ಮೈಸೂರಲ್ಲಿ ತಾರಕಕ್ಕೇರಿದ ತಾಪಮಾನ
ಮೈಸೂರು

ಮೈಸೂರಲ್ಲಿ ತಾರಕಕ್ಕೇರಿದ ತಾಪಮಾನ

March 24, 2019

ಮೈಸೂರು: ಈ ಬಾರಿ ಹಿಂದೆಂದೂ ಕಂಡರಿಯದ ಬೇಸಿಗೆ ತಾಪಮಾನ. ಬಂಡೀಪುರ ಅರಣ್ಯ ಪ್ರದೇಶ, ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ಸುತ್ತಮುತ್ತ ಹಾಗೂ ರಾಜ್ಯದ ಹಲವು ಕಡೆ ಅಗ್ನಿ ಅವಘಡಗಳು ಸಂಭವಿಸಿವೆ.

ಪ್ರಾಣ ಹಾನಿ, ಆಸ್ತಿಪಾಸ್ತಿ ಹಾಗೂ ಅರಣ್ಯ ಸಂಪ ತ್ತನ್ನು ಅಗ್ನಿ ಅವಘಡದಿಂದ ರಕ್ಷಿಸಲು ಮೈಸೂರು ಪ್ರಾಂತ್ಯದ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯಾಧುನಿಕ ಪರಿಕರಗಳೊಂದಿಗೆ ದಿನದ 24 ಗಂಟೆಯೂ ಸಜ್ಜಾಗಿದೆ.

ಮೈಸೂರು ಪ್ರಾಂತ್ಯ ವ್ಯಾಪ್ತಿಗೆ ಮೈಸೂರು, ಚಾಮ ರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ ಜಿಲ್ಲೆಗಳು ಬರಲಿದ್ದು, ಎಲ್ಲಾ ಜಿಲ್ಲೆಗಳ ತಾಲೂಕು ಕೇಂದ್ರದಲ್ಲಿ ಒಂದೊಂದು ಅಗ್ನಿಶಾಮಕ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರಿನ ಸರಸ್ವತಿಪುರಂ, ಬನ್ನಿಮಂಟಪ ಹಾಗೂ ಹೆಬ್ಬಾಳು ಕೈಗಾರಿಕಾ ಪ್ರದೇಶ ಗಳಲ್ಲಿ ಠಾಣೆಗಳನ್ನು ಹೊಂದಿದ್ದು, ಮುಖ್ಯ ಅಗ್ನಿ ಶಾಮಕ ಅಧಿಕಾರಿ(ಅಈಔ), ವಲಯ ಅಗ್ನಿಶಾಮಕ ಅಧಿಕಾರಿ (ಖಈಔ), ಪ್ರತೀ ಜಿಲ್ಲೆಗೊಬ್ಬರಂತೆ ಡಿಎಫ್‍ಓ ಸೇರಿ ದಂತೆ ಅಗತ್ಯವಿರುವಷ್ಟು ಸಿಬ್ಬಂದಿ ಅಣಿಗೊಳಿಸಲಾಗಿದೆ.

ಮೈಸೂರು ನಗರದ ಠಾಣೆಗಳಲ್ಲಿ 4,500 ಲೀಟರ್ ಸಾಮಥ್ರ್ಯದ ತಲಾ ಒಂದು ವಾಟರ್ ಟೆಂಡರ್, ಜಿಲ್ಲೆಯ 7 ತಾಲೂಕುಗಳಲ್ಲೂ ತಲಾ ಒಂದು ವಾಟರ್ ಟೆಂಡರ್ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ, ಮೈಸೂ ರಲ್ಲಿ 9000 ಲೀಟರ್ ಸಾಮಥ್ರ್ಯದ ಎರಡು ಜಲ ಲಾರಿ, 16,000 ಲೀಟರ್ ಸಾಮಥ್ರ್ಯದ ವಾಟರ್ ಬೌಸರ್ ಹಾಗೂ ಅತ್ಯಾಧುನಿಕ ವಾಹನವನ್ನೂ ಒದ ಗಿಸಲಾಗಿದೆ. ಈ ವಾಹನವು ಕಟ್ಟಡ ಕುಸಿದಾಗ ರಕ್ಷಣಾ ಕಾರ್ಯಾಚರಣೆಗೆ ಸಹಾಯಕವಾಗಲಿದೆ.

ವಾಹನದಲ್ಲಿ ಹೈಡ್ರಾಲಿಕ್ ಜಾಕ್, ಕಟರ್, ಸ್ಬ್ರೆಡ್ಡರ್, ನ್ಯೂಮರಿಕ್ ಜಾಕ್, ರಬ್ಬರ್ ಬೋಟ್, ಟೆಲಿಸ್ಕೋ ಪಿಕ್ ಲೈಟ್‍ಗಳು, ಆಸ್ಕಾಲೈಟ್‍ಗಳು, ಬ್ರೀಥಿಂಗ್ ಆಪ ರೇಟರ್‍ಗಳು, ಸ್ಟೀಲ್-ಮರ ಹಾಗೂ ಕಾಂಕ್ರೀಟ್ ಕಟ್ಟರ್‍ಗಳೂ ಸೇರಿದಂತೆ ಹಲವು ಸಲಕರಣೆಗಳನ್ನು ಪೂರೈಸಲಾಗಿದೆ. ಅಲ್ಲದೆ ಕ್ಷಿಪ್ರ ಕಾರ್ಯಾಚರಣೆ (ಕಿಖಗಿ) ಅಗ್ನಿ ಬುಲೆಟ್ ವಾಹನಗಳು ಕಡಿಮೆ ಜಾಗ ವಿರುವ ಸಂದಿಗ್ಧ ಸ್ಥಳಗಳಲ್ಲಿ ನುಸುಳಿಕೊಂಡು ಹೋಗಿ ಬೆಂಕಿ ನಂದಿಸುವ ಕಾರ್ಯಕ್ಕೆ ಸಜ್ಜಾಗಿವೆ.

