ಮೈಸೂರನ್ನು ಹಾರ್ಡ್‍ವೇರ್ ಹಬ್ ಮಾಡಲು ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ
ಮೈಸೂರು

ಮೈಸೂರನ್ನು ಹಾರ್ಡ್‍ವೇರ್ ಹಬ್ ಮಾಡಲು ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ

March 24, 2019

ಮೈಸೂರು: ಮೈಸೂರನ್ನು ಹಾರ್ಡ್‍ವೇರ್ ಹಬ್ ಆಗಿ ಮಾಡಲು ನವ ದೆಹಲಿಯ ಇಂಡಿಯಾ ಸೆಲ್ಯೂಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋ ಸಿಯೇಷನ್ (ACEA) ಅಧ್ಯಕ್ಷ ಪಂಕಜ್ ಮೊಹಿಂದ್ರೂ ಇಂದು ಮೈಸೂರಿನಲ್ಲಿ ಎಲೆಕ್ಟ್ರಾನಿಕ್ಸ್ ಕೈಗಾರಿಕೋ ದ್ಯಮಿಗಳೊಂದಿಗೆ ಸಂವಾದ ನಡೆಸಿ ಪ್ರಸಕ್ತ ಪರಿಸ್ಥಿತಿ ಕುರಿತು ಅಗತ್ಯ ಮಾಹಿತಿ ಪಡೆದುಕೊಂಡರು.

ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೈಸೂರಿನ ಹೂಟಗಳ್ಳಿಯ ಲ್ಲಿರುವ ಹೋಟೆಲ್ ಸೈಲೆಂಟ್ ಶೋರ್‍ನ ಬೋರ್ಡ್ ಮೀಟಿಂಗ್ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮವನ್ನು ಪಂಕಜ್ ಮೊಹಿಂದ್ರೂ ಉದ್ಘಾ ಟಿಸಿದರು. ಸಂವಾದದಲ್ಲಿ ಪಾಲ್ಗೊಂಡಿದ್ದ ಎಲೆಕ್ಟ್ರಾನಿಕ್ಸ್ಇಂಡಸ್ಟ್ರಿಯಲಿಸ್ಟ್‍ಗಳನ್ನುದ್ದೇಶಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದ ಉದ್ದಿಮೆಗಳೊಂ ದಿಗೆ ಸ್ಪರ್ಧಿಸಲು ಉತ್ತಮ ಗುಣಮಟ್ಟದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉತ್ಪಾದನೆ ಮಾಡಬೇಕೆಂದು ಕರೆ ನೀಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಮತ್ತು ಪಾಲಿಸಿ ಮೇಕರ್‍ಗಳ ಗಮನ ಸೆಳೆದು ಮೈಸೂರನ್ನು ಹಾರ್ಡ್ ವೇರ್ ರಾಜಧಾನಿಯನ್ನಾಗಿ ಅಭಿವೃದ್ಧಿಪಡಿಸಲು ಇಲ್ಲಿನ ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳನ್ನು ಸಬಲೀಕರಣ ಮಾಡುವ ಅಗತ್ಯವಿದೆ ಎಂದ ಪಂಕಜ್ ಮೊಹಿಂದ್ರೂ ಅವರು, ಚೀನಾ, ಜಪಾನ್ ಹಾಗೂ ಕೊರಿಯಾ ರಾಷ್ಟ್ರಗಳು ಕಡಿಮೆ ಬೆಲೆಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉತ್ಪಾದಿಸುವಲ್ಲಿ ಏಕಸ್ವಾಮ್ಯ ಸಾಧಿಸಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಸ್ತಿತ್ವ ಸ್ಥಾಪಿಸಿವೆ ಎಂದರು.

ಸಣ್ಣ, ಮಧ್ಯಮ ಅಥವಾ ಬೃಹತ್ ಉದ್ದಿಮೆಯಾಗಲಿ, ಸ್ಥಳೀಯ ಸೌಲಭ್ಯ ಬಳಸಿಕೊಂಡು ಆಗಿಂದಾಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುವ ಪಾಲಿಸಿಗಳಂತೆ ರೂಪಿಸುವ ವಸ್ತುಗಳನ್ನು ಉತ್ಪಾದಿಸಿ ಮಾರುಕಟ್ಟೆ ಮಾಡುವ ಮೂಲಕ ಮೈಸೂರನ್ನು ಎಮರ್ಜಿಂಗ್ ಹಾರ್ಡ್‍ವೇರ್ ಕ್ಯಾಪಿಟಲ್ ಮಾಡಲು ಪ್ರಯತ್ನಿಸಿ ಎಂದು ಕೈಗಾರಿಕೋದ್ಯಮಿಗಳಿಗೆ ಸಲಹೆ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಫೋನ್, ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಾನಿಕ್ಸ್ ಉಪಕರಣ ಗಳಿಗೆ ವ್ಯಾಪಕ ಬೇಡಿಕೆ ಇದೆ. ಅದನ್ನು ಪೂರೈಸುವ ಮೂಲಕ ಭಾರತ ಸ್ವಯಂ ಸುಸ್ಥಿರತೆ ಸಾಧಿಸಿ ಮೇಕ್ ಇನ್ ಇಂಡಿಯಾ ಸಂಕಲ್ಪವನ್ನು ಪೂರ್ಣಗೊಳಿಸ ಬೇಕಿದೆ ಎಂದ ಪಂಕಜ್ ಅವರು, ಅದಕ್ಕಾಗಿ ನಾವು ಚಾಂಪಿಯನ್ ಕಂಪನಿಗಳನ್ನು ಸ್ಥಾಪಿಸಬೇಕಾಗಿದೆ ಎಂದರು.

