ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್‍ಗೆ ಅಧಿಕಾರ ಅಗತ್ಯ
ಮೈಸೂರು

ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್‍ಗೆ ಅಧಿಕಾರ ಅಗತ್ಯ

March 24, 2019

ಮೈಸೂರು: 17ನೇ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗಾಗಿ, ಕೋಮು ವಾದಿಗಳ ವಿರುದ್ಧ ನಡೆಯುತ್ತಿರುವ ಸಂಗ್ರಾಮ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿ ವಾರ ಲೋಕಸಭಾ ಚುನಾವಣೆ ಹಿನ್ನೆಲೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿ ಕೋಮುವಾದ ಮತ್ತು ಮೂಲಭೂತ ವಾದವನ್ನು ಸೋಲಿಸದಿದ್ದರೇ ಸಂವಿ ಧಾನಕ್ಕೆ ಗಂಡಾಂತರ ತಪ್ಪಿದ್ದಲ್ಲ. ಸಂವಿ ಧಾನದ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮತ್ತು ಎರಡು ಬಾರಿ ಯುದ್ಧ ಮಾಡಿದೆ. ಆದರೆ, ಒಂದೇ ಒಂದು ಸರ್ಜಿಕಲ್ ಸ್ಟ್ರೈಕ್ ಮಾಡಿಸಿ, ಅದನ್ನು ಸಿನಿಮಾ ತೆಗೆಸಿ ಘನ ಸಾಧನೆ ಮಾಡಿರುವುದಾಗಿ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ನರೇಂದ್ರ ಮೋದಿ ಯವರು ಐದು ವರ್ಷದಿಂದ ಕೇವಲ ಭರವಸೆ ನೀಡಿದ್ದಾರೆಯೇ ಹೊರತು, ಅಭಿ ವೃದ್ಧಿ ಮಾಡಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯ ಶಂಕರ್ ಮಾತನಾಡಿ, ಕೋಮುವಾದಿ ಗಳನ್ನು ಅಧಿಕಾರದಿಂದ ದೂರವಿಡಲು ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 80 ಸ್ಥಾನ ಪಡೆದಿದ್ದರೂ, 30 ಸ್ಥಾನಗಳಿಸಿದ ಜೆಡಿಎಸ್ ಜೊತೆ ಮೈತ್ರಿ ಬೆಳೆಸಿ, ಉದಾತ್ತ ಮನೋಭಾವದಿಂದ ಜೆಡಿಎಸ್‍ಗೆ ಅಧಿಕಾರ ನೀಡಿದೆ. ಅವರೊಂದಿಗೆ ಸಹನೆ ಯಿಂದಲೇ ವರ್ತಿಸುತ್ತಿz್ದÉೀವೆ ಎಂದರು.

ಕೋಮುವಾದಿ ಮತ್ತು ಮೂಲ ಭೂತವಾದಿಗಳನ್ನು ದೂರ ಇಡುವುದಕ್ಕಾಗಿ ಹಾಗೂ ಅವರಿಂದ ದೇಶ ಉಳಿಸುವುದ ಕ್ಕಾಗಿ ಮೈತ್ರಿ ಸೂತ್ರ ಪಾಲಿಸಿz್ದÉೀವೆ. ಬಿಜೆಪಿ ಯವರು ಕಾಂಗ್ರೆಸ್ ಅವಧಿಯಲ್ಲಾದ ಕೆಲಸವನ್ನು ತಮ್ಮದು ಎಂದು ಪ್ರಚಾರ ಪಡೆಯುತ್ತಿದ್ದಾರೆ. ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 130 ರಿಂದ 140 ಸ್ಥಾನ ಕಳೆದು ಕೊಳ್ಳುತ್ತದೆ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ವಾಸು ಮಾತನಾಡಿ, ವಿಶ್ವದಲ್ಲಿಯೇ ಅತ್ಯಂತ ಸುಳ್ಳಿನ ಸರಮಾಲೆ ಯನ್ನೇ ಸೃಷ್ಟಿಸಿದವರು ಪ್ರಧಾನಿ ನರೇಂದ್ರ ಮೋದಿ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ವಾಜಪೇಯಿ, ಮುರಾರ್ಜಿ ದೇಸಾಯಿ ಅವರ್ಯಾರೂ ಏನನ್ನೂ ಕೆಲಸ ಮಾಡಿಲ್ಲ ವಂತೆ. ದೇಶಕ್ಕೆ ಒಳ್ಳೆಯದಾಗಿರುವುದು ಕಳೆದ ಐದು ವರ್ಷದಲ್ಲಿ ಮಾತ್ರವಂತೆ ಎಂದು ಮೋದಿಯವರು ಕತೆಕಟ್ಟುತ್ತಿ ದ್ದಾರೆ. ಹಾಗಾದರೇ ಮೊದಲಿನಿಂದಲೂ ದೇಶದ ಅಭಿವೃದ್ಧಿ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.

ತಂತ್ರಜ್ಞಾನವನ್ನು ದೇಶಾದಾದ್ಯಂತ ಅಭಿವೃದ್ಧಿ ಪಡಿಸಿದ ಕೀರ್ತಿ ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ. ಅಂದಿ ನಿಂದಲೂ ದೇಶದ ಸೇನೆಯನ್ನು ಬೆಳೆ ಸಿದ್ದು ಕಾಂಗ್ರೆಸ್ ಸರ್ಕಾರ. ಕುಸಿದಿರುವ ದೇಶದ ಆರ್ಥಿಕ ವ್ಯವಸ್ಥೆಯನ್ನು ಮತ್ತೆ ಅಭಿವೃದ್ಧಿ ಯತ್ತ್ತ ಸಾಗಿಸಬೇಕಾದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.
ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮ ಸೇನ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಮೇಯರ್ ಪುಷ್ಪಲತಾ ಜಗನ್ನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಕೆ.ಮರಿಗೌಡ, ಮೈಲ್ಯಾಕ್ ಮಾಜಿ ಅಧ್ಯP್ಷÀ ಹೆಚ್.ಎ. ವೆಂಕಟೇಶ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮತ್ತಿತರರು ಉಪಸ್ಥಿತರಿದ್ದರು.

Translate »