ಮೈಸೂರು: ಸಿಗ ರೇಟ್, ಬೆಂಕಿಪೊಟ್ಟಣ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ವ್ಯಕ್ತಿಯಿಂದ ನಗದು ಹಾಗೂ ಮೊಬೈಲ್ ಫೋನ್ ದೋಚಿದ್ದ ಮೂವ ರನ್ನು ಮೈಸೂರು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಹೊಳೆನರಸೀಪುರದ ನರ ಸಿಂಹನಾಯಕನಗರದ ಇಜಾಷ್ ಪಾಷನ ಮಗ ಹೆಚ್.ಇ.ಇರ್ಫಾನ್ ಪಾಷ, ಹಾಸನ ನಿವಾಸಿಗಳಾದ ಅನ್ಸರ್ ಪಾಷಾ ಮಗ ಸಲ್ಮಾನ್ ಪಾಷಾ ಹಾಗೂ ಶಾನು ಮಗ ಶಾಹೀದ್ ಬಂಧಿತ ಆರೋಪಿಗಳು. ಇಂದು ಮುಂಜಾನೆ 2 ಗಂಟೆಯಲ್ಲಿ ಹಾಸನದಲ್ಲಿ ರೈಲು…
ವೃದ್ಧ ಪಾಲಕರ ರಕ್ಷಿಸಲು ಕಾನೂನು ರೂಪಿಸಬೇಕಾಯಿತು
March 24, 2019ಮೈಸೂರು: ವೃದ್ಧ ಪಾಲಕರನ್ನು ನೋಡಿಕೊಳ್ಳುವುದು ಮತ್ತು ಹಿರಿಯ ನಾಗರಿಕರನ್ನು ಗೌರವಿಸುವುದು ಮಕ್ಕಳ ಜವಾಬ್ದಾರಿ. ಆದರೆ, ಇದಕ್ಕಾ ಗಿಯೇ ಕಾನೂನು ರೂಪಿಸಿ ಹಿರಿಯ ನಾಗರಿಕರನ್ನು ರಕ್ಷಿಸುವ ಸ್ಥಿತಿ ಬಂದಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ. ದೇವಮಾನೆ ಬೇಸರ ವ್ಯಕ್ತಪಡಿಸಿದರು. ಕಲಾಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಹಿರಿಯ ನಾಗರಿ ಕರ ಸಕಾಲ ಸೇವಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ `ರಾಜ್ಯ ಮಟ್ಟದ ಹಿರಿಯ…
ನೀರನ್ನು ಸಂರಕ್ಷಿಸಿ, ಮಿತವಾಗಿ ಬಳಸುವಂತೆ ಮನವೊಲಿಸಿ
March 24, 2019ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಜಿ.ಹೆಚ್.ಯೋಗೇಶ್ ಸಲಹೆ ಮೈಸೂರು: ಕೃಷಿ ಮತ್ತು ಜೀವನಕ್ಕೆ ಅತ್ಯಮೂಲ್ಯವಾದ ನೀರನ್ನು ಸಂರಕ್ಷಿಸಿ, ಮಿತವಾಗಿ ಬಳಸಲು ಕೃಷಿ ಕ್ಷೇತ್ರದಲ್ಲಿರುವ ಅಧಿಕಾರಿಗಳು ಮತ್ತು ಪರಿಕರ ಮಾರಾಟ ಗಾರರು, ರೈತರು ಹಾಗೂ ಸಾರ್ವಜನಿಕರ ಮನವೊಲಿಸಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಜಿ.ಹೆಚ್.ಯೋಗೇಶ್ ತಿಳಿಸಿದರು. ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ನೀರಿನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷಿ ಮತ್ತು ಜೀವ…
ಮೈಸೂರಲ್ಲಿ ತಾರಕಕ್ಕೇರಿದ ತಾಪಮಾನ
March 24, 2019ಮೈಸೂರು: ಈ ಬಾರಿ ಹಿಂದೆಂದೂ ಕಂಡರಿಯದ ಬೇಸಿಗೆ ತಾಪಮಾನ. ಬಂಡೀಪುರ ಅರಣ್ಯ ಪ್ರದೇಶ, ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರು ಸುತ್ತಮುತ್ತ ಹಾಗೂ ರಾಜ್ಯದ ಹಲವು ಕಡೆ ಅಗ್ನಿ ಅವಘಡಗಳು ಸಂಭವಿಸಿವೆ. ಪ್ರಾಣ ಹಾನಿ, ಆಸ್ತಿಪಾಸ್ತಿ ಹಾಗೂ ಅರಣ್ಯ ಸಂಪ ತ್ತನ್ನು ಅಗ್ನಿ ಅವಘಡದಿಂದ ರಕ್ಷಿಸಲು ಮೈಸೂರು ಪ್ರಾಂತ್ಯದ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯಾಧುನಿಕ ಪರಿಕರಗಳೊಂದಿಗೆ ದಿನದ 24 ಗಂಟೆಯೂ ಸಜ್ಜಾಗಿದೆ. ಮೈಸೂರು ಪ್ರಾಂತ್ಯ ವ್ಯಾಪ್ತಿಗೆ ಮೈಸೂರು, ಚಾಮ ರಾಜನಗರ, ಕೊಡಗು, ಹಾಸನ ಹಾಗೂ ಮಂಡ್ಯ…
