ಮೈಸೂರು

ಸಂಗೀತ ಪ್ರಿಯರ ಆಕರ್ಷಿಸಿದ ‘ಸಾಂಸ್ಕøತಿಕ ಸೌರಭ’
ಮೈಸೂರು

ಸಂಗೀತ ಪ್ರಿಯರ ಆಕರ್ಷಿಸಿದ ‘ಸಾಂಸ್ಕøತಿಕ ಸೌರಭ’

January 10, 2019

ಮೈಸೂರು: ಮಾಗಿ ಮಾಸದ ಸುಂದರ ಇಳಿ ಸಂಜೆಯಲಿ ಸಿಂಗಾರ ಗೊಂಡಿದ್ದ ವೇದಿಕೆಯಲ್ಲಿ ಜನಪ್ರಿಯ ತಾಳವಾದ್ಯ ಸಂಗೀತ, ಹಿಂದೂಸ್ತಾನಿ ಗಜಲ್ ಗಾಯನ, ಪೂಜಾ ಕುಣಿತ, ನಗಾರಿ ವಾದನ, ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು. ಮೈಸೂರಿನ ಗಾಂಧಿನಗರದ ಬಸ್ ನಿಲ್ದಾಣ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ‘ಸಾಂಸ್ಕøತಿಕ ಸೌರಭ’ ಕಾರ್ಯಕ್ರಮದಲ್ಲಿ ಗಾಯನ, ಕುಣಿತ, ವಾದನ, ನೃತ್ಯಗಳ ಪ್ರದರ್ಶನ ಸಂಗೀತ ಪ್ರಿಯರ ಮನತಣಿಸಿತು. ಮೊದಲಿಗೆ ವೇದಿಕೆ ಹಂಚಿಕೊಂಡ ಕರ್ನಾಟಕ ಜಾನಪದ ಪರಿಷತ್ತಿನ ಪುಟ್ಟೆ ಗೌಡ…

ಫಾರಂಹೌಸ್‍ನಲ್ಲಿ ಗೆಳೆಯನ ಹತ್ಯೆ ಪ್ರಕರಣ ಆರೋಪಿಗಳಿಬ್ಬರು ಪೊಲೀಸ್ ವಶಕ್ಕೆ ; ತೀವ್ರ ವಿಚಾರಣೆ
ಮೈಸೂರು

ಫಾರಂಹೌಸ್‍ನಲ್ಲಿ ಗೆಳೆಯನ ಹತ್ಯೆ ಪ್ರಕರಣ ಆರೋಪಿಗಳಿಬ್ಬರು ಪೊಲೀಸ್ ವಶಕ್ಕೆ ; ತೀವ್ರ ವಿಚಾರಣೆ

January 10, 2019

ಮೈಸೂರು: ಮೈಸೂರು ತಾಲೂಕು, ಎಂಸಿ ಹುಂಡಿ ಬಳಿ ಫಾರಂ ಹೌಸ್‍ನಲ್ಲಿ ಭಾನುವಾರ ನಡೆದ ಪ್ರಶಾಂತ ಎಂಬ ಯುವಕನ ಹತ್ಯೆ ಪ್ರಕರಣ ಸಂಬಂಧ ವರುಣಾ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಎಂಸಿ ಹುಂಡಿ ಗ್ರಾಮದ ಲೋಕೇಶ ಹಾಗೂ ಪ್ರಮೋದಾ ಬಂಧಿತರಾಗಿದ್ದು, ತಲೆ ಮರೆಸಿಕೊಂಡಿದ್ದ ಕೊಲೆಗಡುಕರನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಹೊರ ವಲಯದಲ್ಲಿ ಪೊಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಸರ್ಕಲ್ ಇನ್‍ಸ್ಪೆಕ್ಟರ್ ಕರೀಂ ರಾವ್‍ತರ್ ನೇತೃತ್ವದಲ್ಲಿ ರಚಿಸಿದ್ದ ವಿಶೇಷ ತನಿಖಾ ತಂಡದ ಪೊಲೀಸರು,…

ಎರಡನೇ ಮದುವೆ ಪ್ರಸ್ತಾಪ: ಪತಿ ಮೇಲೆ  ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪತ್ನಿ
ಮೈಸೂರು

