ಹಲ್ಲೆ ನಡೆಸಿ ವ್ಯಕ್ತಿಯಿಂದ ನಗದು,  ಮೊಬೈಲ್ ದೋಚಿದ್ದ ಮೂವರ ಸೆರೆ
ಮೈಸೂರು

ಹಲ್ಲೆ ನಡೆಸಿ ವ್ಯಕ್ತಿಯಿಂದ ನಗದು, ಮೊಬೈಲ್ ದೋಚಿದ್ದ ಮೂವರ ಸೆರೆ

March 24, 2019

ಮೈಸೂರು: ಸಿಗ ರೇಟ್, ಬೆಂಕಿಪೊಟ್ಟಣ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ಮಾಡಿ ವ್ಯಕ್ತಿಯಿಂದ ನಗದು ಹಾಗೂ ಮೊಬೈಲ್ ಫೋನ್ ದೋಚಿದ್ದ ಮೂವ ರನ್ನು ಮೈಸೂರು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಹೊಳೆನರಸೀಪುರದ ನರ ಸಿಂಹನಾಯಕನಗರದ ಇಜಾಷ್ ಪಾಷನ ಮಗ ಹೆಚ್.ಇ.ಇರ್ಫಾನ್ ಪಾಷ, ಹಾಸನ ನಿವಾಸಿಗಳಾದ ಅನ್ಸರ್ ಪಾಷಾ ಮಗ ಸಲ್ಮಾನ್ ಪಾಷಾ ಹಾಗೂ ಶಾನು ಮಗ ಶಾಹೀದ್ ಬಂಧಿತ ಆರೋಪಿಗಳು. ಇಂದು ಮುಂಜಾನೆ 2 ಗಂಟೆಯಲ್ಲಿ ಹಾಸನದಲ್ಲಿ ರೈಲು ಹಳಿ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ 12,800 ನಗದು, ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ಚಾಕು, ಟಿವಿಎಸ್ ಅಪಾಚಿ ಬೈಕ್‍ನ್ನು ವಶ ಪಡಿಸಿಕೊಳ್ಳಲಾಗಿದೆ. ಮಾರ್ಚ್ 19ರಂದು ಮುಂಜಾನೆ 2.15 ಗಂಟೆಯಲ್ಲಿ ಹಾಸನ ರೈಲು ನಿಲ್ದಾಣದ ಬಳಿ ಪ್ರಗತಿ ನಗರದ ತಮ್ಮ ಮನೆಗೆ ಹೋಗಲು ಬಸ್ ಸ್ಟ್ಯಾಂಡ್‍ನಿಂದ ರೈಲ್ವೇ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಬಿ.ಎಸ್. ಶರಣಪ್ಪ ಎಂಬುವ ರನ್ನು ಸಿಗರೇಟ್ ಹಾಗೂ ಬೆಂಕಿಪೊಟ್ಟಣ ಕೊಡುವಂತೆ ಕೇಳಿದ ಐವರು, ಕೊಡದಿ ದ್ದಕ್ಕೆ ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ 12,800 ರೂ. ನಗದು ಹಾಗೂ 9,000 ರೂ. ಬೆಲೆ ಬಾಳುವ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಪ್ರಕ ರಣ ದಾಖಲಿಸಿಕೊಂಡಿದ್ದ ಮೈಸೂರು ರೈಲ್ವೇ ಪೊಲೀಸರು, ತಂಡ ರಚಿಸಿ ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದರು. ಎಸ್ಪಿ ಡಾ. ಭೀಮಾ ಶಂಕರ್ ಎಸ್.ಗುಳೇದ, ಡಿವೈಎಸ್ಪಿ ಎನ್.ಟಿ.ಶ್ರೀನಿವಾಸರೆಡ್ಡಿ ಮಾರ್ಗದರ್ಶನ ದಲ್ಲಿ ಕಾರ್ಯಾಚರಣೆ ನಡೆಸಿದ ಮೈಸೂರು ರೈಲ್ವೆ ಎಸ್‍ಐ ಎನ್.ಜಯಕುಮಾರ್, ಸಬ್ ಇನ್ಸ್‍ಪೆಕ್ಟರ್ ಆರ್.ಜಗದೀಶ್, ಸಿಬ್ಬಂದಿ ಗಳಾದ ಡಿ.ಆರ್.ಸುರೇಶ್, ದೇವರಾಜೇಗೌಡ, ಕೆ.ಪಿ.ಮೋಹನ್, ಎಂ.ಸಿ.ಶಾಂತ ಮಲ್ಲೇಶ್, ಎಲ್.ಹೆಚ್.ಮಂಜುನಾಥ, ಸಿ.ಟಿ.ಮಧು, ಸಿ.ಎನ್.ಚೇತನ್, ಜಿ.ಕೆ.ಯತೀಶ್, ಆರ್. ಪ್ರಶಾಂತ್, ಕೆ.ಜೆ.ಶಂಕರ್, ಹೆಚ್.ಡಿ.ರಘು, ಫಯಾಜ್‍ಖಾನ್, ಪಾಪಣ್ಣ, ಬಿ.ಎಸ್. ಮೋಹನ್ ಅವರು ಎರಡೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Translate »