ಹೆಚ್ಚುವರಿ ಠಾಣೆಗೆ ಬೇಡಿಕೆ: ಬೇಸಿಗೆ ಝಳ ಹೆಚ್ಚಾ ಗುತ್ತಿದ್ದಂತೆಯೇ ಮೈಸೂರು ಜಿಲ್ಲೆಯ ಕಡಕೊಳ, ಬನ್ನೂರು, ಸಾಲಿಗ್ರಾಮ, ಬೆಟ್ಟದಪುರಗಳಲ್ಲಿ ಹೆಚ್ಚುವರಿ ಯಾಗಿ ಅಗ್ನಿಶಾಮಕ ಠಾಣೆಗಳನ್ನು ಆರಂಭಿಸಬೇ ಕೆಂಬ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಅರಮನೆಗೆ ಪ್ರತ್ಯೇಕ ಠಾಣೆ: ಬೆಂಗಳೂರಿನ ವಿಧಾನ ಸೌಧ, ವಿಕಾಸಸೌಧ, ಸಚಿವಾಲಯ, ಬಹುಮಹಡಿ ಗಳ ಕಟ್ಟಡಗಳಲ್ಲಿರುವಂತೆ ಮೈಸೂರಿನ ಅರಮನೆಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಅಗತ್ಯವಿದೆ ಎಂದು ಅಗ್ನಿಶಾಮಕ ಅಧಿಕಾರಿಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಕೆಯಾಗಿತ್ತು. ಅಪರೂಪದ ತೈಲವರ್ಣ ಚಿತ್ರ ಗಳಿವೆ. ಪ್ರತೀ ದಿನ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಲ್ಬ್ ಗಳನ್ನು ಅಳವಡಿಸಲಾಗಿದೆಯಲ್ಲದೆ, ಈ ಹಿಂದೆಯೂ ಹಲವು ಅಗ್ನಿ ಅವಘಡಗಳು ಸಂಭವಿಸಿವೆ ಹಾಗೂ ಅಲ್ಲಿ ದಸರಾ ವೇಳೆ ಆನೆಗಳನ್ನು ಪೋಷಿಸಲಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಮೈಸೂರು ಅರಮನೆ ಗೆಂದೇ ಪ್ರತ್ಯೇಕ ಠಾಣೆಯನ್ನು ಅಗತ್ಯ ಸಲಕರಣೆಗಳೊಂ ದಿಗೆ ಸ್ಥಾಪಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಮೈಸೂರು ನಗರದಲ್ಲೇ ಮೂರು ಅಗ್ನಿಶಾಮಕ ಠಾಣೆಗಳಿರುವುದರಿಂದ ಪ್ರತ್ಯೇಕ ಠಾಣೆ ಮಂಜೂರು ಮಾಡಲಾಗದು ಎಂದು ಸರ್ಕಾರ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಹೇಳಲಾಗಿದೆ.

ಹೊಸ ಉಪಕರಣಕ್ಕೂ ಬೇಡಿಕೆ: ಅತೀ ಎತ್ತರದ ಕಟ್ಟಡಗಳಲ್ಲಿ ಬೆಂಕಿ ಅವಘಡ ಅಥವಾ ಇನ್ನಿತರೆ ಅನಾ ಹುತ ನಡೆದಾಗ ಕಾರ್ಯಾಚರಣೆ ನಡೆಸಲು ಅತ್ಯಾಧು ನಿಕ ತಂತ್ರಜ್ಞಾನದ 90 ಮೀಟರ್ ಎತ್ತರ ಏರಿಯಲ್ ಲ್ಯಾಡರ್ ಪ್ಲಾಟ್‍ಫಾರಂ ವಾಹನ ಮೈಸೂರು ನಗರಕ್ಕೆ ಅಗತ್ಯವಿದೆ ಎಂದೂ ಅಗ್ನಿಶಾಮಕ ಅಧಿಕಾರಿಗಳು ಬೇಡಿಕೆ ಸಲ್ಲಿಸಿದ್ದಾರೆ. ಅತೀ ಎತ್ತರದ ಕಟ್ಟಡಗಳಲ್ಲಿ ಸಂಭವಿಸುವ ಅಗ್ನಿ ಅನಾಹುತಗಳನ್ನು ನಿಯಂತ್ರಿಸಲು ಸುಮಾರು 5 ಕೋಟಿ ರೂ. ವೆಚ್ಚದ ಈ ವಾಹನವನ್ನು ಕೊಡಿಸಿಕೊಡುವಂತೆ ಕೋರಿರುವುದನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದ್ದು, ಮಂಜೂರಾತಿ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಮೈಸೂರಿನಲ್ಲಿ 390 ತಾಪಮಾನವಿದ್ದು, ಅಗ್ನಿ ಅವ ಘಡ ಉಂಟಾದರೆ ಕಾರ್ಯಾಚರಣೆಗೆ ಸಿಬ್ಬಂದಿ ಸರ್ವರೀತಿಯಲ್ಲಿ ಸನ್ನದ್ಧವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ದುಪ್ಪಟ್ಟು ಅಗ್ನಿಕರೆಗಳು ಸಾರ್ವ ಜನಿಕರಿಂದ ಬರುತ್ತಿವೆ ಎಂದು ಅಗ್ನಿಶಾಮಕ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್.ಟಿ.ರವಿಕುಮಾರ್

Translate »