ವಿಶ್ವ ರಂಗಭೂಮಿ ದಿನದ ಅಂಗವಾಗಿ ಮಾ.27ರಿಂದ ರಂಗೋತ್ಸವ
ಮೈಸೂರು

ವಿಶ್ವ ರಂಗಭೂಮಿ ದಿನದ ಅಂಗವಾಗಿ ಮಾ.27ರಿಂದ ರಂಗೋತ್ಸವ

March 24, 2019

ಮೈಸೂರು: ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.27ರಿಂದ 29ರವರೆಗೆ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಹೆಚ್.ಎಸ್. ಸುರೇಶ್ ಬಾಬು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮೈಸೂರಿನ ಕಲಾ ಮಂದಿ ರದ ಕಿರುರಂಗಮಂದಿರದಲ್ಲಿ ರಂಗೋ ತ್ಸವ ನಡೆಯಲಿದ್ದು, ಮಾ.27ರಂದು ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಚಿಂತಕ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟನೆ ನೆರವೇರಿಸಲಿದ್ದು, ಅತಿಥಿಯಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಪ್ರೊ.ಚ.ಸರ್ವಮಂಗಳಾ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತರಾದ ಗಂಗಾಧರಸ್ವಾಮಿ, ಮೈಮ್ ರಮೇಶ್ ಅವರನ್ನು ಸನ್ಮಾನಿಸಲಾಗುವುದು. ಪ್ರತಿ ದಿನ ಸಂಜೆ 7ಕ್ಕೆ ನಾಟಕ ಪ್ರದರ್ಶನ ಏರ್ಪಡಿಸಿದ್ದು, 100 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಮಾ.27ರಂದು ರಂಗಾಯಣ ತಂಡದಿಂದ `ಯಹೂದೀ ಹುಡುಗಿ’, 28ರಂದು ನಟನ ತಂಡದಿಂದ `ಉಷಾಹರಣ’ ಹಾಗೂ 29ರಂದು ಬೆಂಗಳೂರಿನ ಚಿತ್ತಾರ ತಂಡದಿಂದ `ಸುಮ್ಮನೆ’ ನಾಟಕಗಳ ಪ್ರದರ್ಶನ ನಡೆಯಲಿದೆ ಎಂದರು. ವೇದಿಕೆ ಸಹ ಕಾರ್ಯದರ್ಶಿ ಕೃಷ್ಣ ಜನಮನ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಾಧವ್ ಖರೆ, ಡಾ.ಬಿ.ಆರ್.ಗೀತಾಂಜಲಿ, ದೀಪಕ್ ಗೋಷ್ಠಿಯಲ್ಲಿದ್ದರು.

Translate »