ವಿಶ್ವ ರಂಗಭೂಮಿ ದಿನದ ಅಂಗವಾಗಿ ಮಾ.27ರಿಂದ ರಂಗೋತ್ಸವ
March 24, 2019ಮೈಸೂರು: ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.27ರಿಂದ 29ರವರೆಗೆ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಹೆಚ್.ಎಸ್. ಸುರೇಶ್ ಬಾಬು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮೈಸೂರಿನ ಕಲಾ ಮಂದಿ ರದ ಕಿರುರಂಗಮಂದಿರದಲ್ಲಿ ರಂಗೋ ತ್ಸವ ನಡೆಯಲಿದ್ದು, ಮಾ.27ರಂದು ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ. ಚಿಂತಕ ಪ್ರೊ.ಕಾಳೇಗೌಡ ನಾಗವಾರ ಉದ್ಘಾಟನೆ ನೆರವೇರಿಸಲಿದ್ದು, ಅತಿಥಿಯಾಗಿ ಕನ್ನಡ ಮತ್ತು ಸಂಸ್ಕøತಿ…
ಇಂದಿನಿಂದ ಬೇಸಿಗೆ ಕ್ರಿಕೆಟ್ ಶಿಬಿರ
March 24, 2019ಮೈಸೂರು: ಮೈಸೂರಿನ ಶ್ರೀಗಂಧ ಕ್ರಿಕೆಟರ್ಸ್ ವತಿಯಿಂದ ಸೀಜೀಸ್ ಹಬ್ ಆಫ್ ಕ್ರಿಕೆಟ್ ಸಹಯೋಗದೊಂದಿಗೆ ಬಿಪಿಎಲ್ ಕಾರ್ಡ್ ಹೊಂದಿದ್ದ 6 ವರ್ಷ ಮೇಲ್ಪಟ್ಟ ಬಾಲಕ-ಬಾಲಕಿಯರಿಗೆ ಉಚಿತ ಬೇಸಿಗೆ ಕ್ರಿಕೆಟ್ ಶಿಬಿರವನ್ನು ಮಾ.24ರಿಂದ ಮೇ 31ರವರೆಗೆ ಹತ್ತು ವಾರಗಳ ಕಾಲ ಪ್ರತಿ ದಿನ ಬೆಳಿಗ್ಗೆ 5.45ರಿಂದ 8.30ರವರೆಗೆ ಕುವೆಂಪುನಗರ, ಸರಸ್ವತಿಪುರಂ, ಜೆ.ಪಿ.ನಗರ ಮತ್ತು ವಿಜಯನಗರ ಈ 4 ಸ್ಥಳಗಳಲ್ಲಿ ನಡೆಸಲಾಗುವುದು. ಅರ್ಹ ಹಾಗೂ ಅನುಭವಿ ತರಬೇತುದಾರರಿಂದ ವೃತ್ತಿಪರತೆ ಹಾಗೂ ವೈಜ್ಞಾನಿಕವಾಗಿ ಕ್ರಿಕೆಟ್ ತರಬೇತಿಯನ್ನು ನೀಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವ ಆರ್ಥಿಕವಾಗಿ…
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ವಿರೋಧಿಸಲು ರಾಜ್ಯ ಮಟ್ಟದ ಚಿಂತನ ಸಭೆ
March 24, 2019ಮೈಸೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಜಾರಿಗೆ ತರುವುದನ್ನು ವಿರೋಧಿಸಲು ರಾಜ್ಯ ಮಟ್ಟದ ಚಿಂತನ ಸಭೆಯನ್ನು ಮಾ.24ರಂದು ಬೆಳಿಗ್ಗೆ 10.30 ಗಂಟೆಗೆ ರಾಮಕೃಷ್ಣನಗರ ಇ ಮತ್ತು ಎಫ್ ಬ್ಲಾಕ್‍ನಲ್ಲಿರುವ ನೃಪತುಂಗ ಕನ್ನಡ ಶಾಲೆಯಲ್ಲಿ ಕರೆಯಲಾಗಿದೆ. ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ದರಾಮಯ್ಯ, ಕುವೆಂಪು ಭಾಷಾ ಭಾರತೀಯ ಅಧ್ಯಕ್ಷ ಮರುಳಸಿದ್ದಪ್ಪ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ಬೆಂಗಳೂರಿನ ಪ್ರಾಧ್ಯಾಪಕ ಎಂ….
