ಮೈಸೂರು, ಫೆ.5(ಎಂಕೆ, ಎಸ್‍ಬಿಡಿ)- ಜೆಡಿಎಸ್ ಯುವ ನಾಯಕರ ಜನ್ಮದಿನೋ ತ್ಸವದ ಅದ್ಧೂರಿ ಆಚರಣೆ ಮೂಲಕ ಭಾನು ವಾರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಪಕ್ಷದ ಮಹಾಶಕ್ತಿ ಪ್ರದರ್ಶಿಸಲಾಯಿತು. ಇದರೊಂದಿಗೆ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡರ ವಿರುದ್ಧ ಹರಿಹಾಯ್ದು ಸವಾಲೆಸೆದಿ ದ್ದವರಿಗೆ ಖಡಕ್ ಪ್ರತ್ಯುತ್ತರ ನೀಡಿದಂತಿತ್ತು. ಜೆಡಿಎಸ್ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಹಾಗೂ ಜಿ.ಡಿ.ಹರೀಶ್ ಗೌಡರು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದು, ಈ ಹಿನ್ನೆಲೆಯಲ್ಲಿ ಚಾಮುಂ ಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಮೈಸೂರು-ಹೆಚ್.ಡಿ.ಕೋಟೆ ರಸ್ತೆ, ಜಯ ಪುರ ಬಳಿಯ…
ಮೈಸೂರಲ್ಲಿ ಮತ್ತೆರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂದಿನಿಂದ ಆರೋಗ್ಯ ಸೇವೆ ಆರಂಭ
February 6, 2023ಮೈಸೂರು,ಫೆ.5- ಮೈಸೂರಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸೋಮವಾರ (ಫೆ.6)ದಿಂದ ಎರಡೂ ನೂತನ ಆಸ್ಪತ್ರೆಗಳು ಆರೋಗ್ಯ ಸೇವೆ ಆರಂಭಿಸಲಿದ್ದು, ಕೆ.ಆರ್.ಎಸ್ ರಸ್ತೆಯಲ್ಲಿರುವ ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಸೂಪರ್ ಸ್ಪೆಷಾ ಲಿಟಿ ಆಸ್ಪತ್ರೆ ಓಪಿಡಿ ಸೇವೆ ಹಾಗೂ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಆಪರೇಷನ್ ಮತ್ತು ಒಳರೋಗಿ ಸೇವೆ ಆರಂಭಿಸಲಾಗುತ್ತಿದೆ. ಮೈಸೂರಿನ ಕೆ.ಆರ್.ಆಸ್ಪತ್ರೆಯ ದುರಸ್ತಿ ಕಾಮಗಾರಿ ಕೆಲವೇ ಕೆಲವು ದಿನಗಳಲ್ಲಿ ಆರಂಭ ವಾಗಲಿದ್ದು, ಅದಕ್ಕಾಗಿ ಕೆ.ಆರ್.ಆಸ್ಪತ್ರೆಯ ಕೆಲವು ವಿಭಾಗಗಳ ಮೇಲೆ ಉಂಟಾಗುತ್ತಿರುವ ಒತ್ತಡ ನಿವಾ ರಿಸಲು ಹಾಗೂ ತಪಾಸಣೆಗೆ…
ಮೈಸೂರು ಮಹಾರಾಜರು ನಿರ್ಮಿಸಿದ ಹೊಯ್ಸಳ ಶಿಲ್ಪಕಲೆಯ ಮನಮೋಹಕ ವೇಣುಗೋಪಾಲ ಸ್ವಾಮಿ
