ನು ನೀಡುವು ದರ ಮೂಲಕ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಹರ್ಷಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ತೇಜಸ್ ಶಂಕರ್ ಮಾತನಾಡಿ, ಪ್ರಜಾತಂತ್ರ ದೇಶದಲ್ಲಿ ಮತದಾನ ಪ್ರಮುಖ ಹಕ್ಕಾಗಿದೆ. ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ಬದಲಾವಣೆಯ ಧ್ವನಿ. ಇದು ನಮಗೆ ಕೊಟ್ಟಿರುವ ಹಕ್ಕಾಗಿದೆ. ಪ್ರತಿಯೊಬ್ಬ ದೇಶ ವಾಸಿಯು ತನ್ನ ಇಷ್ಟವಾದ ಜನಪ್ರತಿನಿಧಿಯನ್ನು ಚುನಾಯಿಸಿ ಸಾಂವಿ ಧಾನಿಕವಾಗಿ ಅಧಿಕಾರಕ್ಕೆ ತರುವುದೇ ಮತದಾನ ಪ್ರಕ್ರಿಯೆ. ಹೀಗಾಗಿ ದೇಶವು ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೆ ಉತ್ತಮ ನಾಯಕರನ್ನು ಆಯ್ಕೆ ಮಾಡಲು ಮತದಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ನಂಜುಮಳಿಗೆಯ ಸುತ್ತಮುತ್ತಲ ವ್ಯಾಪಾರಿಗಳು ಗ್ರಾಹಕರು ,ಪ್ರಯಾಣಿಕರು, ಆಟೋ ಚಾಲಕರನ್ನು ಒಳಗೊಂಡಂತೆ ಎಲ್ಲರಿಗೂ ಕರಪತ್ರಗಳನ್ನು ನೀಡುವ ಮೂಲಕ ಮತದಾನದ ಅರಿವನ್ನು ಮೂಡಿಸಲಾಯಿತು. ಇದೇ ಸಂದರ್ಭದಲ್ಲಿ ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಎಂ.ಡಿ.ಪಾರ್ಥಸಾರಥಿ , ಶ್ರೀಮತಿ ಸೌಭಾಗ್ಯ ಮೂರ್ತಿ , ಉದ್ಯಮಿ ಅಪೂರ್ವ ಸುರೇಶ್ , ಜಯಸಿಂಹ ಶ್ರೀಧರ್, ವಿಕ್ರಂ ಅಯ್ಯಂಗಾರ್, ಕಡಕೋಳ ಜಗದೀಶ್, ಹರೀಶ್ ನಾಯ್ಡು, ಸುಚಿಂದ್ರ, ಪ್ರಶಾಂತ್ ಭಾರದ್ವಾಜ್, ವಿನಯ್, ಜ್ಯೋತಿ ರವಿಪ್ರಕಾಶ್ ಮುಂತಾದವರು ಹಾಜರಿದ್ದರು.

Translate »