ಈ ಹಿಂದೆ ಭಾರತದಲ್ಲಿ ಆಹಾರದ ಕೊರತೆ ಇತ್ತು. ತದನಂತರ ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಿದ ಕಾರಣ ಈಗ ಆಹಾರ ಧಾನ್ಯಗಳನ್ನು ಶೇಖರಿಸಿಡುವಷ್ಟು ಸುಧಾರಿ ಸಿರುವ ಹಾಗೆಯೇ ಎಲೆಕ್ಟ್ರಾನಿಕ್ಸ್ ಇಂಡಸ್ಟ್ರಿ ಉತ್ಪನ್ನ ಗಳಿಗೂ ಹೆಚ್ಚು ಒತ್ತು ಕೊಟ್ಟರೆ ವಿಶ್ವ ಮಾರುಕಟ್ಟೆಯಲ್ಲಿ ಭಾರತ ಮುಂಚೂಣಿಗೆ ಬರಲು ಸಾಧ್ಯ ಹಾಗೂ ರಾಷ್ಟ್ರ ನಿರ್ಮಾಣಕ್ಕೂ ಅದು ಪೂರಕವಾಗಲಿದೆ ಎಂದರು.

ಮೈಸೂರು ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇSಆಒ) ಕ್ಲಸ್ಟರ್ ಎಲೆಕ್ಟ್ರಾನಿಕ್ಸ್ ಗೂಡ್ಸ್ ಇಂಡಸ್ಟ್ರಿಗಳ ಬೆಳವಣಿಗೆಗೆ ಮಹತ್ತರ ಪಾತ್ರ ವಹಿಸಿದೆ. ಯುವ ಉದ್ದಿಮೆದಾರರಿಗೆ ತಂತ್ರಜ್ಞಾನ ಒದಗಿಸಿ ಪ್ರೋತ್ಸಾಹಿಸುವ ಮೂಲಕ ದೊಡ್ಡ ದೊಡ್ಡ ನಗರಗಳೊಂದಿಗೆ ಸ್ಪರ್ಧೆಯೊಡ್ಡಲು ನೆರವು ನೀಡುತ್ತಿ ರುವ ಬಗ್ಗೆಯೂ ಪಂಕಜ್ ಮೊಹಿಂದ್ರೂ ತಿಳಿಸಿದರು.

ಆಟೋಮೋಟಿವ್, ಕನ್ಸೂಮರ್ ಡ್ಯೂರಬಲ್ಸ್, ಇನ್‍ಸ್ಟ್ರುಮೆಂಟೇಷನ್, ಮೆಡಿಕಲ್, ರೈಲ್ವೇ, ಟೆಲಿ ಕಮ್ಯುನಿಕೇಷನ್ ಕ್ಷೇತ್ರಗಳ ಉದ್ದಿಮೆ ಸ್ಥಾಪನೆಗೂ ಕ್ಲಸ್ಟರ್ ಸಪೋರ್ಟ್ ಮಾಡುತ್ತಿರುವ ಬಗ್ಗೆಯೂ ಅವರು ಇದೇ ಸಂದರ್ಭ ನುಡಿದರು.
ಅದಕ್ಕೂ ಮೊದಲು ವಿನ್ಯಾಸ್ ಇನ್ನೋವೇಟಿವ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ನರೇಂದ್ರ ನಾರಾಯಣ್ ಅವರು ಮೈಸೂ ರಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಡಸ್ಟ್ರೀಸ್ ಕುರಿತಂತೆ ಪ್ರಾಸ್ತಾ ವಿಕ ನುಡಿಗಳನ್ನಾಡಿದರು. ಮೈಸೂರು ಎಂಇಎಸ್ ಡಿಎಂಸಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸಂಜೀವ್ ಗುಪ್ತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೈಸೂರು ಮತ್ತು ಬೆಂಗಳೂರಿನ ಸುಮಾರು 30ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ಸ್ ಉದ್ಯಮಿಗಳು ಪಾಲ್ಗೊಂಡು ಪಂಕಜ್ ಮೊಹಿಂದ್ರೂರೊಂದಿಗೆ ಸಂವಾದ ನಡೆಸಿ ದರು. ಮಧ್ಯಾಹ್ನ ಮೊಹಿಂದ್ರೂ ಅವರು ಇನ್ನೋ ವೇಟಿವ್ ಟೆಕ್ನಾಲಜೀಸ್, ಇಎಸ್‍ಡಿಎಂ ಕ್ಲಸ್ಟರ್ ಗಳಿಗೂ ಭೇಟಿ ನೀಡಿದ ನಂತರ ಹಿಂದಿರುಗಿದರು.

Translate »