February 6, 2023ಮೈಸೂರು, ಫೆ.5-ಕನ್ನಂಬಾಡಿ ಅಣೆಕಟ್ಟಿನ (ಕೆಆರ್‍ಎಸ್) ಹಿನ್ನೀರಿನ ಹೊಸ ಕನ್ನಂಬಾಡಿಯಲ್ಲಿರುವ ಪುರಾತನ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೊರ ಜಿಲ್ಲೆಗಳಿಂದ ಮಾತ್ರವಲ್ಲದೇ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಾರೆ. ದೇವಸ್ಥಾನದ ವಿಹಂಗಮ ನೋಟವನ್ನು ಕಣ್ತುಂಬಿಕೊಂಡು ಹರ್ಷಚಿತ್ತರಾಗುವ ಪ್ರವಾಸಿಗರು, ಅಲ್ಲಿಗೆ ತಲುಪುವಷ್ಟರಲ್ಲಿ ನರಕಯಾತನೆ ಪಡುವಂತಾಗಿದೆ. ದೇವಸ್ಥಾನದಿಂದ ಸುಮಾರು 2 ಕಿ.ಮೀ. ರಸ್ತೆಯು ತೀವ್ರ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ನಾಲ್ಕು ಚಕ್ರ ವಾಹನಗಳಲ್ಲಿ ತೆರಳುವವರು ಮೈ-ಕೈ ನೋವು ಮಾಡಿಕೊಂಡರೆ, ದ್ವಿಚಕ್ರ ವಾಹನದಲ್ಲಿ ತೆರಳುವವರು ಕೆಲವೊಮ್ಮೆ ಆಯತಪ್ಪಿ ಬಿದ್ದು ಸಣ್ಣಪುಟ್ಟ ಗಾಯ ಗಳಾದದ್ದೂ…
ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳ ಪಲ್ಲಕ್ಕಿ ಉತ್ಸವ
February 6, 2023ಮೈಸೂರು, ಫೆ.5(ಆರ್‍ಕೆಬಿ)- ಮೈಸೂರಿನ ನಂಜನ ಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಷದ ಜನ್ಮ ದಿನೋತ್ಸವದ ಪ್ರಯುಕ್ತ ಆಶ್ರಮದಲ್ಲಿ ಆಯೋಜಿಸಿರುವ ಐದು ದಿನಗಳ ಸಹÀಸ್ರ ಚಂದ್ರ ದರ್ಶನ ಶಾಂತಿ ಹೋಮ ಭಾನುವಾರ ಸಂಪನ್ನಗೊಂಡಿತು. 108 ಹೋಮ ಕುಂಡಗಳಲ್ಲಿ ಕಳೆದ ಐದು ದಿನಗಳಿಂದ ಹೋಮ ನಡೆಸಲಾಯಿತು. ನಾಡಿನಲ್ಲಿ ಉತ್ತಮ ಮಳೆ, ಬೆಳೆ ಆಗಬೇಕು. ಅಕಾಲದಲ್ಲಿ ಮಳೆ ಆಗುವುದು ತಪ್ಪಿ, ಸಕಾಲದಲ್ಲಿ ಮಳೆಯಾಗಿ ದೇಶ ಸುಭೀಕ್ಷವಾಗಬೇಕು ಎಂದು ಪ್ರಾರ್ಥಿಸಿ ಈ ಹೋಮ…
ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ದಿಢೀರ್ ಮುಂದೂಡಿಕೆ ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ
February 3, 2023ಮೈಸೂರು,ಫೆ.2(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಚುನಾವಣೆಯನ್ನು ಏಕಾಏಕಿ ಮುಂದೂ ಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಆಯುಕ್ತರ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿ, ಮೇಯರ್ ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರು ಮಹಾನಗರ ಪಾಲಿ ಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆಗೆ ಚುನಾ ವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸಜ್ಜಾಗಿ ಬಂದಿದ್ದರು. ಚುನಾ…
