ಕವಿ ನಿಸಾರ್ ಅಹಮದ್‍ರಿಗೆ ಪತ್ನಿ ವಿಯೋಗ
ಮೈಸೂರು

ಕವಿ ನಿಸಾರ್ ಅಹಮದ್‍ರಿಗೆ ಪತ್ನಿ ವಿಯೋಗ

March 24, 2019

ಬೆಂಗಳೂರು: ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರ ಪತ್ನಿ ಶಾಹನ್ವಾಜ್ ಬೇಗಂ (77) ಅವರು ಇಂದು ಬೆಳಿಗ್ಗೆ ನಿಧನ ರಾದರು. ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, 17 ವರ್ಷಗಳ ಹಿಂದೆ ನಿವೃತ್ತರಾಗಿ ದ್ದರು. ಇಂದು ಬೆಳಿಗ್ಗೆ 5.30ರ ಸುಮಾರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ನಿಸಾರ್ ಅಹಮ್ಮದ್, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ವರ್ಗವನ್ನು ಅಗಲಿದ್ದಾರೆ. ಅವರ ಓರ್ವ ಪುತ್ರಿ ಅಮೇರಿಕಾದಲ್ಲಿ ನೆಲೆಸಿದ್ದು, ಅವರು ಬಂದ ನಂತರ ನಾಳೆ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನ ಬನಶಂಕರಿ ಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

Translate »