ಎರಡನೇ ಮದುವೆ ಪ್ರಸ್ತಾಪ: ಪತಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪತ್ನಿ

January 10, 2019

ಮೈಸೂರು: ಎರಡನೇ ಮದುವೆ ಪ್ರಸ್ತಾಪ ಮುಂದಿಟ್ಟ ಪತಿಯ ಮೇಲೆ ಪತ್ನಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಮೈಸೂರಿನ ಸತ್ಯನಗರದಲ್ಲಿ ನಡೆದಿದೆ. ಆಟೋ ಚಾಲಕ ಮಜರ್ ಪಾಷಾ(46) ಎಂಬಾತನೇ ತನ್ನ ಪತ್ನಿ ಮಮ್ತಾಜ್(40)ಳಿಂದ ಹತ್ಯೆಗೀಡಾದವನಾಗಿದ್ದಾನೆ. ಈ ದಂಪತಿಗೆ 26 ವರ್ಷಗಳ ಹಿಂದೆ ಮದುವೆಯಾಗಿತ್ತು. ಆರು ಮಕ್ಕಳು ಇದ್ದಾರೆ. ಅವರಲ್ಲಿ ಒಬ್ಬನಿಗೆ ಮದುವೆಯೂ ಆಗಿದೆ. ಆಟೋ ಚಾಲಕ ಮಜರ್ ಪಾಷಾ ಬೇರೊಬ್ಬ ಮಹಿಳೆ ಜೊತೆ ಸಂಬಂಧ ಇಟ್ಟುಕೊಂಡಿದ್ದನೆಂದು ಹೇಳಲಾಗಿದ್ದು, ಸೋಮವಾರ ಸಂಜೆ ಪಾನಮತ್ತನಾಗಿ ಮನೆಗೆ ಬಂದ…

ಇಬ್ಬರು ಹಲ್ಲೆ ಆರೋಪಿಗಳಿಗೆ  5 ವರ್ಷ ಜೈಲು ಶಿಕ್ಷೆ
ಮೈಸೂರು

ಇಬ್ಬರು ಹಲ್ಲೆ ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆ

January 10, 2019

ಮೈಸೂರು: ಚಾಕುವಿನಿಂದ ಹಲ್ಲೆ ಮಾಡಿ ವ್ಯಕ್ತಿಯ ಗಾಯಗೊಳಿಸಿದ್ದ ಇಬ್ಬರು ಆರೋಪಿಗಳಿಗೆ ಮೈಸೂರು ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ತಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ನಾಗೇಂದ್ರ ಅಲಿಯಾಸ್ ಬಿ.ಸಿ.ನಾಗೇಂದ್ರಮೂರ್ತಿ ಹಾಗೂ ತಂದೆ ಸೊಂಟ್ರಹಳ್ಳಿ ಚಂದ್ರಶೇಖರ್ ಅಲಿಯಾಸ್ ಶೇಖರ್ ಶಿಕ್ಷೆಗೊಳಗಾದ ಹಲ್ಲೆ ಆರೋಪಿಗಳು. 2013ರ ಮೇ 30ರಂದು ಸಂಜೆ 5.30 ಗಂಟೆ ವೇಳೆಗೆ ಗ್ರಾಮದ ಭಿಕ್ಷಾ ಮಠದ ಸಮೀಪ ಮಹದೇವಪ್ಪನವರ ಹೋಟೆಲ್ ಬಳಿ ಟೀ ಕುಡಿಯುತ್ತಿದ್ದಾಗ ಹಣಕಾಸು ವಿಷಯದ ಸಂಬಂಧ ನಾಗೇಂದ್ರ ಮತ್ತು ಚಂದ್ರಶೇಖರ್ ಅವರು ಚಾಕು ಹಿಡಿದು ಬಿ.ರಾಜು…

