ವೃದ್ಧ ಪಾಲಕರ ರಕ್ಷಿಸಲು ಕಾನೂನು ರೂಪಿಸಬೇಕಾಯಿತು
ಮೈಸೂರು

ವೃದ್ಧ ಪಾಲಕರ ರಕ್ಷಿಸಲು ಕಾನೂನು ರೂಪಿಸಬೇಕಾಯಿತು

March 24, 2019

ಮೈಸೂರು: ವೃದ್ಧ ಪಾಲಕರನ್ನು ನೋಡಿಕೊಳ್ಳುವುದು ಮತ್ತು ಹಿರಿಯ ನಾಗರಿಕರನ್ನು ಗೌರವಿಸುವುದು ಮಕ್ಕಳ ಜವಾಬ್ದಾರಿ. ಆದರೆ, ಇದಕ್ಕಾ ಗಿಯೇ ಕಾನೂನು ರೂಪಿಸಿ ಹಿರಿಯ ನಾಗರಿಕರನ್ನು ರಕ್ಷಿಸುವ ಸ್ಥಿತಿ ಬಂದಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ. ದೇವಮಾನೆ ಬೇಸರ ವ್ಯಕ್ತಪಡಿಸಿದರು.

ಕಲಾಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಹಿರಿಯ ನಾಗರಿ ಕರ ಸಕಾಲ ಸೇವಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ `ರಾಜ್ಯ ಮಟ್ಟದ ಹಿರಿಯ ನಾಗರಿ ಕರ ಕುಂದು ಕೊರತೆಗಳ ವಿಚಾರ ಸಂಕಿರಣ ಹಾಗೂ ಕಾನೂನು ಅರಿವು ಮತ್ತು ಸಾಂಸ್ಕøತಿಕ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯ ನಾಗರಿಕರ ರಕ್ಷಣೆಗಾಗಿ ಪಾಲಕ-ಪೆÇೀಷಕರ ಸಂರಕ್ಷಣಾ ಕಾಯ್ದೆ ಜಾರಿಗೆ ತರಲಾಗಿದ್ದು, ಮಕ್ಕಳು ತಂದೆ-ತಾಯಿಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ 3 ತಿಂಗಳ ಜೈಲು ಮತ್ತು 5 ಸಾವಿರ ರೂ. ದಂಡ ವಿಧಿಸಬಹುದು ಎಂದರು.

ಪಾಲಕರನ್ನು ಕಡೆಗಣಿಸಿದ ಮಕ್ಕಳ ವಿರುದ್ಧ ತೀರ್ಪು ಪ್ರಕಟವಾದರೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವು ದಿಲ್ಲ. ಜತೆಗೆ ಪಾಲಕರಿಂದ ಆಸ್ತಿ ಪಡೆದು ಕಡೆಗಣಿಸಿದರೆಂಬ ದೂರ ಬಂದರೆ ಆಸ್ತಿಯನ್ನು ಪಾಲಕರಿಗೆ ಕೊಡಿಸಲಾಗು ತ್ತದೆ. ಹಾಗೆಯೇ ನೊಂದವರಿಗೆ 10 ಸಾವಿರ ರೂ. ವರೆಗೂ ಜೀವನಾಂಶ ನೀಡುವಂತೆಯೂ ತೀರ್ಪು ನೀಡಬಹುದು. ಈ ಆದೇಶವನ್ನು ಮಕ್ಕಳು ಪಾಲಿಸದಿದ್ದರೆ ತಿಂಗಳು ಜೈಲು ಮತ್ತು ಜೀವನಾಂಶವನ್ನು ಕೊಡಿಸಲಾಗುತ್ತದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ಸೇವೆ ನೀಡಲಿದ್ದು, ಒಂದು ಲಕ್ಷಕ್ಕಿಂತ ಕಡಿಮೆ ಆದಾಯ ಮಿತಿವುಳ್ಳವರು ಹಾಗೂ ಮಹಿಳೆಯರು, ಮಕ್ಕಳು, ಎಸ್‍ಸಿ, ಎಸ್‍ಟಿ, ವೃದ್ಧರು ಅವಶ್ಯಕತೆ ಇದ್ದಾಗ ಬಳಸಿಕೊಳ್ಳಬಹುದು. ಈಗಾಗಲೇ 450 ಪ್ರಕರಣಗಳಿಗೆ ಉಚಿತ ಕಾನೂನು ನೆರವು ನೀಡಲಾಗಿದೆ ಎಂದರು. ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರ ಟ್ರಸ್ಟ್ ಅಧ್ಯಕ್ಷ ಪಿ.ರಾಜಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇ ಶಕಿ ಕೆ.ಪದ್ಮ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಆನಂದ್‍ಕುಮಾರ್, ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರ ಜಿಲ್ಲಾಧ್ಯಕ್ಷೆ ಬಿ.ಲಲಿತಶರ್ಮ ಮತ್ತಿತರರಿದ್ದರು.

Translate »