ವಿವಿಧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಟ್ರಾಂಗ್  ರೂಂಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ಸ್ಥಳಾಂತರ
ಮೈಸೂರು

ವಿವಿಧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಟ್ರಾಂಗ್ ರೂಂಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ಸ್ಥಳಾಂತರ

March 24, 2019

ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ದಾಸ್ತಾನು ಮಾಡಲಾಗಿದ್ದ ವಿದ್ಯುನ್ಮಾನ ಮತಯಂತ್ರ ಗಳನ್ನು ಶನಿವಾರ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸ್ಟ್ರಾಂಗ್ ರೂಂಗಳಿಗೆ ಬಿಗಿ ಭದ್ರತೆಯಲ್ಲಿ ರವಾನಿಸಲಾಯಿತು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೈಸೂರು ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರಗಳು ಒಳಪಡಲಿದ್ದು, ಈ ಕ್ಷೇತ್ರಗಳಲ್ಲಿ ಬಳಸುವ ಮತಯಂತ್ರಗಳನ್ನು ಕಳೆದ ಒಂದು ತಿಂಗಳಿಂದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶೇಖರಿಸಲಾಗಿತ್ತು. ಇದರೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ನಗರ, ಚಾಮರಾಜನಗರ ಕ್ಷೇತ್ರದ ವರುಣಾ, ಹೆಚ್.ಡಿ.ಕೋಟೆ, ನಂಜನ ಗೂಡು ಹಾಗೂ ಟಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಮತಯಂತ್ರಗಳನ್ನು ದಾಸ್ತಾನು ಮಾಡಲಾಗಿತ್ತು. ಇಂದು ಬಿಗಿ ಭದ್ರತೆ ಯಲ್ಲಿ ಆಯಾಯ ವಿಧಾನಸಭಾ ಕ್ಷೇತ್ರಕ್ಕೆ ಸಾಗಿಸಲಾಯಿತು.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಮತಯಂತ್ರಗಳನ್ನು ಪಟ್ಟಣದ ಪುಷ್ಪಾ ಕಾನ್ವೆಂಟ್‍ನ ಸ್ಟ್ರಾಂಗ್ ರೂಂ, ಹುಣಸೂರು ಕ್ಷೇತ್ರದ ಮತಯಂತ್ರವನ್ನು ಅಲ್ಲಿನ ದೇವ ರಾಜ ಅರಸ್ ಪ್ರಥಮ ದರ್ಜೆ ಕಾಲೇ ಜಿನಲ್ಲಿನ ಸ್ಟ್ರಾಂಗ್ ರೂಂ, ಚಾಮುಂಡೇ ಶ್ವರಿ ಕ್ಷೇತ್ರದ ಮತಗಟ್ಟೆಯನ್ನು ಮೈಸೂರು ಮಹಾರಾಣಿ ಮಹಿಳಾ ಕಲಾ ಕಾಲೇಜು, ಕೃಷ್ಣರಾಜ ಕ್ಷೇತ್ರದ ಮತಯಂತ್ರಗಳನ್ನು ಮಹಾರಾಜ ಪದವಿ ಕಾಲೇಜಿನ ಶತಮಾ ನೋತ್ಸವ ಭವನದ ಕಟ್ಟಡದಲ್ಲಿನ ಸ್ಟ್ರಾಂಗ್ ರೂಂ, ಚಾಮರಾಜ ಕ್ಷೇತ್ರದ ಮತಯಂತ್ರ ವನ್ನು ಬೇಡನ್ ಪೊವೆಲ್ ಶಾಲೆ, ನರ ಸಿಂಹರಾಜ ಕ್ಷೇತ್ರದ ಮತಗಟ್ಟೆಯನ್ನು ಊಟಿ ರಸ್ತೆಯ ಜೆಎಸ್‍ಎಸ್ ಕಾಲೇಜಿನ ಸ್ಟ್ರಾಂಗ್ ರೂಂಗೆ ಸಾಗಿಸಲಾಯಿತು.

ಮಂಡ್ಯ ಕ್ಷೇತ್ರಕ್ಕೆ ಒಳಪಡುವ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಮತಯಂತ್ರ ಗಳನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಟ್ರಾಂಗ್ ರೂಂ, ಚಾಮ ರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಮತಯಂತ್ರವನ್ನು ಪಟ್ಟಣದ ಸೇಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯ ಸ್ಟ್ರಾಂಗ್ ರೂಂ, ನಂಜನಗೂಡು ವಿಧಾನ ಸಭಾ ಕ್ಷೇತ್ರದ ಮತಯಂತ್ರಗಳನ್ನು ಪಟ್ಟಣದ ಸರ್ಕಾರಿ ಬಾಲಕರ ಜೂನಿ ಯರ್ ಕಾಲೇಜಿನಲ್ಲಿನ ಸ್ಟ್ರಾಂಗ್ ರೂಮ್, ವರುಣಾ ವಿಧಾನಸಭಾ ಕ್ಷೇತ್ರದ ಮತ ಯಂತ್ರವನ್ನು ನಂಜನಗೂಡಿನ ಜೆಎಸ್‍ಎಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಟಿ.ನರಸೀಪುರ ಕ್ಷೇತ್ರದ ಮತಯಂತ್ರವನ್ನು ಪಟ್ಟಣದ ವಿದ್ಯೋ ದಯ ಶಿಕ್ಷಣ ಸಂಸ್ಥೆಯ ಕಟ್ಟಡದಲ್ಲಿ ತೆರೆದಿರುವ ಸ್ಟ್ರಾಂಗ್ ರೂಮ್‍ಗೆ ಕೊಂಡೊಯ್ಯಲಾಯಿತು.

Translate »