ನೇಣು ಹಾಕಿಕೊಂಡು ಸಿಎಆರ್ ಕಾನ್ಸ್‍ಟೇಬಲ್ ಆತ್ಮಹತ್ಯೆ
ಮೈಸೂರು

ನೇಣು ಹಾಕಿಕೊಂಡು ಸಿಎಆರ್ ಕಾನ್ಸ್‍ಟೇಬಲ್ ಆತ್ಮಹತ್ಯೆ

January 10, 2019

ಮೈಸೂರು: ನೇಣು ಹಾಕಿಕೊಂಡು ಮೈಸೂರು ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಕಾನ್ಸ್‍ಟೇಬಲ್‍ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಯೋತಿನಗರ ಪೊಲೀಸ್ ಕ್ವಾರ್ಟರ್ಸ್‍ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಮೂಲತಃ ತಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದವರಾದ ಮಹದೇವು(46) ಆತ್ಮಹತ್ಯೆಗೆ ಶರಣಾದವರು. ಮೈಸೂರಿನ ಸಿಎಆರ್‍ನಲ್ಲಿ ಪೊಲೀಸ್ ಕಾನ್ಸ್‍ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಕೆಲ ತಿಂಗಳಿಂದ ಅನಾರೋಗ್ಯ ದಿಂದ ನರಳುತ್ತಿದ್ದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಮನೆಯವರೆಲ್ಲರೂ ಊಟ ಮಾಡಿ ಮಲಗಿದ ಮೇಲೆ ಮನೆಯ ಹಿಂಭಾಗದ ಶೆಡ್‍ನಲ್ಲಿ…

ಭಾರತ ಬಂದ್ ಗೆ  ಮೊದಲ ದಿನ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ
ಮೈಸೂರು

ಭಾರತ ಬಂದ್ ಗೆ ಮೊದಲ ದಿನ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ

January 9, 2019

ಬೆಂಗಳೂರು: ಕಾರ್ಮಿಕ ಒಕ್ಕೂಟಗಳು ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿ ಸುತ್ತಿದೆ ಎಂದು ಖಂಡಿಸಿ ಕರೆ ನೀಡಿರುವ 48 ಗಂಟೆ ಗಳ ಭಾರತ ಬಂದ್‍ನ ಮೊದಲ ದಿನವಾದ ಇಂದು ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗಿಲ್ಲ. ರಾಜಧಾನಿ ಸೇರಿದಂತೆ ರಾಜ್ಯದ ಯಾವುದೇ ನಗರ, ಪಟ್ಟಣ ಪ್ರದೇಶಗಳಲ್ಲಿ ಬಂದ್‍ಗೆ ಬೆಂಬಲ ದೊರೆಯ ಲಿಲ್ಲ. ಎಂದಿನಂತೆ ಜನಜೀವನ ಸಾಗಿತ್ತು, ಸಾರಿಗೆ ಸೇರಿದಂತೆ ರಾಜ್ಯ ಸರ್ಕಾರಿ ಸಂಸ್ಥೆಗಳ ಕಾರ್ಮಿಕ ಒಕ್ಕೂಟ ಗಳು ಮುಷ್ಕರದಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಬಂದ್ ವಿಫಲವಾಯಿತು. ಕೆಲವೆಡೆ ಕಾರ್ಮಿಕ ಸಂಘಟನೆಗಳಿಂದ…

ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರು

ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ

January 9, 2019

ಮೈಸೂರು: ಕೇಂದ್ರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್‍ಗೆ ಮೊದಲ ದಿನವಾದ ಮಂಗಳವಾರ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಬ್ಯಾಂಕುಗಳು, ಕಾರ್ಖಾನೆಗಳು, ಎಲ್‍ಐಸಿ, ಅಂಚೆ ಕಚೇರಿ, ಗಾರ್ಮೆಂಟ್ಸ್ ಉದ್ಯಮ ಹಾಗೂ ಅಂಗನವಾಡಿ ಕೇಂದ್ರಗಳು ಬಂದ್ ಆಗಿದ್ದುದನ್ನು ಹೊರತುಪಡಿಸಿದರೆ, ಉಳಿ ದಂತೆ ಜನಜೀವನ ಸಾಮಾನ್ಯವಾಗಿತ್ತು. ಬಂದ್ ಹಿನ್ನೆಲೆಯಲ್ಲಿ ಸಹಜವಾಗಿ ಮೈಸೂರು ನಗರದಲ್ಲಿ ಜನಜೀವನ, ವಾಹನ ಗಳ ಸಂಚಾರ ವಿರಳವಾಗಿದ್ದನ್ನು ಬಿಟ್ಟರೆ, ವ್ಯಾಪಾರ, ವಹಿವಾಟು ಹಾಗೂ ಇನ್ನಿತರ…