ಹಾಲಾಳು ಗ್ರಾಮದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ ಸ್ಮಾರಕ ನಿರಂತರ ಚಟುವಟಿಕೆಯ ಕೇಂದ್ರವಾಗಲೆಂಬುದು ನಮ್ಮ ಉದ್ದೇಶ: ಸಿಎಂ ಬಸವರಾಜ ಬೊಮ್ಮಾಯಿ
January 30, 2023ಮೈಸೂರು, ಜ.29(ಆರ್‍ಕೆಬಿ)- ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಗೌರವ ತರುವ ರೀತಿ ಯಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರಂತರ ಚಟು ವಟಿಕೆಯ ಕೇಂದ್ರವಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದ್ದು, ಅದಕ್ಕೆ ತಕ್ಕಂತೆ ಇದನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ನೀಡಿದರು. ಮೈಸೂರಿನ ಹೆಚ್.ಡಿ.ಕೋಟೆ ರಸ್ತೆ ಉದ್ಬೂರು ಗೇಟ್ ಬಳಿ ಹಾಲಾಳು ಗ್ರಾಮದಲ್ಲಿ 11 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಿರುವ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಡಾ. ವಿಷ್ಣುವರ್ಧನ್ ಅವರು ಚಲನಚಿತ್ರದಲ್ಲಿ…
ಅಭಿಮಾನಿಗಳಿಂದ ಭಾರೀ ಸಂಭ್ರಮ
January 30, 2023ಮೈಸೂರು,ಜ.29(ಆರ್‍ಕೆಬಿ)- ಮೈಸೂ ರಿನ ಹೆಚ್.ಡಿ.ಕೋಟೆ ರಸ್ತೆ ಉದ್ಬೂರು ಗೇಟ್ ಬಳಿ ಹಾಳಾಳು ಗ್ರಾಮದಲ್ಲಿ ಕನ್ನಡದ ಮೇರುನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ಪ್ರದೇಶ ಭಾನುವಾರ ಸಾವಿರಾರು ಅಭಿಮಾನಿ ಗಳಿಂದ ತುಂಬಿ, ವಿಷ್ಣುವರ್ಧನ್ ಪರ ಘೋಷಣೆಗಳು ಗಗನ ಮುಟ್ಟಿದವು. ತಮ್ಮ ಅಭಿಮಾನಿ ನಟನ ಭಾವಚಿತ್ರ ಹಿಡಿದು, ಸಂಭ್ರಮಿಸಿದರು. ಹಾಲಾಳು ಗ್ರಾಮದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲಾಗಿದೆ. ಡಾ.ವಿಷ್ಣು ವರ್ಧನ್ ಪ್ರತಿಷ್ಠಾನ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸರ್ಕಾರ ದಿಂದ ಮಂಜೂರಾದ ಒಟ್ಟು 5 ಎಕರೆ ಜಮೀನಿನಲ್ಲಿ ಮೂರು ಎಕರೆಯಲ್ಲಿ…
ಚಾ.ಬೆಟ್ಟದಲ್ಲಿ ಪರಿಸರ ಮಾರಕ ಕಾಮಗಾರಿ ವಿರುದ್ಧ ಮೈಸೂರಿನ ಪಾರ್ಕ್‍ಗಳಲ್ಲಿ ಸತ್ಯಾಗ್ರಹ
