ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ  ವಿರೋಧಿಸಲು ರಾಜ್ಯ ಮಟ್ಟದ ಚಿಂತನ ಸಭೆ
ಮೈಸೂರು

ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿರೋಧಿಸಲು ರಾಜ್ಯ ಮಟ್ಟದ ಚಿಂತನ ಸಭೆ

March 24, 2019

ಮೈಸೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಜಾರಿಗೆ ತರುವುದನ್ನು ವಿರೋಧಿಸಲು ರಾಜ್ಯ ಮಟ್ಟದ ಚಿಂತನ ಸಭೆಯನ್ನು ಮಾ.24ರಂದು ಬೆಳಿಗ್ಗೆ 10.30 ಗಂಟೆಗೆ ರಾಮಕೃಷ್ಣನಗರ ಇ ಮತ್ತು ಎಫ್ ಬ್ಲಾಕ್‍ನಲ್ಲಿರುವ ನೃಪತುಂಗ ಕನ್ನಡ ಶಾಲೆಯಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಕುವೆಂಪು ಭಾಷಾ ಭಾರತೀಯ ಅಧ್ಯಕ್ಷ ಮರುಳಸಿದ್ದಪ್ಪ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ಬೆಂಗಳೂರಿನ ಪ್ರಾಧ್ಯಾಪಕ ಎಂ. ಚಿದಾನಂದಮೂರ್ತಿ, ದಾವಣಗೆರೆಯ ಈಶ್ವರಪ್ಪ, ಶಿವಮೊಗ್ಗದ ಡಿ.ಎಸ್. ನಾಗಭೂಷಣ, ಶ್ರೀಮತಿ ಬಿ.ಟಿ.ಲಲಿತನಾಯಕ್, ಧಾರವಾಡದ ಸಿದ್ದಲಿಂಗಪಟ್ಟಣಶೆಟ್ಟಿ, ಕನ್ನಡ ಗೆಳೆಯರ ಬಳಗದ ರಾ.ನಂ.ಚಂದ್ರಶೇಖರ, ಮೈಸೂರಿನ ಹಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ.

Translate »