ಇಂದಿನಿಂದ ಬೇಸಿಗೆ ಕ್ರಿಕೆಟ್ ಶಿಬಿರ
ಮೈಸೂರು

ಇಂದಿನಿಂದ ಬೇಸಿಗೆ ಕ್ರಿಕೆಟ್ ಶಿಬಿರ

March 24, 2019

ಮೈಸೂರು: ಮೈಸೂರಿನ ಶ್ರೀಗಂಧ ಕ್ರಿಕೆಟರ್ಸ್ ವತಿಯಿಂದ ಸೀಜೀಸ್ ಹಬ್ ಆಫ್ ಕ್ರಿಕೆಟ್ ಸಹಯೋಗದೊಂದಿಗೆ ಬಿಪಿಎಲ್ ಕಾರ್ಡ್ ಹೊಂದಿದ್ದ 6 ವರ್ಷ ಮೇಲ್ಪಟ್ಟ ಬಾಲಕ-ಬಾಲಕಿಯರಿಗೆ ಉಚಿತ ಬೇಸಿಗೆ ಕ್ರಿಕೆಟ್ ಶಿಬಿರವನ್ನು ಮಾ.24ರಿಂದ ಮೇ 31ರವರೆಗೆ ಹತ್ತು ವಾರಗಳ ಕಾಲ ಪ್ರತಿ ದಿನ ಬೆಳಿಗ್ಗೆ 5.45ರಿಂದ 8.30ರವರೆಗೆ ಕುವೆಂಪುನಗರ, ಸರಸ್ವತಿಪುರಂ, ಜೆ.ಪಿ.ನಗರ ಮತ್ತು ವಿಜಯನಗರ ಈ 4 ಸ್ಥಳಗಳಲ್ಲಿ ನಡೆಸಲಾಗುವುದು. ಅರ್ಹ ಹಾಗೂ ಅನುಭವಿ ತರಬೇತುದಾರರಿಂದ ವೃತ್ತಿಪರತೆ ಹಾಗೂ ವೈಜ್ಞಾನಿಕವಾಗಿ ಕ್ರಿಕೆಟ್ ತರಬೇತಿಯನ್ನು ನೀಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಬಾಲಕ/ಬಾಲಕಿಯರಿಗೆ ಉಚಿತ ತರಬೇತಿಯನ್ನು ನೀಡಲಾಗು ವುದು. ಮೈಸೂರು ನಗರದ ದೂರದ ಬಡಾವಣೆಗಳಿಂದ ಬಂದು ಹೋಗಲು ವಾಹನದ ವ್ಯವಸ್ಥೆ ಮಾಡಲಾಗುವುದು. ಹೊರ ಊರುಗಳಿಂದ ಬರುವ ಆಸಕ್ತ ಕ್ರಿಕೆಟ್ ಪ್ರತಿಭೆಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ (ರೆಸಿಡೆನ್ಸಿಯಲ್ ಕ್ಯಾಂಪ್) ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.9741591919 ಸಂಪರ್ಕಿಸಿ.

Translate »