January 30, 2023ಮೈಸೂರು,ಜ.29(ಎಂಟಿವೈ)- ಉತ್ತಮ ಆಡಳಿತಕ್ಕಾಗಿ ಹಾಗೂ ಪರಿಸರಕ್ಕೆ ಮಾರಕವಾದ ಯೋಜನೆಗಳನ್ನು ಅನುಷ್ಠಾನಗೊಳಿಸದಂತೆ ಆಗ್ರಹಿಸಿ ಮೈಸೂರಲ್ಲಿ ಭಾನುವಾರ ಮೈಸೂರು ಗ್ರಾಹಕರ ಪರಿಷತ್(ಎಂಜಿಪಿ) ಕರೆ ನೀಡಿದ್ದ ಒಂದು ದಿನದ ಸತ್ಯಾಗ್ರಹಕ್ಕೆ ಉತ್ತಮವಾದ ಬೆಂಬಲ ವ್ಯಕ್ತವಾಗಿದ್ದು, ಮೈಸೂರಿನ ಹಲವೆಡೆ ಧರಣಿ ನಡೆಸಿ ಪರಿಸರ ಸಂರಕ್ಷಣೆ ಕ್ರಮಕ್ಕಾಗಿ ಒಕ್ಕೊರಲಿನ ಆಗ್ರಹ ಮಾಡಿದರು. ಮೈಸೂರಿನ ಚೆಲುವಾಂಬ ಪಾರ್ಕ್, ನ್ಯಾಯಾ ಲಯದ ಮುಂಭಾಗ, ನಿವೇದಿತಾನಗರ ಪಾರ್ಕ್, ಟಿ.ನರಸೀಪುರ ರಸ್ತೆಯ ನೇತಾಜಿನಗರ ಪಾರ್ಕ್ ಮತ್ತು ರಾಮಕೃಷ್ಣನಗರ ಉದ್ಯಾನವನ, ವಿಜಯ ನಗರ ಸೇರಿದಂತೆ ವಿವಿಧೆಡೆ ನಡೆದ ಸತ್ಯಾಗ್ರಹ ದಲ್ಲಿ ಮಕ್ಕಳು,…
ವನ್ಯಜೀವಿ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚನೆ
January 28, 2023ಮೈಸೂರು,ಜ.27(ಆರ್‍ಕೆ)-ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಸ್ಪೆಷಲ್ ಟಾಸ್ಕ್ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊ ಳ್ಳಲು ಮೈಸೂರಿಗೆ ಆಗಮಿಸಿದ್ದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರಿನಲ್ಲಿ ಟಾಸ್ಕ್‍ಫೋರ್ಸ್ ತಂಡವು ಚಿರತೆಯನ್ನು ಸೆರೆಹಿಡಿದಿದೆ. ಹಾಸನ ಸೇರಿದಂತೆ ಬೇರೆ ಜಿಲ್ಲೆಗಳಲ್ಲೂ ಈ ಸಮಸ್ಯೆ ಇರುವುದರಿಂದ ಟಾಸ್ಕ್‍ಪೋರ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಿ ದ್ದಾರೆ ಎಂದು ತಿಳಿಸಿದರು. ಯಾವುದೋ ಒಂದು ಸ್ಥಳದಲ್ಲಿ ಚಿರತೆ ಹಿಡಿದ ಮಾತ್ರಕ್ಕೆ ಟಾಸ್ಕ್‍ಫೋರ್ಸ್ ವಿಸರ್ಜಿಸಲಾಗದು. ಮೈಸೂರು ಭಾಗದಲ್ಲಿ ಆನೆ, ಚಿರತೆ ಉಪಟಳ…
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಇಂದು ಮೈಸೂರಲ್ಲೂ ಸಾರಿಗೆ ಸಿಬ್ಬಂದಿ ಧರಣಿ ಸತ್ಯಾಗ್ರಹ
January 24, 2023ಮೈಸೂರು, ಜ.23(ಎಸ್‍ಬಿಡಿ)- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಾಳೆ(ಜ.24) ಧರಣಿ ಸತ್ಯಾಗ್ರಹಕ್ಕೆ ಕರೆ ನೀಡಿದ್ದು, ಮೈಸೂರಿನಲ್ಲೂ ಬಸ್ ಸಂಚಾ ರಕ್ಕೆ ಅಡ್ಡಿಯಾಗದಂತೆ ಶಾಂತಿಯುತ ಧರಣಿ ನಡೆಸಲು ನಿರ್ಧರಿಸಲಾಗಿದೆ. ನಗರದ ಬನ್ನಿಮಂಟದ ಬಾಲಭವನ ಹಿಂಭಾಗದ ಮೈಸೂರು ವಿಭಾಗೀಯ ಕಚೇರಿ ಬಳಿ ಮಂಗಳವಾರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನೂರಾರು ನೌಕರರು ಧರಣಿ ನಡೆಸಲಿದ್ದೇವೆ. ಆದರೆ ಇದರಿಂದ ಬಸ್ ಸಂಚಾರಕ್ಕೆ ಯಾವುದೇ ವ್ಯತ್ಯಯವಾಗು ವುದಿಲ್ಲ. ಪ್ರಯಾಣಿಕರಿಗೆ…