ಮೈಸೂರಿಂದ ಹೆಚ್ಚುವರಿ ಆರು ವಿಮಾನ ಹಾರಾಟ
ಮೈಸೂರು

ಮೈಸೂರಿಂದ ಹೆಚ್ಚುವರಿ ಆರು ವಿಮಾನ ಹಾರಾಟ

January 9, 2019

ನವದೆಹಲಿ: ಕೇಂದ್ರ ಸರ್ಕಾರದ ಉಡಾನ್-3 ಯೋಜನೆಯಡಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಹೆಚ್ಚುವರಿ 6 ವಿಮಾನಗಳ ಹಾರಾಟಕ್ಕೆ ವಿಮಾನ ಯಾನ ಸಚಿವಾಲಯವು ಅನುಮೋದನೆ ನೀಡಿದೆ. ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಹೆಚ್ಚಿನ ವಿಮಾನ ಯಾನ ಸೌಲಭ್ಯ ಹಾಗೂ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಹೆಚ್ಚುವರಿ ವಿಮಾನ ಹಾರಾಟಕ್ಕೆ ಅನುವು ಮಾಡಿ ಕೊಡಲಾಗಿದೆ. ಈಗಾಗಲೇ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರತಿ ನಿತ್ಯ ವಿಮಾನ ಹಾರಾಟ ನಡೆಸುತ್ತಿದ್ದು, ಇದರ ಜೊತೆಗೆ ಮೈಸೂರು-ಬೆಳಗಾವಿ, ಮೈಸೂರು-ಹೈದರಾ ಬಾದ್, ಮೈಸೂರು-ಹೈದರಾಬಾದ್, ಮೈಸೂರು-ಗೋವಾ,…

ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ
ಮೈಸೂರು

ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಮಸೂದೆಗೆ ಲೋಕಸಭೆ ಅಂಗೀಕಾರ

January 9, 2019

ನವದೆಹಲಿ, ಜ. 8- ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಒದಗಿಸುವ ಮಸೂದೆ ಲೋಕಸಭೆಯಲ್ಲಿಂದು ಮಂಡನೆಯಾಗಿ, ಅನುಮೋದನೆ ಪಡೆದುಕೊಂಡಿತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸಮಾಜವಾದಿ ಪಕ್ಷದ ತೀವ್ರ ಪ್ರತಿಭಟನೆಯ ನಡುವೆಯೂ ಥಾವರ್ ಚಂದ್ ಗೆಹ್ಲೋಟ್ ಈ ಮಸೂದೆಯನ್ನು ಮಂಡಿಸಿದರು. ಸದನದಲ್ಲಿ ಹಾಜರಿದ್ದ ಸದಸ್ಯರಲ್ಲಿ ಮಸೂದೆ ಪರವಾಗಿ 323 ಸಂಸದರು ಮತ ಚಲಾಯಿಸಿದರೆ, 5 ಮಂದಿ ಮಾತ್ರ ವಿರುದ್ಧ ಮತ ಹಾಕಿದರು….

ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ
ಮೈಸೂರು

ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ

January 9, 2019

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆ ಯಲ್ಲಿ ಕರ್ನಾಟಕದ ಎಲ್ಲಾ 28 ಕ್ಷೇತ್ರಗ ಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಜೆಡಿಎಸ್‍ನೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಂಡು ಕಣಕ್ಕಿಳಿಯು ತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತು ವಾರಿ ಕೆ.ಸಿ.ವೇಣುಗೋಪಾಲ್ ಇಂದಿಲ್ಲಿ ಪ್ರಕಟಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ರೊಂದಿಗೆ ಮಾತುಕತೆ ಮೂಲಕ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದರು. ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವನ್ನು…

1 1,186 1,187 1,188 1,189 1,190 1,611
Translate »