ಕವಿ ನಿಸಾರ್ ಅಹಮದ್‍ರಿಗೆ ಪತ್ನಿ ವಿಯೋಗ
March 24, 2019ಬೆಂಗಳೂರು: ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮ್ಮದ್ ಅವರ ಪತ್ನಿ ಶಾಹನ್ವಾಜ್ ಬೇಗಂ (77) ಅವರು ಇಂದು ಬೆಳಿಗ್ಗೆ ನಿಧನ ರಾದರು. ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, 17 ವರ್ಷಗಳ ಹಿಂದೆ ನಿವೃತ್ತರಾಗಿ ದ್ದರು. ಇಂದು ಬೆಳಿಗ್ಗೆ 5.30ರ ಸುಮಾರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ನಿಸಾರ್ ಅಹಮ್ಮದ್, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ವರ್ಗವನ್ನು ಅಗಲಿದ್ದಾರೆ. ಅವರ ಓರ್ವ ಪುತ್ರಿ ಅಮೇರಿಕಾದಲ್ಲಿ ನೆಲೆಸಿದ್ದು, ಅವರು ಬಂದ…
ವಿವಿಧ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಟ್ರಾಂಗ್ ರೂಂಗಳಿಗೆ ಎಲೆಕ್ಟ್ರಾನಿಕ್ ಮತಯಂತ್ರಗಳ ಸ್ಥಳಾಂತರ
March 24, 2019ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ದಾಸ್ತಾನು ಮಾಡಲಾಗಿದ್ದ ವಿದ್ಯುನ್ಮಾನ ಮತಯಂತ್ರ ಗಳನ್ನು ಶನಿವಾರ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಸ್ಟ್ರಾಂಗ್ ರೂಂಗಳಿಗೆ ಬಿಗಿ ಭದ್ರತೆಯಲ್ಲಿ ರವಾನಿಸಲಾಯಿತು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೈಸೂರು ಜಿಲ್ಲೆಯ ಆರು ವಿಧಾನ ಸಭಾ ಕ್ಷೇತ್ರಗಳು ಒಳಪಡಲಿದ್ದು, ಈ ಕ್ಷೇತ್ರಗಳಲ್ಲಿ ಬಳಸುವ ಮತಯಂತ್ರಗಳನ್ನು ಕಳೆದ ಒಂದು ತಿಂಗಳಿಂದ ನಂಜರಾಜ ಬಹದ್ದೂರ್ ಛತ್ರದಲ್ಲಿ ಶೇಖರಿಸಲಾಗಿತ್ತು. ಇದರೊಂದಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಕೆ.ಆರ್.ನಗರ, ಚಾಮರಾಜನಗರ ಕ್ಷೇತ್ರದ ವರುಣಾ, ಹೆಚ್.ಡಿ.ಕೋಟೆ, ನಂಜನ ಗೂಡು ಹಾಗೂ…
ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್‍ಗೆ ಅಧಿಕಾರ ಅಗತ್ಯ
March 24, 2019ಮೈಸೂರು: 17ನೇ ಲೋಕಸಭಾ ಚುನಾವಣೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗಾಗಿ, ಕೋಮು ವಾದಿಗಳ ವಿರುದ್ಧ ನಡೆಯುತ್ತಿರುವ ಸಂಗ್ರಾಮ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿ ವಾರ ಲೋಕಸಭಾ ಚುನಾವಣೆ ಹಿನ್ನೆಲೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿ ಕೋಮುವಾದ ಮತ್ತು ಮೂಲಭೂತ ವಾದವನ್ನು ಸೋಲಿಸದಿದ್ದರೇ ಸಂವಿ ಧಾನಕ್ಕೆ ಗಂಡಾಂತರ ತಪ್ಪಿದ್ದಲ್ಲ. ಸಂವಿ ಧಾನದ ಉಳಿವಿಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್…










